ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

|
Google Oneindia Kannada News

ನಾಸ್ಟ್ರಡಾಮಸ್ ಹೇಳಿದ್ದಾನೆ, 2020ರಲ್ಲಿ ಟ್ರಂಪ್ ಮತ್ತೆ ಗೆದ್ದು ಇನ್ನೊಮ್ಮೆ ಅಮೆರಿಕ ಅಧ್ಯಕ್ಷರಾಗಲಿದ್ದಾರಂತೆ. ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಇಂತಹ ಪೋಸ್ಟ್‌ಗಳನ್ನು ನೀವೂ ನೋಡಿರಬಹುದು. ಏಕೆಂದರೆ ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಎಫೆಕ್ಟ್. ಇಷ್ಟುದಿನ ಮರೆಯಾಗಿದ್ದ ನಾಸ್ಟ್ರಡಾಮಸ್ ಹೆಸರು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಟ್ರಂಪ್ ಬೆಂಬಲಿಗರು ನಾಸ್ಟ್ರಾಡಾಮಸ್‌ ಭವಿಷ್ಯ ಹಿಡಿದು ಟ್ರಂಪ್ ಗೆಲುವಿಗಾಗಿ ಹವಣಿಸುತ್ತಿದ್ದಾರೆ.

ಅಷ್ಟಕ್ಕೂ ನಾಸ್ಟ್ರಡಾಮಸ್ ಹೆಸರನ್ನು ಕೇಳಿದರೆ ಸಾಕು ಜಗತ್ತು ಬೆಚ್ಚಿಬೀಳುತ್ತೆ. ಏಕೆಂದರೆ ನಾಸ್ಟ್ರಡಾಮಸ್ ನುಡಿದಿರುವ ಭವಿಷ್ಯ ಅಷ್ಟು ಭಯಾನಕವಾಗಿದೆ. ಆದರೆ ಈ ಬಾರಿ ನಾಸ್ಟ್ರಡಾಮಸ್ ಹೆಸರು ಬಳಕೆಯಾಗುತ್ತಿರುವುದು ಬೇರೆಯದ್ದೇ ವಿಚಾರಕ್ಕೆ. ಜಗತ್ತಿನ ಪವರ್ ಫುಲ್ ದೇಶ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗಿದ್ದು, ನವೆಂಬರ್ 3ರಂದು ಮತದಾನವೂ ನಡೆಯಲಿದೆ.

2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ

ಈ ಹೊತ್ತಲ್ಲೇ ನಾಸ್ಟ್ರಡಾಮಸ್ ಹೆಸರು ಮತ್ತೆ ಚಾಲ್ತಿಗೆ ಬಂದಿದ್ದು, '2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಖಚಿತ, ಹೀಗೆ ಭವಿಷ್ಯ ನುಡಿದಿರುವುದು ನಾಸ್ಟ್ರಡಾಮಸ್' ಎಂಬ ಪೋಸ್ಟ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಟ್ರಂಪ್ ಬೆಂಬಲಿಗರು ಇಂತಹ ಪೋಸ್ಟ್‌ಗಳನ್ನ ಶೇರ್ ಮಾಡುತ್ತಾ, ಮತ್ತೊಮ್ಮೆ ಟ್ರಂಪ್ ಅಧ್ಯಕ್ಷರಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿದ್ದರೆ, ಟ್ರಂಪ್ ವಿರೋಧಿಗಳು ಅಪಹಾಸ್ಯ ಮಾಡುತ್ತಿದ್ದಾರೆ.

ಡೆಡ್ಲಿ ಕೊರೊನಾ ಬಗ್ಗೆಯೂ ಭವಿಷ್ಯ..!

ಡೆಡ್ಲಿ ಕೊರೊನಾ ಬಗ್ಗೆಯೂ ಭವಿಷ್ಯ..!

ಫ್ರಾನ್ಸ್ ಮೂಲದ ನಾಸ್ಟ್ರಡಾಮಸ್ 'ದಿ ಪ್ರೋಫೆಸೀಸ್' ಎಂಬ ಪುಸ್ತಕದಲ್ಲಿ ಕಾವ್ಯಾತ್ಮಕ ಸಾಲುಗಳಿಂದ ಜಗತ್ತಿನ ಬಗ್ಗೆ ಭವಿಷ್ಯ ನುಡಿದಿದ್ದರು ಎನ್ನಲಾಗುತ್ತದೆ. ಈ ಪುಸ್ತಕ 1555 ರಲ್ಲಿ ಪ್ರಕಟಗೊಂಡಿದ್ದು, ಇದರ ಆಧಾರದಲ್ಲೇ ಆಗ, ಈಗ ನಾಸ್ಟ್ರಡಾಮಸ್ ಹೆಸರು ಚಾಲ್ತಿಯಲ್ಲಿರುತ್ತದೆ. ಕೆಲ ತಿಂಗಳ ಹಿಂದೆ ಡೆಡ್ಲಿ ಕೊರೊನಾ ವಿಚಾರದಲ್ಲೂ ನಾಸ್ಟ್ರಡಾಮಸ್ ಹೆಸರು ತಳುಕು ಹಾಕಿಕೊಂಡಿತ್ತು. ಆಗಲೂ ನಾಸ್ಟ್ರಡಾಮಸ್ ಹೆಸರು ಮುನ್ನೆಲೆಗೆ ಬಂದಿತ್ತು. ಚೀನಿ ವೈರಸ್ 'ಕೊರೊನಾ' ಜಗತ್ತನ್ನು ಕಾಡಲಿದೆ, 2020 ರಲ್ಲಿ ಕರಾಳ ಪರಿಸ್ಥಿತಿ ಎದುರಾಗಲಿದೆ ಎಂದಿದ್ದರಂತೆ ನಾಸ್ಟ್ರಡಾಮಸ್. ಆದರೆ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಸ್ಟ್ರಡಾಮಸ್ ಪಥ ಬದಲಾಗಿದೆ. 2020ರಲ್ಲೂ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆ ಎಂಬ ಪೋಸ್ಟ್‌ಗಳು ನಾಸ್ಟ್ರಡಾಮಸ್ ಹೆಸರಲ್ಲಿ ವೈರಲ್ ಆಗುತ್ತಿವೆ.

ನಾಸ್ಟ್ರಡಾಮಸ್ ಪರ-ವಿರೋಧ..!

ನಾಸ್ಟ್ರಡಾಮಸ್ ಪರ-ವಿರೋಧ..!

ನಾಸ್ಟ್ರಡಾಮಸ್ ಭವಿಷ್ಯವನ್ನು ಒಪ್ಪುವವರು ಹಾಗೂ ಅದನ್ನು ಪ್ರತಿಪಾದಿಸುವವರ ಪ್ರಕಾರ, ಆತ ನುಡಿದಿದ್ದ ಭವಿಷ್ಯದಲ್ಲಿ ಬಹುತೇಕ ಸತ್ಯವಾಗಿದೆ. ಹೀಗಾಗಿ ನಾಸ್ಟ್ರಡಾಮಸ್ ಭವಿಷ್ಯ ವಾಸ್ತವಕ್ಕೆ ಹತ್ತಿರ ಎಂಬ ಭರವಸೆ ಅವರದ್ದು. ಆದರೆ ವಿಜ್ಞಾನಿಗಳು ನಾಸ್ಟ್ರಡಾಮಸ್ ಭವಿಷ್ಯವನ್ನು ಸಂಪೂರ್ಣವಾಗಿ ಒಪ್ಪಿಲ್ಲ. ನಾಸ್ಟ್ರಡಾಮಸ್ ಪುಸ್ತಕದಲ್ಲಿ ಹಲವು ತಪ್ಪುಗಳಿವೆ, ನಾಸ್ಟ್ರಡಾಮಸ್ ಹೇಳಿಕೆಗಳನ್ನು ವಾಸ್ತವಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇನ್ನು ಟ್ರಂಪ್ ಬಗ್ಗೆ ವೈರಲ್ ಆಗುತ್ತಿರುವ ಭವಿಷ್ಯದ ಬಗ್ಗೆಯೂ ವಾದ, ವಿವಾದಗಳು ಎದ್ದಿವೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಟ್ರಂಪ್‌ರ ಅಪ್ಪಟ ಅಭಿಮಾನಿಗಳ ಪ್ರಕಾರ, ನಾಸ್ಟ್ರಡಾಮಸ್ ಭವಿಷ್ಯದಂತೆ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗಲಿದ್ದಾರೆ. ಅದೇನೆ ಇರಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣೆ ನಡುವೆಯೇ ನಾಸ್ಟ್ರಡಾಮಸ್ ಹೆಸರು ಮುನ್ನೆಲೆಗೆ ಬಂದಿರೋದು ಭಾರಿ ಕುತೂಹಲ ಕೆರಳಿಸಿದೆ. ಆದರೆ ಈ ಎಲ್ಲಾ ಕುತೂಹಲಗಳಿಗೂ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವೇ ಉತ್ತರ ಹೇಳಬೇಕಿದೆ.

ಚುನಾವಣಾ ಸಮೀಕ್ಷೆ ನಂಬುವಂತಿಲ್ಲ

ಚುನಾವಣಾ ಸಮೀಕ್ಷೆ ನಂಬುವಂತಿಲ್ಲ

ಚುನಾವಣಾ ಸಮೀಕ್ಷೆಗಳನ್ನೇಕೆ ಪರಿಪೂರ್ಣವಾಗಿ ನಂಬೋದಕ್ಕೆ ಸಾಧ್ಯವಿಲ್ಲ ಎಂಬುದಕ್ಕೆ 2016ರ ಎಲೆಕ್ಷನ್ ತಾಜಾ ಉದಾಹರಣೆ. ಚುನಾವಣೆಗೂ ಮೊದಲು ಹಿಲರಿ ಕ್ಲಿಂಟನ್ ಟ್ರಂಪ್‌ಗಿಂತ ಭಾರಿ ಮುನ್ನಡೆ ಪಡೆದಿದ್ದರು. ಟ್ರಂಪ್‌ ಪರ ಇದ್ದ ಮತದಾರರಿಗಿಂತ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ವೋಟರ್ಸ್ ಹಿಲರಿ ಬೆಂಬಲಿಸಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಎಲ್ಲಾ ಉಲ್ಟಾ ಆಗಿಹೋಗಿತ್ತು, 'ಎಲೆಕ್ಟೊರೋಲ್ ಕಾಲೇಜು' ವ್ಯವಸ್ಥೆ ಪರಿಣಾಮ ಹಿಲರಿ ಕ್ಲಿಂಟನ್ ಮುಗ್ಗರಿಸಿದ್ದರು. ಟ್ರಂಪ್ ಭರ್ಜರಿ ಗೆಲುವು ಸಾಧಿಸಿ 2016ರಲ್ಲಿ ಅಧ್ಯಕ್ಷರಾಗಿದ್ದರು.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

English summary
Donald Trump Nostradamus prediction: Did Nostradamus predict Donald Trump victory in US elections 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X