ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯಾಕುಬ್ಜ ಬ್ರಾಹ್ಮಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ವಾಜಪೇಯಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

'ಅಜಾತ ಶತ್ರು' ಎಂಬ ಪದ ಬಹಳ ವಜನು ಇರುವಂಥದ್ದು. ಹಾಗೆಲ್ಲ ಸುಮ್ಮನೆ ಕೇಳಿ ಜಯಿಸಿಕೊಳ್ಳಲಾಗದಂಥ ಪದ ಅದು. ಅಂಥ ಮಾತೊಂದನ್ನು ತಮ್ಮ ನಡವಳಿಕೆಯಿಂದ ಪಡೆದುಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕವಿ ಮನಸ್ಸಿನ, ಅಪರೂಪದ ರಾಜಕಾರಣಿ. ಆದ್ದರಿಂದಲೇ ಅವರಿಗೆ ಭಾರತರತ್ನ ಘೋಷಣೆ ಆದಾಗ ಕೂಡ ಆ ಬಗ್ಗೆ ಆಕ್ಷೇಪಗಳು ಬರಲಿಲ್ಲ.

ಊಟ- ತಿಂಡಿ ಬಗ್ಗೆ ಬಹಳ ಪ್ರೀತಿ ಇದ್ದ ಕಾರಣಕ್ಕೆ ವಾಜಪೇಯಿ ಅವರು ಸ್ಥೂಲಕಾಯದವರಾಗಿದ್ದರು. ಅದರಿಂದ ಮಧುಮೇಹ ಹೆಚ್ಚು ಬಾಧಿಸಿತು. ಸ್ವತಃ ತಾವೇ ಅಡುಗೆಯನ್ನೂ ಮಾಡಿಕೊಳ್ಳುತ್ತಿದ್ದ ವಾಜಪೇಯಿ ಅವರು ನೆನಪಾಗುವುದು ತಮ್ಮ ನಾಲಗೆಯ ಮೂಲಕ. ಒಂದು ಅದ್ಭುತವಾದ ವಾಗ್ಝರಿ. ಭಾಷಣಕ್ಕೆ ನಿಂತರೆ ಎಂಥವರನ್ನೂ ಮಂತ್ರ ಮುಗ್ಧರಾಗಿಸುತ್ತಿದ್ದರು. ಇನ್ನೊಂದು ತಮ್ಮ ಊಟ- ತಿಂಡಿ ಬಗೆಗಿನ ಪ್ರೀತಿಯಿಂದ.

ವಾಜಪೇಯಿ ಅವರು ಏಕೆ ವಿವಾಹವಾಗಿರಲಿಲ್ಲ?ವಾಜಪೇಯಿ ಅವರು ಏಕೆ ವಿವಾಹವಾಗಿರಲಿಲ್ಲ?

ಇನ್ನು ತಾವು ಕನ್ಯಾಕುಬ್ಜ ಬ್ರಾಹ್ಮಣ ಸಮುದಾಯದವರು ಎಂಬುದನ್ನು ಅಟಲ್ ಬಿಹಾರಿ ವಾಜಪೇಯಿ ತುಂಬ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಕಾನ್ ಪುರ ಹಾಗೂ ಸುತ್ತ ಮುತ್ತ ಈ ಕನ್ಯಾಕುಬ್ಜ ಬ್ರಾಹ್ಮಣರು ಹೆಚ್ಚು ಕಾಣಸಿಗುತ್ತಾರೆ.

Vajapayee proudly saying that he was Kanyakubj Brahmin

ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...

ರಾಜಕಾರಣಿಗಳು ಅನಿಸಿಕೊಳ್ಳಲು ಬಹಳ ಜನರು ಕಾಣಸಿಗುತ್ತಾರೆ. ಆದರೆ ಮುತ್ಸದ್ದಿ ಅಂತೆನಿಸಿಕೊಳ್ಳುವವರು ವಿರಳ. ಅಂಥ ವಿರಳರ ಸಾಲಿನಲ್ಲಿ ನಿಲ್ಲುವ ವಾಜಪೇಯಿ ತಮ್ಮ 93ನೇ (1924- 2018) ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ವಿಪರ್ಯಾಸ ಏನೆಂದರೆ, ತಮ್ಮ ಕಾವ್ಯ ಶಕ್ತಿಯ ಮೂಲಕವೇ ರಾಜಕೀಯ ಪ್ರವೇಶ ಪಡೆದಿದ್ದ ಕರುಣಾನಿಧಿ ಹಾಗೂ ವಾಜಪೇಯಿ ಅಲ್ಪ ಕಾಲದ ಅಂತರದಲ್ಲೇ ಶಾಶ್ವತ ಬಿಡುವು ಪಡೆದಿದ್ದಾರೆ.

English summary
Former prime minister Atal Bihari Vajapayee was proudly saying that, he was from Kanyakubj barhmin family. Atal Bihari Vajapayee (1924-2018) passed away on August 16th, Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X