ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು!

|
Google Oneindia Kannada News

ಇದು ಹೃದಯಗಳ ವಿಷಯ. ಹೃದಯಕ್ಕೆ ಅನಾರೋಗ್ಯ ಅಂಟಿಕೊಳ್ಳಲು ಕಾರಣವೇನು? ಎಂದು ತಿಳಿದುಕೊಳ್ಳುವ ವಿಷಯ. ಪ್ರೀತಿ-ಪ್ರೇಮದ ಹೊರತಾಗಿ ಹೃದಯದ ಸಮಸ್ಯೆಗಳಿಗೂ ಈ ಮದುವೆಗೂ ಎಲ್ಲಿಂದೆಲ್ಲಿಯ ನಂಟು ಎಂದು ತಿಳಿದುಕೊಳ್ಳುವ ವಿಷಯ. ಫೈನಲಿ ಇದು ಅದೇ ಹೃದಯದ ವಿಷಯ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರುವ ಹೊಸ ಅಧ್ಯಯನದ ಪ್ರಕಾರ, ಮದುವೆ ಆಗದಿರುವ ಯುವಕ-ಯುವತಿಯರು ಹೆಚ್ಚು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವಿವಾಹಿತ ರೋಗಿಗಳು ತಮ್ಮ ಅನಾರೋಗ್ಯವನ್ನು ನಿರ್ವಹಿಸುವಷ್ಟು ಆತ್ಮವಿಶ್ವಾಸವನ್ನೇ ಹೊಂದಿರುವುದಿಲ್ಲ.

ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!? ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?

ವಿವಾಹಿತ ಗೆಳೆಯರಿಗೆ ಹೋಲಿಸಿದರೆ ಈ ಅವಿವಾಹಿತರು ಸಮಾಜದಿಂದ ಕೊಂಚ ಅಂತರ ಕಾಯ್ದುಕೊಂಡಿರುತ್ತಾರೆ. ಅದೇ ರೀತಿ ಅವಿವಾಹಿತರಿಗೆ ಹೋಲಿಸಿದರೆ, ವಿವಾಹಿತರು ಹೆಚ್ಚು ಕಾಲ ಬದುಕುಳಿಯುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ.

ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು! ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!

ಈ ಮದುವೆಗೂ, ಆ ಹೃದಯ ಸಂಬಂಧಿ ಕಾಯಿಲೆಗೂ ಏನು ಸಂಬಂಧ?, ಹೃದಯ ವೈಫಲ್ಯ ಸಂಬಂಧಿತ ಕಾಯಿಲೆಗಳು ಅವಿವಾಹಿತರಿಗೆ ಏಕೆ ಹೆಚ್ಚಾಗಿ ಕಾಡುತ್ತದೆ?, ಮದುವೆ ಆಗದಿದ್ದವರು ಹೆಚ್ಚು ಹೃದಯ ವೈಫಲ್ಯವನ್ನು ಅನುಭವಿಸುತ್ತಾರೆ ಎಂದು ಹೇಳುವ ಮಾನದಂಡವೇನು?, ಯುರೋಪಿಯನ್ ಹೃದಯಶಾಸ್ತ್ರ ನಡೆಸಿರುವ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಅಂಶಗಳೇನು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯೋಣ.

ಸಂಗಾತಿಯಿಂದ ಹೆಚ್ಚುವುದು ಹೇಗೆ ಜೀವಿತಾವಧಿ?

ಸಂಗಾತಿಯಿಂದ ಹೆಚ್ಚುವುದು ಹೇಗೆ ಜೀವಿತಾವಧಿ?

"ಸಾಮಾಜಿಕ ಬೆಂಬಲವು ದೀರ್ಘಾವಧಿವರೆಗೂ ಪರಿಸ್ಥಿತಿಗಳನ್ನು ನಿರ್ವಹಿಸಲು ಜನರಿಗೆ ಸಹಾಯ ಮಾಡುತ್ತದೆ," ಎಂದು ಜರ್ಮನಿಯ ವುರ್ಜ್‌ಬರ್ಗ್‌ನಲ್ಲಿನ ಯೂನಿವರ್ಸಿಟಿ ಹಾಸ್ಪಿಟಲ್ ಸಮಗ್ರ ಹೃದಯ ವೈಫಲ್ಯ ಕೇಂದ್ರದ ಅಧ್ಯಯನ ಲೇಖಕ ಡಾ ಫ್ಯಾಬಿಯನ್ ಕೆರ್ವಾಗನ್ ಹೇಳಿದ್ದಾರೆ. ಈ ಕೆಳಗೆ ಉಲ್ಲೇಖಿಸಿದ ಅಂಶಗಳು ಅವಿವಾಹಿತರು ಮತ್ತು ವಿವಾಹಿತರ ನಡುವಿನ ಜೀವಿತಾವಧಿಯಲ್ಲಿ ಹೇಗೆ ವ್ಯತ್ಯಾಸವಾಗುತ್ತದೆ ಎಂಬುದನ್ನು ಹೇಳುತ್ತವೆ.

ಮದುವೆ ಆಗದಿದ್ದವರಲ್ಲಿ ಆತ್ಮಸ್ಥೈರ್ಯ ಕಡಿಮೆ

* ಸಾಮಾನ್ಯವಾಗಿ ಸಂಗಾತಿಗಳು ಮಾದಕದ್ರವ್ಯಕ್ಕೆ ಅಂಟಿಕೊಳ್ಳದಿರಲು ಸಹಾಯ ಮಾಡಬಹುದು

* ಆರೋಗ್ಯಕರ ನಡವಳಿಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು ಮತ್ತು ಪ್ರೋತ್ಸಾಹಿಸಬಹುದು

* ವಿವಾಹಿತರಿಗೆ ಹೋಲಿಸಿದರೆ, ಅವಿವಾಹಿತರು ಸಾಮಾಜಿಕ ಸಂವಹನದಿಂದ ದೂರ ಉಳಿದಿರುತ್ತಾರೆ

* ಹೃದಯ ವೈಫಲ್ಯವನ್ನು ನಿರ್ವಹಿಸುವ ವಿಶ್ವಾಸವನ್ನು ಅವಿವಾಹಿತರು ಹೊಂದಿರುವುದಿಲ್ಲ

* ವಿವಾಹಿತರಲ್ಲಿ ಅನಾರೋಗ್ಯವನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಆತ್ಮಸ್ಥೈರ್ಯ ಹೆಚ್ಚಾಗಿರುವುದು

ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ

ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ

ಸಾಮಾನ್ಯ ಜನರಿಗೆ ಹೋಲಿಸಿದರೆ ಅವಿವಾಹಿತರಲ್ಲಿ ಹೃದಯದ ಪರಿಧಮನಿಯ ಕಾಯಿಲೆಗಳು ಹೆಚ್ಚು ಎಂಬುದನ್ನು ಈ ಹಿಂದಿನ ಅಧ್ಯಯನಗಳು ಹೇಳಿವೆ. ಎಕ್ಸ್ ಟೆಂಡ್ ಇಂಟರ್ ಡಿಸಿಪ್ಲಿನರಿ ನೆಟ್‌ವರ್ಕ್ ಹಾರ್ಟ್ ಫೇಲ್ಯೂರ್ (E-INH) ಅಧ್ಯಯನದ ಕುರಿತು ತನಿಖೆ ನಡೆಸಿದ ಸಂದರ್ಭದಲ್ಲಿ ವೈವಾಹಿಕ ಸ್ಥಿತಿಯು ದೀರ್ಘಕಾಲದ ಹೃದಯ ವೈಫಲ್ಯದ ಬಗ್ಗೆ ಮುನ್ಸೂಚನೆ ನೀಡುತ್ತದೆ.

ಇ-ಐಎನ್ಎಚ್ ಅಧ್ಯಯನ ನಡೆಸಿದ್ದು ಯಾರ ಮೇಲೆ?

ಇ-ಐಎನ್ಎಚ್ ಅಧ್ಯಯನ ನಡೆಸಿದ್ದು ಯಾರ ಮೇಲೆ?

ಕಳೆದ 2004 ರಿಂದ 20007ರ ಅವಧಿಯಲ್ಲಿ ಹೃದಯ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾದ 1,022 ರೋಗಿಗಳ ಮೇಲೆ ಇ-ಐಎನ್ಎಚ್ ಅಧ್ಯಯನವನ್ನು ನಡೆಸಿತು. ಈ ವೇಳೆ ತಮ್ಮ ವೈವಾಹಿಕ ಸ್ಥಿತಿಯ ಕುರಿತು ಮಾಹಿತಿ ನೀಡುವ 1,008 ರೋಗಿಗಳಲ್ಲಿ, ಶೇ.63ರಷ್ಟು ಅಂದರೆ, 633 ಮಂದಿ ವಿವಾಹಿತರು ಮತ್ತು ಶೇ.37ರಷ್ಟು ಅಂದರೆ 375 ಮಂದಿ ಅವಿವಾಹಿತರು ಸೇರಿದ್ದಾರೆ. ಇವರ ಜೊತೆಗೆ 195 ಮಂದಿ ವಿಧವೆಯರಾಗಿದ್ದರೆ, 96 ಮಂದಿ ವಯಸ್ಸು ಮೀರಿದ್ದರೂ ಮದುವೆ ಆಗದವರಿದ್ದಾರೆ. 84 ಜನರು ಮದುವೆಯಾಗಿ ತಮ್ಮ ಸಂಗಾತಿಯಿಂದ ಬೇರ್ಪಟ್ಟವರು ಅಥವಾ ವಿಚ್ಛೇದನ ಪಡೆದವರೂ ಇದ್ದಾರೆ.

ಹೃದಯ ಸಂಬಂಧಿ ಕಾಯಿಲೆ ಕುರಿತು E-INH ಅಧ್ಯಯನ

ಹೃದಯ ಸಂಬಂಧಿ ಕಾಯಿಲೆ ಕುರಿತು E-INH ಅಧ್ಯಯನ

ಕನ್ಸಾಸ್ ಸಿಟಿ ಕಾರ್ಡಿಯೊಮಿಯೊಪತಿ ಪ್ರಶ್ನಾವಳಿಯನ್ನು ಬಳಸಿಕೊಂಡು ಜೀವನದ ಗುಣಮಟ್ಟ, ಸಾಮಾಜಿಕ ಮಿತಿಗಳು ಮತ್ತು ಸ್ವಯಂ-ಪರಿಣಾಮಕಾರಿತ್ವವನ್ನು ಅಳೆಯಲಾಗುತ್ತದೆ. ಇದು ಹೃದಯ ವೈಫಲ್ಯದ ರೋಗಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಶ್ನಾವಳಿಯಾಗಿದೆ. ಸಾಮಾಜಿಕ ಮಿತಿಯು ಹೃದಯ ವೈಫಲ್ಯದ ರೋಗಲಕ್ಷಣಗಳು ರೋಗಿಗಳ ಸಾಮಾಜಿಕವಾಗಿ ಸಂವಹನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಉದಾಹರಣೆಗೆ ಹವ್ಯಾಸಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಅನುಸರಿಸುವುದು ಅಥವಾ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುವುದು. ಸ್ವಯಂ-ಪರಿಣಾಮಕಾರಿತ್ವ ಹೃದಯ ವೈಫಲ್ಯದ ಉಲ್ಬಣಗಳನ್ನು ತಡೆಗಟ್ಟುವ ಮತ್ತು ತೊಡಕುಗಳನ್ನು ನಿರ್ವಹಿಸುವ ರೋಗಿಗಳ ಸಾಮರ್ಥ್ಯದ ಗ್ರಹಿಕೆಯನ್ನು ವಿವರಿಸುತ್ತದೆ. ರೋಗಿಯ ಆರೋಗ್ಯ ಪ್ರಶ್ನಾವಳಿ (PHQ-9) ಅನ್ನು ಬಳಸಿಕೊಂಡು ಖಿನ್ನತೆ ಮನಸ್ಥಿತಿಯನ್ನು ನಿರ್ಣಯಿಸಲಾಗುತ್ತದೆ.

ಕಳೆದ 10 ವರ್ಷಗಳ ಅಂಕಿ-ಅಂಶ ಹೇಳುವುದೇನು?

ಕಳೆದ 10 ವರ್ಷಗಳ ಅಂಕಿ-ಅಂಶ ಹೇಳುವುದೇನು?

ಒಟ್ಟಾರೆ ಜೀವನದ ಗುಣಮಟ್ಟ ಅಥವಾ ಖಿನ್ನತೆಯ ಮನಸ್ಥಿತಿಗೆ ಸಂಬಂಧಿಸಿದಂತೆ ವಿವಾಹಿತ ಮತ್ತು ಅವಿವಾಹಿತ ರೋಗಿಗಳ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಆದಾಗ್ಯೂ, ವಿವಾಹಿತ ಗುಂಪಿಗೆ ಹೋಲಿಸಿದರೆ ಅವಿವಾಹಿತ ಗುಂಪು ಸಾಮಾಜಿಕ ಮಿತಿಗಳು ಮತ್ತು ಸ್ವಯಂ-ಪರಿಣಾಮಕಾರಿತ್ವದಲ್ಲಿ ಕೆಟ್ಟ ಸ್ಥಿತಿಯಲ್ಲಿದೆ. 10 ವರ್ಷಗಳ ಅಂಕಿ-ಅಂಶಗಳಲ್ಲಿ ಶೇ.67ರಷ್ಟು ಅಂದರೆ 679 ರೋಗಿಗಳು ಸಾವನ್ನಪ್ಪಿದ್ದಾರೆ.

ಅವಿವಾಹಿತರು ಮತ್ತು ವಿವಾಹಿತರ ನಡುವಿನ ಈ ಕಾರಣಗಳು ಸಾವಿನ ಅಪಾಯಕ್ಕೆ ಸಂಬಂಧಿಸಿವೆ. ಅಪಾಯದ ಅನುಪಾತ [HR] ಶೇ.1.58ರಷ್ಟಿದ್ದರೆ, ವಿಶ್ವಾಸಾರ್ಹ ಮಧ್ಯಂತರ 1.31-1.92 ಮತ್ತು ಹೃದಯ ರಕ್ತನಾಳ ಸಂಬಂಧಿತ ಕಾಯಿಲೆಯಿಂದ ಸಾವಿನ ಅಪಾಯದ ಅನುಪಾತ [HR] ಶೇ.1.83ರಷ್ಟಿದ್ದರೆ, ವಿಶ್ವಾಸಾರ್ಹ ಮಧ್ಯಂತರ 1.38-2.42ರಷ್ಟಿದೆ. ವಿವಾಹಿತ ಗುಂಪಿಗೆ ಹೋಲಿಸಿದರೆ ವಿಧವಾ ರೋಗಿಗಳು ಅತಿ ಹೆಚ್ಚು ಮರಣದ ಅಪಾಯ ಹೊಂದಿದ್ದಾರೆ, ಈ ಎಲ್ಲಾ ಕಾರಣಗಳು ಮತ್ತು ಹೃದಯರಕ್ತನಾಳದ ಸಾವಿಗೆ ಅನುಕ್ರಮವಾಗಿ 1.70 ಮತ್ತು 2.22ರ ಅನುಪಾತದ ಅಪಾಯವನ್ನು ಸೂಚಿಸುತ್ತದೆ.

ಹೃದಯ ಸಂಬಂಧಿ ಕಾಯಿಲೆ ಮತ್ತು ಮದುವೆ ಸ್ಥಿತಿಯ ನಂಟು

ಹೃದಯ ಸಂಬಂಧಿ ಕಾಯಿಲೆ ಮತ್ತು ಮದುವೆ ಸ್ಥಿತಿಯ ನಂಟು

"ಮದುವೆ ಮತ್ತು ದೀರ್ಘಾಯುಷ್ಯದ ನಡುವಿನ ಸಂಪರ್ಕವು ಹೃದಯ ವೈಫಲ್ಯದ ರೋಗಿಗಳಿಗೆ ಸಾಮಾಜಿಕ ಆತ್ಮವಿಶ್ವಾಸದ ಪ್ರಾಮುಖ್ಯತೆ ಸೂಚಿಸುತ್ತದೆ. ಇದು ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಸಾಮಾಜಿಕ ದೂರವಿಡುವುದರೊಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಆರೋಗ್ಯ ವೃತ್ತಿಪರರು ರೋಗಿಗಳನ್ನು ಅವರ ವೈವಾಹಿಕ ಸ್ಥಿತಿ ಮತ್ತು ವ್ಯಾಪಕ ಸಾಮಾಜಿಕ ಗುಂಪಿನ ಬಗ್ಗೆ ಕೇಳುವುದನ್ನು ಪರಿಗಣಿಸಬೇಕು. ಹೃದಯ ವೈಫಲ್ಯವನ್ನು ತಗ್ಗಿಸಲು ಸಾಮಾಜಿಕ ಆತ್ಮಸ್ಥೈರ್ಯವನ್ನು ತುಂಬಲು ಶಿಫಾರಸ್ಸು ಮಾಡಬೇಕು.

ಶಿಕ್ಷಣವು ಇಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ರೋಗಿಗಳು ಸ್ವಯಂ-ಆರೈಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. ರೋಗಿಗಳಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಿದೆ. ನಾವು ಮೊಬೈಲ್ ಆರೋಗ್ಯ ಅಪ್ಲಿಕೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಇದು ಹೃದಯ ವೈಫಲ್ಯದ ರೋಗಿಗಳಿಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಫ್ಯಾಬಿಯನ್ ಕೆರ್ವಾಗನ್ ಹೇಳಿದ್ದಾರೆ.

English summary
Research shows that unmarried people are associated with a higher risk of death with heart failure. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X