India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral video; ಆನೆಮರಿಗೆ ಝೆಡ್‌ ಪ್ಲಸ್ ಸೆಕ್ಯೂರಿಟಿ

|
Google Oneindia Kannada News

ಆನೆಗಳು ಗುಂಪು ಗುಂಪಾಗಿ ಸಂಚಾರ ನಡೆಸುತ್ತವೆ. ಕೆಲವು ಆನೆಗಳು ಮಾತ್ರ ಒಂಟಿಯಾಗಿ ಓಡಾಡುತ್ತವೆ. ಮರಿ ಇದ್ದಾಗ ಉಳಿದ ಆನೆಗಳು ಅದಕ್ಕೆ ಭದ್ರತೆ ನೀಡುತ್ತವೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಉತ್ತಮ ವಿಡಿಯೋಗಳು ಸಿಗುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಆನೆಗಳು ಗುಂಪು ಮರಿಗೆ ಸಂಪೂರ್ಣ ಭದ್ರತೆ ನೀಡುತ್ತಿರುವ ವಿಡಿಯೋ ಇದಾಗಿದೆ. ಆನೆಗಳು ಗುಂಪು ರಸ್ತೆ ದಾಟುವಾಗ ಪುಟ್ಟ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಸಾಗುತ್ತಿದೆ. ಕ್ಯೂಟ್ ಆಗಿರುವ ಆನೆ ಮರಿಯ ವಿಡಿಯೋವನ್ನು ಜನರು ಮೆಚ್ಚಿದ್ದಾರೆ.

ಮೈಸೂರು; ಅರಮನೆಯ ನಾಲ್ಕು ಆನೆಗಳು ಗುಜರಾತ್‌ಗೆ ಸ್ಥಳಾಂತರ ಮೈಸೂರು; ಅರಮನೆಯ ನಾಲ್ಕು ಆನೆಗಳು ಗುಜರಾತ್‌ಗೆ ಸ್ಥಳಾಂತರ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಈ ವಿಡಿಯೋ ಹಂಚಿಕೊಂಡಿದ್ದಾರೆ. ತಮಿಳುನಾಡಿನ ಸತ್ಯಮಂಗಲ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಆನೆಗಳು ಸಾಗುವ ವಿಡಿಯೋ ಇದಾಗಿದೆ. ಆನೆಗಳು ರಸ್ತೆ ದಾಟುವಾಗ ಮರಿ ಗುಂಪಿನೊಳಗೆ ಸೇರಿಕೊಂಡು ಮುಂದೆ ಸಾಗುತ್ತಿದೆ.

ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ? ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ?

ಆನೆಗಳ ಗುಂಪಿನ ನಡುವೆ ಮರಿಯೊಂದಿದೆ. ಆನೆಗಳ ಗುಂಪು ಮರಿಯ ಸುತ್ತಲೂ ಸಾಗುತ್ತಾ ಅದಕ್ಕೆ ಭದ್ರತೆ ನೀಡುತ್ತಿವೆ. ಆನೆ ಮರಿಗೆ ಝೆಡ್‌ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಐಎಫ್‌ಎಸ್ ಅಧಿಕಾರಿ ಹೇಳಿದ್ದಾರೆ. ನೆಟ್ಟಿಗರು ಈ ವಿಡಿಯೋ ಮತ್ತು ಬರಹವನ್ನು ಮೆಚ್ಚಿದ್ದಾರೆ.

ಈ ವಿಡಿಯೋವನ್ನು ಇದುವರೆಗೂ 391.1ಕೆ ಜನರು ನೋಡಿದ್ದಾರೆ. 1,576 ಜನರು ರಿಟ್ವೀಟ್ ಮಾಡಿದ್ದಾರೆ. 9,336 ಜನರು ಲೈಕ್ ಮಾಡಿದ್ದಾರೆ. ಜನರು ಆನೆಗಳ ಸಂಬಂಧ, ಬಂಧದ ಬಗ್ಗೆ ಹಲವಾರು ಕಮೆಂಟ್‌ಗಳನ್ನು ಮಾಡಿದ್ದಾರೆ.

ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!

ಆನೆಗಳ ಗುಂಪಿನ ನಡುವೆ ಮರಿ ಸಾಗುವ ದೃಶ್ಯ ಇಂಟರ್‌ನೆಟ್‌ನಲ್ಲಿ ಜನರನ್ನು ಸೆಳೆದಿದೆ. ಆನೆಗಳ ಬಾಂಧವ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ರಸ್ತೆಯಲ್ಲಿ ಸಾಗುವವರು ಈ ವಿಡಿಯೋ ಮಾಡಿದ್ದಾರೆ. ಆನೆಗಳು ಮುಂದೆ ಬರುತ್ತಿದ್ದಂತೆ ಕಾರನ್ನು ರಿವರ್ಸ್‌ ತೆಗೆಯುತ್ತಲೇ ವಿಡಿಯೋ ಮಾಡಲಾಗಿದೆ.

English summary
In Tamil Nadu Sathyamangalam forest baby elephant escorted by group of elephants. Video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X