ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಪರ್ ಲೂಪ್: ನಗರದಿಂದ 10 ನಿಮಿಷಕ್ಕೆ ವಿಮಾನನಿಲ್ದಾಣ ತಲುಪಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರು ನಗರದ ಸಂಚಾರ ದಟ್ಟಣೆಯ ಚಿಂತೆಯಿಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ ನಗರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸಬಹುದಾದ ಸೌಲಭ್ಯದ ಜಾರಿ ಒಪ್ಪಂದಕ್ಕೆ ಹೈಪರ್‍ಲೂಪ್ ತಂತ್ರಜ್ಞಾನದ ವರ್ಗದಲ್ಲಿ ಮುಂಚೂಣಿಯ ಸಂಸ್ಥೆ ವರ್ಜಿನ್ ಹೈಪರ್ ಲೂಪ್ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಭಾನುವಾರ ಸಹಿ ಹಾಕಿವೆ.

ಈ ಒಪ್ಪಂದದಡಿ ಇದರಡಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹೈಪರ್‍ಲೂಪ್ ಕಾರಿಡಾರ್‍ನ ಕಾರ್ಯಸಾಧ್ಯತೆ ಕುರಿತ ಅಧ್ಯಯನವನ್ನು ನಡೆಸಲಾಗುತ್ತಿದೆ.

PMO ಕಚೇರಿಗೆ ಹೊಸ ಸೇರ್ಪಡೆ ಆಮ್ರಪಾಲಿ ಐಎಎಸ್PMO ಕಚೇರಿಗೆ ಹೊಸ ಸೇರ್ಪಡೆ ಆಮ್ರಪಾಲಿ ಐಎಎಸ್

ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಐಎಎಲ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಮತ್ತು ವರ್ಜಿನ್‍ ಹೈಪರ್‍ಲೂಪ್ ಮತ್ತು ಡಿಪಿ ವಲ್ರ್ಡ್‍ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ವರ್ಚುವಲ್ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಹಾಜರಿದ್ದರು.

ವಾಹನದಟ್ಟಣೆಯನ್ನು ನಿಭಾಯಿಸಲು ಪರಿಹಾರ

ವಾಹನದಟ್ಟಣೆಯನ್ನು ನಿಭಾಯಿಸಲು ಪರಿಹಾರ

ಈ ಒಪ್ಪಂದದ ಬಗ್ಗೆ ಮಾತನಾಡಿದ ವರ್ಜಿನ್‍ ಹೈಪರ್‍ಲೂಪ್ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ''ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಮತ್ತು ಬೆಂಗಳೂರಿನ ವಾಹನದಟ್ಟಣೆಯನ್ನು ನಿಭಾಯಿಸಲು ಪರಿಹಾರದ ಭಾಗವಾಗಬಹುದಾದ ಹೈಪರ್‍ಲೂಪ್ ಮುಂದಾಗಿರುವುದು ನಮಗೆ ಗೌರವದ ವಿಷಯವಾಗಿದೆ'' ಎಂದರು.

''ಇದು ಸಂಚಾರ ಮಾತ್ರವಲ್ಲದೆ, ಬೇಗನೆ ತಲುಪಿಸಬೇಕಾದ ವಸ್ತುಗಳ ಸಾಗಣೆಗೆ ವಿಮಾನ ನಿಲ್ದಾಣಗಳು ಅತ್ಯಂತ ಮುಖ್ಯವಾಗಿ ಸಂಪರ್ಕ ಹೊಂದಿರುವ ವಿಮಾನ ನಿಲ್ದಾಣ ಸರಕುಗಳ ವಿತರಣೆಯನ್ನು ನಾಟಕೀಯವಾಗಿ ಸುಧಾರಿಸುವುದಲ್ಲದೆ, ಅತ್ಯಂತ ಉನ್ನತ ಕಾರ್ಯಕ್ಷಮತೆಯ ಪೂರೈಕಾ ಸರಣಿಯನ್ನು ಸೃಷ್ಟಿಸುತ್ತದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಬ್ ಅರ್ಬನ್ ರೈಲ್ವೆ ಮೂಲಕ ಸಂಪರ್ಕ

ಸಬ್ ಅರ್ಬನ್ ರೈಲ್ವೆ ಮೂಲಕ ಸಂಪರ್ಕ

ಬೆಂಗಳೂರು ವಿಮಾನ ನಿಲ್ದಾಣವನ್ನು ಸಾರಿಗೆಯ ಕೇಂದ್ರವಾಗಿಸುವ ಮೂಲಕ ಜನರು ಮತ್ತು ಸ್ಥಳಗಳ ಸಂಪರ್ಕ ಕಲ್ಪಿಸುತ್ತದೆ. ಉತ್ತಮವಾದ ರಸ್ತೆ ಜಾಲಕ್ಕೆ ಹೆಚ್ಚುವರಿಯಾಗಿ ವಿಮಾನ ನಿಲ್ದಾಣ ಶೀಘ್ರದಲ್ಲಿ ಸಬ್ ಅರ್ಬನ್ ರೈಲ್ವೆ ಮೂಲಕ ಸಂಪರ್ಕವನ್ನು ಕೆಲವು ಸಂಪರ್ಕವನ್ನು ಪಡೆಯಲಿದೆ.

ಚೆನ್ನೈ- ಬೆಂಗಳೂರ್ ಬುಲೆಟ್ ಟ್ರೈನ್ ಸೇರಿ 10 ಹೊಸ ರೈಲು?ಚೆನ್ನೈ- ಬೆಂಗಳೂರ್ ಬುಲೆಟ್ ಟ್ರೈನ್ ಸೇರಿ 10 ಹೊಸ ರೈಲು?

''ರಾಜ್ಯದಲ್ಲಿ ಮೂಲಸೌಕರ್ಯ ಸುಧಾರಣೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಹೈಪರ್‍ಲೂಪ್ ಸಂಪರ್ಕದ ಸಾಧ್ಯತೆ ಕುರಿತು ಅಧ್ಯಯನ ನಡೆಸುವುದು ಈ ಒಪ್ಪಂದದ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ'' ಎಂದು ಬಿ.ಐ.ಎ.ಎಲ್.ನ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಹೇಳಿದರು.

ಗಂಟೆಗೆ 1,080 ಕಿಲೋಮೀಟರ್ ಗಳ ವೇಗ

ಗಂಟೆಗೆ 1,080 ಕಿಲೋಮೀಟರ್ ಗಳ ವೇಗ

''ಕಾರ್ಯಸಾಧ್ಯತಾ ಅಧ್ಯಯನಕ್ಕೆ ಪೂರ್ವವಾಗಿ ತಾಂತ್ರಿಕ, ಆರ್ಥಿಕ ಮತ್ತು ಮಾರ್ಗದ ಸಾಧ್ಯತೆಗಳತ್ತ ಗಮನಹರಿಸಿ ಅಧ್ಯಯನ ನಡೆಸಲಾಗುವುದು. ಇದನ್ನು ಆರು ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಮುಗಿಸುವ ನಿರೀಕ್ಷೆ ಇದೆ. ಗಂಟೆಗೆ 1,080 ಕಿಲೋಮೀಟರ್ ಗಳ ವೇಗ ಹೊಂದಿರುವ ಹೈಪರ್‍ಲೂಪ್ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ಕೇಂದ್ರಭಾಗಕ್ಕೆ ಸಾವಿರಾರು ಪ್ರಯಾಣಿಕರನ್ನು 10 ನಿಮಿಷದ ಒಳಗಡೆ ಸಾಗಿಸುತ್ತದೆ'' ಎಂದು ಪೂರ್ವ ವಿಶ್ಲೇಷಣೆ ತಿಳಿಸಿದೆ ಎಂದರು.

ಪ್ರಯಾಣಿಕರಿಗೆ 21ನೇ ಶತಮಾನದ ಅನುಭವ

ಪ್ರಯಾಣಿಕರಿಗೆ 21ನೇ ಶತಮಾನದ ಅನುಭವ

ಹೈಪರ್‍ಲೂಪ್‌ ಮುಖ್ಯ ಅಧ್ಯಕ್ಷ ಸುಲ್ತಾನ್ ಬಿನ್ ಸುಲಾಯೇಮ್, ''ವಿಮಾನ ನಿಲ್ದಾಣ ಕ್ಷಿಪ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ 21ನೇ ಶತಮಾನದ ಅನುಭವ ಒದಗಿಸಲಿದೆ. ಇದರಿಂದ ವಿಮಾನ ನಿಲ್ದಾಣದ ಸಾಮರ್ಥ್ಯ ಕೂಡ ವಿಸ್ತರಿಸಲಿದೆ''ಎಂದರು.

ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ಟ್ರೈನ್: ಲಕ್ಷ ಕೋಟಿ ರೂ ಅಂದಾಜುಬೆಂಗಳೂರು-ಚೆನ್ನೈ ನಡುವೆ ಬುಲೆಟ್ ಟ್ರೈನ್: ಲಕ್ಷ ಕೋಟಿ ರೂ ಅಂದಾಜು

ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹರಿ ಮರಾರ್ ಮಾತನಾಡಿ,''ಸಾರಿಗೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ಪರಿವರ್ತಿಸುವುದರೊಂದಿಗೆ ಅದನ್ನು ಭಾರತದ ನೂತನ ಪ್ರವೇಶದ್ವಾರವನ್ನಾಗಿ ಮಾಡುವ ದೃಷ್ಟಿಕೋನ ಹೊಂದಿದ್ದೇವೆ. ಕರ್ನಾಟಕ ರಾಜ್ಯ ಮತ್ತು ಸುತ್ತಮುತ್ತಲ ಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಬಹುದಾದ ಹೆಗ್ಗುರುತಿನ ಕ್ರಮವನ್ನು ಕೈಗೊಳ್ಳಲು ನಾವು ಬಹಳ ಉತ್ಸಾಹಿತರಾಗಿದ್ದೇವೆ. ವಿಶ್ವಮಟ್ಟದ ಸಾರಿಗೆ ಕೇಂದ್ರ ನಿರ್ಮಿಸಿ ಸುಸ್ಥಿರವಾಗಿ ಉಳಿಸಿಕೊಳ್ಳುವಲ್ಲಿ ತಂತ್ರಜ್ಞಾನ ನವೀನತೆ ಮುಖ್ಯವಾಗಿರುತ್ತದೆ. ಶೂನ್ಯ ಹೊಗೆಯುಗುಳುವಿಕೆ ಜೊತೆಗೆ ಹಿಂದೆಂದೂ ಇಲ್ಲದ ವೇಗದಲ್ಲಿ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುತ್ತದೆ ಎಂದರು.

ಹೈಪರ್​ಲೋಪ್ ಟ್ರಾನ್ಸ್​ಪೋರ್ಟ್ ಸಿಸ್ಟಮ್

ಹೈಪರ್​ಲೋಪ್ ಟ್ರಾನ್ಸ್​ಪೋರ್ಟ್ ಸಿಸ್ಟಮ್

ಹೈಪರ್​ಲೋಪ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ (ಎಚ್​ಟಿಎಸ್) ಸಂಸ್ಥೆ ಈ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಗಂಟೆಗೆ 1,216 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಉದಾಹರಣೆಗೆ ಬೆಂಗಳೂರು ಹಾಗೂ ಚೆನ್ನೈ ನಡುವಿನ 345 ಕಿ.ಮೀ. ದೂರವನ್ನು ಈ ರೈಲು 30 ನಿಮಿಷದಲ್ಲಿ ಕ್ರಮಿಸಲಿದೆ ಎಂದು ಈ ಸೂಪರ್ ಸಾನಿಕ್ ರೈಲಿನ ನಿರ್ಮಾಣಗಾರ ಎಲಾನ್ ಹೇಳಿದ್ದಾರೆ.

ಇಂಧನ ರಹಿತ ಕೊಳವೆ ರೈಲು

ಇಂಧನ ರಹಿತ ಕೊಳವೆ ರೈಲು

ಇಂಧನ ರಹಿತ ರೈಲು: ಸೂಪರ್ ಸಾನಿಕ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಕಾಂಕ್ರಿಟ್ ಪಿಲ್ಲರ್ ನಿರ್ಮಿಸಿ, ಅದರ ಮೇಲೆ ಕೊಳವೆಯ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದು ಅರೆನಿರ್ವಾತ ಪ್ರದೇಶವಾಗಿರಲಿದ್ದು, ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗ ಪಡೆಯಲಿದೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲುನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿ, ಇದರಿಂದ ಉತ್ಪಾದಿಸಲಾದ ವಿದ್ಯುತ್​ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ. ಈ ರೈಲಿಗೆ ಇಂಧನ ಅಗತ್ಯವಿಲ್ಲ, ಹೀಗಾಗಿ ಇಂಧನ ಉಳಿತಾಯ ಸಾಧ್ಯ.

Recommended Video

IPL 2020 RCB vs MI | Devadutt Padikkal ಬ್ಯಾಟ್‌ನಿಂದ ಮತ್ತೊಂದು ಅರ್ಧಶತಕ | Oneindia Kannada
ಆಂಧ್ರಕ್ಕೆ ಒಲಿದಿದ್ದ ಹೈಪರ್ ಲೂಪ್

ಆಂಧ್ರಕ್ಕೆ ಒಲಿದಿದ್ದ ಹೈಪರ್ ಲೂಪ್

ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ವಿಜಯವಾಡ ಹಾಗೂ ಅಮರಾವತಿ ನಡುವೆ ಸಂಚರಿಸಲಿದೆ. ಮೆಟ್ರೋ ರೈಲು ಬರುವುದಕ್ಕೂ ಮುನ್ನ ಅಮರಾವತಿಯಲ್ಲಿ ಹೈಪರ್ ಲೂಪ್ ಕಾಣುವ ಸಾಧ್ಯತೆಯಿತ್ತು. ಆಂಧ್ರಪ್ರದೇಶದ ಆರ್ಥಿಕ ಅಭಿವೃದ್ಧಿ ಮಂಡಳಿ(ಎಪಿ -ಇಡಿಬಿ) ಹಾಗೂ ಅಮೆರಿಕದ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನ ಸಂಸ್ಥೆ (ಎಚ್ ಟಿಟಿ) ನಡುವೆ 2018ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದಿನ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಎಚ್ ಟಿಟಿ ಸಹ ಸ್ಥಾಪಕ ಬಿಬಾಪ್ ಗ್ರೆಸ್ಟಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ಟಿಡಿಪಿ ಸರ್ಕಾರ ಪತನದ ನಂತರ ನಾಯ್ಡು ಅಮರಾವತಿ ನಿರ್ಮಾಣ ಹಾಗೂ ಹೈಪರ್ ಲೂಪ್ ಎಲ್ಲವೂ ಕನಸಾಗೇ ಉಳಿದಿದೆ.

English summary
Today, we launched a first-of-its-kind partnership with Kempegowda International Airport Bengaluru to explore a hyperloop connection that could link the airport to city center in 10 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X