ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆ

|
Google Oneindia Kannada News

ನವದೆಹಲಿ, ಫೆಬ್ರವರಿ 3: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಕೇಂದ್ರ ಬಜೆಟ್ ಮಂಡನೆ ವೇಳೆ ಪ್ರಕಟಿಸಿದ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ, ಮಧ್ಯಮ ಹಾಗೂ ಕಳೆ ಮಧ್ಯಮ ವರ್ಗದ ಜನತೆಯನ್ನು ಆತಂಕಕ್ಕೆ ನೂಕಿದೆ. ಏಕೆಂದರೆ ಇನ್ನು ಮುಂದೆ ಹಳೆಯ ವಾಹನಗಳನ್ನು ಸಾಕುವುದು ಮತ್ತಷ್ಟು ದುಬಾರಿಯಾಗಲಿದೆ.

ಈಗಾಗಲೇ ಪೆಟ್ರೋಲ್ ಬೆಲೆ ಏರಿಕೆ, ವಾಹನಗಳ ಬಿಡಿ ಭಾಗಗಳ ದರ ಹೆಚ್ಚಳದ ನಡುವೆ ಹಳೆಯ ವಾಹನಗಳೊಂದಿಗೆ ಜೀವನವನ್ನು ಹೇಗೋ ಸಂಭಾಳಿಸಿಕೊಂಡು ಸಾಗುತ್ತಿರುವ ಜನತೆಗೆ ಕೇಂದ್ರ ಸರ್ಕಾರ ಮತ್ತೊಂದು ಬರೆ ಎಳೆದಿದೆ. ಸಾಮಾನ್ಯ ವರ್ಗದ ಜನತೆ ಹೆಚ್ಚಾಗಿ ಅವಲಂಬಿಸಿರುವುದು ಸೆಕೆಂಡ್ ಹ್ಯಾಂಡ್ ವಾಹನಗಳನ್ನು. ಹಾಗೆಯೇ ಅನೇಕ ವ್ಯಾಪಾರಿಗಳು, ಸರಕು ಸಾಗಣೆ ವಹಿವಾಟು ನಡೆಸುವವರು ಕೂಡ ಹಳೆಯ ವಾಹನಗಳನ್ನು ಅವಲಂಬಿಸಿದ್ದಾರೆ. ಇನ್ನು ಮುಂದೆ 15 ವರ್ಷದಷ್ಟು ಹಳೆಯದಾದ ವಾಹನಗಳನ್ನು ಹೊಂದಿದ್ದರೆ ಅದು ದುಬಾರಿಯಾಗಿ ಪರಿಣಮಿಸಲಿದೆ.

ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!ವಾಹನ ಮಾಲೀಕರ ಗಮನಕ್ಕೆ: ಕ್ಯೂರಿಯಸ್ ಕೇಸ್ ಆಫ್ 'ಗುಜರಿ ಪಾಲಿಸಿ'!

15 ವರ್ಷದಷ್ಟು ಹಳೆಯದಾದ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಪಡೆಯುವ ವೆಚ್ಚ 62 ಪಟ್ಟು ಹೆಚ್ಚಾಗಲಿದೆ. ಹಾಗೆಯೇ ಖಾಸಗಿ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಾಗಲಿದೆ. ಒಂದು ವೇಳೆ ಈ ಅವಧಿ ಮೀರಿದ ವಾಹನಗಳನ್ನು ಬಳಸುವುದಾದರೆ ಪ್ರತಿ ವಾಹನಗಳ ಮಾಲೀಕರು ರಸ್ತೆ ತೆರಿಗೆಗಿಂತಲೂ ಅಧಿಕ ಮೊತ್ತದ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ರಾಜ್ಯಗಳಿಗೆ ಪಾವತಿಸಬೇಕಾಗುತ್ತದೆ. ಮುಂದೆ ಓದಿ.

ವಾಹನ ಮಾಲೀಕರಿಗೆ ಹೆಚ್ಚುವರಿ ಹೊರೆ

ವಾಹನ ಮಾಲೀಕರಿಗೆ ಹೆಚ್ಚುವರಿ ಹೊರೆ

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮುಂದಿನ ಎರಡು ವಾರಗಳಲ್ಲಿ ಗುಜರಿ ನೀತಿ ಪ್ರಕಟಿಸಲಿದೆ. ಮೋಟಾರು ವಾಹನ ಕಾನೂನಿನ ಪ್ರಕಾರ ಎಂಟು ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ವರ್ಷಕ್ಕೆ ಒಮ್ಮೆ ಫಿಟ್ನೆಸ್ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯವಾಗಲಿದೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರಗಳು ಅವುಗಳ ಮೇಲೆ ಹಸಿರು ತೆರಿಗೆ ವಿಧಿಸಬಹುದು. ಇದು ವಾರ್ಷಿಕ ರಸ್ತೆ ತೆರಿಗೆಯ ಶೇ 10-25ರಷ್ಟಾಗಲಿದೆ. ಇದು ವಾಹನ ಮಾಲೀಕರು ತಾವು ಪಾವತಿಸುವ ಸಾಮಾನ್ಯ ರಸ್ತೆ ತೆರಿಗೆಯ ಜತೆಗೆ ಹೆಚ್ಚುವರಿ ಹೊರೆಯಾಗಲಿದೆ.

ನೋಂದಣಿ ಶುಲ್ಕ ಎಷ್ಟು?

ನೋಂದಣಿ ಶುಲ್ಕ ಎಷ್ಟು?

ಇದೇ ರೀತಿ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಖಾಸಗಿ ವಾಹನಗಳೂ ದುಬಾರಿಯಾಗಲಿವೆ. ದ್ವಿಚಕ್ರ ವಾಹನಗಳಿಗೆ ಪ್ರಸ್ತುತ ಇರುವ 300 ನೋಂದಣಿ ಶುಲ್ಕ 1,000 ರೂ.ಆಗಲಿದೆ. ಹಾಗೆಯೇ ಕಾರುಗಳ ನೋಂದಣಿ ದರ 600 ರೂ ದಿಂದ 5,000 ರೂ ಆಗಲಿದೆ. ರಾಜ್ಯಗಳು ಅಂತಹ ವಾಹನಗಳ ಮೇಲೆ ಐದು ವರ್ಷಗಳವರೆಗೆ ಗ್ರೀನ್ ಟ್ಯಾಕ್ಸ್ ವಿಧಿಸಬಹುದಾಗಿದ್ದು, ಅದು ರಸ್ತೆ ತೆರಿಗೆಗೆ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ.

ಬಜೆಟ್ 2021: ಹಳೆಯ ವಾಹನ ಸ್ಕ್ರಾಪಿಂಗ್‌ಗೆ ಹೊಸ ನೀತಿಬಜೆಟ್ 2021: ಹಳೆಯ ವಾಹನ ಸ್ಕ್ರಾಪಿಂಗ್‌ಗೆ ಹೊಸ ನೀತಿ

ವಿಫಲವಾದರೆ ನೋಂದಣಿ ರದ್ದು

ವಿಫಲವಾದರೆ ನೋಂದಣಿ ರದ್ದು

ಖಾಸಗಿ ಮತ್ತು ವಾಣಿಜ್ಯ ವಾಹನಗಳಲ್ಲಿ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗೆ ಒಳಗಾಗದ ವಾಹನಗಳನ್ನು 'ವಾಹನ್'ದಿಂದ (ರಾಷ್ಟ್ರೀಯ ನೋಂದಣಿ ಇ-ಸೇವೆ) ತೆಗೆದುಹಾಕಲಾಗುತ್ತದೆ, ಪ್ರಸ್ತುತ ದೇಶದಾದ್ಯಂತ ಕೇವಲ 25 ನೋಂದಾಯಿತ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ನೋಯ್ಡಾ ಸೇರಿದಂತೆ ಕೇವಲ ಎರಡು ಅಧಿಕೃತ ಗುಜರಿ ಕೇಂದ್ರಗಳಿವೆಯಷ್ಟೇ.

ಧ್ವನಿ ಸಂದೇಶದ ಮೂಲಕ ಅರಿವು

ಧ್ವನಿ ಸಂದೇಶದ ಮೂಲಕ ಅರಿವು

ಗುಜರಿ ನೀತಿಗಳ ಪ್ರಯೋಜನದ ಬಗ್ಗೆ ಮಾಹಿತಿ ನೀಡಲು ವಾಹನ ಮಾಲೀಕರು ಮತ್ತು ಚಾಲಕರಿಗೆ ಪೆಟ್ರೋಲ್ ಪಂಪ್‌ಗಳು, ಡೀಲರ್‌ಗಳು ಮತ್ತು ಸೇವಾ ಕೇಂದ್ರಗಳಿಂದ ಮೊಬೈಲ್ ಫೋನ್‌ಗಳಿಗೆ ಧ್ವನಿ ಸಂದೇಶಗಳನ್ನು ನೀಡುವಂತಹ ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಬಗ್ಗೆ ಸಚಿವಾಲಯ ಚಿಂತನೆ ನಡೆಸಿದೆ. ಹಾಗೆಯೇ ಕಳವು ವಾಹನಗಳನ್ನು ಗುಜರಿಗೆ ಹಾಕುವಂತಹ ದುರ್ಬಳಕೆಯನ್ನು ತಡೆಯಲು ಕೂಡ ಸಚಿವಾಲಯ ನೀತಿ ರೂಪಿಸುವ ಸಂಭವವಿದೆ.

ಕೇಂದ್ರ ಬಜೆಟ್ 2021 ಬಗ್ಗೆ ಸವಾರಿ ಕಾರು ರೆಂಟಲ್ಸ್ ಸಿಇಒ ಪ್ರತಿಕ್ರಿಯೆಕೇಂದ್ರ ಬಜೆಟ್ 2021 ಬಗ್ಗೆ ಸವಾರಿ ಕಾರು ರೆಂಟಲ್ಸ್ ಸಿಇಒ ಪ್ರತಿಕ್ರಿಯೆ

English summary
Vehicle Scrapping Policy: Holding old vehicles will become expensive as vehicle oweners needs to pay green tax addition to road tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X