ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನ್ ಚೇತನ ಕುವೆಂಪು ಹುಟ್ಟುಹಬ್ಬದ ಸವಿನೆನಪು

By ದಿವ್ಯಶ್ರೀ.ವಿ, ಬೆಂಗಳೂರು
|
Google Oneindia Kannada News

ಕನ್ನಡ ನಾಡಲ್ಲಿ ಕನ್ನಡಕ್ಕೆ ಪ್ರಥಮ ಮತ್ತು ಪೂಜ್ಯ ಸ್ಥಾನ ಸಿಗಲಿ ಎಂದ ಮಹಾನ್ ಚೇತನ ನಮ್ಮ ನಾಡಿನ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಜನ್ಮದಿನ ಇಂದು. ಇವರು 1904 ಡಿಸೆಂಬರ್ 29 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕ, ಕನ್ನಡಕ್ಕೆ ಇವರು ಕೊಟ್ಟ ಕೊಡುಗೆ ಅಪಾರ.1987 ರಲ್ಲಿ ಶಿವಮೊಗ್ಗದಲ್ಲಿ ಕುವೆಂಪು ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.

ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ವಿಶ್ವ ಮಾನವ ದಿನ ಎಂದು ಆಚರಿಸುತ್ತಾರೆ. ಶ್ರೀರಾಮಾಯಣ ದರ್ಶನಂ ನಂತಹ ಮಹಾ ಕಾವ್ಯ ದ ಮೂಲಕ ಇಡೀ ವಿಶ್ವವೇ ಕನ್ನಡದ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಾಯಿಸಿಕೊಂಡು ಕನ್ನಡ ಭಾಷೆಗೆ ಚಿನ್ನದ ಕಿರೀಟ ತೊಡಿಸಿದರು.

'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ

ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ ಎಂಬ ಅವರ ಮಾತು ನಿಜಕ್ಕೂ ಎಲ್ಲರೂ ಅರಿಯಬೇಕು. ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಜನಿಸಿದರು. ಈ ಕವಿ ಕನ್ನಡ ಸಾಹಿತ್ಯ ಅಕ್ಷರ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಅಕ್ಷರ ದಾಸೋಹಿ.

Vishwa Manava Dinacharane Kuvempu Birthday wishes to all

ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ, ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ ಎಂಬ ಈ ಜಗದ ಕವಿಯ ಸಂದೇಶವನ್ನು ನಾವೆಲ್ಲರೂ ಅರ್ಥೈಸಿಕೊಂಡು ಜಾತೀಯತೆ ಬಿಡಬೇಕು. ಇದಕ್ಕೆ ಸುಂದರವಾದ ಉದಾಹರಣೆ ಅಂದರೆ ನಮ್ಮ ಕನ್ನಡಿಗರ ಪಾಲಿನ ರಕ್ಷಾ ಕವಚವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಗೆ ಕುವೆಂಪು ಅವರು ಆದರ್ಶ ಕವಿ ಇಂದಿಗೂ ಕೂಡ ಕರವೇಯಲ್ಲಿ ಜಾತಿಬೇಧವಿಲ್ಲ. ಇರುವುದೇ ಒಂದೇ ಮನುಷ್ಯ ಜಾತಿ ಎಂದು ಅನುಸರಿಸಿಕೊಂಡು ಬಂದಿದೆ. ಅದಕ್ಕೆ ಕನ್ನಡ ಜಾತಿ ಕನ್ನಡಧರ್ಮ ಕನ್ನಡವೇ ದೇವರು ಎಂಬ ಸಿದ್ಧಾಂತದ ಅಡಿಯಲ್ಲಿ ಕರವೇ ಕೆಲಸ ಕಾರ್ಯವನ್ನು ಮಾಡುತ್ತಿದೆ.

ಇಂದಿನ ಪೀಳಿಗೆಗಳಿಗೆ ಕುವೆಂಪು ಮಾತು, ಸಂದೇಶಗಳು ಭಾರಿ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇಂದಿನ ಯುವ ಜನಾಂಗಕ್ಕೆ ಇವರ ಕನ್ನಡದ ಅದ್ಬುತ ಕೊಡುಗೆಯು ಸ್ಪೂರ್ತಿದಾಯಕ. ಕುವೆಂಪುರವರ ಕನ್ನಡದ ಬಗ್ಗೆ ಚಿಂತನೆ, ಕಾಳಜಿ, ಮಾತಿನ ಪ್ರಜ್ಞೆ, ರೈತರ ಬಗ್ಗೆ ಇರುವ ಗೌರವ ಎಲ್ಲವೂ ಸ್ಪೂರ್ತಿದಾಯಕ. ಬಾರಿಸು ಕನ್ನಡ ಡಿಂಡಿಮವ ಎನ್ನುವ ಮೂಲಕ ಕನ್ನಡಕ್ಕೆ ಅದ್ಭುತವಾದ ಹಾಡನ್ನು ಕೊಟ್ಟು ಜೈ ಭಾರತ ಜನನಿಯ ಎಂಬ ಅರ್ಥ ಪೂರ್ಣವಾದ ನಾಡಗೀತೆಯಾಗಿ ನೀಡಿದ ನಮ್ಮ ವಿಶ್ವಮಾನವ ಕವಿ.

ಕುವೆಂಪು ರಾಷ್ಟೀಯ ಪ್ರತಿಷ್ಠಾನ ಇವರ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ. ಮನೆಯ ಮೂಲ ಸ್ವರೂಪವನ್ನು ಕಾಯ್ದುಕೊಂಡು ನವೀಕರಿಸಿ ಮ್ಯೂಸಿಯಮ್ ಆಗಿ ಪರಿವರ್ತಿಸಿಲಾಗಿದೆ. ಕುಪ್ಪಳಿಯು ಶಿವಮೊಗ್ಗದಿಂದ 80 ಕಿ.ಮೀ ದೂರದಲ್ಲಿದೆ ಹಾಗೂ ತೀರ್ಥಹಳ್ಳಿಯಿಂದ 10 ಕಿ.ಮೀ ದೂರದಲ್ಲಿದೆ.

ವಿಶಾಲವಾದ ಅಂಗಳದ ಮಧ್ಯೆ ಕಂಗೊಳಿಸುವ 'ಕವಿಮನೆ' ಸೊಗಸು ಪ್ರತಿಯೊಬ್ಬ ಕನ್ನಡಿಗನು ಒಂದು ಸಲಿ ಆದರೂ ನೋಡಿಬೇಕು. ಹೀಗೆ ಇವರ ಬಗ್ಗೆ ಹೇಳುವುದಕ್ಕೆ ಪದಗಳು ಸಾಲದು.

ಅಲ್ಪ ನಾನು ಎಂದು ಕುಗ್ಗಿ ಮುದುಗ ಬೇಡವೋ,
ಓ ಅಲ್ಪವೆ, ಅನಂತದಿಂದ ಗುಣಿಸಿಕೊ,
ನೀನ್ ಅನಂತವಾಗವೆ!!!!

ಇದು ವಯಕ್ತಿಕವಾಗಿ ನಾನು ಬಹಳ ಇಷ್ಟ ಪಡುವ ವಾಕ್ಯಗಳು ಇದನ್ನು ಹೇಳುವ ಮೂಲಕ ನಮ್ಮ ಹೆಮ್ಮೆಯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ಜಯಂತಿಯ ಶುಭಾಶಯಗಳು.

English summary
Kuppali Venkatappa Puttappa (Kuvempu) stands out among the best poets in India. Today(Dec 29 ) his birthday is celebrated as Vishwa Manava Dinacharane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X