ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Uttarakhand K News Exit Poll 2022: 'ಕೈ' ಹಿಡಿಯುವ ಮತದಾನ

|
Google Oneindia Kannada News

ಡೆಹ್ರಾಡೂನ್, ಮಾರ್ಚ್ 07: ಉತ್ತರಾಖಂಡದ 70 ವಿಧಾನಸಭೆ ಚುನಾವಣೆಯಲ್ಲಿ ಪ್ರಜೆಗಳು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಯಾರಿಗೆ ಮುಂದಿನ ಅಧಿಕಾರ ಎಂಬುದಕ್ಕೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆಗಳು ಉತ್ತರ ನೀಡಿವೆ. ಕಳೆದ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ನಡೆದ ಮತದಾನದ ಭವಿಷ್ಯ ಮಾರ್ಚ್ 10ರಂದು ಹೊರ ಬೀಳಲಿದೆ.

ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 7ರ ಸಂಜೆ 6.30ರವರೆಗೂ ಯಾವುದೇ ರೀತಿ ಚುನಾವಣಾ ಸಮೀಕ್ಷೆಗಳನ್ನು ನಡೆಸದಂತೆ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆ ಆಯೋಗದ ಸೂಚನೆ ಮೇರೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಲವು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ಪ್ರಕಟಿಸಿವೆ. 70 ವಿಧಾನಸಭೆ ಕ್ಷೇತ್ರಗಳಲ್ಲಿ ಗದ್ದುಗೆ ಹಿಡಿಯಲು 36 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ.

ಉತ್ತರಾಖಂಡ ವಿಧಾನಸಭೆ ಚುನಾವಣೆ: ಕಳೆದ ಬಾರಿಗಿಂತ ಕಡಿಮೆ ಮತದಾನ ದಾಖಲುಉತ್ತರಾಖಂಡ ವಿಧಾನಸಭೆ ಚುನಾವಣೆ: ಕಳೆದ ಬಾರಿಗಿಂತ ಕಡಿಮೆ ಮತದಾನ ದಾಖಲು

ಉತ್ತರಾಖಂಡದ 70 ವಿಧಾನಸಭೆ ಕ್ಷೇತ್ರಗಳ ಜನರ ನಾಡಿ ಮಿಡಿತ ಮತ್ತು ರಾಜಕೀಯ ಬೆಳವಣಿಗೆಗಳ ಸುತ್ತ ಕೆ ನ್ಯೂಸ್ ಮತ್ತು ಪೀಪಲ್ಸ್ ಪಲ್ಸ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಕುರಿತು ಒಂದು ವರದಿ ಇಲ್ಲಿದೆ ಓದಿ.

Uttarakhand Election K News Exit Poll Results 2022 in Kannada

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಕಾಂಗ್ರೆಸ್ - 32 ರಿಂದ 37

ಬಿಜೆಪಿ - 30 ರಿಂದ 35

ಆಪ್ - 0 - 1

ಬಿಎಸ್ಪಿ - 0 - 1

ಇತರೆ - 0 - 1

ಉತ್ತರಾಖಂಡದಲ್ಲಿ ಶೇ.62.51ರಷ್ಟು ಮತದಾನ:

ಒಂದೇ ಹಂತದ ಉತ್ತರಾಖಂಡ ಚುನಾವಣೆಯಲ್ಲಿ ಅಂತಿಮ ಮತದಾನದ ಶೇಕಡಾವಾರು ಶೇಕಡಾ 62.51 ರಷ್ಟಿದೆ. ಹರಿದ್ವಾರದಲ್ಲಿ ಅತಿ ಹೆಚ್ಚು ಅಂದರೆ ಶೇ.68.37 ಮತ್ತು ಕಡಿಮೆ ಅಲ್ಮೋರಾ ಜಿಲ್ಲೆಯಲ್ಲಿ ಶೇ.50.65 ಅತೀ ಕಡಿಮೆ ಮತದಾನ ದಾಖಲಾಗಿದೆ. ಬಾಗೇಶ್ವರ್ ಶೇ.57.83, ಚಮೋಲಿ ಶೇ.59.28, ಚಂಪಾವತ್ ಶೇ.56.97, ಡೆಹ್ರಾಡೂನ್ ಶೇ.52.93, ನೈನಿತಾಲ್ ಶೇ.63.12, ಪೌರಿ ಗರ್ವಾಲ್ ಶೇ.51.93, ಪಿಥೋರಗಢ್ ಶೇ.57.49, ಸಿಂಗ್ ಶೇ.60. ಉದ್ರಪ್ರಯಾಗ್ ಶೇ.60. ಗರ್ಹ್ವಾಲ್ ಶೇ. ನಗರ ಶೇ.65.13 ಮತ್ತು ಉತ್ತರಕಾಶಿ ಜಿಲ್ಲೆಯಲ್ಲಿ ಶೇ.65.55ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಯಿತು.

English summary
Uttarakhand Assembly Election K News Exit Poll Results 2022 in Kannada: Who will win Uttarakhand Election 2022 - Check K News exit poll results, predictions on Uttarakhand Assembly Election 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X