ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಲೋಕದ ಹೊಸ ಪ್ರಯತ್ನ: ಸಕಲ ವೈರಸ್‌ ಸೋಂಕಿಗೂ ಒಂದೇ ಲಸಿಕೆ

|
Google Oneindia Kannada News

ಎಲ್ಲಾ ಬಗೆಯ ವೈರಸ್ ಸಂಬಂಧಿ ಮಾರಕ ಕಾಯಿಲೆಗಳಿಗೆ ರಾಮಬಾಣದಂತಹ ಸಾರ್ವತ್ರಿಕ ಫ್ಲೂ ವ್ಯಾಕ್ಸಿನ್ ಅಥವಾ ಯೂನಿವರ್ಸಲ್ ಫ್ಲೂ ಶಾಟ್‌ಅನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಜಾಗತಿಕ ವೈದ್ಯಕೀಯ ಲೋಕ ಮಹತ್ವದ ಹೆಜ್ಜೆ ಇರಿಸಿದೆ.

ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್, ಈ ಹಿಂದೆ ಕಂಡುಬಂದಿದ್ದ ನಿಫಾ, ಸಾರ್ಸ್, ಆಂತ್ರಾಕ್ಸ್, ಜಿಕಾ ಮುಂತಾದ ವೈರಸ್ ಸಂಬಂಧಿ ಸಾಂಕ್ರಾಮಿಕ ಕಾಯಿಲೆಗಳಿಗೆ ಒಳಗಾಗದಂತೆ ದೇಹವನ್ನು ಶಕ್ತಿಶಾಲಿಗೊಳಿಸುವ ಈ ಚುಚ್ಚುಮದ್ದಿನ ಮೇಲೆ ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಈ ಚುಚ್ಚುಮದ್ದು ಬಳಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಸುಧಾರಿತ ವ್ಯಾಕ್ಸಿನ್ ಕಂಡುಹಿಡಿಯುವ ನಿಟ್ಟಿನಲ್ಲಿ ಸತತ ಸಂಶೋಧನೆಗಳು ನಡೆಯುತ್ತಿವೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ವ್ಯಕ್ತಿಯು ವರ್ಷದಲ್ಲಿ ಒಮ್ಮೆ ಈ ಲಸಿಕೆಯನ್ನು ತೆಗೆದುಕೊಂಡರೆ ವರ್ಷವಿಡೀ ಎಂತಹದೇ ಸೋಂಕನ್ನು ಎದುರಿಸುವಷ್ಟು ಶಕ್ತಿ ಬರಲಿದೆ. ಆದರೆ ಇದನ್ನು ಪ್ರತಿ ವರ್ಷ ತೆಗೆದುಕೊಳ್ಳಬೇಕು. ಎಚ್‌1ಎನ್1ನಂತಹ ಭಾರಿ ಆತಂಕ ಮೂಡಿಸಿದ್ದ ಸೋಂಕುಗಳು ಬಾಧಿಸದಂತೆ ದೇಹವನ್ನು ರಕ್ಷಿಸುವ ಬಲವನ್ನು ಈ ಲಸಿಕೆ ನೀಡಲಿದೆ. ಸುಮಾರು ಆರು ತಿಂಗಳವರೆಗೆ ಈ ಲಸಿಕೆ ಸೋಂಕುಗಳ ವಿರುದ್ಧ ಹೋರಾಡುವಷ್ಟು ಸಾಮರ್ಥ್ಯ ಹೊಂದಿದೆ.

ಸಾರ್ವತ್ರಿಕ ವೈರಸ್ ಮದ್ದು

ಸಾರ್ವತ್ರಿಕ ವೈರಸ್ ಮದ್ದು

ಇತ್ತಿಚಿನ ದಿನಗಳಲ್ಲಿ ವಿವಿಧ ಬಗೆಯ ವೈರಸ್‌ಗಳು ಒಂದಲ್ಲ ಒಂದು ದೇಶದಲ್ಲಿ ಅಪಾಯ ತಂದೊಡ್ಡುತ್ತಿವೆ. ಕೆಲವೊಂದು ದೀರ್ಘಾವಧಿ ಕಾಯಿಲೆಗೆ ಅಥವಾ ಸಾವಿಗೆ ಕಾರಣವಾಗುತ್ತಿವೆ. ಪ್ರತಿಯೊಂದು ವೈರಸ್ ಕಾಣಿಸಿಕೊಂಡಾಗಲೂ ಅದಕ್ಕೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ಆರಂಭವಾಗುತ್ತದೆ. ಆದರೆ ಈ ಲಸಿಕೆ ಎಲ್ಲಾ ದೇಶಗಳಲ್ಲಿನ ಬಗೆಯ ವೈರಸ್‌ಗಳಿಗೂ ಸಾರ್ವತ್ರಿಕ ರಕ್ಷಣೆ ನೀಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಏಳು ವರ್ಷ ಕಾಯಬೇಕು

ಏಳು ವರ್ಷ ಕಾಯಬೇಕು

ಯುನಿವರ್ಸಲ್ ಫ್ಲೂ ಶಾಟ್ ತಯಾರಿಕೆಗಾಗಿ ವಿಜ್ಞಾನಿಗಳಿಗೆ 130 ಮಿಲಿಯನ್ ಡಾಲರ್ ನೀಡಲಾಗಿದೆ. ಅಂದಾಜಿನ ಪ್ರಕಾರ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಏಳು ವರ್ಷಗಳು ಬೇಕಾಗಲಿದೆ. ಜಗತ್ತಿನಾದ್ಯಂತ ಹೊಸ ಹೊಸ ವೈರಸ್‌ಗಳು ವಿವಿಧ ದೇಶಗಳಲ್ಲಿ ದಾಳಿ ನಡೆಸಿದಾಗಲೂ ಈ ಒಂದೇ ಲಸಿಕೆ ಸಾಕು. ಎಲ್ಲಾ ಬಗೆಯ ವೈರಸ್‌ಗಳನ್ನೂ ಎದುರಿಸುವ ತಾಕತ್ತನ್ನು ಈ ಲಸಿಕೆ ದೇಹಕ್ಕೆ ನೀಡಲಿದೆ. ವರ್ಷದಿಂದ ವರ್ಷಕ್ಕೆ ಬದಲಾಗದ ಫ್ಲೂ ವೈರಸ್‌ಗಳ ಭಾಗಗಳ ಮೇಲೆ ಯೂನಿವರ್ಸಲ್ ಲಸಿಕೆ ದಾಳಿ ಮಾಡಲಿದೆ.

ಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾ

ಮನುಷ್ಯರ ಮೇಲೆ ಪ್ರಯೋಗ

ಮನುಷ್ಯರ ಮೇಲೆ ಪ್ರಯೋಗ

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಆಫ್ ಅಲರ್ಜಿ ಮತ್ತು ಇನ್‌ಫೆಕ್ಷಿಯಸ್ ಡಿಸಿಸಸ್ 15 ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಮೂಲಕ ಈ ಲಸಿಕೆಯ ಸಂಶೋಧನೆಯನ್ನು ತೊಡಗಿದೆ. ಈ ಲಸಿಕೆಯನ್ನು ಈಗಾಗಲೇ ಹಲವು ಬಾರಿ ಮನುಷ್ಯರ ಮೇಲೆ ಪ್ರಯೋಗಿಸಲಾಗಿದೆ.

ಫ್ಲೂಗಳ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಸಾರ್ವತ್ರಿಕ ಲಸಿಕೆ ಅಗತ್ಯವಾಗಿದೆ. ಮುಖ್ಯವಾಗಿ ಕಾಣಿಸಿಕೊಳ್ಳುವ ವೈರಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಲಸಿಕೆ ಸಿದ್ಧಪಡಿಸಲಾಗುತ್ತಿದೆ. ಆದರೆ ಇದು ಶೇ 100ರಷ್ಟು ಪರಿಣಾಮಕಾರಿಯಾಗುತ್ತದೆ ಎನ್ನಲಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಅದರ ಪರಿಣಾಮ ತಗ್ಗುತ್ತಾ ಬರುತ್ತದೆ.

ಇಮ್ಯುನಿಟಿ ಹೆಚ್ಚಳದ ಗುರಿ

ಇಮ್ಯುನಿಟಿ ಹೆಚ್ಚಳದ ಗುರಿ

ಮೆರಿಲ್ಯಾಂಡ್‌ನ ಬೆಥೆಸ್ಡಾ ಹೆಲ್ತ್ ಕ್ಲಿನಿಕ್‌ ಕೇಂದ್ರದಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಶೋಧಕರು ಈಗ 18-70 ವರ್ಷದ ವಯಸ್ಸಿನ ವಯಸ್ಕರಿಗೆ ಬಳಸುವ ಲಸಿಕೆಯ ಆರಂಭಿಕ ಆವೃತ್ತಿಗಳನ್ನು ಪರೀಕ್ಷಿಸುತ್ತಿದ್ದಾರೆ. ಅವರನ್ನು 12-15 ತಿಂಗಳವರೆಗೆ ನಿಗಾದಲ್ಲಿ ಇರಿಸಲಾಗುತ್ತಿದೆ. ಮನುಷ್ಯನ ಇಮ್ಯುನಿಟಿ ವ್ಯವಸ್ಥೆಯನ್ನು ವೃದ್ಧಿಸುವ ಮೂಲಕ ವೈರಸ್ ನಿರೋಧಕ ಶಕ್ತಿ ಹೆಚ್ಚಿಸುವುದು ಈ ಲಸಿಕೆಯ ಉದ್ದೇಶ.

ಡೆಂಗ್ಯೂ ಜ್ವರ ಬಾರದಂತೆ ಎಚ್ಚರ ವಹಿಸಲು ಕ್ರಮಗಳುಡೆಂಗ್ಯೂ ಜ್ವರ ಬಾರದಂತೆ ಎಚ್ಚರ ವಹಿಸಲು ಕ್ರಮಗಳು

English summary
Scientists are focusing to come up with a universal flu vaccine to improve immunity of human body to face flu virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X