• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕೌಂಟಿಗೆ ಹಣ ಹಾಕಿ ಆಮೇಲೆ ಮದುವೆಗೆ ಬನ್ನಿ' ವಿಚಿತ್ರ ಕಂಡಿಷನ್ ಹಾಕಿದ ಜೋಡಿ

|
Google Oneindia Kannada News

ಹೆಚ್ಚಿನವರು ತಮ್ಮ ಮದುವೆಗೆ ಸ್ನೇಹಿತರು ಮತ್ತು ಸಂಬಂಧಿಕರನ್ನು ಊಟಕ್ಕೆ ಆಹ್ವಾನಿಸುತ್ತಾರೆ. ಪ್ರತಿಯಾಗಿ, ಅತಿಥಿಗಳು ಕೆಲವು ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ಅನೇಕ ಜನರು ಜಿಪುಣತನದಿಂದ ಬರಿಗೈಯಲ್ಲಿ ಮದುವೆಗೆ ಹೋಗುತ್ತಾರೆ. ಅಂತವರಿಗೆ ಪಾಠ ಕಲಿಸಲು ದಂಪತಿಗಳು ತುಂಬಾ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆ ಕಾರ್ಡ್‌ನಲ್ಲಿ ಮುದ್ರಿಸಿ ವಿಷಯ ಕಂಡು ಸ್ನೇಹಿತರು ಮತ್ತು ಸಂಬಂಧಿಕರು ಆಶ್ಚರ್ಯಗೊಂಡಿದ್ದಾರೆ.

ದಂಪತಿಗಳು ತಮ್ಮ ಮದುವೆಗೆ ಬರುವ ಅತಿಥಿಗಳಿಗೆ ಕಾರ್ಡ್ ಕಳುಹಿಸಿದ್ದಾರೆ, ಅದರಲ್ಲಿ ಅವರು ಬರುವ ಮೊದಲು $ 50 ಡಾಲರ್ ಅನ್ನು ಅವರ ಖಾತೆಗೆ ವರ್ಗಾಯಿಸಬೇಕು ಎಂದು ಬರೆದಿದ್ದಾರೆ. ಭಾರತದ ಪ್ರಕಾರ, ಈ ಮೊತ್ತ ಸುಮಾರು 4000 ರೂಪಾಯಿ ಆಗಿದೆ. ದಂಪತಿಗಳು ತಮ್ಮ ಕಾರ್ಡ್ ಅನ್ನು ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಹೆಚ್ಚು ವೈರಲ್ ಆಗುತ್ತಿದೆ. ಈ ಕ್ರಮವನ್ನು ಹಲವರು ಶ್ಲಾಘಿಸುತ್ತಿದ್ದಾರೆ. ಆದರೆ, ಕೆಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದುವೆ ವೇಳೆ ಮದ್ಯ ನೀಡುವುದಕ್ಕೆ ಕೊಡವ ಸಮಾಜ ನಿಷೇಧ ಮದುವೆ ವೇಳೆ ಮದ್ಯ ನೀಡುವುದಕ್ಕೆ ಕೊಡವ ಸಮಾಜ ನಿಷೇಧ

ಉಡುಗೊರೆಗಾಗಿ ಷರತ್ತು

ನೀವು ತಿನ್ನಲು ಪ್ರತಿ ವ್ಯಕ್ತಿಗೆ $50 ಪಾವತಿಸಬೇಕೆಂದು ನಾವು ಬಯಸುತ್ತೇವೆ ಎಂದು ಕಾರ್ಡ್ ಕೆಳಭಾಗದಲ್ಲಿ ಬರೆಯಲಾಗಿದೆ. ಕಾರ್ಡ್‌ನಲ್ಲಿ ಊಟದಲ್ಲಿ ಇರುವ ಸಿಹಿತಿಂಡಿಗಳ ವಿವರವನ್ನೂ ಸಹ ಮುದ್ರಿಸಲಾಗಿದೆ. ಇದು ಮತ್ತೊಂದು ಸಣ್ಣ ಕಾರ್ಡ್ ನಲ್ಲಿ ನಮೋದಿಸಲಾಗಿದೆ. ಈ ದಂಪತಿಗಳು ತಮ್ಮ ಮದುವೆಗೆ ಅತಿಥಿಗಳಿಂದ ಉಡುಗೊರೆಗಳನ್ನು ಬಯಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮದುವೆಗೆ ಬರಲು ಇಚ್ಛಿಸುವವರು ಮೊದಲು ತಿಳಿಸಬೇಕು ಎಂದು ದಂಪತಿ ಸ್ಪಷ್ಟವಾಗಿ ಬರೆದಿದ್ದಾರೆ.

ಜನರ ಪ್ರತಿಕ್ರಿಯೆ ಏನು?

ಈ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲ್ಲದೇ ಜನರು ಈ ಬಗ್ಗೆ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಮದುವೆಗೆ ಹೋಗುವುದಕ್ಕಿಂತ ರೆಸ್ಟೋರೆಂಟ್‌ಗೆ ಹೋಗುವುದು ಉತ್ತಮ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿ ನೀವು $ 30 ಗೆ ಆಹಾರ ಮತ್ತು ಆಲ್ಕೋಹಾಲ್ ಎರಡನ್ನೂ ಪಡೆಯುತ್ತೀರಿ. ಈ ಜೋಡಿಯ ಮದುವೆ ಕಾರ್ಡ್‌ಗೆ ಮತ್ತೊಂದು ಪ್ರತಿಕ್ರಿಯೆ ಅತಿಥಿಗಳನ್ನು ಟೆನ್ಷನ್‌ಗೆ ಒಳಪಡಿಸಿದೆ. 'ಈ ಮದುವೆಗೆ ಯಾರು ಬರುತ್ತಾರೋ ಅವರೇ ನಿಜವಾದ ಸಂಬಂಧಿ' ಎಂದು ಬರೆಯಲಾಗಿದೆ.

 Viral Wedding Card says: First transfer food money, then come to the wedding

ವಿಚ್ಛೇದನ ಕಾರ್ಡ್ ಕೂಡ ವೈರಲ್

ಕೆಲ ದಿನಗಳ ಹಿಂದೆಯಷ್ಟೇ ವಿಚ್ಛೇದನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ 'ವಿಚ್ಛೇದನ ಸಮಾರಂಭ' ಆಯೋಜಿಸಲಾಗಿತ್ತು. ಈ ಅಹ್ವಾನ ಪತ್ರಿಕೆಯನ್ನು ಓದಿ ಜನ ನಗಾಡಿದ್ದರು. ಕಾರ್ಡ್ ವಿಚ್ಛೇದನವನ್ನು ಆಚರಿಸಲು ಕರೆಯಲಾಗಿತ್ತು. ಆದರೆ, ಪ್ರತಿಭಟನೆಯಿಂದಾಗಿ ಕಾರ್ಯಕ್ರಮ ರದ್ದಾಗಿತ್ತು.

English summary
'First transfer food money, then come to the wedding', the couple printed a bizarre wedding card. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X