ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ವ್ಯಕ್ತಿ ಪರಿಚಯ

|
Google Oneindia Kannada News

ಬೆಂಗಳೂರು, ಮೇ 5: ಕನ್ನಡದ ಹಿರಿಯ ಕವಿ, ಚಿಂತಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜರಗನಹಳ್ಳಿ ಶಿವಶಂಕರ್ ಬುಧವಾರ (ಮೇ 5) ಬೆಳಗ್ಗೆ ನಿಧನರಾದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕೆಲ ದಿನದ ಹಿಂದೆ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ನಿಧನಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ನಿಧನ

ಜನನ

ಜರಗನಹಳ್ಳಿ ಶಿವಶಂಕರ್ ಇವರು ಸೆ.4, 1949ರಲ್ಲಿ ಬೆಂಗಳೂರಿನ ಜರಗನಹಳ್ಳಿಯಲ್ಲಿ ಜನಿಸಿದರು. ಬಿ.ಕಾಂ ಪದವೀಧರರಾದ ಇವರು ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ 2001ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

Veteran Kannada Poet Jaraganahalli Shivshankar Profile

ವ್ಯಕ್ತಿಚಿತ್ರ

ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು 40 ವರ್ಷಗಳಿಂದ ಪ್ರಪಟಗೊಳ್ಳುತ್ತಿವೆ. ಇವರು ಶುಭದ ಪ್ರಕಾಶನವೆಂಬ ಕಾವ್ಯ ಪ್ರಕಟಣೆಗೆ ಮೀಸಲಾದ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದರು, ಅದರ ಮೂಲಕ ವಿವಿಧ ಬರಹಗಾರರ ಸುಮಾರು 50 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಕವನ ಸಂಕಲನ

1985 ಕವನ - ಶುಭಾಂಗಿ

1991 ಹನಿಗವನ - ಬುಗ್ಗೆ

1998 ಕವನ - ಮರಗಳು

2000 ಹನಿಗವನ - ಮಳೆ

2001 ಕಿರು ಕವಿತೆ - ಆಲಿಕಲ್ಲು

2002 ಹನಿಗವನ ಝರಿ - ಆಯ್ದ ಹನಿಗವಿತೆಗಳು

2003 ಕವಿತೆ - ದೇವರ ನೆರಳು

2012 ವಚನ - ವಚನ ಧ್ಯಾನ

2013 ಹನಿಗವನ - ಹೊಳೆ

2013 ಹನಿಗವನ - ಮರಗಳು

2015 ಭಾವಗೀತೆ - ನಾದೋತ್ಸವ

2016 ವಚನ - ವಚನ ಛಾಯೆ

Veteran Kannada Poet Jaraganahalli Shivshankar Profile

ಲೇಖನ

2004 ಭವ ಬದುಕು - ತರಂಗ ಅಂಕಣ ಬರಹಗಳು

2007 ನೆನಪಿನ ನೆಂಟರು - ವಿಜಯ ಕರ್ನಾಟಕದ ಅಂಕಣ ಬರಹಗಳು

2013 ಚಾತಕ - ಕರ್ಮವೀರ ಪತ್ರಿಕೆಯ ಅಂಕಣ ಬರಹಗಳು

ಸಂಪಾದನೆ

1987 ಜೊತೆಯಾದವರು - ಕವನ ವಿಮರ್‍ಶಾ ಸಂಕಲನ

2009 ಬೇರು ಚಿಗುರು - ಕವನ ಸಂಕಲನ

2013 ಅಕ್ಷರ ತಾಂಬೂಲ - ಸಂಸಾರ-ವಿವಾಹ ಸಂಬಂಧಿತ ಬರಹಗಳು

2015 ವಚನ ಸಂಗಮ - ಆಧುನಿಕ ವಚನಗಳ ಪ್ರಾತಿನಿಧಿಕ ಸಂಕಲನ

ಪ್ರಶಸ್ತಿ ಪುರಸ್ಕಾರ

2000 ಚುಟುಕು ರತ್ನ - ಚುಟುಕು ಸಾಹಿತ್ಯ ಪರಿಷತ್ತು, ಮೈಸೂರು

2001 ಕೆಂಪೇಗೌಡ ಪ್ರಶಸ್ತಿ - ಬೆಂಗಳೂರು ಮಹಾನಗರ ಪಾಲಿಕೆ

2001 ಗೊರೂರು ಸಾಹಿತ್ಯ ಪ್ರಶಸ್ತಿ

2003 ಸಾಹಿತ್ಯ ಸೇತು ಪ್ರಶಸ್ತಿ

2004 ಸರ್‍.ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

2004 ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ

2005 ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - ಕರ್ನಾಟಕ ಸರ್‍ಕಾರ

2005 ಭೂಪಾಲಿನ ಭಾರತ್ ಭವನದಲ್ಲಿ ನಡೆದ 'ಕವಿ ಭಾರತಿ'ಯಲ್ಲಿ ಕನ್ನಡದ ಪ್ರತಿನಿಧಿ

2006 ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ

2007 ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ

2007 ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ

2008 ದುಬೈ ಧ್ವನಿ ಪ್ರತಿಷ್ಠಾನ ನೀಡುವ 'ಧ್ವನಿ' ಪುರಸ್ಕಾರ

2008 ಬಸವ ಜ್ಯೋತಿ ರಾಜ್ಯ ಪ್ರಶಸ್ತಿ, ಅಹೇರಿ, ಬಿಜಾಪುರ

2013- 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬಿಜಾಪುರ - ಗೌರವ ಪುರಸ್ಕಾರ

2013 ತಮಿಳುನಾದಿನ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಕನ್ನಡ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಉಧ್ಘಾಟಕರಾಗಿ ಭಾಗಿ

2013 ಅಡ್ವೈಸರ್ ಸಾಹಿತ್ಯ ಪ್ರಶಸ್ತಿ - ಮಂಡ್ಯ. 'ಹೊಳೆ' ಹನಿಗವಿತೆಗಳ ಸಂಕಲನಕ್ಕೆ

2013-11-24 ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ

2014-01-10 ಕನ್ನಡ ಮತ್ತು ಸಂಸ್ಕೃತಿ ಇಲಾಖೆ - 'ಮನೆಯಂಗಳದಲ್ಲಿ ಮಾತುಕತೆ' ಯಲ್ಲಿ 'ತಿಂಗಳ ಅತಿಥಿ' ಗೌರವ

2015-02-25 'ಹೊಳೆ' ಹನಿಗವಿತೆಗಳ ಸಂಕಲನಕ್ಕೆ ಬೆಳಗಾವಿ ಚುಟುಕು ಸಾಹಿತ್ಯ ಸಮ್ಮೇಳನದ ದ್ವಿತೀಯ ಬಹುಮಾನ

2016 'ಹೊಸಗನ್ನಡ ಕಾವ್ಯ ಸಂಚಯ' ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಬಿ.ಎ ಮೂರನೆ ಸೆಮಿಸ್ಟರ್ ಕನ್ನಡ ಐಚ್ಛಿಕ ಪಠ್ಯಪುಸ್ತಕ (2016 ರಿಂದ 2019) ದಲ್ಲಿ ಹನಿಗವಿತೆಗಳು ಪಠ್ಯವಾಗಿದೆ.

2016-08-07 ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಸಿರುವ 'ಎಚ್.ಎಸ್ ರೇಣುಕಾ ಪ್ರಸಾದ ಪ್ರಶಸ್ತಿ' ಪ್ರಥಮ ಪ್ರಶಸ್ತಿಗೆ ಭಾಜನ

2016-09-08 ಅಂತರಾಷ್ಟ್ರೀಯ ಮಾನವ ಧರ್ಮ ಪ್ರತಿಷ್ಠಾನ 'ನಿಜ ಧರ್ಮಾಧೀಶ ಬಸವ' ಪ್ರಶಸ್ತಿ

2016-10-02 ವೆಲ್ಫೇರ್‍ ಪಾರ್‍ಟಿ ಆಫ್ ಇಂಡಿಯದಿಂದ ಗಾಂಧಿ ಶಾಂತಿ ಪುರಸ್ಕಾರ

2016-12-02 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರಿನಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ

2016 ಜೀವನ್ಮುಖಿ ಪತ್ರಿಕಾ ಪ್ರಶಸ್ತಿ

2016 ಬೆಂಗಳೂರು ನಗರ ಜಿಲ್ಲೆ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ

2017-09-22 ಸಂದೇಶ್ ಸಂಸ್ಥೆಯಿಂದ ಪ್ರಶಸ್ತಿ

2017-12-08 ಪ್ರೊ. ಸಿ.ಎಚ್ ಮರಿದೇವರು ಸಾಹಿತ್ಯ ಪ್ರಶಸ್ತಿ (ಕಸಾಪ) ದತ್ತಿ ಮೊದಲನೆಯ ಪ್ರಶಸ್ತಿ

2018-01-26 ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಗಣರಾಜ್ಯೋತ್ಸವದ ಪ್ರಶಸ್ತಿ ಪುರಸ್ಕಾರ

2018-10-04 ಬಹ್ರೇನ್ ದೇಶದಲ್ಲಿ ನಡೆದ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ.

2018-10-20 ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯ ಅಧ್ಯಕ್ಷತೆ

2019-04-22 ಭಾಲ್ಕಿ ಮಠವು ನೀಡುವ "ಬಸವ ತತ್ವ ಪ್ರಚಾರ ಪುರಸ್ಕಾರ ೨೦೧೯'

2019-05-12 ಬಸವ ವೇದಿಕೆ, ಬೆಂಗಳೂರು ನೀಡುವ ವಚನ ಸಾಹಿತ್ಯ ಶ್ರೀ ೨೦೧೯ ಪ್ರಶಸ್ತಿ

2019-08-11 ಸಮ್ಮಿಲನ ಸಾಹಿತ್ಯ ಪ್ರಶಸ್ತಿ

2021-05-05- ನಿಧನ

ಮಾಹಿತಿ ಕೃಪೆ: ಅಂತರ್ಜಾಲ

Recommended Video

ಕೈಗಾರಿಕೆಗಳಿಂದ ಆಕ್ಸಿಜನ್‌ ಪೂರೈಕೆ ಕುರಿತು ಚರ್ಚೆ, ಸಚಿವ ಜಗದೀಶ್‌ ಶೆಟ್ಟರ್ ನೇತೃತ್ವದಲ್ಲಿ ಸಭೆ | Oneindia Kannada

ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

English summary
Jaraganahalli Shivashankar, a Veteran poet and Karnataka Rajyotsava Awardee has passed away On Wednesday (May 5). Here is the biography of Jaraganahalli Shivashankar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X