ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ವರ್ಷದ ನಂತರ ಹಾಜಿ ಬಷೀರ್ ಬಿಡುಗಡೆ: ಭಾರತಕ್ಕೆ ತಲೆನೋವು

|
Google Oneindia Kannada News

ಅಮೆರಿಕ ಮತ್ತು ಅಫ್ಘಾನಿಸ್ತಾನದ ಮಧ್ಯೆ ಕೈದಿ ವಿನಿಯಮ ಆಗಿದೆ. 17 ವರ್ಷ ಅಮೆರಿಕದ ಜೈಲಿನಲ್ಲಿದ್ದ ಅಫ್ಘಾನಿಸ್ತಾನದ ಡ್ರಗ್ ದೊರೆ ಹಾಜಿ ಬಷೀರ್ ನೂರ್‌ಝೈ ಬಿಡುಗಡೆಯಾಗಿದ್ದಾರೆ.

ಇನ್ನೊಂದೆಡೆ, ಅಫ್ಘಾನಿಸ್ತಾನದಲ್ಲಿ ಕಳೆದ ಎರಡು ವರ್ಷದಿಂದ ಸೆರೆಯಾಳಾಗಿದ್ದ ಅಮೆರಿಕನ್ ನೌಕಾಪಡೆ ಹಿರಿಯ ಅಧಿಕಾರಿ ಮಾರ್ಕ್ ಫ್ರೆರಿಕ್ಸ್ ಅವರ ಬಿಡುಗಡೆಯೂ ಅಗಿದೆ.

ಸಿಖ್ ಉಗ್ರವಾದ, ಮಂದಿರಗಳ ದಾಳಿ - ಬ್ರಿಟನ್, ಕೆನಡಾ ಮೇಲೆ ಭಾರತ ನಿಗಾಸಿಖ್ ಉಗ್ರವಾದ, ಮಂದಿರಗಳ ದಾಳಿ - ಬ್ರಿಟನ್, ಕೆನಡಾ ಮೇಲೆ ಭಾರತ ನಿಗಾ

ಮಾರ್ಕ್ ಫ್ರೆರಿಕ್ಸ್ ಅವರ ಬಿಡುಗಡೆಗೆ ಅಮೆರಿಕ ಮತ್ತು ತಾಲಿಬಾನ್ ಸರಕಾರಗಳ ಮಧ್ಯೆ ನಿರಂತರ ಸಂವಹನ ನಡೆದಿತ್ತು. ಪ್ರೆರಿಕ್ಸ್ ಬಿಡುಗಡೆಗೆ ಪ್ರತಿಯಾಗಿ ಹಾಜಿ ಬಷೀರ್ ನೂರ್‌ಝೈಯನ್ನು ಬಂಧಮುಕ್ತಗೊಳಿಸುವಂತೆ ತಾಲಿಬಾನ್ ಸರಕಾರ ತಿಳಿಸಿತೆನ್ನಲಾಗಿದೆ. ಹೀಗಾಗಿ, ಡ್ರಗ್ ಮಾಫಿಯಾ ದೊರೆಯನ್ನು ಅಮೆರಿಕ ಬಿಡುಗಡೆ ಮಾಡಿದೆ.

ಹಾಜಿ ಬಷೀರ್ ನೂರ್‌ಝೈ ಬಿಡುಗಡೆಯಾಗಿರುವುದು ಭಾರತ ಸೇರಿ ಹಲವು ದೇಶಗಳಿಗೆ ತಲೆನೋವು ಸೃಷ್ಟಿಯಾದಂತಾಗಿದೆ. ಹಾಜಿ ಬಷೀರ್ ಅನ್ನು 'ಏಷ್ಯಾದ ಪಾಬ್ಲೋ ಎಸ್ಕೋಬಾರ್' ಎಂದೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಈತ ನೊಟೋರಿಯಸ್. ಅಷ್ಟಕ್ಕೂ ಯಾರು ಈ ಹಾಜಿ ಬಷೀರ್, ಯಾರು ಆ ಮಾರ್ಕ್ ಫ್ರೆರಿಕ್ಸ್ ಎಂಬ ವಿವರ ಇಲ್ಲಿದೆ.

ಯಾರು ಈತ ಹಾಜಿ ಬಷೀರ್?

ಯಾರು ಈತ ಹಾಜಿ ಬಷೀರ್?

ಹಾಜಿ ಬಷೀರ್ ನೂರ್‌ಝೈ ಅಫ್ಘಾನಿಸ್ತಾನದ ಕಂದಹಾರ್‌ನವರು. ಬಹಳ ದೊಡ್ಡ ಡ್ರಗ್ ಕುಳ. ಬಹಳ ದೊಡ್ಡ ಮಟ್ಟದ ಗಾಂಜಾ ಬೆಳೆಯ ಜಮೀನುಗಳು, ಹೆರಾಯಿನ್ ಡ್ರಗ್ ತಯಾರಿಸಲು ಲ್ಯಾಬೊರೇಟರಿಗಳ ಒಡೆಯ ಆತ. ಜಾಗತಿಕವಾಗಿ ತನ್ನದೇ ಡ್ರಗ್ ಜಾಲ ರೂಪಿಸಿದ್ದ.

ತಾಲಿಬಾನ್‌ ಸಂಸ್ಥಾಪಕನಾಗಿದ್ದ ಮುಲ್ಲಾ ಒಮರ್ ಮತ್ತು ಹಾಜಿ ಬಷೀರ್ ನೂರ್‌ಝೈ ಇಬ್ಬರೂ ಆಪ್ತರು. ನೂರ್‌ಝೈನ ಡ್ರಗ್ ವ್ಯವಹಾರಕ್ಕೆ ತಾಲಿಬಾನ್ ಸಹಾಯ ಮಾಡಿದರೆ, ಅದಕ್ಕೆ ಪ್ರತಿಯಾಗಿ ತಾಲಿಬಾನ್‌ಗೆ ಆತ ಹಣಕಾಸು ನೆರವು ಕೊಡುತ್ತಿದ್ದ. ಈ ರೀತಿಯಾಗಿ ತಾಲಿಬಾನ್ ಮತ್ತು ಡ್ರಗ್ ದೊರೆಯ ಬಗ್ಗೆ ಸಂಬಂಧ ಬೆಳೆದಿತ್ತು.

2005ರಲ್ಲಿ ಈತ ಅಮೆರಿಕದಲ್ಲಿದ್ದಾಗ ಬಂಧಿಸಲಾಯಿತು. ಡ್ರಗ್ಸ್ ವ್ಯವಹಾರ ಸಂಬಂಧ ಈತನ ಬಂಧನವಾಗಿತ್ತು. 2008ರಲ್ಲಿ ಈತನ ತಪ್ಪು ಸಾಬೀತಾಗಿ 2009ರಲ್ಲಿ ಅಮೆರಿಕ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

ಡ್ರಗ್ಸ್ ವ್ಯವಹಾರದಲ್ಲಿ ಅದರಲ್ಲೂ ಹೆರಾಯಿನ್ ಕಳ್ಳಸಾಗಾಣಿಕೆಯಲ್ಲಿ ಈತನನ್ನು ಪಾಬ್ಲೊ ಎಸ್ಕೋಬಾರ್ ಎಂದೇ ಕರೆಯಲಾಗುತ್ತಿತ್ತು.

ಇರಾನ್‌ನಲ್ಲಿ ಷರಿಯಾ ಕಾನೂನು: ಬ್ಲೂ ಗರ್ಲ್ ಸಹರ್ ಸ್ವಯಂ ದಹನ ಮಾಡಿಕೊಂಡಿದ್ದು ಯಾಕೆ?ಇರಾನ್‌ನಲ್ಲಿ ಷರಿಯಾ ಕಾನೂನು: ಬ್ಲೂ ಗರ್ಲ್ ಸಹರ್ ಸ್ವಯಂ ದಹನ ಮಾಡಿಕೊಂಡಿದ್ದು ಯಾಕೆ?

ಪಾಬ್ಲೊ ಎಸ್ಕೋಬಾರ್ ಯಾರು?

ಪಾಬ್ಲೊ ಎಸ್ಕೋಬಾರ್ ಯಾರು?

ಪಾಬ್ಲೊ ಎಸ್ಕೋಬಾರ್ ಕೊಲಂಬಿಯಾ ದೇಶದ ಡ್ರಗ್ ದೊರೆ. ಕಿಂಗ್ ಆಫ್ ಕೋಕೈನ್ ಎಂದೇ ಖ್ಯಾತಿ ಈತನದ್ದು. ಈತ ಡ್ರಗ್ ಮಾಫಿಯಾ ಜಗತ್ತಿನಲ್ಲಿ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾಗಿದ್ದ. 1993ರಲ್ಲಿ ಈತ 45ನೇ ವಯಸ್ಸಿನಲ್ಲಿ ಪೊಲೀಸರಿಂದ ಹತ್ಯೆಯಾಗುವ ವೇಳೆಗೆ 30 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಪಾಸ್ತಿಯ ಒಡೆಯನಾಗಿದ್ದ. 30 ಬಿಲಿಯನ್ ಡಾಲರ್ ಎಂಬುದು ಈಗಿನ ಕಾಲಕ್ಕೆ ಗಣಿಸಿದರೆ 70 ಬಿಲಿಯನ್ ಡಾಲರ್ ಆಗುತ್ತದೆ. ಅಂದರೆ, ಈತ 5.65 ಲಕ್ಷ ಕೋಟಿ ರೂ ಮೌಲ್ಯದಷ್ಟು ಆಸ್ತಿಯನ್ನು ಹೊಂದಿದ್ದವನು.

ತಾಲಿಬಾನ್‌ಗೆ ಬೇಕಾದವ ಹಾಜಿ ಬಷೀರ್

ತಾಲಿಬಾನ್‌ಗೆ ಬೇಕಾದವ ಹಾಜಿ ಬಷೀರ್

ಇತ್ತ ಹಾಜಿ ಬಷೀರ್ ನೂರ್‌ಝೈ ಕೂಡ ಪಾಬ್ಲೊನಂತೆ ಮಹಾನ್ ಡ್ರಗ್ ದೊರೆ ಎನಿಸಿದ್ದಾನೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈತನ ಮಾದವವಸ್ತು ಕಳ್ಳಸಾಗಾಣಿಕೆ ಜಾಲ ಇದೆ. ಈಗ ಈತನನ್ನು ಸೆರೆಯಿಂದ ಬಿಡುಗಡೆ ಮಾಡಿರುವುದರಿಂದ ಈತನ ಡ್ರಗ್ಸ್ ನೆಟ್‌ವರ್ಕ್ ಮತ್ತೆ ಸಕ್ರಿಯಗೊಳ್ಳಬಹುದು ಎಂಬ ಭೀತಿ ಇದೆ.

ತಾಲಿಬಾನ್‌ ಕೂಡ ಈಗ ಹಣಕಾಸು ಮುಗ್ಗಟ್ಟಿನಿಂದ ಕಂಗೆಟ್ಟಿದೆ. ಡ್ರಗ್ಸ್ ವ್ಯವಹಾರದಿಂದ ಬರುವ ದುಡ್ಡನ್ನು ಬೊಕ್ಕಸಕ್ಕೆ ತುಂಬಿಸಿಕೊಳ್ಳಲು ತಾಲಿಬಾನ್ ಕಾಯುತ್ತಿರುವಂತಿದೆ. ಅಷ್ಟಿಲ್ಲದೆ ಕೇವಲ ಒಬ್ಬ ಡ್ರಗ್ಸ್ ದೊರೆಯನ್ನು ಇಷ್ಟು ಒತ್ತುಕೊಟ್ಟು ಬಿಡುಗಡೆ ಮಾಡಿಸಿಕೊಂಡಿರುವುದು ಸುಮ್ಮನೆ ಅಲ್ಲ.

ಯಾರು ಈ ಫ್ರೆರಿಕ್ಸ್?

ಯಾರು ಈ ಫ್ರೆರಿಕ್ಸ್?

ಹಾಜಿ ಬಷೀರ್ ಬಿಡುಗಡೆಗೆ ಬದಲಾಗಿ ತಾಲಿಬಾನ್ ಮಾರ್ಕ್ ಫ್ರೆರಿಕ್ಸ್‌ರನ್ನು ಬಿಡುಗಡೆ ಮಾಡಿದೆ. ಫ್ರೆರಿಕ್ಸ್ ಅಮೆರಿಕ ನೌಕಾಪಡೆಯ ಮಾಜಿ ಅಧಿಕಾರಿ ಮತ್ತು ಸಿವಿಲ್ ಎಂಜಿನಿಯರ್. 2020ರಲ್ಲಿ ಇವರು ಅಫ್ಘಾನಿಸ್ತಾನದಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಕಾಬೂಲ್ ಬಳಿಯ ಖೋಸ್ತ್ ಪ್ರಾಂತ್ಯದಲ್ಲಿ ಅಪಹರಣಗೊಂಡಿದ್ದರು.

ತಾಲಿಬಾನ್ ಬೆಂಬಲಿತ ಹಖ್ಖಾನಿ ನೆಟ್‌ವರ್ಕ್‌ನಿಂದ ಈತನ ಕಿಡ್ನಾಪ್ ಆಗಿರುವ ಸಂಶಯ ಇತ್ತು. ಅಮೆರಿಕದ ಸೇನಾ ಪಡೆಗಳು ಆಗಿನ್ನೂ ಅಫ್ಘಾನಿಸ್ತಾನದಿಂದ ಕಾಲ್ತೆಗೆದಿರಲಿಲ್ಲ. ಮಾರ್ಕ್ ಫ್ರೆರಿಕ್ಸ್‌ರನ್ನು ಬಿಡಿಸಿಕೊಳ್ಳಲು ಅಮೆರಿಕ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆ ವಿಫಲವಾಯಿತು. 2021ರಲ್ಲಿ ಸ್ವತಃ ಮಾರ್ಕ್ ಫ್ರೆರಿಕ್ಸ್ ಅವರು ತನ್ನನ್ನು ಬಿಡುಗಡೆ ಮಾಡಿಸಿ ಎಂದು ಅಫ್ಘಾನ್ ಸರಕಾರಕ್ಕೆ ಮನವಿ ಮಾಡುತ್ತಿರುವ ವಿಡಿಯೋವೊಂದು 2022ರ ಏಪ್ರಿಲ್ ತಿಂಗಳಲ್ಲಿ ಪ್ರಚಾರ ಪಡೆಯಿತು. ಆಗಿನಿಂದಲೂ ಅಫ್ಘಾನಿಸ್ತಾನ ಮತ್ತು ಅಮೆರಿಕ ಸರಕಾರಗಳ ಮಧ್ಯೆ ಫ್ರೆರಿಕ್ಸ್ ಬಿಡುಗಡೆಗೆ ಮಾತುಕತೆ ನಡೆದಿತ್ತು. ಅಂತಿಮವಾಗಿ ಹಾಜಿ ಬಷೀರ್ ಎಂಬಾತನ ಬೆಲೆ ತೆತ್ತು ಅಮೆರಿಕ ಮಾರ್ಕ್ ಫ್ರೆರಿಕ್ಸ್‌ರನ್ನು ಪಡೆದುಕೊಂಡಿದೆ.

(ಒನ್ಇಂಡಿಯಾ ಸುದ್ದಿ)

English summary
America has released drug lord Haji Bashir Noorzhai from its prison after 17 years, in exchange to release of Ex Navy officer from Taliban captivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X