ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?

By ಅನಿಕೇತ್
|
Google Oneindia Kannada News

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾಗೆ ವಿಶ್ವದ ದೊಡ್ಡಣ್ಣ ಅಮೆರಿಕ ಖಡಕ್ ವಾರ್ನಿಂಗ್ ನೀಡಿದೆ. ಚೀನಾದ ಈ ವರ್ತನೆ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕೂ ಸಾಮ್ರಾಜ್ಯಶಾಹಿ ಮನಸ್ಥಿತಿಯ ಈ ಚೀನಾಗೆ ಭೂ ಪ್ರದೇಶ ಮಾತ್ರವಲ್ಲ ಇತರ ದೇಶಗಳ ಜಲಗಡಿ ಕೂಡ ಬೇಕಾಗಿದೆ. ಇದೇ ಕಾರಣಕ್ಕೆ ಪ್ರತಿಬಾರಿಯೂ ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಾ ಬಂದಿದೆ. ಭಾರತ ಜೊತೆ ಗಲ್ವಾನ್ ಕಣಿವೆಯಲ್ಲಿ ಕಿರಿಕ್ ನಡೆದ ನಂತರ ಈಗ ಸೌತ್ ಚೀನಾ ಸಮುದ್ರದಲ್ಲೂ ಡ್ರ್ಯಾಗನ್ ನಾಡಿನ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.

ಸಮುದ್ರ ದಾಟಲು ಹಾಂಕಾಂಗ್- ಚೀನಾ ಮಧ್ಯೆ ಜಗತ್ತಿನ ಅತಿ ದೊಡ್ಡ ಸೇತುವೆಸಮುದ್ರ ದಾಟಲು ಹಾಂಕಾಂಗ್- ಚೀನಾ ಮಧ್ಯೆ ಜಗತ್ತಿನ ಅತಿ ದೊಡ್ಡ ಸೇತುವೆ

ಹಲವು ದಶಕಗಳಿಂದ ಈ ಸಮುದ್ರ ಭಾಗದ ಮೇಲೆ ಕಣ್ಣಿಟ್ಟು ಕೂತಿರುವ ಚೀನಾ, 3.5 ಮಿಲಿಯನ್ ಚದರ ಕಿಲೋ ಮೀಟರ್ (ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ) ಜಲಭಾಗವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಅಷ್ಟಕ್ಕೂ ಚೀನಾ ಈ ಜಾಗಕ್ಕಾಗಿ ಇಷ್ಟೊಂದು ಕಿರಿಕ್ ಮಾಡ್ತಿರೋದು ಯಾಕೆ ಅನ್ನೋದು ಗೊತ್ತಾದರೆ ಖಂಡಿತಾ ಆಘಾತವಾಗುತ್ತದೆ. ಯಾಕಂದ್ರೆ ದಕ್ಷಿಣ ಚೀನಾ ಸಮುದ್ರದಲ್ಲಿ ನಿಮ್ಮ ಊಹೆಗೂ ನಿಲುಕದಷ್ಟು ಸಂಪತ್ತು ಅಡಗಿದೆ.(ಚಿತ್ರಕೃಪೆ: AP/PTI Photo )

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನೈಸರ್ಗಿಕ ಅನಿಲಕ್ಕಾಗಿ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ನಷ್ಟು ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ಭಾರತದ ಭೂಭಾಗಕ್ಕಿಂತಲೂ ದೊಡ್ಡದಾದ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯವಾದ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

5.3 ಟ್ರಿಲಿಯನ್ ಡಾಲರ್ ವಹಿವಾಟು..!

5.3 ಟ್ರಿಲಿಯನ್ ಡಾಲರ್ ವಹಿವಾಟು..!

ಹೌದು, ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ, ಅನಿಲ, ಚಿನ್ನ, ಕಬ್ಬಿಣವನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರದ ಮಾರ್ಗವಾಗಿ ಪ್ರತಿವರ್ಷವೂ 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಇಡೀ ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗ. ಭಾರತ ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನು ದಕ್ಷಿಣ ಚೀನಾ ಸಮುದ್ರದ ಮಾರ್ಗದಲ್ಲಿ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಹೀಗಾಗಿ ದಕ್ಷಿಣ ಚೀನಾ ಸಮುದ್ರ ಕಬಳಿಸಲು ಚೀನಾ ಸ್ಕೆಚ್ ಹಾಕಿ ಕೂತಿದೆ. ಆದರೆ ಕ್ರಿಮಿನಲ್ ಚೀನಾದ ದಶಕಗಳ ಆಸೆ ಇನ್ನೂ ಈಡೇರುತ್ತಿಲ್ಲ.

ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?

ಮಾನವ ನಿರ್ಮಿತ ದ್ವೀಪಗಳು..!

ಮಾನವ ನಿರ್ಮಿತ ದ್ವೀಪಗಳು..!

ದಕ್ಷಿಣ ಚೀನಾ ಸಮುದ್ರ ಕಬಳಿಸಲು ಡ್ರ್ಯಾಗನ್ ನಾಡು ಹತ್ತಾರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು ಬಂದಿದೆ. ಹೀಗಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಮಾನವ ನಿರ್ಮಿತ ಸಮುದ್ರಗಳನ್ನು ನಿರ್ಮಿಸಿದೆ. ಸಮುದ್ರದ ಆಳದಲ್ಲಿರುವ ಬಂಡೆ, ಬೆಟ್ಟ ಹೀಗೆ ಯಾವುದನ್ನೂ ಬಿಡದೆ ಚೀನಾ ನುಂಗಿಹಾಕುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಂಗೈ ಅಗಲ ಜಾಗ ಸಿಕ್ಕರೂ ಸಾಕು ಅಲ್ಲೊಂದು ಐಲ್ಯಾಂಡ್ ಮಾಡಿಬಿಡುತ್ತೆ ಚೀನಾ. ಹೀಗೆ ದ್ವೀಪಗಳನ್ನು ಸೃಷ್ಟಿಸಿದ ನಂತರ, ಅಲ್ಲಿ ಮಿಲಿಟರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡುತ್ತಿದೆ. ಇದೇ ರೀತಿ ಚೀನಾದ ವಾಯುಪಡೆಗೆ ಅಗತ್ಯವಿರುವ ಏರ್‌ಬೇಸ್ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ನಿರ್ಮಾಣ ಮಾಡಲಾಗಿದೆ.

ಇದು ಯಾರಪ್ಪನ ಆಸ್ತಿ ಅಲ್ಲ..!

ಇದು ಯಾರಪ್ಪನ ಆಸ್ತಿ ಅಲ್ಲ..!

ದಕ್ಷಿಣ ಚೀನಾ ಸಮುದ್ರ ಯಾರಪ್ಪನ ಆಸ್ತಿ ಅಲ್ಲ. ಈ ಜಲಭಾಗದಲ್ಲಿ ಬಹುದೊಡ್ಡ ಪಾಲು ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಿಗೆ ಸೇರಬೇಕು. ಹೀಗಾಗಿ ಆಸಿಯಾನ್ ಒಕ್ಕೂಟ ರಚಿಸಿಕೊಂಡಿರುವ ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಿಗೆ ಅಮೆರಿಕದ ಬೇಷರತ್ ಬೆಂಬಲ ಇದೆ. ಪ್ರಮುಖವಾಗಿ ಕಾಂಬೋಡಿಯಾ, ಇಂಡೋನೇಷಿಯಾ, ಮಲೇಷಿಯಾ, ಥಾಯ್‌ಲ್ಯಾಂಡ್, ಸಿಂಗಾಪುರ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಈ ಒಕ್ಕೂಟದ ಸದಸ್ಯತ್ವ ಪಡೆದಿವೆ. ಹಾಗೇ ದಕ್ಷಿಣ ಚೀನಾ ಸಮುದ್ರ ಕಬಳಿಸುತ್ತಿರುವ ಚೀನಾಗೆ ಪ್ರಬಲ ವಿರೋಧ ತೋರುತ್ತಿವೆ. ಇಲ್ಲೂ ಕೂಡ ನೆರೆಯ ರಾಷ್ಟ್ರಗಳ ಜೊತೆ ಚೀನಾಗೆ ಕಿರಿಕಿರಿ ಇದ್ದೇ ಇದೆ.

ಸಮುದ್ರದ ವಿಚಾರವಾಗಿ ಶೀತಲ ಸಮರ

ಸಮುದ್ರದ ವಿಚಾರವಾಗಿ ಶೀತಲ ಸಮರ

ಒಟ್ಟಾರೆ ಹೇಳುವುದಾದರೆ ದಕ್ಷಿಣ ಚೀನಾ ಸಮುದ್ರದ ವಿಚಾರ ಮತ್ತೊಂದು ಶೀತಲ ಸಮರದಂತೆ ಬದಲಾಗುತ್ತಿದೆ. ಚೀನಾ ಸೊಕ್ಕು ಮುರಿಯಲು ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಇತ್ತೀಚೆಗೆ ಮಿಲಿಟರಿ ಡ್ರಿಲ್ ನಡೆಸಿದೆ. ಹಾಗೇ ಚೀನಾ ತನ್ನದು ಅಂತಾ ಹೇಳಿಕೊಳ್ಳುವ ಜಲಭಾಗಕ್ಕೂ ನುಗ್ಗಿ, ತನ್ನ ತಾಕತ್ತು ಪ್ರದರ್ಶಿಸುತ್ತಾ ಬಂದಿದೆ ಅಮೆರಿಕ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ಚೀನಾ ವಿರುದ್ಧ ತೊಡೆ ತಟ್ಟಲು ಭಾರತವನ್ನ ಬೆಂಬಲಿಸುತ್ತಿವೆ. ಭವಿಷ್ಯದಲ್ಲಿ ಈ ಜಲಮಾರ್ಗ ಅತ್ಯಂತ ನಿರ್ಣಾಯಕ ಪಾತ್ರ ವಹಿಸೋದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಈ ಜಾಗ ಯಾರ ಪಾಲಾಗಲಿದೆ ಅನ್ನೋದೆ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
The United States has rejected China's territorial claims in the South China Sea. China eager to grab oil, gas resources of South China sea from other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X