ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೊಬ್ಬ ಕತ್ತೆ; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಯಲ್ಲಿ ಇದೆಂಥಾ ಮಾತು!?

|
Google Oneindia Kannada News

ಇಸ್ಲಮಾಬಾದ್, ಮೇ 7: "ಕತ್ತೆಯ ಮೇಲೆ ಬಣ್ಣ ಬಳೆದ ಮಾತ್ರಕ್ಕೆ ಅದು ಜೀಬ್ರಾ ಆಗುವುದಿಲ್ಲ. ಕತ್ತೆ ಯಾವತ್ತಿದ್ದರೂ ಕತ್ತೆಯೇ," ಇದು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ತಮ್ಮ ಬಗ್ಗೆ ತಾವೇ ಹೇಳಿಕೊಂಡ ವೈಖರಿ.

ಪ್ರಸ್ತುತ ತಮ್ಮ ಇಂಗ್ಲೆಂಡಿ(ಯುಕೆ)ನ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೀಗೆ ಹೇಳಿದ್ದಾರೆ. "ನಾನು ಯುಕೆಯಲ್ಲಿ ಸಾಕಷ್ಟು ಸಂತೋಷವಾಗಿದ್ದೇನೆ, ಆದರೆ ಇದು ನನ್ನ ಪಾಲಿಗೆ ಎಂದಿಗೂ ತವರು ನೆಲ ಎಂದು ಅನ್ನಿಸುವುದಿಲ್ಲ," ಎಂದಿದ್ದಾರೆ.

Breaking; ಪದಚ್ಯುತಿ ಷಡ್ಯಂತ್ರ, ಇಮ್ರಾನ್ ಖಾನ್ ಯೂ-ಟರ್ನ್ Breaking; ಪದಚ್ಯುತಿ ಷಡ್ಯಂತ್ರ, ಇಮ್ರಾನ್ ಖಾನ್ ಯೂ-ಟರ್ನ್

ಇಮ್ರಾನ್ ಖಾನ್ ಅವರು ಸಂದರ್ಶನದಲ್ಲಿ ನೀಡಿದ ಹೇಳಿಕೆಯು ಸಾಕಷ್ಟು ವೈರಲ್ ಆಗುತ್ತಿದೆ. ಅಸಲಿಗೆ ಅವರು ತಮ್ಮನ್ನು ಕತ್ತೆಗೆ ಹೋಲಿಸಿಕೊಳ್ಳುವುದಕ್ಕೆ ಕಾರಣವೇನು?, ಯಾವ ಸಂದರ್ಭದಲ್ಲಿ ಅವರು ಇಂಥ ಹೇಳಿಕೆ ನೀಡಿದರು?, ಇಮ್ರಾನ್ ಖಾನ್ ಹೇಳಿಕೆ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಯುಕೆಯಲ್ಲಿನ ಬದುಕಿನ ಕುರಿತು ಇಮ್ರಾನ್ ಖಾನ್ ಮಾತು

ಯುಕೆಯಲ್ಲಿನ ಬದುಕಿನ ಕುರಿತು ಇಮ್ರಾನ್ ಖಾನ್ ಮಾತು

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗರ ಆಗಿರುವ ಇಮ್ರಾನ್ ಖಾನ್ ಇತ್ತೀಚೆಗೆ ಕಂಟೆಂಟ್ ರಚನೆಕಾರರಾದ ಜುನೈದ್ ಅಕ್ರಮ್, ಮುಝಮ್ಮಿಲ್ ಹಸನ್ ಮತ್ತು ತಲ್ಹಾ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡರು. ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಸ್ತುತ ಯುಕೆಯ ವಾಸ್ತವ್ಯದ ಕುರಿತು ಇಮ್ರಾನ್ ಖಾನ್ ಆಡಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಸಂದರ್ಶನದ ವಿಡಿಯೋವೊಂದನ್ನು ಹಸನ್ ಜೈದಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಮ್ಮನ್ನು ಕತ್ತೆಗೆ ಹೋಲಿಸಿಕೊಂಡಿದ್ದೇಕೆ ಇಮ್ರಾನ್ ಖಾನ್?

ತಮ್ಮನ್ನು ಕತ್ತೆಗೆ ಹೋಲಿಸಿಕೊಂಡಿದ್ದೇಕೆ ಇಮ್ರಾನ್ ಖಾನ್?

"ನಾನು ಎಂದಿಗಿದ್ದರೂ ಮೊದಲು ಪಾಕಿಸ್ತಾನಿ ಆಗಿರುತ್ತೇನೆ. ಕತ್ತೆಯ ಮೇಲೆ ಬಣ್ಣ ಬಣ್ಣದ ಗೆರೆಗಳನ್ನು ಬರೆದ ಮಾತ್ರಕ್ಕೆ ಕತ್ತೆಯು ಎಂದಿಗೂ ಜೀಬ್ರಾ ಆಗುವುದಿಲ್ಲ. ಕತ್ತೆ ಎಂದಿಗಿದ್ದರೂ ಕತ್ತೆಯೇ," ಎಂದು ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

ಟ್ವಿಟ್ಟರ್‌ನಲ್ಲಿ ಸಂದರ್ಶನದ ವಿಡಿಯೋ ವೈರಲ್

ಪಾಡ್‌ಕ್ಯಾಸ್ಟ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ನೀಡಿರುವ ಸಂದರ್ಶನ ವಿಡಿಯೋ ತುಣುಕನ್ನು ಹಸನ್ ಜೈದಿ ಎಂಬುವವರು "ವಿಥೌಟ್ ಕಾಮೆಂಟ್" ಎಂಬ ಹೆಡ್ ಲೈನ್ ಅಡಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 4099 ಸಾವಿರ ಜನರು ನೋಡಿದ್ದು, 3,100 ಮಂದಿ ಲೈಕ್ ಮಾಡಿದ್ದಾರೆ. 1,100 ಜನರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

ಕತ್ತೆ ಮತ್ತು ಜೀಬ್ರಾ ಹೋಲಿಕೆಯ ಮಾತಿಗೆ ನೆಟ್ಟಿಗರ ಪ್ರತಿಕ್ರಿಯೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ 'ಗಧಾ-ಜೀಬ್ರಾ' ಹೋಲಿಕೆಗೆ ಟ್ವಿಟ್ಟರ್ ಬಳಕೆದಾರರು ಡಿಫರೆಂಟ್ ಆಗಿ ಪ್ರತಿಕ್ರಿಯೆಸಿದ್ದಾರೆ. ಕೆಲವರು ಲೇವಡಿಯ ಕಾಮೆಂಟ್ ಹಾಗೂ ಮೆಮೋಗಳನ್ನು ಮಾಡಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಈ ಹುಡುಗನ್ನು ಯಾವುದೇ ಸಂದರ್ಶನಕ್ಕೆ ಕರೆಯಬೇಡಿ, ಮುಷ್ಕರದ ಸಂದರ್ಭಗಳಲ್ಲಿ ಈತನಿಗೆ ಭಾಷಣ ಮಾಡುವುದಕ್ಕೆ ಅವಕಾಶ ನೀಡಬೇಡಿ. ಏಕೆಂದರೆ ಇವನು ನಿಮಗೂ ಕೂಡ ಶತ್ರು," ಎಂದು ಸಲ್ಮಾನ್ ಅರ್ಷದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

"ತಮ್ಮನ್ನು ತಾವು ಕತ್ತೆ ಅಥವಾ ಜೀಬ್ರಾ ಎಂದು ಕರೆದುಕೊಳ್ಳುವುದಕ್ಕೂ ಎದೆಗಾರಿಕೆ ಬೇಕು," ಎಂದು ಸಾಗರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

English summary
Viral Video: Why Imran Khan Compares Himself as Donkey. How Netizens React With Hilarious Comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X