ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

|
Google Oneindia Kannada News

ಹಾನೊಯ್, ಏಪ್ರಿಲ್.22: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕಿಗೆ ದೂರದ ಅಮೆರಿಕಾದಲ್ಲಿ ಸಾವಿರ ಸಾವಿರ ಜನರು ಪ್ರಾಣ ಬಿಟ್ಟಿದ್ದಾರೆ. ಆದರೆ ಎಚ್ಚರಿಕೆ ವಹಿಸಿದ ಚೀನಾದ ಅಕ್ಕಪಕ್ಕದ ರಾಷ್ಟ್ರಗಳೇ ಮಹಾಮಾರಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಇಂಥ ರಾಷ್ಟ್ರಗಳ ಪಟ್ಟಿಯಲ್ಲಿ ವಿಯೆಟ್ನಾಂ ಸಹ ಒಂದಾಗಿದೆ.

ಚೀನಾದಿಂದ 2,457 ಕಿಲೋ ಮೀಟರ್ ದೂರದಲ್ಲಿ ಇರುವ ವಿಯೆಟ್ನಾಂನಲ್ಲಿ ಇದುವರೆಗೂ ಕೊರೊನಾ ವೈರಸ್ ನಿಂದ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ. ದೇಶದಲ್ಲಿ ಸದ್ಯದ ಅಂಕಿ-ಅಂಶಗಳ ಪ್ರಕಾರ 268 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಕೊರೊನಾ: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ನಿರ್ಧಾರ ಕೊರೊನಾ: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ನಿರ್ಧಾರ

ಕೊರೊನಾ ವೈರಸ್ ಯುದ್ಧವನ್ನು ಗೆಲ್ಲಬೇಕಾದರೆ ವಿಯೆಟ್ನಾಂ ಅನುಸರಿಸಿದ ಮುನ್ನೆಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಕ್ರಮಗಳು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಿಗೆ ಮಾದರಿ. ಇಂದು ಮಹಾಮಾರಿ ಕಟ್ಟಿಹಾಕಲು ಹೆಣಗಾಡುತ್ತಿರುವ ರಾಷ್ಟ್ರಗಳು ಈ ಪುಟ್ಟ ದೇಶವನ್ನು ನೋಡಿ ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ಹಾಗಿದ್ದರೆ ಕೊವಿಡ್19 ವಿರುದ್ಧ ವಿಯೆಟ್ನಾಂ ಸರ್ಕಾರ ಮತ್ತು ಜನತೆಯ ಹೋರಾಟದ ಪರಿ ಹೇಗಿತ್ತು. ಅದರ ಪರಿಣಾಮದಿಂದ ದೇಶದ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ.

ವಿಯೆಟ್ನಾಂನಲ್ಲಿ ಕೊರೊನಾಗೆ ಒಬ್ಬರೂ ಪ್ರಾಣ ಬಿಟ್ಟಿಲ್ಲ

ವಿಯೆಟ್ನಾಂನಲ್ಲಿ ಕೊರೊನಾಗೆ ಒಬ್ಬರೂ ಪ್ರಾಣ ಬಿಟ್ಟಿಲ್ಲ

ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಚೀನಾ ಗಡಿಗೆ ಹೊಂದಿಕೊಂಡಂತೆ ಇರುವ ವಿಯೆಟ್ನಾಂ ಎಂಬ ಪುಟ್ಟ ರಾಷ್ಟ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದಕ್ಕೆ ಅಂಕಿಅಂಶಗಳೇ ಸಾಕ್ಷಿ. ದೇಶದ 950 ಲಕ್ಷ ಜನರಲ್ಲಿ ಕೊವಿಡ್19 ಸೋಂಕಿನಿಂದ ಒಬ್ಬರು ಪ್ರಾಣ ಬಿಟ್ಟಿಲ್ಲ. ದೇಶದಲ್ಲಿ 268 ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದರೂ, ಈ ಪೈಕಿ 222 ಮಂದಿ ಗುಣಮುಖರಾಗಿದ್ದಾರೆ. 48 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲ ಸೋಂಕಿತ ಪ್ರಕರಣ ಪತ್ತೆಗೂ ಮೊದಲೇ ಮುನ್ನೆಚ್ಚರಿಕೆ

ಮೊದಲ ಸೋಂಕಿತ ಪ್ರಕರಣ ಪತ್ತೆಗೂ ಮೊದಲೇ ಮುನ್ನೆಚ್ಚರಿಕೆ

ವಿಯೆಟ್ನಾಂನಲ್ಲಿ ಮೊದಲ ಸೋಂಕಿತ ಪ್ರಕರಣ ಪತ್ತೆಯಾಗುವ ಮೊದಲೇ ಶಿಸ್ತುಬದ್ಧ ಕ್ರಮ ಜಾರಿಗೊಳಿಸಲಾಯಿತು. ಜನವರಿ.16, ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರಿ ಸಮಿತಿಗೆ ಸಂದೇಶ ನೀಡಿತು. ಜನವರಿ.21, ರಾಷ್ಟ್ರ ವ್ಯಾಪಿ ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಯಿತು. ಜನವರಿ.23, ಹೋ ಚಿ ಮಿನಹ್ ನಗರದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಯಿತು.

ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಕೋಟಿ ಕೊಟ್ಟ ಅಮೆರಿಕಾ!ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಕೋಟಿ ಕೊಟ್ಟ ಅಮೆರಿಕಾ!

ಚೀನಾದಿಂದ ಕೊರೊನಾ ಸೋಂಕಿತ ವಿಯೆಟ್ನಾಂಗೆ

ಚೀನಾದಿಂದ ಕೊರೊನಾ ಸೋಂಕಿತ ವಿಯೆಟ್ನಾಂಗೆ

ಜನವರಿ.13ಕ್ಕೆ ಚೀನಾದ ವುಹಾನ್ ನಗರದಿಂದ ವ್ಯಕ್ತಿಯೊಬ್ಬ ವಿಯೆಟ್ನಾಂಗೆ ಆಗಮಿಸಿದ್ದನು. ಜನವರಿ.23ರಂದು ವುಹಾನ್ ನಿಂದ ಆಗಮಿಸಿದ್ದ ವ್ಯಕ್ತಿಯ ವೈದ್ಯಕೀಯ ತಪಾಸಣೆ ವೇಳೆ ಸೋಂಕು ಇರುವುದು ದೃಢಪಟ್ಟಿತು. ಜನವರಿ.30ರಂದು ಸಾಂಕ್ರಾಮಿಕ ರೋಗ ನಿಯಂತ್ರಿಸುವ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು. ಅದೇ ದಿನ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಫೆಬ್ರವರಿ.01 ರಂದು ವಿಯೆಟ್ನಾಂನಲ್ಲಿ ಒಂದೇ ದಿನ ಆರು ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತು.

ಆರು ಸೋಂಕಿತ ಪ್ರಕರಣ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ

ಆರು ಸೋಂಕಿತ ಪ್ರಕರಣ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ

ಒಂದೇ ದಿನ ಆರು ಮಂದಿಗೆ ಸೋಂಕು ತಗಲುತ್ತಿದ್ದಂತೆ ವಿಯೆಟ್ನಾಂ ಪ್ರಧಾನಮಂತ್ರಿ ನ್ಯೂಯೆನ್ ಕ್ಸೂವಾನ್ ಫುಕ್ ನೊವೆಲ್ ಕೊರೊನಾ ವೈರಸ್ ನ್ನು ರಾಷ್ಟ್ರೀಯ ಸಾಂಕ್ರಾಮಿಕ ರೋಗ ಎಂಬ ನಿರ್ಧಾರ ಘೋಷಿಸಿದರು. ಫೆಬ್ರವರಿ.9ರಂದು ವಿಯೆಟ್ನಾಂ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಜೊತೆ ಕೊರೊನಾ ವೈರಸ್ ನಿಯಂತ್ರಣ ಮತ್ತು ವೈದ್ಯಕೀಯ ಮಾರ್ಗೋಪಾಯಗಳ ಬಗ್ಗೆ ದೂರವಾಣಿ ಮೂಲಕ ಚರ್ಚಿಸಲಾಯಿತು. ಅದೇ ದಿನ ರಾಷ್ಟ್ರದ 700 ಆಸ್ಪತ್ರೆಗಳಿಗೆ ನೊವೆಲ್ ಕೊರೊನಾ ವೈರಸ್ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುವ ಕಾರ್ಯ ಚುರುಕುಗೊಂಡಿತು.

15 ದಿನಗಳಲ್ಲೇ ಕೊರೊನಾ ವೈರಸ್ ಸೋಂಕಿತರ ಚೇತರಿಕೆ

15 ದಿನಗಳಲ್ಲೇ ಕೊರೊನಾ ವೈರಸ್ ಸೋಂಕಿತರ ಚೇತರಿಕೆ

ಫೆಬ್ರವರಿ.13ರ ವೇಳೆಗೆ ವಿಯೆಟ್ನಾಂನಲ್ಲಿ 16 ಮಂದಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಸರ್ಕಾರ ಮತ್ತು ವೈದ್ಯರ ಕ್ರಾಂತಿಕಾರಿ ಕ್ರಮಗಳಿಂದಾಗಿ ಫೆಬ್ರವರಿ.25ರ ವೇಳೆಗೆ ಸೋಂಕಿತರ ಆರೋಗ್ಯ ಚೇತರಿಕೆ ಕಂಡು ಬಂದಿದ್ದು, ಮುಂದಿನ 22 ದಿನಗಳವರೆಗೂ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಲಿಲ್ಲ. ಯುಎಸ್ ನ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ವಿಯೆಟ್ನಾಂನ್ನು ಡೇಂಜರ್ ಝೋನ್ ರಾಷ್ಟ್ರಗಳ ಪಟ್ಟಿಯಿಂದ ತೆಗೆದು ಹಾಕಲು ತೀರ್ಮಾನಿಸಿತು.

ಕೊವಿಡ್-19 ಇತಿಹಾಸ: ಚೀನಾ-ಕೊರೊನಾ ನಂಟು ಬಿಚ್ಚಿಟ್ಟವರೆಲ್ಲ ನಾಪತ್ತೆ!ಕೊವಿಡ್-19 ಇತಿಹಾಸ: ಚೀನಾ-ಕೊರೊನಾ ನಂಟು ಬಿಚ್ಚಿಟ್ಟವರೆಲ್ಲ ನಾಪತ್ತೆ!

ವಿಯೆಟ್ನಾಂ ಪಾಲಿಗೆ ತಲೆನೋವಾದ ಪೇಶೆಂಟ್ ನಂ.17

ವಿಯೆಟ್ನಾಂ ಪಾಲಿಗೆ ತಲೆನೋವಾದ ಪೇಶೆಂಟ್ ನಂ.17

ಕೊರೊನಾ ವೈರಸ್ ಸೋಂಕಿತರಿಲ್ಲದ ಸಂದರ್ಭದಲ್ಲಿ ಫೆಬ್ರವರಿ.15ರಂದು ವಿಯೆಟ್ನಾಂನ ಹಾನೊಯ್ ನಿಂದ ಹೊರಟ ವ್ಯಕ್ತಿ ಇಂಗ್ಲೆಂಡ್, ಇಟಲಿ, ಫ್ರಾನ್ಸ್ ಗೆ ತೆರಳಿ ಮಾರ್ಚ್.02ರಂದು ಹಾನೊಯ್ ಗೆ ವಾಪಸ್ ಆದಗಿದ್ದರು. ಸರ್ಕಾರ ವಿಧಿಸಿದ್ದ ದಿಗ್ಬಂಧನದ ಶಿಷ್ಟಾಚಾರ ಪಾಲಿಸುವಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದ್ದರು. ಮಾರ್ಚ್.06ರಂದು ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ವಿಯೆಟ್ನಾಂನಲ್ಲಿ ಎರಡನೇ ಹಂತದ ಹೋರಾಟ ಆರಂಭ

ವಿಯೆಟ್ನಾಂನಲ್ಲಿ ಎರಡನೇ ಹಂತದ ಹೋರಾಟ ಆರಂಭ

ಮಾರ್ಚ್.06ರಂದು ಪೇಶೆಂಟ್ ನಂ.17 ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ತಿಳಿಯುತ್ತಿದ್ದಂತೆ ಸರ್ಕಾರ ಎಚ್ಚರಿಕೆ ವಹಿಸಿತು. ಮಾರ್ಚ್.08 ಉಪ ಪ್ರಧಾನಮಂತ್ರಿ ವು ಡಕ್ ಡಮ್, ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಸಜ್ಜುಗೊಳ್ಳುವಂತೆ ಅಧಿಸೂಚನೆ ಹೊರಡಿಸಿದರು. ಮಾರ್ಚ್.10ರಂದು ಸೋಂಕಿತರ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಂತಾ ಮೊಬೈಲ್ ಅಪ್ಲಿಕೇಷನ್ ಆರಂಭಿಸಲಾಯಿತು. ಮರುದಿನವಾದ ಮಾರ್ಚ್.11ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಎಂಬು ಘೋಷಿಸಿತು.

ಕೊರೊನಾ ವೈರಸ್ ಸೋಂಕಿತರ ಮೂಲವೇ ನಿಗೂಢ ರಹಸ್ಯ

ಕೊರೊನಾ ವೈರಸ್ ಸೋಂಕಿತರ ಮೂಲವೇ ನಿಗೂಢ ರಹಸ್ಯ

ವಿಯೆಟ್ನಾಂನಲ್ಲಿ ಕೊರೊನಾ ವೈರಸ್ ಸೋಂಕು ಮೂರನೇ ಹಂತಕ್ಕೂ ಕಾಲಿಟ್ಟಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಹೊನೊಯ್ ನಲ್ಲಿರುವ ಬಾಚ್ ಮೈ ಆಸ್ಪತ್ರೆಯಲ್ಲಿ ಪತ್ತೆಯಾದ ಪೆಶೆಂಟ್ ನಂ.86 ಮತ್ತು 87ಕ್ಕೆ ಸೋಂಕಿತ ಮೂಲವೇ ಪತ್ತೆಯಾಗಿರಲಿಲ್ಲ. ಎಚ್ ಸಿಎಂ ಸಿಟಿ ಬುದ್ಧ ಬಾರ್ ಬಳಿ ಪತ್ತೆಯಾದ 91ನೇ ಸೋಂಕಿತನ ಸೋಂಕಿತ ಮೂಲವೂ ನಿಗೂಢವಾಗಿತ್ತು. ಮಾರ್ಚ್.22ರಂದು ವಿಯೆಟ್ನಾಂ ಅಂತಾರಾಷ್ಟ್ರೀಯ ಸಂಚಾರಕ್ಕೆ ಬ್ರೇಕ್ ಹಾಕಿತು. ಪ್ರಜೆಗಳು ಸ್ವದೇಶಕ್ಕೆ ವಾಪಸ್ ಆಗಲು ಅನುಮತಿ ನೀಡಿತ್ತಾದರೂ, ವಾಪಸ್ ಆದ ಪ್ರಜೆಗಳಿಗೆ 14 ದಿನಗಳ ದಿಗ್ಬಂಧನ ಮತ್ತು ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಲಾಯಿತು.

ವಿಯೆಟ್ನಾಂನಲ್ಲೂ ಕೊರೊನಾ 3ನೇ ಹಂತಕ್ಕೆ ಲಗ್ಗೆ

ವಿಯೆಟ್ನಾಂನಲ್ಲೂ ಕೊರೊನಾ 3ನೇ ಹಂತಕ್ಕೆ ಲಗ್ಗೆ

ಕಳೆದ ಮಾರ್ಚ್.23ರಂದು ಪ್ರಧಾನಮಂತ್ರಿ ನ್ಯೂಯೆನ್ ಕ್ಸೂವಾನ್ ಫುಕ್ ಮೂರನೇ ಹಂತಕ್ಕೆ ಸೋಂಕು ತಗಲುತ್ತಿರುವ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದರು. ದೇಶದ ಪ್ರಸಿದ್ಧ ಬಾಚ್ ಮೈ ಆಸ್ಪತ್ರೆಯಲ್ಲಿ ಸೋಂಕಿತನು ಪತ್ತೆಯಾಗಿದ್ದು, ಮಾರ್ಚ್.28ರ ವೇಳೆಗೆ ಈ ಆಸ್ಪತ್ರೆ ಜೊತೆ ನಂಟು ಹೊಂದಿದ್ದ 10 ಜನರಲ್ಲಿ ಸೋಂಕು ಪತ್ತೆಯಾಯಿತು. ಮಾರ್ಚ್.30ರಂದು ರಾಷ್ಟ್ರವ್ಯಾಪಿ ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿದ ಪ್ರಧಾನಮಂತ್ರಿಯು, ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿ ಜೊತೆಗೆ ತುರ್ತುಸಭೆ ನಡೆಸಿದರು.

ವಿಯೆಟ್ನಾಂನಲ್ಲೂ ಘೋಷಣೆಯಾದ ಲಾಕ್ ಡೌನ್ ಆದೇಶ

ವಿಯೆಟ್ನಾಂನಲ್ಲೂ ಘೋಷಣೆಯಾದ ಲಾಕ್ ಡೌನ್ ಆದೇಶ

ಕಳೆದ ಮಾರ್ಚ್.31ರಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಸಮಿತಿ ಜೊತೆ ಚರ್ಚೆ ನಡೆಸಿದ ಪ್ರಧಾನಮಂತ್ರಿ ನ್ಯೂಯೆನ್ ಕ್ಸೂವಾನ್ ಫುಕ್ ಕೊರೊನಾ ವೈರಸ್ ನಿಯಂತ್ರಿಸುವ ಮಾರ್ಗಸೂಚಿ ಹೊರಡಿಸಿದರು. ಏಪ್ರಿಲ್.01ರಿಂದ ದೇಶಾದ್ಯಂತ ಲಾಕ್ ಡೌನ್ ಮಾಡುವುದಾಗಿ ಘೋಷಿಸಿದರು. ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ, ಎಲ್ಲರೂ ಮನೆಗಳಲ್ಲೇ ವಾಸವಿರಬೇಕು, ಗಡಿಗಳನ್ನೆಲ್ಲ ಬಂದ್ ಮಾಡುವುದು ಹಾಗೂ ದಿಗ್ಬಂಧನದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸಲಾಯಿತು.

ವಿಯೆಟ್ನಾಂ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು?

ವಿಯೆಟ್ನಾಂ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು?

- ಕೊರೊನಾ ವೈರಸ್ ಹರಡುವಿಕೆ ಪತ್ತೆಗೆ ಕಡಿಮೆ ವೆಚ್ಚದಲ್ಲಿ ಶಿಸ್ತುಬದ್ಧ ಕ್ರಮಗಳು ಜಾರಿಗೊಳಿಸಲಾಯಿತು

- ಕೊರೊನಾ ವೈರಸ್ ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ ಮಾಡುವಲ್ಲಿ ಯಶಸ್ವಿ

- ಮೂಲಭೂತ ಮತ್ತು ಅಗತ್ಯ ವೈದ್ಯಕೀಯ ಸೇವೆಗಳ ಉತ್ಪಾದನೆ ಹೆಚ್ಚಿಸಲಾಯಿತು

- ದೇಶದ ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಯಿತು

- ಪೂರ್ವಭಾವಿ ತಯಾರಿಯಿಂದ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ

ಶಿಸ್ತುಬದ್ಧ ವ್ಯವಸ್ಥೆಯ ನಿರ್ವಹಣೆಯಿಂದ ಸೋಂಕಿಗೆ ಕಡಿವಾಣ

ಶಿಸ್ತುಬದ್ಧ ವ್ಯವಸ್ಥೆಯ ನಿರ್ವಹಣೆಯಿಂದ ಸೋಂಕಿಗೆ ಕಡಿವಾಣ

ವಿಯೆಟ್ನಾಂನಲ್ಲಿ ಮೊದಲ ಸೋಂಕಿತ ಪ್ರಕರಣ ಪತ್ತೆಯಾಗಿದ್ದ ಸಂದರ್ಭದಲ್ಲಿ ಐದು ನಗರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿತ್ತು. ಈ ಪೈಕಿ ಫೆಬ್ರವರಿ.13ರಂದು ವಿನ್ ಫುಕ್ ಪ್ರದೇಶದಲ್ಲಿ 16ನೇ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಬಿನ್ ಕ್ಸುಯೆನ್ ಜಿಲ್ಲೆಯ ಸನ್ ಲೋಯ್ ಪ್ರದೇಶವನ್ನು ಲಾಕ್ ಡೌನ್ ಮಾಡಲಾಯಿತು. ಅದೇ ದಿನ ಆಸ್ಪತ್ರೆಯಲ್ಲಿ ಇಬ್ಬರು ಸೇರಿದಂತೆ ಎಂಟು ಮಂದಿಗೆ ಕೊರೊನಾ ಸೋಂಕು ಇರುವುದು ಸ್ಪಷ್ಟವಾಗುತ್ತಿದ್ದಂತೆ 10 ಸಾವಿರ ಜನಸಂಖ್ಯೆಯುಳ್ಳಉ ವಿನ್ ಯೆನ್ ಪ್ರದೇಶದಲ್ಲಿ ಲಾಕ್ ಡೌನ್ ಘೋಷಿಸಲಾಯಿತು.

ಲಾಕ್ ಡೌನ್ ನಿಂದ ಸೋಂಕು ಹರಡುವಿಕೆಗೆ ಬ್ರೇಕ್

ಲಾಕ್ ಡೌನ್ ನಿಂದ ಸೋಂಕು ಹರಡುವಿಕೆಗೆ ಬ್ರೇಕ್

16ನೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ವಿಯೆಟ್ನಾಂನಲ್ಲಿ 20 ದಿನಗಳ ಕಾಲ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಲಿಲ್ಲ. ಮಾರ್ಚ್.06ರಂದು 17ನೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಾರ್ಚ್.07ರಂದೇ ಹಾನೊಯ್ ಪ್ರದೇಶದ ಬ್ಯಾಚ್ ಟ್ರಕ್ ಸ್ಟ್ರೀಟ್ ನ್ನು ಲಾಕ್ ಡೌನ್ ಮಾಡಲಾಯಿತು. ಈ ಪ್ರದೇಶದಲ್ಲಿ 66 ಮನೆಗಳಿದ್ದು 189ಕ್ಕೂ ಹೆಚ್ಚು ಮಂದಿ ವಾಸವಿದ್ದರು. ಮಾರ್ಚ್.20ರವರೆಗೂ ಲಾಕ್ ಡೌನ್ ಘೋಷಿಸಿದ್ದು, ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಒಂದು ಸೋಂಕಿತ ಪ್ರಕರಣ ಕೂಡ ಪತ್ತೆಯಾಗಿರಲಿಲ್ಲ.

ವಿಯೆಟ್ನಾಂನಲ್ಲೂ ಸಾಲು ಸಾಲಾಗಿ ಲಾಕ್ ಡೌನ್ ಘೋಷಣೆ

ವಿಯೆಟ್ನಾಂನಲ್ಲೂ ಸಾಲು ಸಾಲಾಗಿ ಲಾಕ್ ಡೌನ್ ಘೋಷಣೆ

ವಿಯೆಟ್ನಾಂನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡ ಪ್ರದೇಶದಲ್ಲಿ ಲಾಕ್ ಡೌನ್ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿತ್ತು. 219ನೇ ಸೋಂಕಿತ ಕಾಣಿಸಿಕೊಂಡ ಹಿನ್ನೆಲೆ ಏಪ್ರಿಲ್.02ರಂದು ಹಂಗ್ ಯೆನ್ ಪ್ರದೇಶದ ಛಿ ಟ್ರಂಗ್ ಪ್ರದೇಶ ಲಾಕ್ ಡೌನ್ ಮಾಡಲಾಯಿತು. 243ನೇ ಸೋಂಕಿತ ಪತ್ತೆಯಾದ ಬೆನ್ನಲ್ಲೇ ಏಪ್ರಿಲ್.07ರಂದು ಮೆ ಲಿನ್ಹ್ ಹಾಗೂ ಹಾನೊಯ್ ಜಿಲ್ಲೆಯ ಹಾ ಲೊಯ್ ಗ್ರಾಮದಲ್ಲಿ ಲಾಕ್ ಡೌನ್ ಘೋಷಿಸಲಾಯಿತು. ಏಪ್ರಿಲ್.08ರಂದು 251ನೇ ಸೋಂಕಿತನ ಜೊತೆಗೆ ಸಂಪರ್ಕ ಹೊಂದಿದ್ದ ಹಾ ನಮ್ ಪ್ರದೇಶದ ಮೂವರು ವೈದ್ಯಕೀಯ ಸಿಬ್ಬಂದಿಯನ್ನೇ ಗೃಹ ದಿಗ್ಬಂಧನದಲ್ಲಿ ಇರಿಸಲಾಯಿತು. ಹೀಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸೋಂಕು ಹರಡದಿರಲು ಲಾಕ್ ಡೌನ್ ತಂತ್ರವನ್ನು ಅನುಸರಿಸಲಾಯಿತು.

ವಿಯೆಟ್ನಾಂ ಸರ್ಕಾರದ ಬಳಸಿದ ಆಕ್ರಮಣಕಾರಿ ತಂತ್ರ

ವಿಯೆಟ್ನಾಂ ಸರ್ಕಾರದ ಬಳಸಿದ ಆಕ್ರಮಣಕಾರಿ ತಂತ್ರ

ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಯೆಟ್ನಾಂ ಸರ್ಕಾರವು ಆಕ್ರಮಣಕಾರಿ ತಂತ್ರವನ್ನು ಬಳಸಿತು. ಈ ಪೈಕಿ ಶಾಲೆಗಳಿಗೆ ರಜೆ ಘೋಷಿಸಿದ್ದು ಹೆಚ್ಚು ಪರಿಣಾಮಕಾರಿಯಾಗಿತ್ತು. ಮೊದಲ ಎರಡು ಸೋಂಕಿತ ಪ್ರಕರಣ ಪತ್ತೆಯಾದ ವೇಳೆ ಮೊದಲೇ ರಜೆಯಲ್ಲಿದ್ದ ಶಾಲೆಗಳಿಗೆ ಫೆಬ್ರವರಿ.01ರವರೆಗೂ ಮುಂದೂಡಲಾಯಿತು. ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳನ್ನು ಫೆಬ್ರವರಿ.10ರವರೆಗೂ ಮುಂದೂಡಿಕೆ ಮಾಡಲಾಯಿತು. ಫೆಬ್ರವರಿ.14ರಂದು ತಿಂಗಳಾಂತ್ಯದವರೆಗೂ ದೇಶಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿತು. ಮಾರ್ಚ್.31ರ ವೇಳೆಗೆ ರಾಷ್ಟ್ರಾದ್ಯಂತ ಲಾಕ್ ಡೌನ್ ಮುಂದುವರಿಸಲು ಸೂಚನೆ ನೀಡಲಾದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಶಾಲೆ ಬದಲು ಆನ್ ಲೈನ್ ನಲ್ಲಿ ಕ್ಲಾಸ್ ಗಳನ್ನು ಹೇಳಲಾಗುತ್ತಿತ್ತು.

ವಿಯೆಟ್ನಾಂನಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಬಳಕೆ

ವಿಯೆಟ್ನಾಂನಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಬಳಕೆ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಹರಡುವಿಕೆಗೆ ಪ್ರಜೆಗಳಿಗೆ ಮಾಹಿತಿ ನೀಡುವುದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಅಧಿಕೃತ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಪರಿಚಯಿಸಿತು. ಈ ಮೂಲಕ ಜನರಲ್ಲಿ ಸೋಂಕು ಹರಡುವಿಕೆ ಬಗ್ಗೆ ದೇಶಾದ್ಯಂತ ಆರಂಭಿಕ ಹಂತದಲ್ಲಿಯೇ ಜಾಗೃತಿ ಮೂಡಿಸಲಾಯಿತು. ಇದರಿಂದ ಸೋಂಕು ಹರಡುವಿಕೆ, ಸೋಂಕಿತರ ಸಂಖ್ಯೆ ಅಧಿಕೃತವಾಗಿ ಜನರಿಗೆ ತಲುಪುತ್ತಿತ್ತು. ಜೊತೆಗೆ ಸುಳ್ಳುಸುದ್ದಿ ಮತ್ತು ವದಂತಿಗಳಿಗೆ ಕಡಿವಾಣ ಹಾಕಲಾಯಿತು.

English summary
Vietnam How To Face Coronavirus Pandemic And Secret Of Success. Special Story About Vietnam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X