ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷರಾಗಲಿರುವ ಬಿಡೆನ್, ಕರಡಿ ನುಡಿಯಿತು ಭವಿಷ್ಯ..!

|
Google Oneindia Kannada News

ಇಂದು, ನಾಳೆ, ನಾಡಿದ್ದು ಅಷ್ಟೇ..! ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತ್ಯವಾಗಲಿದೆ. ಆದರೆ ಈ ಹೊತ್ತಲ್ಲೇ ಅಮೆರಿಕದ ಮುಂದಿನ ಅಧ್ಯಕ್ಷರು ಯಾರು ಎಂಬ ಬಗ್ಗೆ ಕರಡಿಯೊಂದು ನುಡಿದಿರುವ ಭವಿಷ್ಯ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಮಾಡಿದೆ. ರಷ್ಯಾ ದೇಶದ ಪ್ರಾಂತ್ಯವಾಗಿರುವ ಸೈಬಿರಿಯಾ ಮೃಗಾಲಯದಲ್ಲಿ ಕಂದು ಕರಡಿ ಈ ರೀತಿ ಭವಿಷ್ಯ ನುಡಿದಿದೆ.

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲಲಿದ್ದಾರೆ ಹಾಗೂ ಬಿಡೆನ್ ನೂತನ ಅಧ್ಯಕ್ಷರಾಗಲಿದ್ದಾರೆ ಎಂಬ ಮುನ್ಸೂಚನೆಯನ್ನ ಈ ಕರಡಿ ನೀಡಿದೆ. ಅಂದಹಾಗೆ 2 ಕಲ್ಲಂಗಡಿ ಹಣ್ಣುಗಳ ಮೇಲೆ ಬಿಡೆನ್ ಮತ್ತು ಟ್ರಂಪ್ ಕಲಾಕೃತಿ ಕೆತ್ತಿ ಇಡಲಾಗಿತ್ತು. ಇದರಲ್ಲಿ ಕರಡಿ ಬಿಡೆನ್ ಕಲಾಕೃತಿ ಇದ್ದ ಕಲ್ಲಂಡಿಯನ್ನು ಹೆಕ್ಕಿ ತಿಂದಿದೆ. ಈ ರೀತಿ ಪ್ರಾಣಿಗಳ ಭವಿಷ್ಯವು ಫುಟ್‌ಬಾಲ್ ಕ್ರೀಡೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'

2010ರಲ್ಲಿ ಆಕ್ಟೋಪಸ್ ಒಂದು ಸ್ಪೇನ್ ತಂಡ ಫುಟ್‌ಬಾಲ್ ವರ್ಲ್ಡ್ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಆಕ್ಟೋಪಸ್ ಭವಿಷ್ಯ ನಿಜವಾಗಿ, ಸ್ಪೇನ್ ತಂಡ 2010ರಲ್ಲಿ ಚಾಂಪಿಯನ್ ಆಗಿತ್ತು. ಈ ರೀತಿ ಪಾಶ್ಚಾತ್ಯರಲ್ಲಿ ಕ್ರೀಡೆ ಮಾತ್ರವಲ್ಲದೆ ಚುನಾವಣೆಗಳಲ್ಲೂ ಪ್ರಾಣಿಗಳ ಭವಿಷ್ಯ ಕೇಳುವ ಅಭ್ಯಾಸ ಇದೆ. ಇದೀಗ ರಷ್ಯಾದ ಕಂದು ಕರಡಿ ಬಿಡೆನ್ ಗೆಲ್ಲುತ್ತಾರೆ ಎಂದು ಹೇಳಿದ್ದು, ಹುಲಿ ಕೂಡ ಇದೇ ಭವಿಷ್ಯ ನುಡಿದಿದೆ.

ನಿಜವಾಗುತ್ತಾ ಸಮೀಕ್ಷೆಗಳ ಭವಿಷ್ಯ..?

ನಿಜವಾಗುತ್ತಾ ಸಮೀಕ್ಷೆಗಳ ಭವಿಷ್ಯ..?

ಇತ್ತ ಕರಡಿ ಏನನ್ನು ಹೇಳುತ್ತಿದೆಯೋ ಅದನ್ನೇ ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಹೇಳುತ್ತಿವೆ. ಸದ್ಯ ಹೊರಬಿದ್ದಿರುವ ಸಮೀಕ್ಷೆಗಳ ಪ್ರಕಾರ ಟ್ರಂಪ್ 2020ರ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಲಿದ್ದಾರೆ. ಅಮೆರಿಕದಲ್ಲಿ ಈ ಬಾರಿ ಕೊರೊನಾ ಸೋಂಕಿನ ಪರಿಣಾಮ ಅಂಚೆ ಮತದಾನದ ಮೊರೆ ಹೋಗಲಾಗಿದೆ. ಈ ಹಿನ್ನೆಲೆಯಲ್ಲಿ ಅವಧಿ ಪೂರ್ವ ಮತದಾನ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಈಗಾಗಲೇ 9 ಕೋಟಿಗೂ ಹೆಚ್ಚು ಅಮೆರಿಕನ್ನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದು 10 ಕೋಟಿಯ ಗಡಿಯಲ್ಲಿದೆ. ಹೀಗಾಗಿ ಸಮೀಕ್ಷೆ ವರದಿಗೆ ಭಾರಿ ಮನ್ನಣೆ ಸಿಗುತ್ತಿದ್ದು, ಇಲ್ಲಿಯವರೆಗೂ ಮತದಾರರು ಸಮೀಕ್ಷೆಗಳಿಗೆ ಸ್ಪಂದಿಸಿರುವಂತೆ ಬಿಡೆನ್ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಪಕ್ಕಾ. ಅಲ್ಲಿಗೆ 270 ಸ್ಥಾನಗಳ ಅಗತ್ಯತೆ ಇರುವ ಕಡೆಗೆ ಬಿಡೆನ್ 300ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧ್ಯಕ್ಷರಾಗಲಿದ್ದಾರೆ ಎನ್ನುತ್ತಿವೆ ಅಮೆರಿಕದ ಚುನಾವಣಾ ಸಮೀಕ್ಷೆಗಳು.

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

ಅಮೆರಿಕ ಅಧ್ಯಕ್ಷರನ್ನು ಪ್ರತಿ 4 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ ಅಥವಾ ಮರು ಆಯ್ಕೆ ಮಾಡುತ್ತಾರೆ. 2020ರಲ್ಲಿ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅಮೆರಿಕನ್ನರು ಮತದಾನ ಮಾಡಲಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಅಂಚೆ ಮತದಾನ ಪದ್ಧತಿಯ ಮೊರೆ ಹೋಗಲಾಗಿದೆ.

ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ?ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ?

ನಿರ್ಣಾಯಕ ರಾಜ್ಯಗಳಲ್ಲೇ ಟ್ರಂಪ್‌ಗೆ ಶಾಕ್..?

ನಿರ್ಣಾಯಕ ರಾಜ್ಯಗಳಲ್ಲೇ ಟ್ರಂಪ್‌ಗೆ ಶಾಕ್..?

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅದೆಷ್ಟು ಕ್ಲಿಷ್ಟಕರವಾಗಿದೆ ಎಂದರೆ ನಿರೀಕ್ಷೆಗಳೆಲ್ಲಾ ಉಲ್ಟಾ ಆಗುತ್ತಿವೆ. ಟ್ರಂಪ್ ಗೆದ್ದು ಬೀಗಬಹುದು ಎಂದುಕೊಂಡಿದ್ದ ರಾಜ್ಯಗಳಲ್ಲೇ ಟ್ರಂಪ್ ಸೋಲುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಟ್ರಂಪ್ ಕಳೆದಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಿದ್ದ ರಾಜ್ಯಗಳಲ್ಲಿಯೇ ಟ್ರಂಪ್‌ಗೆ ಸೋಲು ಎದುರಾಗುತ್ತಿದೆ. ಇನ್ನುಳಿದಂತೆ ನಿರ್ಣಾಯಕ ಪಾತ್ರ ವಹಿಸುವ, ಅತಿಹೆಚ್ಚು ಮತಗಳನ್ನು ಹೊಂದಿರುವ ರಾಜ್ಯಗಳಲ್ಲೂ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗುತ್ತಿದೆ. ಈ ಮೂಲಕ ಟ್ರಂಪ್‌ಗೆ 2ನೇ ಅವಧಿ ಬಹುತೇಕ ಅನುಮಾನ ಎನ್ನುವಂತಾಗಿದೆ.

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದು ಚುನಾವಣೆ ಮೇಲೂ ಭಾರಿ ಪ್ರಭಾವ ಬೀರುತ್ತಿದೆ. ಆದರೆ ಚುನಾವಣೆ ಮುಗಿಯಲು ಇನ್ನೂ 6 ದಿನಗಳು ಬಾಕಿ ಇದ್ದು, 6 ದಿನಗಳ ಒಳಗೆ ಟ್ರಂಪ್ ಮ್ಯಾಜಿಕ್ ಮಾಡಲಿದ್ದಾರಾ ಕಾದು ನೋಡಬೇಕಿದೆ.

English summary
Siberia Zoo's brown bear predicts that Trump will lose the US presidential election and Biden will become the new president. The prediction of the bear is going viral around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X