• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು

By Mahesh
|

ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ಏಷ್ಟೋ ಪೀಳಿಗೆಯನು ಬಡಿದೆಬ್ಬಿಸಿದ್ದು ಸುಳ್ಳಲ್ಲ.

ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು.

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಜೀವನದ ಹೆಜ್ಜೆಗುರುತುಗಳು

ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ಅವರ ದೂರದೃಷ್ಟಿತ್ವದ ಫಲವಾಗಿದೆ.

ತಮ್ಮ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಸಮರ್ಥಣೆ ಮಾಡಿಕೊಳ್ಳುವಾಗ ನೀಡುತ್ತಿದ್ದ ಉದಾಹರಣೆ, ಉಲ್ಲೇಖಗಳು, ವಿರೋಧ ಪಕ್ಷದವರು ಮೆಚ್ಚುವಂಥ ಮಾತುಗಳು ಇಂದಿನ ರಾಜಕಾರಣಿಗಳಿಗೆ ಮಾದರಿ. ವಾಜಪೇಯಿ ಅವರು ಭಾಷಣಗಳ ಸಂಗ್ರಹಯೋಗ್ಯ ವಿಡಿಯೋಗಳು ಇಲ್ಲಿವೆ.

ಪೋಖ್ರಾನ್ ಅಣು ಪರೀಕ್ಷೆ ಬಗ್ಗೆ ಸಮರ್ಥನೆ

ಅಣು ಪರೀಕ್ಷೆಯ ಉದ್ದೇಶವೇನು? ದೇಶದ ಮುಂದೆ ಯಾವ ಆತಂಕ ಎದುರಾಗಿತ್ತು? ಎಂದು ಕೇಳಲಾಯಿತು. 1974ರಲ್ಲಿ ಸದನದಲ್ಲಿದ್ದೆ ಶ್ರೀಮತಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಅಣು ಪರೀಕ್ಷೆಯಾದಾಗ, ವಿಪಕ್ಷದಲ್ಲಿದ್ದರೂ ಸ್ವಾಗತ ಮಾಡಿದ್ದೆ. ಏಕೆಂದರೆ, ದೇಶದ ಭದ್ರತೆಗಾಗಿ ಅವಶ್ಯವಾಗಿತ್ತು. ಆತಂಕ ಎದುರಾದಾಗ ತಯಾರಿ ಮಾಡಿಕೊಳ್ಳಬೇಕೆ?

ಅಧ್ಯಕ್ಷ್ ಮಹೋದಯ್, ನನ್ನ ರಾಜೀನಾಮೆ ಸ್ವೀಕರಿಸಿ

ಅಧ್ಯಕ್ಷ್ ಮಹೋದಯ್, ನನ್ನ ರಾಜೀನಾಮೆ ಸ್ವೀಕರಿಸಿ ಎಂದು 13 ದಿನಗಳ ನಂತರ ಎನ್ಡಿಎ ಸರ್ಕಾರ ಉರುಳಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು 1996ರ ಮೇ 27ರಂದು ಸಂಸತ್ತಿನಲ್ಲಿ ಮಾಡಿದ ಭಾಷಣ ಸ್ಮರಣೀಯ.

ಅಟಲ್ ಬಿಹಾರಿ ವಾಜಪೇಯಿ ಉಗ್ರ ಭಾಷಣ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ವಿಪಕ್ಷಗಳಿಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳುತ್ತಾ, ಮಾಡಿದ ಉಗ್ರ ಭಾಷಣ ಇಲ್ಲಿದೆ.

ಅವಕಾಶವಾದಿ ರಾಜಕಾರಣಿಗಳ ಬಗ್ಗೆ ಟೀಕೆ

ಅವಕಾಶ ರಾಜಕೀಯ ಮಾಡಿದ ಶರದ್ ಪವಾರ್ ಬಗ್ಗೆ ಕಟು ಶಬ್ದಗಳಿಂದ ಟೀಕಿಸಿ, ಶ್ರೀರಾಮಚಂದ್ರ ಹೇಳಿದ ವಾಕ್ಯವನ್ನು ಉಲ್ಲೇಖಿಸಿ, ಮೃತ್ಯುವಿಗೆ ನಾನು ಹೆದರುವುದಿಲ್ಲ, ಹೆಸರು ಹಾಳಾಗುವುದರ ಬಗ್ಗೆ ಮಾತ್ರ ಭಯವಿದೆ. ನನ್ನ ರಾಜಕೀಯ ಜೀವನ ಪಾರದರ್ಶಕವಾಗಿದೆ ಎಂದರು.

ಜನರ ಸಮರ್ಥನೆಯೇ ನಮಗೆ ಮುಖ್ಯ

ಸದನದಲ್ಲಿ ಇಬ್ಬರಿದ್ದರೂ ನಂತರ ಈ ಸಂಖ್ಯೆ ಸಂಪಾದಿಸಿದ್ದು, ಜನರ ಸಮರ್ಥನೆ ಯಿಂದ ಮಾತ್ರ. ಸಂವಿಧಾನದ ನಿರ್ಮಾತೃಗಳು ವಿವಾಹದ ಬಗ್ಗೆ ತಿಳಿಸಿರುವಾಗ ಸಮಾಜದ ಬದಲಾವಣೆ ಏಕೆ ಸಾಧ್ಯವಿಲ್ಲ.

ಬೆಂಕಿಯ ಕಿಡಿಯ ಜತೆ ಆಟ ಬೇಡ

ಬೇರೆಯವರ ಮನೆಗೆ ಬೆಂಕಿ ಹಾಕುವ ಮೊದಲು ನಿಮ್ಮ ಮನೆಗೆ ಬೆಂಕಿ ಬೀಳುತ್ತಿರುವುದನ್ನು ನೋಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಆಟಲ್ ಬಿಹಾರಿ ವಾಜಪೇಯಿ ಅವರ ಖಡಕ್ ಮಾತುಗಳು.

English summary
Bharat Ratna Atal Bihari Vajpayee is without a doubt one of the best speakers the country has ever witnessed. Be it in public or at Parliament, he never failed to keep the audience enthralled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X