ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸು ಹೋಯ್ತು, ಮಾನವೂ ಹೋಯ್ತು! ಅಮೆರಿಕ ಈಗ ಸೂಪರ್ ಪವರ್ ಅಲ್ವಾ?

|
Google Oneindia Kannada News

ತಾನೇ ಎಲ್ಲಾ, ತನ್ನಿಂದಲೇ ಎಲ್ಲಾ ಅಂತಾ ಇಷ್ಟುದಿನ ಮೆರೆಯುತ್ತಿದ್ದ 'ದೊಡ್ಡಣ್ಣ' ಅಮೆರಿಕದ ತಾಕತ್ತು ಏನಂತ ಬಟಾಬಯಲಾಗಿದೆ. ತಾಲಿಬಾನ್ ವಿರುದ್ಧ ಸೆಣೆಸಾಡಲು ಆಗದೆ, ಅಫ್ಘಾನಿಸ್ತಾನವನ್ನು ನಡುನೀರಲ್ಲಿ ಕೈಬಿಟ್ಟಿರುವ ಅಮೆರಿಕ ಈಗ ನಿಜಕ್ಕೂ ಸೂಪರ್ ಪವರ್ ರಾಷ್ಟ್ರವಾಗಿ ಉಳಿದಿದೆಯಾ..? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಆದ್ರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿದ್ದು, ದಿನದಿಂದ ದಿನಕ್ಕೆ ನಂ. 1 ಪಟ್ಟದಿಂದ ಅಮೆರಿಕ ಜಾರುತ್ತಿದೆ. ಜೋ ಬೈಡನ್ ಮಾತುಗಳಲ್ಲೇ ಇದು ಸ್ಪಷ್ಟವಾಗಿದ್ದು, ಅಮೆರಿಕ ಆರ್ಥಿಕ ಸಂಕಷ್ಟ ಎಂತಹದ್ದು ಎಂಬುದು ಗೊತ್ತಾಗುತ್ತಿದೆ. ಇದೇ ಬೈಡನ್ ಕೆಲ ದಿನಗಳ ಹಿಂದೆ ಅಫ್ಘಾನ್‌ನಿಂದ ಸೇನೆ ಹಿಂದೆ ಕರೆಸಿಕೊಳ್ಳುವ ಬಗ್ಗೆ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದರು.

ಫೈಟ್‌ ಆರ್‌ ಫ್ಲೈಟ್: ಅಫ್ಘಾನಿನಲ್ಲಿ ವಿಮಾನ ಚಕ್ರ ಹತ್ತಿದವರ ಪರಿಸ್ಥಿತಿ, ಮನಸ್ಥಿತಿಗಳು...ಫೈಟ್‌ ಆರ್‌ ಫ್ಲೈಟ್: ಅಫ್ಘಾನಿನಲ್ಲಿ ವಿಮಾನ ಚಕ್ರ ಹತ್ತಿದವರ ಪರಿಸ್ಥಿತಿ, ಮನಸ್ಥಿತಿಗಳು...

ಅಫ್ಘಾನಿಸ್ತಾನ ನಮ್ಮ ಸಮಸ್ಯೆ ಅಲ್ಲ, ಅಮೆರಿಕನ್ನರ ಸಮಸ್ಯೆಗಳು ಸಾಕಷ್ಟಿವೆ. ಮೊದಲಿಗೆ ಅಮೆರಿಕದ ಸಮಸ್ಯೆಗಳನ್ನ ಬಗೆಹರಿಸಬೇಕಿದೆ ಎಂದಿದ್ದರು ಬೈಡನ್. ಅಲ್ಲಿಗೆ ಅಮೆರಿಕ ಮೊದಲಿನಂತೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗುವಷ್ಟು ತಾಗತ್ತು ಈಗ ಉಳಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿ ಅಮೆರಿಕ ಕಳೆದುಕೊಂಡಿದ್ದು ಮಾತ್ರ ಊಹೆಗೂ ನಿಲುಕದ ಸಂಪತ್ತನ್ನು.

 3 ಟ್ರಿಲಿಯನ್ ಲಾಸ್ ಆಯ್ತು..!

3 ಟ್ರಿಲಿಯನ್ ಲಾಸ್ ಆಯ್ತು..!

2001ರಲ್ಲಿ ತಾಲಿಬಾನ್ ವಿರುದ್ಧ ಗುಡುಗಿದ್ದ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸಿಬಿಟ್ಟಿದ್ದರು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ನಂತರದ ಬೆಳವಣಿಗೆ ಅಮೆರಿಕ ಮತ್ತು ತಾಲಿಬಾನ್ ವಿರುದ್ಧ ಘರ್ಷಣೆಗೆ ಕಾರಣವಾಗಿತ್ತು. ಅಲ್‌ಖೈದಾ ಉಗ್ರರ ಪರವಾಗಿ ಮಾತನಾಡಿದ್ದ ತಪ್ಪಿಗೆ ತಾಲಿಬಾನ್ ಬೆಲೆ ತೆರಬೇಕು ಎಂದು ಘರ್ಜಿಸಿದ್ದ ಬುಷ್ ಏಕಾಏಕಿ ಸೇನೆ ನುಗ್ಗಿಸಿದ್ದರು. ಹೀಗೆ 2001ರಲ್ಲಿ ಸೇನೆ ಅಫ್ಘಾನ್ ತಲುಪಿ, ತಾಲಿಬಾನ್ ಸರ್ಕಾರವನ್ನ ಅಮೆರಿಕ ಕೆಳಗಿಳಿಸಿತ್ತು. 20 ವರ್ಷ ನಡೆದ ತಿಕ್ಕಾಟ ಬರೋಬ್ಬರಿ 3 ಟ್ರಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿದೆ. ಅಮೆರಿಕ ಇಷ್ಟೊಂದು ದೊಡ್ಡಮೊತ್ತದ ಹಣ ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದೆ.

ಅಫ್ಘಾನಿಸ್ತಾನದ ರಕ್ತ ಚರಿತ್ರೆ, ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?ಅಫ್ಘಾನಿಸ್ತಾನದ ರಕ್ತ ಚರಿತ್ರೆ, ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?

 1 ಲಕ್ಷ ಜನರ ಸಾವು

1 ಲಕ್ಷ ಜನರ ಸಾವು

2001ರಲ್ಲಿ ಅಮೆರಿಕ ಹಾಗೂ ತಾಲಿಬಾನ್ ನಡುವೆ ಅಫ್ಘಾನಿಸ್ತಾನದಲ್ಲಿ ಆರಂಭವಾದ ಘರ್ಷಣೆಗೆ ಈವರೆಗೂ 1 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮೃತಪಟ್ಟವರ ಪೈಕಿ ಹೆಚ್ಚಿನವರು ಅಮಾಯಕರು ಹಾಗೂ ನಾಗರಿಕರು ಎಂಬುದೇ ದುರಂತ. ಇನ್ನು ಸಾವಿರಾರು ತಾಲಿಬಾನ್ ಸದಸ್ಯರನ್ನೂ ಅಮೆರಿಕ ಸೇನೆ ಹತ್ಯೆ ಮಾಡಿದೆ. ಜೊತೆಗೆ ಸಾವಿರಾರು ಸೈನಿಕರನ್ನೂ ಈ ಘರ್ಷಣೆಯಲ್ಲಿ ಅಮೆರಿಕ ಕಳೆದುಕೊಂಡಿದೆ. ಒಟ್ಟಾರೆ ತಾಲಿಬಾನ್ ವಿರುದ್ಧದ ಈ ಹೋರಾಟದಲ್ಲಿ ಅಮೆರಿಕ ಪಡೆದಿದ್ದು ಸಾಸಿವೆಯಷ್ಟು, ಆದರೆ ಕಳೆದುಕೊಂಡಿದ್ದು ಬೆಟ್ಟದಷ್ಟು.

ಟ್ರಾಫಿಕ್ ಜಾಮ್, ಅಂಗಡಿಗಳು ಬಂದ್..! ಹೇಗಿತ್ತು ತಾಲಿಬಾನ್ ಆಡಳಿತದ ಮೊದಲ ದಿನ..?ಟ್ರಾಫಿಕ್ ಜಾಮ್, ಅಂಗಡಿಗಳು ಬಂದ್..! ಹೇಗಿತ್ತು ತಾಲಿಬಾನ್ ಆಡಳಿತದ ಮೊದಲ ದಿನ..?

ನಿಜಕ್ಕೂ ತಾಲಿಬಾನ್ ಗೆದ್ದಿದೆ..!

ನಿಜಕ್ಕೂ ತಾಲಿಬಾನ್ ಗೆದ್ದಿದೆ..!

ಅಫ್ಘಾನಿಸ್ತಾನದಿಂದ ಸೇನೆ ಹಿಂದೆ ಕರೆಸಿಕೊಳ್ಳುವ ಅಮೆರಿಕದ ನಿರ್ಧಾರ ತರಾತುರಿ ಎನ್ನಬಹುದಾದರೂ, ಮತ್ತೆ ಸೇನೆ ಕಳುಹಿಸಿ ಪರಿಸ್ಥಿತಿ ನಿಯಂತ್ರಿಸಲು ಅಮೆರಿಕ ಯತ್ನಿಸಿತ್ತು. ಆದರೆ ಎಲ್ಲವೂ ಉಲ್ಟಾ ಆಗಿಹೋಯ್ತು. ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ತಾಲಿಬಾನ್ ಈಗ ಯಾವುದೇ ಪ್ರಬಲ ಪೈಪೋಟಿ ಎದುರಿಸದೆ ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿತ್ತು. ಇದೆಲ್ಲವೂ ಅಮೆರಿಕದ ಸೋಲಿಗೆ ಕಾರಣವಾಗಿತ್ತು. ತಾಲಿಬಾನ್ ತಿಂಗಳ ಮೊದಲೇ ತಾನು ಗೆದ್ದಿದ್ದೀನಿ ಎಂದು ಘೋಷಿಸಿಕೊಂಡಿತ್ತು. ಈಗ ಅದು ನಿಜವಾಗಿದೆ, ‘ದೊಡ್ಡಣ್ಣ'ನಂತೆ ಬಿಲ್ಡಪ್ ಕೊಡುತ್ತಿದ್ದ ಅಮೆರಿಕ ಇದೀಗ ತಾಲಿಬಾನ್ ಎದುರು ಮಂಡಿಯೂರಿದೆ.

ಅಫ್ಘಾನಿಸ್ತಾನದ ಲಕ್ಷಾಂತರ ನಿರಾಶ್ರಿತರಿಗೆ ಜಾಗ ಕೊಡುತ್ತಾ ‘ದೊಡ್ಡಣ್ಣ' ಅಮೆರಿಕ..?ಅಫ್ಘಾನಿಸ್ತಾನದ ಲಕ್ಷಾಂತರ ನಿರಾಶ್ರಿತರಿಗೆ ಜಾಗ ಕೊಡುತ್ತಾ ‘ದೊಡ್ಡಣ್ಣ' ಅಮೆರಿಕ..?

Recommended Video

ವಿಮಾನಕ್ಕೆ ಅಂಟಿಕೊಂಡು 10 ಗಂಟೆಗಳ ಪ್ರಯಾಣದಲ್ಲಿ ಪ್ರದೀಪ್ ಸೈನಿ ಬದುಕಿದ್ದು ಹೇಗೆ? | Oneindia Kannada
ಎಲ್ಲವೂ ಅಮೆರಿಕದ ಎಡವಟ್ಟು..!

ಎಲ್ಲವೂ ಅಮೆರಿಕದ ಎಡವಟ್ಟು..!

ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.

English summary
United States loosed more than 3 trillion dollars and thousands of soldiers in Afghan war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X