• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗಿ ಸಂಪುಟ; ಡಿಸಿಎಂ ಬ್ರಜೇಶ್ ಪಾಠಕ್ ಪರಿಚಯ

|
Google Oneindia Kannada News

ಲಕ್ನೋ, ಮಾರ್ಚ್ 25; ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2.0 ಆಡಳಿತ ಆರಂಭವಾಗಿದೆ. ಮುಖ್ಯಮಂತ್ರಿಯಾಗಿ ಶುಕ್ರವಾರ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಬ್ರಜೇಶ್‌ ಪಾಠಕ್ ಉಪಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಸಂಪುಟ ಸೇರಿದ್ದಾರೆ.

57 ವರ್ಷದ ಬ್ರಜೇಶ್ ಪಾಠಕ್ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕ. ಉಪ ಮುಖ್ಯಮಂತ್ರಿಯಾಗಿ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿ

ಕಾನೂನು, ನ್ಯಾಯಾಂಗ, ಗ್ರಾಮೀಣ ಇಂಜಿನಿಯರಿಂಗ್ ಖಾತೆಗಳನ್ನು ನಿರ್ವಹಣೆ ಮಾಡಿದ್ದಾರೆ. ಬ್ರಜೇಶ್ ಪಾಠಕ್ ಸಂಘ ಪರಿವಾರದ ಮೂಲಕ ರಾಜಕೀಯ ಆರಂಭ ಮಾಡಿದವರಲ್ಲ. ಮೊದಲು ಕಾಂಗ್ರೆಸ್‌ನಲ್ಲಿದ್ದ ಅವರು ಬಳಿಕ ಬಿಎಸ್‌ಪಿ ಸೇರಿದ್ದರು.

ಯುಪಿ: ಯೋಗಿ ಆದಿತ್ಯನಾಥ್ ಯಾರು? ಸನ್ಯಾಸಿ-ರಾಜಕಾರಣಿಯ ಪ್ರಯಾಣ ಯುಪಿ: ಯೋಗಿ ಆದಿತ್ಯನಾಥ್ ಯಾರು? ಸನ್ಯಾಸಿ-ರಾಜಕಾರಣಿಯ ಪ್ರಯಾಣ

1964ರ ಜೂನ್ 25ರಂದು ಹರೋಡಿ ಜಿಲ್ಲೆಯ ಮಲ್ಲವನ್‌ನಲ್ಲಿ ಬ್ರಜೇಶ್‌ ಪಾಠಕ್ ಜನಿಸಿದರು. ತಂದೆ ಸುರೇಶ್ ಪಾಠಕ್ ವಕೀಲರಾಗಿದ್ದರು. ಬ್ರಜೇಶ್ ಲಕ್ನೋ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು.

Yogi Adityanath Swearing-in Live; ಯುಪಿಯಲ್ಲಿ 2ನೇ ಬಾರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನYogi Adityanath Swearing-in Live; ಯುಪಿಯಲ್ಲಿ 2ನೇ ಬಾರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ

90ರ ದಶಕದಲ್ಲಿಯೇ ಕಾಂಗ್ರೆಸ್ ಮೂಲಕ ಬ್ರಜೇಶ್ ಪಾಠಕ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2002ರಲ್ಲಿ ಮಲ್ಲವನ್ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದರು. ಆದರೆ ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು.

ಬಳಿಕ ಅವರು ಬಿಎಸ್‌ಪಿ ಸೇರಿದರು. ಆದರೆ ಪಕ್ಷ 2004ರ ಲೋಕಸಭೆ ಚುನಾವಣೆಯಲ್ಲಿ ಉನ್ನಾವ್‌ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡಿತು. ಚುನಾವಣೆಯಲ್ಲಿ ಬ್ರಜೇಶ್ ಪಾಠಕ್ ಗೆಲುವು ಸಾಧಿಸಿದರು.

2009ರಲ್ಲಿ ಬಿಎಸ್‌ಪಿ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿತು ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ 2016ರಲ್ಲಿ ಬ್ರಜೇಶ್ ಪಾಠಕ್ ಬಿಜೆಪಿ ಸೇರಿದರು. ಲಕ್ನೋ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು ಮತ್ತು ಬಿಜೆಪಿ ಸರ್ಕಾರದಲ್ಲಿ ಸಚಿವರಾದರು.

ಬ್ರಜೇಶ್ ಪಾಠಕ್ ಪತ್ನಿ ನಮ್ರತಾ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಉನ್ನಾವ್ ಸರ್ದಾರ್ ಕ್ಷೇತ್ರದಲ್ಲಿ 2012ರ ಚುನಾವಣೆಯಲ್ಲಿ ಸೋತ ಅವರು ಮಾಯಾವತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿದ್ದರು.

   ಮುಂದಿನ‌ ಶೈಕ್ಷಣಿಕ ವರ್ಷದಿಂದ‌ ಟಿಪ್ಪು ಪಠ್ಯಕ್ಕೆ ಬ್ರೇಕ್!! ಕಾಂಗ್ರೆಸ್,BJP ಹೇಳಿದ್ದೇನು? | Oneindia Kannada

   2017ರ ಚುನಾವಣೆಯಲ್ಲಿ ಬ್ರಜೇಶ್ ಪಾಠಕ್ ಲಕ್ನೋ ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಗೆಲವು ಸಾಧಿಸಿ ಸಚಿವರಾದರು.

   English summary
   Brajesh Pathak has been made one of the Deputy Chief Ministers of Uttar Pradesh. 57-year-old Brajesh Pathak is a popular Brahmin face in state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X