ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ ಎಫೆಕ್ಟ್; ಅಮೆರಿಕದಲ್ಲಿ ಆಹಾರಕ್ಕಾಗಿ ಹಾಹಾಕಾರ, ಫುಡ್ ಬ್ಯಾಂಕ್‌ಗಳ ಎದುರು ಕ್ಯೂ ನಿಂತ ಜನರು

|
Google Oneindia Kannada News

ವಾಷಿಂಗ್ಟನ್, ಜುಲೈ 15: ಕೋವಿಡ್-19 ಬಂದ ನಂತರ ವಿಶ್ವದ ಬಹುತೇಕ ದೇಶಗಳು ಆರ್ಥಿಕವಾಗಿ ನಲುಗಿ ಹೋಗಿರುವುದು ವಾಸ್ತವ ವಿಚಾರ. ಕೋವಿಡ್ ಅನ್ನು ಆರಂಭದಲ್ಲೇ ಬಹಳ ಬೇಗ ಕಟ್ಟಿಹಾಕಿದ್ದ ಚೀನಾದಲ್ಲೂ ಸಾಂಕ್ರಾಮಿಕ ಪಿಡುಗು ಪರೋಕ್ಷ ಪರಿಣಾಮ ಬೀರುತ್ತಿದೆ. ಅಂಥದ್ದರಲ್ಲಿ ಕೋವಿಡ್‌ನಿಂದ ಅತಿಹೆಚ್ಚು ಬಾಧಿತವಾಗಿರುವ ಅಮೆರಿಕದ ಪರಿಸ್ಥಿತಿ ಹೇಗಿರಬೇಡ...!

ಅತಿ ಹೆಚ್ಚು ಕೋವಿಡ್ ಸೋಂಕು ತಗುಲಿರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇಲ್ಲಿಯೇ ಅತಿಹೆಚ್ಚು ಸಾವು ಆಗಿರುವುದು. ವಿಶ್ವದ ಅತ್ಯಂತ ಪ್ರಬಲ ದೇಶ ಎನಿಸಿಕೊಂಡಿರುವ ಹಾಗು ವಿಶ್ವದಲ್ಲೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆ ಹೊಂದಿರುವ ದೇಶ ಎನಿಸಿಕೊಂಡಿರುವ ಅಮೆರಿಕ ಈಗ ಆರ್ಥಿಕವಾಗಿ ದಿಕ್ಕೆಟ್ಟು ಕೂತಿದೆ.

ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?ಶ್ರೀಲಂಕಾ ಬಿಕ್ಕಟ್ಟು; ಭಾರತದ ಪಾತ್ರವೇನು, ನಮಗೂ ಕಾದಿದೆಯಾ ಗಂಡಾಂತರ?

ಅಮೆರಿಕದ ಹಣದುಬ್ಬರ ಶೇ. 9ರ ಗಡಿ ಮುಟ್ಟಿದೆ. ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಇಲ್ಲಿ ಹಣದುಬ್ಬರ ಕಳೆದ 40 ವರ್ಷದಲ್ಲೇ ಅತ್ಯಧಿಕ ಮಟ್ಟಕ್ಕೆ ಏರಿದೆ.

ಅಮೆರಿಕದಂಥ ಅಮೆರಿಕ ದೇಶದಲ್ಲಿ ಈಗ ಜನರು ಆಹಾರ ಸಿಗದೆ, ಅಥವಾ ಆಹಾರಕ್ಕೆ ಹಣ ಹೊಂದಿಸಲಾಗದೇ ಪರದಾಡುತ್ತಿದ್ದಾರೆ.

 ಆಹಾರ ಕೇಂದ್ರಗಳಲ್ಲಿ ಕ್ಯೂ ನಿಂತ ಜನರು

ಆಹಾರ ಕೇಂದ್ರಗಳಲ್ಲಿ ಕ್ಯೂ ನಿಂತ ಜನರು

ಅಮೆರಿಕ ಎಂದರೆ ನಮ್ಮ ಹಾಲಿವುಡ್ ಸಿನಿಮಾಗಳಲ್ಲಿ ಬಿಂಬಿಸುವಂತೆ ಇಡೀ ವಿಶ್ವವನ್ನೇ ಜಯಿಸುವ ಸಾಮರ್ಥ್ಯ ಇರುವ ದೇಶ ಎಂದೇ ನೆನಪಾಗುತ್ತದೆ. ಆದರೆ, ಕಳೆದ ಕೆಲ ದಶಕಗಳಿಂದಲೂ ವಿಶ್ವದ ಏಕೈಕ ಸೂಪರ್ ಪವರ್ ರಾಷ್ಟ್ರವೆನಿಸಿಕೊಂಡು ಬರುತ್ತಿರುವ ಅಮೆರಿಕಾದಲ್ಲಿ ಈಗ ಬಡತನ ಹಾಗೂ ಹಸಿವು ತಾಂಡವವಾಡತೊಡಗಿದೆ.

ನಮ್ಮ ಗಂಜಿ ಕೇಂದ್ರಗಳ ರೀತಿಯಲ್ಲಿ ಅಮೆರಿಕದ ವಿವಿಧೆಡೆ ಜನರಿಗೆ ಉಚಿತವಾಗಿ ಆಹಾರ ಒದಗಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ ಬಂದ ಬಳಿಕ ಈ ಆಹಾರ ಕೇಂದ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಪಿಡುಗು ಕಡಿಮೆ ಆದರೂ ಈಗಲೂ ಈ ಆಹಾರ ಕೇಂದ್ರಗಳಲ್ಲಿ ಜನರು ಉದ್ದುದ್ದ ಸರದಿಯಲ್ಲಿ ಆಹಾರಕ್ಕಾಗಿ ಕೈಯೊಡ್ಡಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಅಮೆರಿಕದ ವಿವಿಧ ರಾಜ್ಯಗಳ ಸರಕಾರಗಳು ಕೋವಿಡ್ ವೇಳೆ ನೀಡುತ್ತಿದ್ದ ನೆರವು ಪ್ಯಾಕೇಜುಗಳನ್ನು ನಿಲ್ಲಿಸಿದ ಬಳಿಕ ಅಲ್ಲಿ ಆಹಾರ ವಸ್ತುಗಳಿಗೆ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ಗ್ಯಾಸ್ ಬೆಲೆ ವಿಪರೀತವಾಗಿ ಏರುತ್ತಿದೆ. ಜನರ ಸಂಪಾದನೆಗಿಂತ ಖರ್ಚು ಹೆಚ್ಚುತ್ತಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲೂ ಕೆಳಮಧ್ಯಮವರ್ಗಗಳವರಿಗೆ ಅಸಾಧ್ಯವಾಗುತ್ತಿದೆ. ಹೀಗಾಗಿ, ಆಹಾರ ಕೇಂದ್ರಗಳಲ್ಲಿ ಉಚಿತವಾಗಿ ಸಿಗುವ ಆಹಾರವಸ್ತುಗಳಿಗಾಗಿ ಜನರು ಎಡೆತಾಕುತ್ತಿದ್ದಾರೆ.

 ರೂಪಾಯಿ ಇನ್ನಷ್ಟು ಕುಸಿತ; ಡಾಲರ್ ಮಟ್ಟಕ್ಕೆ ಬಂದಿಳಿದ ಯೂರೋ; ಏನಿದರ ಪರಿಣಾಮ? ರೂಪಾಯಿ ಇನ್ನಷ್ಟು ಕುಸಿತ; ಡಾಲರ್ ಮಟ್ಟಕ್ಕೆ ಬಂದಿಳಿದ ಯೂರೋ; ಏನಿದರ ಪರಿಣಾಮ?

 ಆಹಾರ ಕೇಂದ್ರಗಳಲ್ಲಿ ಏನೇನು ಸಿಗುತ್ತವೆ?

ಆಹಾರ ಕೇಂದ್ರಗಳಲ್ಲಿ ಏನೇನು ಸಿಗುತ್ತವೆ?

ಅಮೆರಿಕದಲ್ಲಿ ಜನರ ಆಹಾರ ಭದ್ರತೆಗೆಂದು ವಿವಿಧ ಆಹಾರ ಯೋಜನೆಗಳಿವೆ. ಸುಮಾರು ನಾಲ್ಕು ಕೋಟಿ ಬಡ ಮತ್ತು ಕೆಳಮಧ್ಯಮ ಅಮೆರಿಕನ್ನರು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಸಾಮಾನ್ಯ ಅಮೆರಿಕನ್ನರು ಹೆಚ್ಚಾಗಿ ಸೇವಿಸುವ ಹಂದಿ ಮಾಂಸ, ಸೇಬು, ಆಲೂಗಡ್ಡೆ, ಡೈರಿವಸ್ತು ಇತ್ಯಾದಿ ಆಹಾರವಸ್ತುಗಳನ್ನು ಸರಕಾರ ಕೆಲವೊಮ್ಮೆ ಈ ಕೇಂದ್ರಗಳಿಗೂ ನೀಡುತ್ತದೆ. ಕ್ಯಾನ್ಡ್ ಬೀನ್ಸ್, ಪೀನಟ್ ಬಟರ್, ಅಕ್ಕಿ ಇತ್ಯಾದಿ ಇರುವ ತುರ್ತು ಅಹಾರ ಪ್ಯಾಕೇಜ್‌ಗಳನ್ನು ಸರಕಾರ ಆಹಾರ ಕೇಂದ್ರಗಳಲ್ಲಿ ಒದಗಿಸುತ್ತದೆ.

ವಿವಿಧ ರಾಜ್ಯಗಳಲ್ಲಿರುವ ಆಹಾರ ಕೇಂದ್ರಗಳಿಗೆ ದಾನ ದತ್ತಿಗಳೂ ಸಿಗುತ್ತವೆ. ಸ್ಥಳೀಯ ಸೂಪರ್ ಮಾರ್ಕೆಟ್‌ಗಳಿಂದಲೂ ಕೆಲವೊಮ್ಮೆ ಉಚಿತವಾಗಿ ಆಹಾರವಸ್ತುಗಳ ಸರಬರಾಜು ಅಗುತ್ತವೆ. ದೇಣಿಗೆಯಾಗಿ ಬಂದ ಹಣದಿಂದಲೂ ಆಹಾರವಸ್ತುಗಳನ್ನು ಖರೀದಿಸಲಾಗುತ್ತದೆ. ಸರಕಾರ ಕೊಡುವ ಆಹಾರ ಪ್ಯಾಕೇಜ್‌ಗಳ ಜೊತೆಗೆ ವಿವಿಧೆಡೆಯಿಂದ ಸಂಗ್ರಹವಾಗುವ ಆಹಾರವಸ್ತುಗಳನ್ನು ಈ ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ.

 ಆಹಾರ ಸರಬರಾಜು ವ್ಯವಸ್ಥೆಗೂ ಹೊಡೆತ

ಆಹಾರ ಸರಬರಾಜು ವ್ಯವಸ್ಥೆಗೂ ಹೊಡೆತ

ಅಮೆರಿಕದಲ್ಲಿ ದುಡ್ಡು ಕೊಟ್ಟರೂ ಆಹಾರ ಸಿಗದ ಪರಿಸ್ಥಿತಿ ಇದೆಯಂತೆ. ಅದರಲ್ಲೂ ಧರ್ಮಛತ್ರದ ರೀತಿ ಇರುವ ಫುಡ್ ಬ್ಯಾಂಕುಗಳಿಗೆ ಸಮರ್ಪಕವಾಗಿ ಆಹಾರವಸ್ತುಗಳು ಸಿಗುತ್ತಿಲ್ಲ. ಮೊದಲಾದರೆ ಆಹಾರಕೇಂದ್ರದಲ್ಲಿ ವಸ್ತುಗಳ ಸಂಗ್ರಹ ಶೇ. 20ಕ್ಕೆ ಇಳಿದ ಬಳಿಕ ಪೂರೈಕೆಗಾಗಿ ಬೇಡಿಕೆ ಇಡಲಾಗುತ್ತಿತ್ತು. ಈಗ ಸಂಗ್ರಹ ಅರ್ಧಕ್ಕೆ ಬಂದ ಕೂಡಲೇ ಆರ್ಡರ್ ಕೊಡಬೇಕಾದ ಪರಿಸ್ಥಿತಿ ಇದೆ.

ಅಮೆರಿಕದ ಅತಿ ದೊಡ್ಡ ಆಹಾರ ಕೇಂದ್ರ ಎನಿಸಿರುವ ಹೂಸ್ಟನ್ ಫುಡ್ ಬ್ಯಾಂಕ್‌ನಲ್ಲಿ ಒಂದು ದಿನಕ್ಕೆ 6 ಲಕ್ಷ ಪೌಂಡ್ (ಸುಮಾರು 300 ಟನ್) ಆಹಾರ ವಸ್ತುಗಳನ್ನು ಜನರಿಗೆ ವಿತರಣೆ ಮಾಡುತ್ತಿದೆ. ಕೋವಿಡ್ ಸಂದರ್ಭ ಬಿಟ್ಟರೆ ಇಲ್ಲಿ ಯಾವತ್ತೂ ಇಷ್ಟು ಪ್ರಮಾಣದಲ್ಲಿ ಆಹಾರವಸ್ತುಗಳ ವಿತರಣೆ ಆಗಿದ್ದಿಲ್ಲವಂತೆ.

 ಕಾರು ಬಿಟ್ಟು ನಡೆದೇ ಬರುತ್ತಿರುವ ಜನರು

ಕಾರು ಬಿಟ್ಟು ನಡೆದೇ ಬರುತ್ತಿರುವ ಜನರು

ಅಮೆರಿಕದಲ್ಲಿ ಯಾವತ್ತೂ ಆಹಾರ ಕೇಂದ್ರಗಳಿಗೆ ಹೋಗಿಯೇ ಇಲ್ಲದ ಜನರೂ ಕೂಡ ಈಗ ಅಲ್ಲಿಗೆ ಹೋಗಿ ಕ್ಯೂ ನಿಲ್ಲುವ ಪರಿಸ್ಥಿತಿ ಇದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಫುಡ್ ಬ್ಯಾಂಕುಗಳಿಗೆ ಬರುತ್ತಿರುವ ಪ್ರತೀ ನೂರು ಜನರಲ್ಲಿ ಹತ್ತು ಮಂದಿ ತಮ್ಮ ಜೀವನದಲ್ಲಿ ಅದೇ ಮೊದಲು ಇಂಥ ಆಹಾರ ಕೇಂದ್ರಗಳಿಗೆ ಬರುತ್ತಿರುವುದಂತೆ.

ಅಮೆರಿಕದಲ್ಲಿ ಗ್ಯಾಸ್ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗುತ್ತಿರುವುದರಿಂದ ಸಾಮಾನ್ಯ ಜನರು ಕಾರುಗಳಲ್ಲಿ ಓಡಾಡಲು ಹೆದರುತ್ತಿದ್ದಾರೆ. ಕಾರ್ ಪೂಲಿಂಗ್ ಮಾಡುವ ರೀತಿಯಲ್ಲಿ ಅಮೆರಿಕದಲ್ಲಿ ಅಕ್ಕಪಕ್ಕದ ಜನರು ಒಟ್ಟಿಗೆ ಒಂದೇ ಕಾರಿನಲ್ಲಿ ಆಹಾರ ಕೇಂದ್ರಗಳಿಗೆ ಹೋಗಿ ಬರುತ್ತಿದ್ದಾರೆ. ಹಲವು ಜನರು ಕಾರನ್ನು ಮನೆಯಲ್ಲೇ ಬಿಟ್ಟು ಬಸ್ಸು, ಟ್ರೈನುಗಳಲ್ಲಿ ಆಹಾರ ಕೇಂದ್ರಗಳಿಗೆ ಹೋಗುತ್ತಿದ್ದಾರೆನ್ನಲಾಗಿದೆ.

ಅಗತ್ಯ ಆಹಾರವಸ್ತುಗಳ ಬೆಲೆ ಮಿತಿಮೀರಿ ಏರುತ್ತಿರುವುದರಿಂದ ಲಕ್ಷಾಂತರ ಅಮೆರಿಕನ್ನರಿಗೆ ಈ ಫುಡ್ ಬ್ಯಾಂಕುಗಳೇ ಆಧಾರವಾಗಿ ನಿಂತಿವೆ. ಅಮೆರಿಕದಂಥ ಸಿರಿವಂತ ದೇಶಕ್ಕೆ ತನ್ನ ಜನರಿಗೆ ಸಂಪೂರ್ಣವಾಗಿ ಆಹಾರ ಭದ್ರತೆ ಒದಗಿಸಲು ಪರದಾಡುತ್ತಿದೆ ಎಂದರೆ ಅಚ್ಚರಿ ಅನಿಸದೇ ಇರದು.

(ಒನ್ಇಂಡಿಯಾ ಸುದ್ದಿ)

English summary
USA has been facing severe crisis aroused out from inflation and other economic problems due to Covid-19. The country's food banks are seeing heavy pressure with people throngig towards them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X