ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ 7ನೇ ಹಂತದ ಚುನಾವಣೆ: 28% ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಆರೋಪ

|
Google Oneindia Kannada News

ಲಕ್ನೋ ಮಾರ್ಚ್ 6: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಹಂತದಲ್ಲಿ 54 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ 613 ಅಭ್ಯರ್ಥಿಗಳ ಪೈಕಿ 607 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವಿಶ್ಲೇಷಿಸಿದೆ. ಏಳನೇ ಹಂತದ ಒಟ್ಟು 607 ಅಭ್ಯರ್ಥಿಗಳ ಪೈಕಿ 170 (ಶೇ28) ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಜೊತೆಗೆ 131 (ಶೇ22) ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

54 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ (65%) 'ರೆಡ್ ಅಲರ್ಟ್' ಅಥವ ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲಾಗಿದೆ. ರೆಡ್ ಅಲರ್ಟ್ ಕ್ಷೇತ್ರಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ನಾಯಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಹೊಸ ವರದಿಯು ಹೇಳುತ್ತದೆ.

ಯುಪಿ ಏಳನೇ ಹಂತದ ಚುನಾವಣೆ: ಎಲ್ಲರ ಚಿತ್ತ ಈ ಹಾಟ್ ಸೀಟ್‌ಗಳತ್ತಯುಪಿ ಏಳನೇ ಹಂತದ ಚುನಾವಣೆ: ಎಲ್ಲರ ಚಿತ್ತ ಈ ಹಾಟ್ ಸೀಟ್‌ಗಳತ್ತ

54 ಕ್ಷೇತ್ರಗಳಲ್ಲಿ ಏಳನೇ ಮತ್ತು ಅಂತಿಮ ಹಂತದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 613 ಅಭ್ಯರ್ಥಿಗಳ ಪೈಕಿ 607 ಅಭ್ಯರ್ಥಿಗಳ ಸ್ವಯಂ ಪ್ರಮಾಣ ಪತ್ರಗಳನ್ನು ADR ವಿಶ್ಲೇಷಿಸಿದೆ. ಉಳಿದ ಆರು ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಕೆಟ್ಟದಾಗಿ ಸ್ಕ್ಯಾನ್ ಮಾಡಲಾಗಿದ್ದು ಅಥವಾ ಸಂಪೂರ್ಣ ಅಫಿಡವಿಟ್‌ಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡದ ಕಾರಣ ಅವರನ್ನು ವಿಶ್ಲೇಷಿಸಲಾಗಿಲ್ಲ. 54 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳನ್ನು 'ರೆಡ್ ಅಲರ್ಟ್' ಎಂದು ಘೋಷಿಸಲಾಗಿದೆ ಎಂದು ವರದಿ ಹೇಳಿದೆ.

 UP Polls Phase 7: Criminal Charges against 28pc Candidates; 65pc Seats Red Alert

ಕ್ರಿಮಿನಲ್ ಪ್ರಕರಣಗಳು

ಇನ್ನೂ ಚುನಾವಣೆಯಲ್ಲಿ ಎಸ್‌ಪಿಯ 45 ಅಭ್ಯರ್ಥಿಗಳಲ್ಲಿ 26 (58%) ಅಭ್ಯರ್ಥಿಗಳು, ಜೊತೆಗೆ ಬಿಜೆಪಿಯ 47 ಅಭ್ಯರ್ಥಿಗಳಲ್ಲಿ 26 (55%), ಬಿಎಸ್‌ಪಿಯ 52 ಅಭ್ಯರ್ಥಿಗಳಲ್ಲಿ 20 (38%), 54 ಬಿಎಸ್‌ಪಿ ಅಭ್ಯರ್ಥಿಗಳಲ್ಲಿ 20 (37%), ಆಮ್ ಆದ್ಮಿ ಪಕ್ಷದ 47 ಅಭ್ಯರ್ಥಿಗಳ ಪೈಕಿ ಎಂಟು (17%) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

ಅಲ್ಲದೆ, ಎಸ್‌ಪಿಯ 20, ಬಿಜೆಪಿಯ 19, ಬಿಎಸ್‌ಪಿಯ 13, ಕಾಂಗ್ರೆಸ್‌ನ 12 ಮತ್ತು ಎಎಪಿಯ ಏಳು ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. ಕನಿಷ್ಠ 11 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಇಬ್ಬರು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376). ಏಳು ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿಯ ಸೆಕ್ಷನ್ 302) ಘೋಷಿಸಿಕೊಂಡರೆ, 25 ಅಭ್ಯರ್ಥಿಗಳು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ (ಐಪಿಸಿಯ ಸೆಕ್ಷನ್-307).

ಏಳನೇ ಹಂತದಲ್ಲಿ ಕೋಟ್ಯಾಧಿಪತಿಗಳು

607 ಅಭ್ಯರ್ಥಿಗಳಲ್ಲಿ, 217 (36%) ಕೋಟ್ಯಾಧಿಪತಿಗಳಾಗಿದ್ದರೆ, ಪ್ರತಿ ಅಭ್ಯರ್ಥಿಯ ಆಸ್ತಿಯ ಸರಾಸರಿ ಮೌಲ್ಯ 2.55 ಕೋಟಿ ರೂ ಇದೆ. ಯುಪಿ ಚುನಾವಣೆಯಲ್ಲಿ ಹಣಬಲದ ಪಾತ್ರ ಎದ್ದು ಕಾಣುತ್ತಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳುತ್ತದೆ. ಪ್ರಮುಖ ಪಕ್ಷಗಳ ಪೈಕಿ ಬಿಜೆಪಿಯ 40 (85%), ಎಸ್‌ಪಿಯ 37 (82%), ಬಿಎಸ್‌ಪಿಯ 41 (79%), ಕಾಂಗ್ರೆಸ್‌ನ 22 (41%) ಮತ್ತು ಎಎಪಿಯ 15 (32%) ಅಭ್ಯರ್ಥಿಗಳು 1 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ.

Recommended Video

ಜಡೇಜಾ ಡಬಲ್ ಸೆಂಚುರಿಗೆ ಅಡ್ಡಗಾಲಿಟ್ರಾ ರೋಹಿತ್?ಜಡೇಜಾ ಹೇಳಿದ್ದೇನು? | Oneindia Kannada

ವಿಶ್ಲೇಷಿಸಿದ 47 ಬಿಜೆಪಿಯ ಪ್ರತಿ ಅಭ್ಯರ್ಥಿಗೆ ಸರಾಸರಿ ಆಸ್ತಿ ಮೌಲ್ಯ ರೂ. 6.48 ಕೋಟಿ ಇದ್ದರೆ 52 ಬಿಎಸ್‌ಪಿ ಅಭ್ಯರ್ಥಿಗಳಿಗೆ 6.16 ಕೋಟಿ ರೂ. 45 ಎಸ್‌ಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 5.57 ಕೋಟಿ ಮತ್ತು 54 ಕಾಂಗ್ರೆಸ್ ಅಭ್ಯರ್ಥಿಗಳು 1.26 ಕೋಟಿ ರೂ. 47 ಎಎಪಿ ಅಭ್ಯರ್ಥಿಗಳು ಸರಾಸರಿ 1.01 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮಾರ್ಚ್ 7 ರಂದು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಏಳನೇ ಹಂತದಲ್ಲಿ 75 (12%) ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

English summary
The Association for Democratic Reforms (ADR) analyzed 607 candidates' affidavits out of 613 candidates contesting 54 seats in the seventh phase of the Uttar Pradesh Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X