ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅಮೆರಿಕದ ಮೀನುಗಾರನ ಬಲೆಗೆ ತೋಳ ಮೀನು- ಸಿಕ್ಕಿದ್ದೆಲ್ಲಾ ಕಚ್ಚಿ ಸಾಯಿಸುತ್ತೆ ಹುಷಾರ್

|
Google Oneindia Kannada News

ಪ್ರಪಂಚದಲ್ಲಿ ಅನೇಕ ಜೀವಿಗಳಿದ್ದು, ಕೆಲವು ಜೀವಿಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿಲ್ಲ. ಸಮುದ್ರದ ಆಳದೊಳಗೆ ಹೆಚ್ಚು ವಿಚಿತ್ರ ಜೀವಿಗಳು ವಾಸಿಸುತ್ತವೆ. ಕೆಲವೊಮ್ಮೆ ಗೋಲ್ಡನ್ ಮೀನಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಈಗ ಮೀನುಗಾರರೊಬ್ಬರು ಅಂತಹ ಅಪರೂಪದ 'ತೋಳ' ಮೀನನ್ನು ಹಿಡಿದಿದ್ದಾರೆ.

ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಮೀನುಗಾರರೊಬ್ಬರು ಈ ಅಪರೂಪದ 'ತೋಳ' ಮೀನನ್ನು ಹಿಡಿದಿದ್ದು, ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಮೀನು 'ದೆವ್ವ'ಕ್ಕಿಂತ ಕಡಿಮೆಯಿಲ್ಲ. ಇದನ್ನು ನೋಡಿದ ಜನರು ಕೂಡ ಗಾಬರಿ ಮತ್ತು ಭಯಭೀತರಾಗಿದ್ದಾರೆ.

ಅಮೇರಿಕಾದ ಮೀನುಗಾರರೊಬ್ಬರು ಸಮುದ್ರ ನೀರೊಳಗಿನ ಪರಭಕ್ಷಕ ಎಂದು ಕರೆಯಲ್ಪಡುವ 'ತೋಳ' ಮೀನಿನ ಅಪರೂಪದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು ನಿರಂತರವಾಗಿ ಅಪಾಯಕಾರಿ ಸಮುದ್ರ ಜೀವಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮೀನುಗಾರರು ಈ ಅಪರೂಪದ ಮೀನನ್ನು ಹಿಡಿದ ಕಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ತೋಳ ಮೀನುಗಳು ಭಯಾನಕ ಮತ್ತು ಮಾರಣಾಂತಿಕ

ತೋಳ ಮೀನುಗಳು ಭಯಾನಕ ಮತ್ತು ಮಾರಣಾಂತಿಕ

ಮೀನು ಹಿಡಿಯುವ ಅಮೆರಿಕಾದ ಜಾಕೋಬ್ ನೋಲ್ಸ್ ಮೀನಿನ ವಿಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಭಯಾನಕ ಮತ್ತು ಪ್ರಾಣಾಂತಿಕ ತೋಳ ಮೀನುಗಳನ್ನು ಜನರಿಗೆ ಪರಿಚಯಿಸಿದ್ದಾರೆ. ವಿಡಿಯೊದಲ್ಲಿ ಮೀನು ಒದ್ದಾಡುವ ಕಚ್ಚಲು ಮುಂದಾಗುವುದನ್ನು ಕಾಣಬಹುದು. ಅದನ್ನು ಹಿಡಿದ ಕೆಲವು ಸೆಕೆಂಡುಗಳ ನಂತರ, ಭಯಭೀತರಾದ ಮೀನುಗಾರ ನೋಲ್ಸ್ ಅದನ್ನು ಎತ್ತಿಕೊಂಡರು ಮತ್ತು ಕ್ಯಾಮೆರಾಗೆ ಪೋಸ್ ನೀಡಿದರು. ಅದನ್ನು ಎತ್ತಿಕೊಳ್ಳುತ್ತಿದ್ದಂತೆ ಅದು ಆತನಿಗೆ ಕಚ್ಚಲು ಮುಂದಾಗುತ್ತದೆ. ಮೀನಿನ ಹರಿತವಾದ ಹಲ್ಲುಗಳು ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತವೆ.

ಬಲಿಯಲ್ಲಿದ್ದ ಜಲಚರಗಳನ್ನ ಕಚ್ಚಿ ಕೊಂದ ಮೀನು

ಬಲಿಯಲ್ಲಿದ್ದ ಜಲಚರಗಳನ್ನ ಕಚ್ಚಿ ಕೊಂದ ಮೀನು

ವಿಡಿಯೊದಲ್ಲಿ ನೋಲ್ಸ್ ಹೇಳುವುದನ್ನು ಕೇಳಬಹುದು, "ಇದು ನನ್ನನ್ನು ಕಚ್ಚಲು ಪ್ರಯತ್ನಿಸುತ್ತಿದೆ. ಇದು ನನ್ನನ್ನು ಕಚ್ಚಬಹುದು. ಇದು ನನಗೆ ಬಲೆಯಲ್ಲಿ ಸಿಕ್ಕಿದೆ. ಜೊತೆಗೆ ಬಲೆಯಲ್ಲಿರುವ ಎಲ್ಲಾ ಜಲಚರಗಳನ್ನು ಕಚ್ಚಿ ಕೊಂದಿದೆ" ಎಮದು ಹೇಳುತ್ತಾರೆ. ನಾವು ಮಾತ್ರ ಅದನ್ನು ಹಿಡಿಯಲು ಸಾಧ್ಯ. ಇದು ಸಂಪೂರ್ಣವಾಗಿ ಸುರಕ್ಷಿತರಾಗಿದೆ. ನಾನು ಅದನ್ನು ಮರಳಿ ಸಮುದ್ರಕ್ಕೆ ಬಿಡುತ್ತೇನೆ'' ಎಂದು ಅವರು ಹೇಳುವುದನ್ನು ಕೇಳಬಹುದು.

ಸತ್ತ ಏಡಿಯನ್ನು ಕಚ್ಚುವ ದೃಶ್ಯ

ಸತ್ತ ಏಡಿಯನ್ನು ಕಚ್ಚುವ ದೃಶ್ಯ

'ತೋಳ' ಮೀನು ಮೀನುಗಾರನ ಕೈಯನ್ನು ಹೇಗೆ ಕಚ್ಚಲು ಪ್ರಯತ್ನಿಸುತ್ತಿದೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಮೀನು ಹಿಡಿದ ವ್ಯಕ್ತಿ ಕೂಡ ಹೆದರುತ್ತಾನೆ. ಇದರ ನಂತರ, ಅವನು ತನ್ನ ಕೈಯಲ್ಲಿ ಹಿಡಿದಿರುವ ಮೀನನ್ನು ಹತ್ತಿರದಲ್ಲಿ ಮಲಗಿರುವ ಸತ್ತ ನಳ್ಳಿ (ಏಡಿ) ತಿನ್ನಲು ಕೊಡುತ್ತಾನೆ. ಅದನ್ನು ತೋಳ ಮೀನು ತನ್ನ ಚೂಪಾದ ಹಲ್ಲುಗಳಿಂದ ಅಗಿಯುತ್ತದೆ. ಬಳಿಕ ಅವನು ಮೀನನ್ನು ಮತ್ತೆ ಸಮುದ್ರಕ್ಕೆ ಎಸೆಯುತ್ತಾನೆ.

ಪ್ರಕೃತಿ ಕ್ರೂರ ಮತ್ತು ಅದ್ಭುತ

ಈ ಅಪರೂಪದ ಮೀನಿನ ಈ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಈ ವಿಡಿಯೋವನ್ನು ಹಲವರು ಲೈಕ್ ಮಾಡಿದ್ದಾರೆ ಮತ್ತು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, "ತಾಯಿ ಪ್ರಕೃತಿಯು ನಿಜವಾಗಿಯೂ ಕ್ರೂರ ಮತ್ತು ಅದ್ಭುತವಾಗಿದೆ''. ಇನ್ನೊಬ್ಬ ಬಳಕೆದಾರರು ಕಾಮೆಂಟ್‌ನಲ್ಲಿ ಅದೊಂದು ಕೊಳಕು ಮೀನು ಎಂದು ಹೇಳಿದ್ದಾರೆ. ಇನ್‌ಸ್ಟಾ ಹೊರತುಪಡಿಸಿ, ಈ ಕ್ಲಿಪ್ ಅನ್ನು ಟಿಕ್-ಟಾಕ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ, ಇದು 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಮತ್ತು 407k ಲೈಕ್ಸ್ ಗಳಿಸಿದೆ.

English summary
Fisherman Jacob Knowles in America shares video of terrifying 'wolf' fish that he caught when fishing. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X