ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ನಾಟಕವಾಡುವ ಹಾವು: ನಟನೆ ಕಂಡು ಬೆಚ್ಚಿ ಬಿದ್ದ ಜನ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಇಲ್ಲಿಯವರೆಗೆ ನೀವು ಅನೇಕ ಹಿರಿಯ ನಟರ ನಟನೆಯನ್ನು ನೋಡಿರುತ್ತೀರಿ. ಅಂತಹ ಮಹಾನ್ ಕಲಾವಿದರ ನಟನೆಗೆ ಅಭಿಮಾನಿಯಾಗಿರುತ್ತೀರಿ. ಆದರೆ ಇಂದು ನೀವು ನೋಡುವ ಅಭಿನಯ ಕೊಂಚ ವಿಭಿನ್ನ ಮತ್ತು ವಿಚಿತ್ರ. ಅಂದ ಹಾಗೆ ನಾವು ಹೇಳಲು ಹೊರಟಿರುವುದು ನಟರ ಅಭಿನಯದ ಬಗ್ಗೆ ಅಲ್ಲ ಹಾವಿನ ನಟನೆಯ ಬಗ್ಗೆ. ಹಾವು ನಟನೆ ಮಾಡುತ್ತಾ? ಅಂತ ಶಾಕ್ ಆಯ್ತಾ? ವಿಚಿತ್ರ ಅನ್ಸಿದ್ರೂ ಇದು ನಿಜ. ಇತ್ತೀಚಿನ ದಿನಗಳಲ್ಲಿ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಹಾವು ಸಾಯುವಂತೆ ನಟಿಸುತ್ತಿದೆ. ಈ ಹಾವಿನ ನಟನೆ ನೋಡಿದರೆ ನೀವೂ ಕೂಡ ಬೆರಗಾಗುತ್ತೀರಿ. ಜೊತೆಗೆ ಇದರ ನಟನೆಗೆ ಅಭಿಮಾನಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಸಾವಿನ ನಾಟಕವಾಡುವ ಹಾವು

ಸಾವಿನ ನಾಟಕವಾಡುವ ಹಾವು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ತಮಾಷೆಯ ವಿಡಿಯೋದಲ್ಲಿ, ಕಪ್ಪು ಬಣ್ಣದ ಹಾವು ಸತ್ತಂತೆ ನಟಿಸುವುದನ್ನು ಕಾಣಬಹುದು. ಹಾವು ಸಾಕುಪ್ರಾಣಿಯಂತೆ ಕಾಣುತ್ತದೆ. ಒಬ್ಬ ವ್ಯಕ್ತಿಯು ಅದನ್ನು ಬೆರಳಿನಿಂದ ಸ್ಪರ್ಶಿಸಿದಾಗ, ಅದು ನೋವು ಮತ್ತು ಸಾಯುವ ರೀತಿಯಲ್ಲಿ ನಾಟಕವಾಡುತ್ತದೆ. ಹಾವು ಎಷ್ಟು ಚೆನ್ನಾಗಿ ವರ್ತಿಸುತ್ತದೆ ಎಂದರೆ ಸಾಮಾಜಿಕ ಜಾಲತಾಣದ ಬಳಕೆದಾರರೂ ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಸಾವಿನ ನಾಟಕದ ಸಮಯದಲ್ಲಿ, ಹಾವು ತನ್ನನ್ನು ಸ್ಪರ್ಶಿಸದಂತೆ ಅಡ್ಡಿಪಡಿಸುವಂತೆ ಕಾಣಿಸುತ್ತದೆ. ಅದನ್ನು ಸ್ಪರ್ಶಿಸಿದ ತಕ್ಷಣ ಹಾವು ಸಾವನ್ನಪ್ಪಿದ್ದಂತೆ ನಾಟಕವಾಡುತ್ತದೆ. ಈ ನಟನೆಯನ್ನು ನೋಡಿದಾಗ ಅದು ಸಾವಿನ ನಟನೆ ಎಂದು ಕಾಣಿಸುವುದಿಲ್ಲ.

ಹಾವಿನ ನಟನೆಗೆ ಜನ ಫಿದಾ

ಹಾವಿನ ನಟನೆಗೆ ಜನ ಫಿದಾ

ಈ ಹಾವಿನ ವೀಡಿಯೊವನ್ನು Viralhog ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಾವನ್ನು ನೋಡಿದ ನಂತರ ಜನರು ಹಾವಿನ ನಟನೆಗಾಗಿ ಆಸ್ಕರ್ ನೀಡಬೇಕೆಂದು ಒತ್ತಾಯಿಸಿದರು. ವಿಡಿಯೋದಲ್ಲಿ ಹಾವಿನ ನಟನೆ ನೋಡಿ ಮುಟ್ಟಿದವರೂ ನಗುತ್ತಾರೆ. ಹಾವಿನ ಈ ಅದ್ಬುತ ನಟನೆಗೆ ಜನ ಸಾಕಷ್ಟು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೊವನ್ನು ಇಲ್ಲಿಯವರೆಗೆ 90 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಈ ಹಾವಿನ ಅಭಿನಯದ ಮುಂದೆ ದೊಡ್ಡ ನಟರು ಫೇಲ್

ಈ ಹಾವಿನ ಅಭಿನಯದ ಮುಂದೆ ದೊಡ್ಡ ನಟರು ಫೇಲ್

ಮೊದಲ ಬಾರಿಗೆ ವಿಡಿಯೋ ನೋಡಿದ್ರೆ ಹಾವು ಕೂಡ ಎಷ್ಟು ಮುದ್ದಾಗಿದೆ ಅನ್ನೋದು ಗೊತ್ತಾಗುತ್ತೆ. ಹಾವುಗಳು ಸಾಮಾನ್ಯವಾಗಿ ಕೋಪದ ಸ್ವಭಾವ ಮತ್ತು ವಿಷಕ್ಕೆ ಹೆಸರುವಾಸಿಯಾಗಿದೆ. ಆದರೆ ವಿಡಿಯೊದಲ್ಲಿ ಕಂಡುಬರುವ ಹಾವು ಎಲ್ಲಿಂದಲೂ ಅಪಾಯಕಾರಿಯಾಗಿ ಕಾಣಿಸುವುದಿಲ್ಲ. ಹಾವು ಎಷ್ಟು ನೈಜವಾಗಿ ವರ್ತಿಸುತ್ತದೆ ಎಂದರೆ ಅದು ತನ್ನ ನಾಲಿಗೆಯನ್ನು ಹೊರಹಾಕುತ್ತಲೇ ಬೀಳುತ್ತದೆ. ವಿಡಿಯೊ ಕುರಿತು ಕಾಮೆಂಟ್ ಮಾಡಿದ ಬಳಕೆದಾರರು, 'ಈ ಪುಟ್ಟ ಸ್ನೇಹಿತ ಚೆನ್ನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ, ಅದು ತುಂಬಾ ಮುದ್ದಾಗಿದೆ' ಎಂದು ಬರೆದಿದ್ದಾರೆ.

ಈ ಜಾತಿಯ ಹಾವುಗಳು ತುಂಬಾ ಮುದ್ದು

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಾವಿನ ಬಗ್ಗೆ ಮಾಹಿತಿ ನೀಡುವಾಗ ಮತ್ತೊಬ್ಬ ಬಳಕೆದಾರರು ಹಾಗ್ನೋಸ್ ಹಾವುಗಳು ತುಂಬಾ ಮುದ್ದಾದ ಮತ್ತು ನಾಟಕೀಯವಾಗಿವೆ ಎಂದು ಹೇಳಿದ್ದಾರೆ. ಹಾಗ್ನೋಸ್ ಹಾವುಗಳನ್ನು ಅವುಗಳ ಮೂತಿಯಿಂದ ಗುರುತಿಸಲಾಗುತ್ತದೆ. ಅವು ಹೆಚ್ಚಾಗಿ ಮರಳು ಸ್ಥಳಗಳಲ್ಲಿ ಕಂಡುಬರುತ್ತವೆ. ಆಟವಾಡುವುದು ಅದರ ವಿಶೇಷತೆಯಾಗಿದೆ. ಅವು ಬೆದರಿಕೆಯನ್ನು ಅನುಭವಿಸಿದಾಗ ಆಕ್ರಮಣ ಮಾಡಲು ಸಹ ವರ್ತಿಸುತ್ತವೆ. ಇವುಗಳ ವಿಷವು ಇತರ ಹಾವುಗಳಂತೆ ಮಾರಕವಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಟಿಸುತ್ತಿರುವ ಈ ಹಾವಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

English summary
Video that goes viral on social media, a black snake can be seen pretending to be dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X