ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಯಲ್ಲಿ ಗ್ಲೌಸ್ ಇದೆ ಅಂತ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ, ಜೋಕೆ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಸೋಪಿನಲ್ಲಿ ಕೈತೊಳೆದುಕೊಳ್ಳುವುದು ಅಥವಾ ಸ್ಯಾನಿಟೈಝರ್ ಬಳಸುವುದು ಅವಶ್ಯಕ.

Recommended Video

ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ ಮಹಿಳಾ ಡಾಕ್ಟರ್ | Oneindia Kannada

ಆದರೆ ಸೋಪಿನಲ್ಲಿ ಪದೇ ಪದೇ ಯಾರು ಕೈತೊಳೆದುಕೊಳ್ಳುತ್ತಾರೆ.? ಅದರ ಬದಲು ಗ್ಲೌಸ್ ಧರಿಸೋಣ.. ಗ್ಲೌಸ್ ಧರಿಸಿದರೆ ನಮ್ಮ ಕೈ ಸೇಫ್.. ನಾವೂ ಸೇಫ್.. ಎಂದು ಸಿಕ್ಕಿದ್ದನ್ನೆಲ್ಲ ಮುಟ್ಟಿ.. ಕೈ ತೊಳೆಯುವುದನ್ನು ಮರೆತರೆ.. ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ.!

ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟ ಏಮ್ಸ್ ನಿರ್ದೇಶಕ: ಸಮುದಾಯಕ್ಕೆ ಹಬ್ಬುತ್ತಿದೆ ಕೊರೊನಾ!ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟ ಏಮ್ಸ್ ನಿರ್ದೇಶಕ: ಸಮುದಾಯಕ್ಕೆ ಹಬ್ಬುತ್ತಿದೆ ಕೊರೊನಾ!

ಕೋವಿಡ್-19 ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗ್ಲೌಸ್ ಧರಿಸುವುದು ಉತ್ತಮ. ಹಾಗಂತ ನಾವು ಮೈಮರೆಯುವ ಹಾಗಿಲ್ಲ. ಗ್ಲೌಸ್ ಧರಿಸಿದರೂ, ವೈಯುಕ್ತಿಕ ಸ್ವಚ್ಛತೆಯನ್ನು ನಾವು ಕಾಪಾಡಿಕೊಳ್ಳಲೇಬೇಕು. ಏನನ್ನಾದರೂ ಮುಟ್ಟಿದ ಬಳಿಕ ಕೈತೊಳೆಯುವುದನ್ನು ಯಾವ ಕಾರಣಕ್ಕೂ ಮರೆಯಬಾರದು.

ವಿಡಿಯೋ ನೋಡಿ...

ಗ್ಲೌಸ್ ಧರಿಸಿದಾಗ, ನಾವೆಲ್ಲರೂ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ನರ್ಸ್ ಒಬ್ಬರು ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ. ಅದನ್ನ ನೋಡಿ, ಗ್ಲೌಸ್ ಬಳಕೆ ಬಗ್ಗೆ ತಿಳಿದುಕೊಳ್ಳಿ..

ಎಲ್ಲೆಂದರಲ್ಲಿ ಗ್ಲೌಸ್ ಬಿಸಾಡಬೇಡಿ

ಎಲ್ಲೆಂದರಲ್ಲಿ ಗ್ಲೌಸ್ ಬಿಸಾಡಬೇಡಿ

ಗ್ಲೌಸ್ ಗಳನ್ನು ಬಳಸಿದ ಬಳಿಕ ಎಲ್ಲೆಂದರಲ್ಲಿ ಬಿಸಾಡಬೇಡಿ. ಮರೆಯದೆ ಕಸದ ಬುಟ್ಟಿಯಲ್ಲಿ ಹಾಕಿ ಮುಚ್ಚಿಡಿ. ಇಲ್ಲಾಂದ್ರೆ, ಗ್ಲೌಸ್ ಬಿಸಾಡಿದ ಕಡೆ ವೈರಾಣು, ಕೀಟಾಣುಗಳು ಹರಡುವುದು ಗ್ಯಾರಂಟಿ.

ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?

ವೈಯುಕ್ತಿಕ ಸ್ವಚ್ಛತೆ ಮುಖ್ಯ.!

ವೈಯುಕ್ತಿಕ ಸ್ವಚ್ಛತೆ ಮುಖ್ಯ.!

ಗ್ಲೌಸ್ ಬಳಕೆ ಮುಗಿದ ಬಳಿಕ ನಿಮ್ಮ ಕೈ, ಕಾಲು, ಮುಖವನ್ನು ಸೋಪಿನಿಂದ ತೊಳೆದುಕೊಳ್ಳಿ. ವೈಯುಕ್ತಿಕ ಸ್ವಚ್ಛತೆಯನ್ನು ನೀವು ಕಾಪಾಡಿಕೊಂಡಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತು.

ಕೋವಿಡ್-19 ಅಂಕಿ-ಅಂಶ

ಕೋವಿಡ್-19 ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 13,47,689 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ 286,463 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 74,783 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಇಲ್ಲಿಯವರೆಗೂ 4846 ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಅದರಲ್ಲಿ 382 ಮಂದಿ ಗುಣಮುಖರಾಗಿದ್ದು, 133 ಮಂದಿ ಮೃತಪಟ್ಟಿದ್ದಾರೆ.

English summary
Video: Nurse shows how germs can spread even if you are wearing gloves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X