ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್ ಜಾಗೃತಿಗೆ ಮ್ಯೂಸಿಕ್ ಆಲ್ಬಂ "ದಿ ಟೇಲ್ ಆಫ್ ವಂದೇ ಮಾತರಂ"

|
Google Oneindia Kannada News

ಪ್ಲಾಸ್ಟಿಕ್ ಎಂಬ ಮಹಾಮಾರಿ ಆವರಿಸದ ಜಾಗವೆಲ್ಲಿ? ಇಡೀ ಪ್ರಪಂಚಕ್ಕೆ ಮಾರಕವಾಗಿ ಮಾರ್ಪಟ್ಟಿರುವ ಈ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಎಷ್ಟೋ ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಆದರೂ ಪ್ಲಾಸ್ಟಿಕ್ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಹಾಗಾಗೇ ಈ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಒಂದು ಪ್ರಯೋಗವನ್ನು ತಂಡವೊಂದು ಮಾಡಿದೆ.

ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?

ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಮಾಲಿನ್ಯ, ಸ್ವಚ್ಛತೆ ಹಾಗೂ ಜಲಜೀವಿಗಳ ಸಂರಕ್ಷಣೆ ಸಂಬಂಧಿ ಅರಿವು ಮೂಡಿಸುವ ಆಶಯದೊಂದಿಗೆ ಹುಟ್ಟಿಕೊಂಡ "ಕ್ಲೀನ್ ಕುಂದಾಪುರ ಪ್ರಾಜೆಕ್ಟ್" ಇದೀಗ ಪ್ಲಾಸ್ಟಿಕ್ ನಿರ್ಮೂಲನೆ ಕುರಿತು ಮ್ಯೂಸಿಕ್ ವಿಡಿಯೋ ರೂಪಿಸಿದೆ.

 ಟೇಲ್ ಆಫ್ ವಂದೇ ಮಾತರಂ (ವಂದೇ ಮಾತರಂ ಕಥೆ)

ಟೇಲ್ ಆಫ್ ವಂದೇ ಮಾತರಂ (ವಂದೇ ಮಾತರಂ ಕಥೆ)

2015ರಿಂದ ಈ ರೀತಿಯ ಸ್ವಚ್ಛತಾ ಅಭಿಯಾನಗಳಲ್ಲಿ ತೊಡಗಿಕೊಂಡಿರುವ ಅಮಲ ಭಾರತ ಸ್ವಚ್ಛತಾ ಅಭಿಯಾನವೇ ಈ ಒಂದು ಜಾಗೃತಿಗೆ ಪ್ರೇರಣೆ. ಲೈಫ್ ಲೈಕ್ ಪ್ರೊಡಕ್ಷನ್ ಈ ವೀಡಿಯೋ ತಯಾರಿ ಮಾಡಿ ಹೊರತಂದಿದೆ. ಅಕ್ಟೋಬರ್ 2ರಂದು ಪ್ಲಾಸ್ಟಿಕ್ ಮುಕ್ತ ಭಾರತದತ್ತ ಪ್ರಧಾನಿಯೊಂದಿಗೆ ನಮ್ಮ ಹೆಜ್ಜೆ ಎಂದು ಈ ವೀಡಿಯೋವನ್ನು ಹೊರತರಲಾಗಿದೆ. "ದಿ ಟೇಲ್ ಆಫ್ ವಂದೇ ಮಾತರಂ" (ವಂದೇ ಮಾತರಂ ಕಥೆ) ಎಂಬ ವೀಡಿಯೋದಲ್ಲಿ ವಂದೇ ಮಾತರಂ ಸಂಗೀತ ಮರುಸಂಕಲನಗೊಂಡಿದೆ. ಪ್ರಕೃತಿಗೆ, ಭಾರತಕ್ಕೆ, ಇಡೀ ವಿಶ್ವಕ್ಕೆ ಅಗತ್ಯವಿರುವ ಜಾಗೃತಿಯ ಪ್ರಯತ್ನವನ್ನು ವೀಡಿಯೋ ಹೇಳುತ್ತದೆ.

 ಭೂಮಿ, ದೈವ, ಪ್ಲಾಸ್ಟಿಕ್ ಎಂಬ ಪಾತ್ರಗಳು

ಭೂಮಿ, ದೈವ, ಪ್ಲಾಸ್ಟಿಕ್ ಎಂಬ ಪಾತ್ರಗಳು

ಈ ವೀಡಿಯೋದಲ್ಲಿ ಪ್ಲಾಸ್ಟಿಕ್ ಒಂದು ಪಾತ್ರವಾಗಿದೆ. ಭೂಮಿಯು ಪ್ಲಾಸ್ಟಿಕ್ ನಿಂದ ಸೋತು ಬಂಧಿಯಾಗಿ ನರಳುತ್ತಾಳೆ. ಅವಳನ್ನು ಪ್ಲಾಸ್ಟಿಕ್ ಕೂಪದಿಂದ ಬಿಡಿಸುವ ಹೋರಾಟಕ್ಕೆ ದೈವ ಬರುತ್ತಾನೆ. ಈ ಮೂರು ಪಾತ್ರಗಳ ಪರಿಚಯ ವಂದೇ ಮಾತರಂ ಹಾಡಿನ ಉದ್ದಕ್ಕೂ ಆಗುತ್ತದೆ ಎಂದು ಹೇಳಿಕೊಂಡಿದೆ ತಂಡ.

ಹವ್ಯಾಸಿ ಕಲಾವಿದರ ರಾಯರ ಭಕ್ತಿಗೀತೆಯ ಆಲ್ಬಂಹವ್ಯಾಸಿ ಕಲಾವಿದರ ರಾಯರ ಭಕ್ತಿಗೀತೆಯ ಆಲ್ಬಂ

 ಯು-ಟ್ಯೂಬ್ ನಲ್ಲಿ ಮ್ಯೂಸಿಕ್ ಆಲ್ಬಂ ಬಿಡುಗಡೆ

ಯು-ಟ್ಯೂಬ್ ನಲ್ಲಿ ಮ್ಯೂಸಿಕ್ ಆಲ್ಬಂ ಬಿಡುಗಡೆ

ಹೊಸ ರೀತಿ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಈ ವೀಡಿಯೋ ತಯಾರಿಯಲ್ಲಿ ವಿಎಫ್ ಎಕ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಮ್ಯೂಸಿಕ್ ವೀಡಿಯೋವನ್ನು ಕೊಕರೈಸ್ ಬೀಚ್ ರೆಸಾರ್ಟ್, ಯುವ ಮೆರಿಡಿಯನ್ ಬೇ ರೆಸಾರ್ಟ್ ಸೇರಿ ಲೈಫ್ ಲೈಕ್ ಪ್ರೊಡಕ್ಷನ್ ನ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ.

 ಸಾಥ್ ನೀಡಿರುವ ಉಡುಪಿನ ವಿನ್ಯಾಸ

ಸಾಥ್ ನೀಡಿರುವ ಉಡುಪಿನ ವಿನ್ಯಾಸ

ಈ ವೀಡಿಯೋಗೆಂದೇ ವಿಶಿಷ್ಟ ಉಡುಪಿನ ವಿನ್ಯಾಸಗಳನ್ನು ರೂಪಿಸಲಾಗಿದೆ. ಭೂಮಿ ಪಾತ್ರಕ್ಕೆ ಗ್ರೀಕ್ ದೇವತೆಯಂತೆ, ಭೂಮಿ ಕಾಯುವ ದೈವಕ್ಕೆ ಕರಾವಳಿ ದೈವದಂತೆ ವಿನ್ಯಾಸಗೊಳಿಸಲಾಗಿದೆ. ಪ್ಲಾಸ್ಟಿಕ್ ಪಾತ್ರಕ್ಕೆ ಕೈಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಯತೀಶ್ ರೈ ನಿರ್ದೇಶನ ಹಾಗೂ ಸಿನಿಮಾಟೋಗ್ರಫಿ ಕೈಗೊಂಡಿದ್ದರೆ, ಡೇನಿಯಲ್, ಸುಹಿತ್ ಸಂಗೀತ ನೀಡಿದ್ದಾರೆ. ಅಕ್ಷತಾ ಗಾಯಕಿಯಾಗಿದ್ದಾರೆ. ಶ್ರುತಿ ಜೈನ್, ಸತ್ಯ ಮಂಜ ಎಂಬುವರು ನಟಿಸಿದ್ದಾರೆ. ಮ್ಯೂಸಿಕ್ ವೀಡಿಯೋ ನೋಡಲು ಕ್ಲಿಕ್ ಮಾಡಿ

English summary
The "Clean Kundapur Project" has now produced music video on plastic eradication. "The Tale of Vande Mataram" is set to spread awareness about plastic use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X