ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPSC ಯಶೋಗಾಥೆ: ಕುಟುಂಬದಲ್ಲಿ ಕಲಹದ ನಡುವೆ ಸಾಧನೆಗೈದ ಶಿವಾಂಗಿ

|
Google Oneindia Kannada News

ಲಕ್ನೋ, ಜೂನ್ 1: ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಹೊರಬೀಳುತ್ತಿದ್ದಂತೆ ಹಲವಾರು ಕಷ್ಟಗಳ ಮಧ್ಯೆ ಸಾಧನೆಗೈದ ಮಹಿಳೆಯರ ಕಥೆಗಳು ಬಹಿರಂಗಗೊಂಡಿವೆ. ಹಲವಾರು ಕಷ್ಟಗಳನ್ನು ಎದುರಿಸಿ, ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಜನರ ಅನೇಕ ಸ್ಪೂರ್ತಿದಾಯಕ ಯಶಸ್ಸಿನ ಕಥೆಗಳು ಹೊರಬಂದಿವೆ.

ಸೋಮವಾರದಂದು (ಮೇ 30) ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರ ನಡುವೆ ಮದುವೆಯಾಗಿ ಗಂಡನ ಮನೆಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿ ಕೊನೆಗೆ ಪರೀಕ್ಷೆ ವೇಳೆ ವಿಚ್ಛೇದನದಂಥ ಕಠಿಣ ಜೀವನದ ಪರೀಕ್ಷೆ ಎದುರಿಸಿದ್ದ ಶಿವಾಂಗಿ, ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆ ಬರೆದು ಸಾಧನೆಗೈದಿದ್ದಾರೆ. ಉತ್ತರ ಪ್ರದೇಶದ ಹಾಪುರ್‌ನ ಶಿವಂಗಿ ಗೋಯಲ್ ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ 177 ರ್‍ಯಾಂಕ್ ಪಡೆದಿದ್ದಾರೆ. ಶಿವಾಂಗಿಯ ಪ್ರಯಾಣವು ಕಷ್ಟಗಳು ಮತ್ತು ಸವಾಲುಗಳಿಂದ ತುಂಬಿತ್ತು. ಮದುವೆಯಾದ ಇವರಿಗೆ 7 ವರ್ಷದ ಮಗಳಿದ್ದಾಳೆ.

ಯಶೋಗಾಥೆ: ಶ್ರದ್ಧಾ ಐಎಎಸ್ ಕನಸು ನನಸಾಗಿದ್ದು ಹೀಗೆ!ಯಶೋಗಾಥೆ: ಶ್ರದ್ಧಾ ಐಎಎಸ್ ಕನಸು ನನಸಾಗಿದ್ದು ಹೀಗೆ!

ಶಿವಾಂಗಿ ಗೋಯಲ್ ಅವರ ಯಶಸ್ಸಿನ ಪ್ರಯಾಣವು ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೋಲುತ್ತದೆ. ಅವರ ಸಾಂಸರಿಕ ಜೀವನ ಸುಖಮಯವಾಗಿಲ್ಲ, ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ತುಂಬಿತ್ತು. ಇದರೊಂದಿಗೆ ಪತಿಯೊಂದಿಗೆ ವಿಚ್ಛೇದನ ಪ್ರಕರಣ ನಡೆಯುತ್ತಿರುವಾಗಲೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಶ್ಲಾಘನೀಯ.

UPSC Success Story: Shivangi Goyal from Uttar Pradesh: All India Rank 177, Civil Service Exam

ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಗೋಯಲ್, ಮದುವೆಗೆ ಮುಂಚೆಯೇ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರಂತೆ. ಆದರೆ ಎರಡು ಪ್ರಯತ್ನಗಳಲ್ಲಿ ವಿಫಲರಾಗಿದ್ದರು. ಅವರು ಮದುವೆಯಾದ ನಂತರ ಕೌಟುಂಬಿಕ ಹಿಂಸಾಚಾರ ಮತ್ತು ಅತ್ತೆಯ ಕಿರುಕುಳವನ್ನು ಎದುರಿಸುತ್ತಾರೆ ಮತ್ತು ತನ್ನ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಮರಳಲು ನಿರ್ಧರಿಸುತ್ತಾರೆ. ಇದರ ಮಧ್ಯೆ ಪರೀಕ್ಷೆಯಲ್ಲಿ ಸಾಧಿಸಲು ಪ್ರಯತ್ನಗಳನ್ನು ಬಿಡುವುದಿಲ್ಲ.

ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್

ಆದರೆ ಆಕೆಯ ಆಯ್ಕೆಗೆ ಆಕೆಯ ಪೋಷಕರು ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು. ಅವಳು ಏನು ಮಾಡಬೇಕೆಂದು ಬಯಸಿದ್ದರೋ ಅದನ್ನು ಮಾಡಿರುವುದಾಗಿ ಅವರು ಹೇಳುತ್ತಾರೆ. 'ಸಾಂಸಾರಿಕ ಹಿಂಸಾಚಾರದಲ್ಲಿ ಎರಡು ಪ್ರಯತ್ನಗಳಲ್ಲಿ ವಿಫಲವಾದ ನನಗೆ ಯುಪಿಎಸ್‌ಸಿಗೆ ಮತ್ತೆ ಏಕೆ ತಯಾರಿ ನಡೆಸಬಾರದು ಎಂದೆನಿಸಿತು. ಹೀಗಾಗಿ ಮತ್ತೊಮ್ಮೆ ನಾನು ಪರೀಕ್ಷೆಗೆ ತಯಾರಿ ನಡೆಸಿದೆ' ಎಂದಿದ್ದಾರೆ. ಅವರು ತಮ್ಮ ಯಶಸ್ಸನ್ನು ತಮ್ಮ ಮಗಳು ರೈನಾ ಮತ್ತು ಅವರ ಪೋಷಕರಿಗೆ ನೀಡಿದರು.

ಇದರೊಂದಿಗೆ ಶಿವಾಂಗಿ ಗೋಯಲ್ ಅವರು ಎಲ್ಲಾ ವಿವಾಹಿತ ಮಹಿಳೆಯರಿಗೆ ಸಂದೇಶವನ್ನು ನೀಡಿದ್ದಾರೆ. ಎಂಥ ಸಂದರ್ಭ ಬರಲಿ ಬಲವಾಗಿರಬೇಕು ಮತ್ತು ಅವರ ವೈವಾಹಿಕ ಮನೆಯಲ್ಲಿ ಏನಾದರೂ ತಪ್ಪು ಸಂಭವಿಸಿದರೆ ಅವರು ಭಯಪಡಬಾರದು ಎಂದು ಶಿವಂಗಿ ಹೇಳಿದ್ದಾರೆ. "ಮಹಿಳೆಯರು ಏನು ಬೇಕಾದರೂ ಮಾಡಬಹುದು" ಎಂದು ಅವರು ಹೇಳಿದರು.

UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2021 ರಲ್ಲಿ 177 ನೇ ರ್‍ಯಾಂಕ್ ಗಳಿಸಿದ ಗೋಯಲ್, ಸ್ವಯಂ-ಅಧ್ಯಯನ ಮತ್ತು ಕಟ್ಟುನಿಟ್ಟಾದ ದಿನಚರಿಯಿಂದ ತನ್ನ ಗುರಿಯನ್ನು ಸಾಧಿಸಿದ್ದಾರೆ. ಎಲ್ಲಾ ಸಮಯದಲ್ಲೂ ತನ್ನ ಕುಟುಂಬದತ್ತ ಗಮನ ಹರಿಸಿದ ಅವರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು. ತಮ್ಮ ನೆಲೆಯಲ್ಲಿ ನಿಲ್ಲಬೇಕು ಮತ್ತು ಕಿರುಕುಳದಿಂದ ಮುಕ್ತರಾಗಬೇಕು ಎಂಬುದನ್ನು ಅವರ ಆಸೆಯಾಗಿತ್ತು. ಸದ್ಯ ಅವರ ಆಸೆಯಂತೆ ಅವರು ಕನಸನ್ನು ನನಸಾಗಿಸಿಕೊಂಡಿದ್ದಾರೆ.

English summary
Here is the UPSC success story of Shivangi Goyal from Uttar Pradesh: He secured All India Rank 177.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X