• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ: ಪದವಿ ಮುಗಿದ ಬಳಿಕ ಮುಂದೇನು ಎನ್ನುವವರಿಗೆ ಇಲ್ಲಿದೆ ಉತ್ತರ

|
Google Oneindia Kannada News

ಪದವಿ ಪೂರ್ಣಗೊಳಿಸಿ ಸಾವಿರಾರು ವಿದ್ಯಾರ್ಥಿಗಳು ಹೊರ ಬೀಳಲಿದ್ದಾರೆ. ಬಿಎ, ಬಿಎಸ್ ಸಿ ,ಬಿಕಾಂ, ಬಿಬಿಎ ಪದವಿ ಮುಗಿಸಿದವರಿಗೆ ಮುಂದೇ ಏನು ಮಾಡಬೇಕು ? ಒಳ್ಳೆಯ ಉದ್ಯೋಗ ಪಡೆಯುವ ಕನಸು ಹೊತ್ತು ಏನು ಮಾಡಬೇಕೆಂಬ ಗೊಂದಲಕ್ಕೆ ಒಳಗಾಗುವುದು ಸಹಜ. ಇಂಜಿನಿಯರಿಂಗ್, ವೈದ್ಯಕೀಯ, ವಕೀಲಿಗಾರಿಕೆ ವೃತ್ತಿಪರ ಕೋರ್ಸ್ ಗಳ ಪದವಿ ಗಳಸಿದವರಿಗೂ ಕೂಡ ಒಳ್ಳೆಯ ಉದ್ಯೋಗ ಪಡೆಯಲು ಹಾತೆರೆಯವುದು ಸಹಜ. ಭಾರತೀಯ ಸೇವೆ ಮಾಡಬೇಕು. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ಗಟ್ಟಿ ಆತ್ಮ ವಿಶ್ವಾಸ, ಮಾಡುವ ಚಲವೊಂದಿದ್ದರೆ ಐಎಎಸ್, ಐಪಿಎಸ್ ಆಗಲು ವಿಫಲ ಅವಕಾಶವಿದೆ. ಪದವಿ ನಂತರ ಮತ್ತೆ ಐದಾರು ವರ್ಷ ಓದಿಕೊಂಡು ಪದವಿ ಮೇಲೆ ಪದವಿ ಪಡೆಯುವುದಕ್ಕಿಂತಲೂ ಅಚಲವಾದ ನಂಬಿಕೆ ಇಟ್ಟು ಕೇಂದ್ರ ಲೋಕ ಸೇವಾ ಅಯೋಗದ ಪರೀಕ್ಷೆ ತೆಗೆದುಕೊಳ್ಳಬಹುದು. ಸತತ ಪ್ರಯತ್ನದಿಂದ ಯಶಸ್ವು ಗಳಿಸಬಹುದು. ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಭಾರತೀಯ ಸೇವೆ ಪರೀಕ್ಷೆ ಕುರಿತ ಸಮಗ್ರ ವಿವರ ಒನ್ ಇಂಡಿಯಾ ಕನ್ನಡ ಇಲ್ಲಿ ನೀಡಿದೆ.

ಗಟ್ಟಿ ತೀರ್ಮಾನ ತೆಗೆದುಕೊಳ್ಳಿ

ಗಟ್ಟಿ ತೀರ್ಮಾನ ತೆಗೆದುಕೊಳ್ಳಿ

ವೈದ್ಯರು ಕೂಡ ಇವತ್ತು ಭಾರತೀಯ ನಾಗರಿಕ ಸೇವೆ ಮೇಲೆ ಕಣ್ಣಿಟ್ಟಿದ್ದಾರೆ. ತಿಂಗಳಿಗೆ ಲಕ್ಷಾಂತರ ವೇತನ ಪಡೆಯುತ್ತಿದ್ದ ಇಂಜಿನಿಯರ್ಸ್ ಕೆಲಸ ಬಿಟ್ಟು ಸಿವಿಲ್ ಸೇವೆಗೆ ತಯಾರಿಸಿ ನಡೆಸಿ ಯಶಸ್ಸು ಗಳಿಸಿದ್ದಾರೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಇತ್ತೀಚಿನ ವರದಿಗಳ ಪ್ರಕಾರ ವಿಶ್ವದ ಹತ್ತು ಕಠಿಣ ಪರೀಕ್ಷೆಗಳಲ್ಲಿ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಭಾರತೀಯ ನಾಗರಿಕ ಸೇವೆಯ ಪರೀಕ್ಷೆ ಕೂಡ ಒಂದು. ಕ್ರಮಾಂಕದಲ್ಲಿ ಇದು ವಿಶ್ವದ ಮೂರನೇ ಕಠಿಣ ಪರೀಕ್ಷೆ ಎಂದೇ ಹೇಳಲಾಗುತ್ತದೆ.

ಇಂಥ ಪರೀಕ್ಷೆಯನ್ನು ತೆಗೆದುಕೊಂಡು ಯಶಸ್ಸು ಕಾಣುವುದು ಸುಲಭದ ಮಾತಲ್ಲ. ಹಾಗಂತ ಇದು ಅಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಪಠಿಣ ಪರಿಶ್ರಮ ಹಾಕಿದರೆ ಹೆಸರಿನ ಮುಂದೆ ಐಎಎಸ್, ಐಪಿಎಸ್ ಎಂದು ಹಾಕಿಕೊಳ್ಳುವುದು ದೊಡ್ಡ ಸಂಗತಿಯೇನಲ್ಲ. ಮೊದಲು ಭಾರತೀಯ ನಾಗರಿಕ ಸೇವೆ ಎಂದರೆ ಏನು? ಪರೀಕ್ಷೆ ತೆಗೆದಕೊಳ್ಳಲು ಇರಬೇಕಾದ ಅರ್ಹತೆ ತಿಳಿಯುವ ಮೊದಲು ನಿರ್ಧಾರ ಕೈಗೊಳ್ಳುವುದು ಮಹತ್ವ.

ನಾನು ಸಿವಿಲ್ ಸರ್ವೀಸ್ ಮಾಡಿಯೇ ತೀರುತ್ತೇನೆ ಎಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದೇ ಮೊದಲ ಹೆಜ್ಜೆ. ಆನಂತರ ಅದಕ್ಕೆ ನಡೆಸುವ ತಯಾರಿ, ಗೆಲುವು ಸಿಗುವ ವರೆಗೂ ಮಾಡುವ ಪ್ರಯತ್ನ ಮಹತ್ವವಾಗಿರುತ್ತದೆ. ಹೀಗಾಗಿ ಒಮ್ಮೆ ಭಾರತೀಯ ನಾಗರಿಕ ಸೇವೆಗೆ ಸೇರುವ ಆಸೆ ಹೊತ್ತು ಓದಲು ಕುಳಿತರೆ ಯಶಸ್ಸು ಸಿಗುವವರೆಗೂ ಇಟ್ಟ ಹೆಜ್ಜೆ ಹಿಂದಿಡಬಾರದು. ಕನಿಷ್ಠ ಭಾರತೀಯ ನಾಗರಿಕ ಸೇವೆಯಲ್ಲಿ ಅವಕಾಶ ಸಿಕ್ಕದಿದ್ದರೂ ಕರ್ನಾಟಕ ಲೋಕ ಸೇವಾ ಅಯೋಗ ನಡೆಸುವ ಮೊದಲ ದರ್ಜೆ ಅಧಿಕಾರಿ ಹುದ್ದೆಗಳ ನೇಮಕವಾಗುವ ಅವಕಾಶ ಇದ್ದೇ ಇರುತ್ತದೆ. ಹೀಗಾಗಿ ಪದವಿ ಮಾಡಿದವರು ಭಾರತೀಯ ನಾಗರಿಕ ಸೇವೆ ಸೇರುವ ಆಸೆ ಇದ್ದಲ್ಲಿ ಮೊದಲು ನಾನು ಇದನ್ನೇ ಮಾಡಿ ತೀರುತ್ತೇನೆ ಎಂದು ಗಟ್ಟಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಾರೆ ಇತ್ತೀಚೆಗೆ ಐಎಎಸ್ ತೇರ್ಗಡೆಯಾದ ಅಭ್ಯರ್ಥಿ.

ಸತತ ಪ್ರಯತ್ನ ಮರೆಯಬೇಡಿ

ಸತತ ಪ್ರಯತ್ನ ಮರೆಯಬೇಡಿ

ಭಾರತೀಯ ನಾಗರಿಕ ಸೇವೆ ಪರೀಕ್ಷೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಗಳಿಸುವುದು ಅಪರೂಪ. ಬೆರಳೆಣಿಕೆ ಅಭ್ಯರ್ಥಿಗಳಷ್ಟೇ ಆಯ್ಕೆ ಆಗುತ್ತಾರೆ. ಅದರಲ್ಲೂ ಐಆರ್ ಎಸ್, ಇಂಡಿಯನ್ ಪೋಸ್ಟಲ್ ಸರ್ವೀಸ್ ನಂತಹ ಕೇಂದ್ರ ಸೇವೆಗೆ ಆಯ್ಕೆಯಾಗುವ ಅಭ್ಯರ್ಥಿಗಳೇ ಮರು ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಹಾಗೂ ಐಎಫ್ ಎಸ್ ಸೇವೆಗೆ ಸೇರುತ್ತಾರೆ. ಹೀಗಾಗಿ ಭಾರತೀಯ ನಾಗರಿಕ ಸೇವೆಗೆ ಸೇರಿದವರ ಸ್ಪರ್ಧೆ ಕೂಡ ಇರುತ್ತದೆ.ಹೀಗಾಗಿ ಯಾರೇ ಆಗಲಿ ಭಾರತೀಯ ನಾಗರಿಕ ಸೇವೆಗೆ ಸೇರುವ ಗುರಿ ಇಟ್ಟುಕೊಂಡು ಪರೀಕ್ಷೆ ತೆಗೆದುಕೊಳ್ಳುವರು ಮೊದಲ ಪ್ರಯತ್ನದಲ್ಲಿಯೇ ಆಗುತ್ತೇನೆ ಎಂದು ಭಾವಿಸಬೇಕಿಲ್ಲ. ಮೊದಲ ಪ್ರಯತ್ನದಲ್ಲಿ ಉತ್ತೀರ್ಣ ಆಗದಿದ್ದರೂ ಎದೆ ಗುಂದುವಂತಿಲ್ಲ. ಸತತ ಹಲವು ವರ್ಷ ಪರೀಕ್ಷೆ ಬರೆಯುವ ಮೂಲಕ ಗಳಿಸುವ ಅನುಭವ ಕೂಡ ಭಾರತೀಯ ನಾಗರಿಕ ಪರೀಕ್ಷೆ ಬರೆಯಲು ಸಹಕಾರಿಯಾಗುತ್ತದೆ.

ಇನ್ನೂ ಸತತ ಐದಾರು ವರ್ಷ ಪ್ರಯತ್ನ ಮಾಡುತ್ತಲೇ ಇರಬೇಕು. ನಾನು ಐಐಎಎಸ್ ಪಾಸು ಮಾಡುವ ಆಸೆ ಹೊತ್ತು ಸಾಕಷ್ಟು ಪ್ರಯತ್ನ ಮಾಡಿದೆ. ಯಶಸ್ಸು ಸಿಗಲಿಲ್ಲ. ಹಾಗಂತ ಬದುಕಿನಲ್ಲಿ ಸೋಲಲಿಲ್ಲ. ಇದೀಗ ತಾನು ಗಳಿಸಿದ ಜ್ಞಾನದಿಂದಲೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ನಲ್ಲಿ ಉಪನ್ಯಾಸಕನಾಗಿದ್ದೇನೆ. ಯಾವುದೇ ಸರ್ಕಾರಿ ಸೇವೆಗೆ ಸೇರಿದರೂ ಗಳಿಸುವಷ್ಟು ಸಂಪಾದನೆ ಮಾಡುತ್ತೇನೆ. ಆದರೆ, ಭಾರತೀಯ ನಾಗರಿಕ ಸೇವೆಗೆ ಸೇರಲಿಲ್ಲ ಎಂಬ ಕೊರಗು ಕಾಣುತ್ತಿದೆ ಎಂದು ತನ್ನ ಅನುಭವವನ್ನು ಐಎಎಸ್ ಆಕಾಂಕ್ಷಿಯೊಬ್ಬರು ಹಂಚಿಕೊಂಡಿದ್ದಾರೆ. ಹೀಗಾಗಿ ಸತತ ಪ್ರಯತ್ನ ಮಾಡುವುದು ಕೂಡ ಮಹತ್ವ ಆಗುತ್ತದೆ.

ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷ ಲಕ್ಷ ಅರ್ಜಿ

ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷ ಲಕ್ಷ ಅರ್ಜಿ

ಭಾರತೀಯ ನಾಗರಿಕ ಸೇವೆ ನೇಮಕಾತಿ ಸಂಬಂಧ ಪ್ರತಿ ವರ್ಷ ಕೇಂದ್ರ ಲೋಕ ಸೇವಾ ಆಯೋಗವು ಅರ್ಜಿ ಆಹ್ವಾನಿಸುತ್ತದೆ. ಕನಿಷ್ಠ 700 ನೂರು ಹುದ್ದೆಗಳಿಂದ ಹಿಡಿದು 11 ಸಾವಿರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸುತ್ತದೆ. ಅದರಲ್ಲಿ ಸಿವಿಲ್ ಸೇವೆಗೆ ಸೇರುವ ಅಸೆ ಹೊತ್ತು ಅರ್ಜಿ ಸಲ್ಲಿಸುವರು ಸರಾಸರಿ ಹತ್ತು ಲಕ್ಷ ಮಂದಿ. ಅದರಲ್ಲಿ ಆಸೆಗೆ ಬಿದ್ದು ಅರ್ಜಿ ಸಲ್ಲಿಸುವರೇ ನಾಲ್ಕೈದು ಲಕ್ಷ ಮಂದಿ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವುದಿಲ್ಲ. ಸಿಂಹಪಾಲು ಮಂದಿ ಯಾವ ಪ್ರಯತ್ನವೂ ಮಾಡದೇ ಪೂರ್ವಭಾವಿ ಪರೀಕ್ಷೆ ಪಾಸು ಆಗುವುದು ಆಜುಬಾಜು 10 ರಿಂದ 20 ಸಾವಿರ ಅಭ್ಯರ್ಥಿಗಳ ನಡುವೆ. ಅದರಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಎಂಟ್ರಿ ಕೊಡುವ ವೇಳೆಗೆ ಅದರ ಸಂಖ್ಯೆ ಎರಡು ಸಾವಿರಕ್ಕೆ ಇಳಿದಿರುತ್ತದೆ. ವಿಶ್ವ ಮಟ್ಟದ ಕಠಿಣ ಪರೀಕ್ಷೆಯಲ್ಲಿ ವರ್ಷವಾರು ಉತ್ತೀರ್ಣರಾದವರ ಚಿತ್ರಣ ಐಎಎಸ್ ಮಾಡುವ ಆಕಾಂಕ್ಷೆಗಳಿಗೆ ಗೊತ್ತಿರಲಿ.

ವರ್ಷ ಪೂರ್ವಭಾವಿ ಪರೀಕ್ಷೆ ಹಾಕಿದವರು ಪೂರ್ವಭಾವಿಗೆ ಹಾಜರಾದವರು ಪೂರ್ವಭಾವಿ ಉತ್ತೀರ್ಣ ಮುಖ್ಯ ಪರೀಕ್ಷೆ ಸಂದರ್ಶನಕ್ಕೆ ಆಯ್ಕೆಯಾದವರು ಆಯ್ಕೆ

2019 8 lakh -- -- 11,845 -- 2034 829

2018 17 lakh 8 lakh 8 lakh 1992 1056

2017 10 lakh 5 lakh 13,336 2568 990

ಭಾರತೀಯ ನಾಗರಿಕ ಸೇವೆ ಇತಿಹಾಸ

ಭಾರತೀಯ ನಾಗರಿಕ ಸೇವೆ ಇತಿಹಾಸ

ಭಾರತೀಯ ನಾಗರಿಕ ಸೇವೆಗೆ ಸೇರುವ ಮೊದಲು ಅದರ ಭಾರತದಲ್ಲಿ ಅದು ಹುಟ್ಟಿದ್ದು, ಸ್ವಾತಂತ್ರ್ಯದ ನಂತರ ಬದಲಾದ ಆಯ್ಕೆ ಪ್ರಕ್ರಿಯೆ ಇಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ಚಕ್ರಾಧಿಪತ್ಯ ಸಾಧಿಸಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ನಿರ್ದೇಶಕರನ್ನು ನೇಮಿಸುತ್ತಿತ್ತು. ಲಂಡನ್‌ನ ಹೆಲ್ ಬೆರಿ ಕಾಲೇಜಿನಲ್ಲಿ ತರಬೇತಿ ನೀಡಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. 1854 ರಲ್ಲಿ ಮೆರಿಟ್ ಆಧಾರದ ಮೇಲೆ ಭಾರತದ ನಾಗರಿಕ ಸೇವೆ ನೇಮಕಾತಿಯನ್ನು ಮೇಕಾಲೆ ಅವರು ನೀಡಿದರು. ವರದಿ ಆಧರಿಸಿ ಬ್ರಿಟೀಷ್ ಸಂಸತ್ ಅನುಮೋದಿಸಿತ್ತು. ಆಗ ಕನಿಷ್ಠ 18 ರಿಂದ 23 ವಯೋಮಾನದವರನ್ನು ಮಾತ್ರ ಅಯ್ಕೆ ಮಾಡಲಾಗುತ್ತಿತ್ತು. 1864 ರಲ್ಲಿ ರಾಷ್ಟ್ರಗೀತೆ ಬರೆದ ಕವಿ ರವೀಂದ್ರನಾಥ ಠಾಗೂರ್ ಅವರ ಸಹೋದರ ಸತ್ಯೇಂದ್ರನಾಥ ಟಾಗೂರ್ ಅವರು ಭಾರತೀಯ ನಾಗರಿಕ ಸೇವೆಯನ್ನು ಪಾಸು ಮಾಡಿದ ಮೊದಲ ಅಭ್ಯರ್ಥಿ. ಆನಂತರ ನಾಲ್ಕು ಅಭ್ಯರ್ಥಿಗಳು ಉತ್ತೀರ್ಣರಾಗಿ ಭಾರತೀಯ ನಾಗರಿಕ ಸೇವೆಗೆ ಸೇರಿಸಿದ್ದರು. 1922 ರಿಂದ ಭಾರತದಲ್ಲಿಯೇ ನಾಗರಿಕ ಸೇವೆ ಭಾರತದಲ್ಲಿಯೇ ನಡೆಯಿತು. ಮೊದಲು ಅಲಹಾಬಾದ್ ನಂತರ ದೆಹಲಿಯಲ್ಲಿ ಫೆಡರಲ್ ಪಬ್ಲಿಕ್ ಸರ್ವೀಸ್ ಮೂಲಕ ಪರೀಕ್ಷೆ ನಡೆಸಲಾಗುತ್ತಿತ್ತು. ಆನಂತರ ಸಾಕಷ್ಟು ಬದಲಾವಣೆಗಳಾಗಿ ಸ್ವಾತಂತ್ರ್ಯ ಭಾರತದಲ್ಲಿ 1950 ಜನವರಿ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಕೇಂದ್ರ ಲೋಕ ಸೇವಾ ಅಯೋಗವನ್ನು ರಚಿಸಲಾಯಿತು. ಸಂವಿಧಾನದ 378 ನೇ ವಿಧಿ ಕೇಂದ್ರ ಲೋಕಾ ಸೇವಾ ಆಯೋಗ, ನಡೆಸುವ ಪರೀಕ್ಷೆ ಹಾಗೂ ಸದದಸ್ಯರು ಹಾಗೂ ಅಧ್ಯಕ್ಷರ ಬಗ್ಗೆ ವಿವರಿಸುತ್ತದೆ.

  Manish Pandey ಅವರ ಟೈಮ್ ಯಾಕೋ ಸರಿ ಇಲ್ಲ | Oneindia Kannada
  ಮೂರು ಹಂತದ ಪರೀಕ್ಷೆ

  ಮೂರು ಹಂತದ ಪರೀಕ್ಷೆ

  ಭಾರತದ ಕೇಂದ್ರ ಲೋಕ ಸೇವಾ ಅಯೋಗ ಅಖಿಲ ಭಾರತ ನಾಗರಿಕ ಸೇವೆ ಎಂದು ಕೇವಲ ಮೂರು ಸೇವೆಗಳನ್ನು ಪರಿಗಣಿಸಿದೆ. ಭಾರತೀಯ ಆಡಳಿತಾತ್ಮಕ ಸೇವೆ, ( ಐಎಎಸ್) ಭಾರತೀಯ ಪೊಲೀಸ್ ಸೇವೆ ( ಐಪಿಎಸ್) ಹಾಗೂ ಭಾರತೀಯ ಅರಣ್ಯ ಸೇವೆ ( ಐಎಫ್ಎಸ್ ) ಮಾತ್ರ. ಉಳಿದ ಸೇವೆಗಳು ( Indian postal service, Indian revenue service ) ಕೇಂದ್ರ ಸೇವೆ ವ್ಯಾಪ್ತಿಗೆ ಬರುತ್ತದೆ. ಭಾರತೀಯ ನಾಗರಿಕ ಸೇವೆಗೆ ನೇಮಕ ಸಂಬಂಧ ಪ್ರತಿ ವರ್ಷವೂ ಅಧಿಸೂಚನೆ ಹೊರಡಿಸುತ್ತದೆ. ಪೂರ್ವ ಭಾವಿ ಪರೀಕ್ಷೆ ಮುಗಿದ ಕೂಡಲೇ ಮುಂದಿನ ವರ್ಷ ಭಾರತೀಯ ನಾಗರಿಕ ಸೇವೆ ನೇಮಕಾತಿ ಕ್ಯಾಲೆಂಡರ್ ಅನ್ನು ಅಧಿಕೃತ ವೆಬ್ ತಾಣದಲ್ಲಿ ಬಿಡುಗಡೆ ಮಾಡುತ್ತದೆ. ಮೊದಲ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಮೂರನೇ ಹಂತದಲ್ಲಿ ಸಂದರ್ಶನ ಮೂಲಕ ಅಂತಿಮ ಅಯ್ಕೆ ಮಾಡುತ್ತದೆ. ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಎರಡು ವರ್ಷದ ತರಬೇತಿ ನೀಡಿದ ಬಳಿಕ ಸೇವೆಗೆ ನಿಯೋಜನೆ ಮಾಡಲಾಗುತ್ತದೆ. ಐಎಎಸ್ ತರಬೇತಿ ಮಸ್ಸೋರಿಯಲ್ಲಿ, ಐಪಿಎಸ್ ತರಬೇತಿ ಹೈದರಾಬಾದ್ ಹಾಗೂ ಅರಣ್ಯ ಸೇವೆ ಡೆಹ್ರಡೂನ್‌ನಲ್ಲಿ ನೀಡಿದ ಬಳಿಕ ಆಯ್ಕೆಯದ ಸೂಕ್ತ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ.


  ( ಮುಂದಿನ ಕಂತಿನಲ್ಲಿ ಪೂರ್ವ ಭಾವಿ ಪರೀಕ್ಷೆ - ಪಠ್ಯಕ್ರಮ ಹಾಗೂ ತರಬೇತಿ ಕುರತ ವಿವರ ನೀಡಲಾಗುವುದು )

  English summary
  How to crack civil service exam? Basic information about Indian civil service and History of Civil service know more
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X