ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರಡಿ ಕುಣಿತ'ಕ್ಕೆ ಮನಸೋತ ನೆಟ್ಟಿಗ

|
Google Oneindia Kannada News

ದೈನಂದಿನ ಕೆಲಸದ ಒತ್ತಡದಲ್ಲಿ ಬದುಕುವ ಎಷ್ಟೋ ಮನಸ್ಸುಗಳಿಗೆ ಪ್ರಾಣಿಗಳ ತುಂಟಾಟ ಮುದ ನೀಡುತ್ತದೆ. ಮಕ್ಕಳ ನಗು, ಕೆಲವು ಪ್ರಾಣಿಗಳ ಮುಗ್ದತೆಗೆ ಎಂತವರಾದರೂ ಮನ ಸೋಲಲೇಬೇಕು. ಮೋಡಗಳನ್ನು ಸ್ಪರ್ಶಿಸುವ ಅಲೆಗಳಿಂದ ಹಿಡಿದು ಮೃಗಾಲಯದಲ್ಲಿ ನೆಲದ ಮಲೆ ಉರುಳಾಡುವ ಪಾಂಡಾವರೆಗೆ, ನೆಟ್ಟಿಗನ ಮುಖದಲ್ಲಿ ನಗು ತರಿಸುವ ಲಕ್ಷಾಂತರ ವಿಡಿಯೋಗಳು ಸಿಗುತ್ತವೆ.

ಪ್ರಾಣಿಗಳೆಂದರೇ ಹಾಗೆ, ಜಗದ ಗೊಡವೆಯಿಲ್ಲದೇ ತಮ್ಮದೇ ಪ್ರಪಂಚದಲ್ಲಿ ಸ್ವಚ್ಛಂದವಾಗಿ ಬದುಕುತ್ತವೆ. ಖುಷಿಯಾದಾಗ ಕುಣಿಯುತ್ತವೆ, ನಲಿಯುತ್ತವೆ, ನಾಳಿನ ಚಿಂತೆಯಿಲ್ಲ, ನಿನ್ನೆಯೆ ಯೋಚನೆಯೂ ಇರುವುದಿಲ್ಲ, ಈ ಕ್ಷಣವನ್ನು ಬದುಕುವುದಷ್ಟೇ ಅವಕ್ಕೆ ಗೊತ್ತಿರುವ ವಿಷಯ.

ಸಾಕುಪ್ರಾಣಿಗಳು ಮನುಷ್ಯನ ಒತ್ತಡ ನಿವಾರಿಸುವಲ್ಲಿ, ಒಂಟಿತನ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಂದಿಗಿಂತಲೂ ಈಗೀಗ ಮಾನವನಿಗೆ ಸಾಕು ಪ್ರಾಣಿಗಳ ಜೊತೆ ನಂಟು ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕುಪ್ರಾಣಿಗಳು, ಕಾಡು ಪ್ರಾಣಿಗಳ ಫೋಟೋ, ವಿಡಿಯೋ ನೋಡಿ ಆನಂದಿಸುವವರಿಗೇನೂ ಕೊರತೆಯಿಲ್ಲ. ಮಕ್ಕಳಿಗಂತೂ ಪ್ರಾಣಿಗಳೆಂದರೆ ಅಷ್ಟೇ ಅಚ್ಚುಮೆಚ್ಚು. ಅಂತಹ ಕೆಲವು ಮುದ್ದಾದ ಪ್ರಾಣಿಗಳ ತುಂಟಾದ ವೀಡಿಯೋಗಳು ಸಾಕಷ್ಟಿವೆ.

ಜಗದ ಗೊಡವೆ ಮರೆತು ಕುಣಿಯು ಕರಡಿ, ಸುಮ್ಮನೆ ಮಲಗಿದ್ದ ನಾಯಿಯನ್ನು ಕೆಣಕುವ ಕೋತಿ, ಮನೆಯಲ್ಲಿ ತುಂಟಾಟ ಆಡುವ ಬೆಕ್ಕಿನ ಮರಿಗಳು, ನಾಯಿಯ ಜೀವ ಉಳಿಸಿದ ವ್ಯಕ್ತಿ ನೆಟ್ಟಿಗರ ಹೃದಯ ಗೆದ್ದ ಕೆಲವು ವಿಡಿಯೋ ಕುರಿತ ಮಾಹಿತಿ ಇಲ್ಲಿದೆ.

ಕೆಣಕಿದ ಕೋತಿ ವಿರುದ್ಧ ತಿರುಗಿ ಬಿದ್ದ ನಾಯಿ

ಸುಮ್ಮನಿದ್ದರೂ ಏನಾದರೂ ಒಂದು ತರಲೆ ಮಾಡುವುಕ್ಕೆ ಕೋತಿಗಳು ಸಿಕ್ಕಾಪಟ್ಟೆ ಫೇಮಸ್, ಹಾಗೆ ಇಲ್ಲೊಂದು ಮಂಗ ರಸ್ತೆಯಲ್ಲಿ ಸುಮ್ಮನೆ ಹೋಗದೆ, ತನ್ನ ಪಾಡಿಗೆ ಮಲಗಿದ್ದ ನಾಯಿಯನ್ನು ಕೆಣಕಿದೆ. ಮಲಗಿರುವ ನಾಯಿ ಬಳಿ ಹೋಗಿರುವ ಕೋತಿ ಅದನ್ನು ಆಟವಾಡಿಸಲು ನೋಡಿದೆ.

ಕೋತಿಚೇಷ್ಠೆಯಿಂದ ಕೋಪಗೊಂಡ ನಾಯಿ ತಿರುಗಿಬಿದ್ದು ಬೊಗಳಲು ಆರಂಬಿಸಿದೆ, ನಾಯಿ ತಿರುಗಿ ಬೀಳುತ್ತಿದ್ದಂತೆ ಕೋತಿ ಅಲ್ಲಿಂದ ವಾಪಸ್ ಆಗಿದೆ. ಈ ದೃಶ್ಯ ಈಗ ವೈರಲ್ ಆಗಿದೆ. ಕೋತಿಯ ಗೂಂಡಾಗಿರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಮನಗೆದ್ದ ಬೆಕ್ಕುಗಳ ತುಂಟಾಟ

@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಬೆಕ್ಕಿನ ವೀಡಿಯೋವೊಂದು ನೆಟ್ಟಿಗನ ಮನ ಗೆದ್ದಿದೆ. ಅಲಂಕಾರಿಕ ಮಡಕೆಯ ಪಕ್ಕದಲ್ಲಿಆಟ ಆಡುತ್ತಿರುವ ಬೆಕ್ಕು ಬಳಿಕ ಅದೇ ಮಡಕೆಯೊಳಗೆ ಹೋಗುತ್ತದೆ. ಆದರೆ, ಇದೇ ವೇಳೆ ಮಡಕೆಯ ಒಳಗಿಂದ ಮತ್ತೊಂದು ಬೆಕ್ಕು ಆಚೆ ಬರುತ್ತದೆ.

'ಇದು ಮ್ಯಾಜಿಕ್' ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮುದ್ದು ಬೆಕ್ಕುಗಳ ಈ ಖುಷಿಯ ಆಟ ಎಲ್ಲರಿಗೂ ಇಷ್ಟವಾಗಿದೆ. ಮಡಕೆಯಿಂದ ಹೊರ ಬಂದ ಬೆಕ್ಕಿನ ಮುದ್ದು ನೋಟ ಕೂಡಾ ಎಲ್ಲರನ್ನೂ ಸೆಳೆಯುವಂತಿದೆ.

ಬೀದಿ ನಾಯಿ ಜೀವ ರಕ್ಷಣೆ

ನಾಯಿಗಳನ್ನು ಮಕ್ಕಳಂತೆ ಪ್ರೀತಿಸುವ ಜನರಿಗೇನು ಕಡಿಮೆ ಇಲ್ಲ. ಸಾಕುನಾಯಿಗಳಿಗೆ ಮನೆಯಲ್ಲಿ ಹೆಚ್ಚಿನ ಪ್ರೀತಿ ಸಿಗುತ್ತದೆ. ಕೆಲವರು ಬೀದಿನಾಯಿಗಳ ಬಗ್ಗೆಯೂ ಕಾಳಜಿ ಮಾಡುತ್ತಾರೆ. ಸಾಯುವ ಸ್ಥಿತಿಯಲ್ಲಿದ್ದ ಬೀದಿ ನಾಯಿಯೊಂದನ್ನು ರಕ್ಷಣೆ ಮಾಡಿದ್ದಾನೆ.

ಸಾಯುವ ಸ್ಥಿತಿಯಲ್ಲಿದ್ದ ಬೀದಿ ನಾಯಿಗೆ ಸಿಪಿಆರ್ (Cardiopulmonary resuscitation) ಮೂಲಕ ನಾಯಿಗೆ ಜೀವ ಕೊಟ್ಟಿದ್ದಾನೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 'ದಯೆಯ ಹೃದಯ ಹೊಂದಿರುವ ಒಳ್ಳೆಯ ಜನರು ಯಾವಾಗಲೂ ಅದ್ಭುತ ಕೆಲಸಗಳನ್ನು ಮಾಡುತ್ತಾರೆ' ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಹಿಂಗಾಲುಗಳ ಮೇಲೆ ನಿಂತ ನಂತರ ಕರಡಿ

ಹಿಂಗಾಲುಗಳ ಮೇಲೆ ನಿಂತ ನಂತರ ಕರಡಿ ಸುತ್ತಲೂ ಹಾರುತ್ತದೆ. 13 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಕುಣಿದು ಕುಪ್ಪಳಿಸಿದೆ. ಕಿರು ವಿಡಿಯೋ ಇಂಟರ್‌ನೆಟ್‌ನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. 3.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಟ್ವಿಟರ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, "ಓ ಮೈ ಗಾಡ್.. ಇದು ತುಂಬಾ ಅದ್ಭುತವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. "ಕರಡಿ ನೃತ್ಯ ತುಂಬಾ ಮುದ್ದಾಗಿದೆ. ಅದು ಛಾಯಾಗ್ರಾಹಕನಿಗೆ ಸವಾಲು ಹಾಕುವಂತೆ ಕಾಣಿಸುತ್ತಿದೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸಾವಿರಾರು ಜನ ಕರಡಿ ನೃತ್ಯದ ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

English summary
Bear flies around after standing on hind legs. In a 13 second clip, the bell fell. Short video has gained immense popularity on the Internet. 3.2 million people watched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X