ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಸರ್ಕಾರಕ್ಕೆ ಶಾಕ್ ಕೊಟ್ಟ ಅಮೆರಿಕ! $70 ಸಾವಿರ ಕೋಟಿ ಬಿಗ್ ಲಾಸ್!

|
Google Oneindia Kannada News

ಸೇಡಿಗೆ ಸೇಡು, ರಕ್ತಕ್ಕೆ ರಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ.

ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್ ಅಜ್ಮಲ್ ಅಹ್ಮದಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಗೋಳಾಡಿದ್ದಾರೆ. ಆಂತರಿಕ ಯುದ್ಧ, ಗಲಭೆ, ಅಶಾಂತಿ ಪರಿಣಾಮ ಅಫ್ಘಾನ್‌ನ ಆರ್ಥಿಕ ಸ್ಥಿತಿ ಬೀದಿಗೆ ಬಂದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲೇ ತಾಲಿಬಾನ್ ಅಧಿಕಾರ ಹಿಡಿದಿದೆ. ಆದರೆ ಇಷ್ಟುದಿನ ಪಾಶ್ಚಿಮಾತ್ಯ ರಾಷ್ಟ್ರಗಳ ಮಾತು ಕೇಳುವ ಸರ್ಕಾರ ಅಫ್ಘಾನ್‌ನಲ್ಲಿ ಅಸ್ತಿತ್ವದಲ್ಲಿತ್ತು. ಆಗ ಅಫ್ಘಾನ್‌ಗೆ ಸಾವಿರಾರು ಕೋಟಿ ಹಣವನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ದಾನ ಮಾಡಿದ್ದವು. ಈಗ ಪಾಶ್ಚಿಮಾತ್ಯರ ಮಾತು ಕೇಳಲು ತಾಲಿಬಾನ್ ಪಡೆಗಳು ಸಿದ್ಧವಿಲ್ಲ. ಇದೇ ಕಾರಣಕ್ಕೆ ಅಫ್ಘಾನಿಸ್ತಾನಕ್ಕೆ ಸೇರಿದ ಭಾರಿ ಪ್ರಮಾಣದ ಹಣವನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ತಾಲಿಬಾನ್ ವಿರುದ್ಧ ರಣಕಹಳೆ

ತಾಲಿಬಾನ್ ವಿರುದ್ಧ ರಣಕಹಳೆ

ಅಫ್ಘಾನಿಸ್ತಾನದಲ್ಲಿ ತಾನು ಕಂಡ ಸೋಲನ್ನು ಅಮೆರಿಕ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇಡೀ ಜಗತ್ತಿನ ಎದುರು ಅಮೆರಿಕ ಸೋತ ಹುಲಿಯಾಗಿದೆ. ಅದು ತಾಲಿಬಾನ್ ರೀತಿಯ ಸಣ್ಣ ಪಡೆಗಳ ವಿರುದ್ಧ ಹೀನಾಯ ಸೋಲು ಕಂಡು, ಅಫ್ಘಾನ್ ಬಿಟ್ಟು ಹೊರಬರುವಂತಾಗಿದೆ. ಹೀಗಂತ ಮತ್ತೆ ಯುದ್ಧ ಮುಂದುವರಿಸಲು ಅಲ್ಲಿ ದುಡ್ಡಿಲ್ಲ. ಅಮೆರಿಕ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ತನ್ನ ಮಾನ ತೆಗೆದ ತಾಲಿಬಾನ್‌ಗೆ ಆರ್ಥಿಕವಾಗಿ ಶಾಕ್ ನೀಡಲು ಅಮೆರಿಕ ಮುಂದಾಗಿದೆ. ಈಗ ತಾನೆ ಅಧಿಕಾರ ಹಿಡಿದಿರುವ ತಾಲಿಬಾನ್ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ನರಳುವಂತೆ ಮಾಡುವುದು ಅಮೆರಿಕದ ಪ್ಲ್ಯಾನ್ ಎಂಬ ಆರೋಪವೂ ಕೇಳಿಬಂದಿದೆ.

ಕಾಸು ಹೋಯ್ತು, ಮಾನವೂ ಹೋಯ್ತು! ಅಮೆರಿಕ ಈಗ ಸೂಪರ್ ಪವರ್ ಅಲ್ವಾ?ಕಾಸು ಹೋಯ್ತು, ಮಾನವೂ ಹೋಯ್ತು! ಅಮೆರಿಕ ಈಗ ಸೂಪರ್ ಪವರ್ ಅಲ್ವಾ?

Recommended Video

ಅಫ್ಘಾನ್ ಮೇಲೆ ತಾಲಿಬಾನ್ ದಂಡೆತ್ತಿದ್ದು ಯಾವಾಗ ಗೊತ್ತಾ? | Oneindia Kannada
ತಾಲಿಬಾನ್ ಏನು ಮಾಡಬಹುದು..?

ತಾಲಿಬಾನ್ ಏನು ಮಾಡಬಹುದು..?

ಮೊದಲನೆಯದಾಗಿ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ವಿಚಾರದಲ್ಲಿ ಜಗತ್ತು ಈಗ ಒಡೆದ ಮನೆಯಾಗಿಬಿಟ್ಟಿದೆ. ತಾಲಿಬಾನ್ ಪರ ಚೀನಾ ಮತ್ತು ರಷ್ಯಾ ಬ್ಯಾಟಿಂಗ್ ಮಾಡಿದರೆ, ತಾಲಿಬಾನ್ ವಿರುದ್ಧ ಅಮೆರಿಕದ ಮಿತ್ರಕೂಟ ನಿಂತಿದೆ. ಹೀಗಾಗಿ ತಾಲಿಬಾನ್ ನ್ಯಾಯಕ್ಕಾಗಿ ಮೊರೆಯಿಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಮೆರಿಕ ಅಫ್ಘಾನಿಸ್ತಾನಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣ ಬ್ಲಾಕ್ ಮಾಡಿರೋದು ಅಲ್ಲಿನ ಪ್ರಜೆಗಳಿಗೆ ಪೆಟ್ಟು ನೀಡಲಿದೆ. ಅಲ್ಲಿನ ಲಕ್ಷಾಂತರ ಬಡವರ ಪರಿಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿ ತಲುಪಲಿದೆ. ಜೊತೆಗೆ ನಿರಾಶ್ರಿತರ ಪಾಡು ಮತ್ತಷ್ಟು ಭೀಕರವಾಗಲಿದೆ. ಹೀಗಾಗಿ ಅಮೆರಿಕ ತನ್ನ ನಿರ್ಧಾರ ಮರುಪರಿಶೀಲಿಸಲಿ ಎನ್ನುತ್ತಿದೆ ಅಫ್ಘಾನಿಸ್ತಾನ.

ಫೈಟ್‌ ಆರ್‌ ಫ್ಲೈಟ್: ಅಫ್ಘಾನಿನಲ್ಲಿ ವಿಮಾನ ಚಕ್ರ ಹತ್ತಿದವರ ಪರಿಸ್ಥಿತಿ, ಮನಸ್ಥಿತಿಗಳು...ಫೈಟ್‌ ಆರ್‌ ಫ್ಲೈಟ್: ಅಫ್ಘಾನಿನಲ್ಲಿ ವಿಮಾನ ಚಕ್ರ ಹತ್ತಿದವರ ಪರಿಸ್ಥಿತಿ, ಮನಸ್ಥಿತಿಗಳು...

 3 ಟ್ರಿಲಿಯನ್ ಲಾಸ್ ಆಯ್ತು..!

3 ಟ್ರಿಲಿಯನ್ ಲಾಸ್ ಆಯ್ತು..!

2001ರಲ್ಲಿ ತಾಲಿಬಾನ್ ವಿರುದ್ಧ ಗುಡುಗಿದ್ದ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸಿಬಿಟ್ಟಿದ್ದರು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ನಂತರದ ಬೆಳವಣಿಗೆ ಅಮೆರಿಕ ಮತ್ತು ತಾಲಿಬಾನ್ ವಿರುದ್ಧ ಘರ್ಷಣೆಗೆ ಕಾರಣವಾಗಿತ್ತು. ಅಲ್‌ಖೈದ ಉಗ್ರರ ಪರವಾಗಿ ಮಾತನಾಡಿದ್ದ ತಪ್ಪಿಗೆ ತಾಲಿಬಾನ್ ಬೆಲೆ ತೆರಬೇಕು ಎಂದು ಘರ್ಜಿಸಿದ್ದ ಬುಷ್ ಏಕಾಏಕಿ ಸೇನೆ ನುಗ್ಗಿಸಿದ್ದರು. ಹೀಗೆ 2001ರಲ್ಲಿ ಸೇನೆ ಅಫ್ಘಾನ್ ತಲುಪಿ, ತಾಲಿಬಾನ್ ಸರ್ಕಾರವನ್ನ ಅಮೆರಿಕ ಕೆಳಗಿಳಿಸಿತ್ತು. 20 ವರ್ಷ ನಡೆದ ತಿಕ್ಕಾಟ ಬರೋಬ್ಬರಿ 3 ಟ್ರಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿದೆ. ಅಮೆರಿಕ ಇಷ್ಟೊಂದು ದೊಡ್ಡಮೊತ್ತದ ಹಣ ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದೆ.

ಅಫ್ಘಾನಿಸ್ತಾನದ ರಕ್ತ ಚರಿತ್ರೆ, ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?ಅಫ್ಘಾನಿಸ್ತಾನದ ರಕ್ತ ಚರಿತ್ರೆ, ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?

1 ಲಕ್ಷ ಜನರ ಸಾವು

1 ಲಕ್ಷ ಜನರ ಸಾವು

2001ರಲ್ಲಿ ಅಮೆರಿಕ ಹಾಗೂ ತಾಲಿಬಾನ್ ನಡುವೆ ಅಫ್ಘಾನಿಸ್ತಾನದಲ್ಲಿ ಆರಂಭವಾದ ಘರ್ಷಣೆಗೆ ಈವರೆಗೂ 1 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮೃತಪಟ್ಟವರ ಪೈಕಿ ಹೆಚ್ಚಿನವರು ಅಮಾಯಕರು ಹಾಗೂ ನಾಗರಿಕರು ಎಂಬುದೇ ದುರಂತ. ಇನ್ನು ಸಾವಿರಾರು ತಾಲಿಬಾನ್ ಸದಸ್ಯರನ್ನೂ ಅಮೆರಿಕ ಸೇನೆ ಹತ್ಯೆ ಮಾಡಿದೆ. ಜೊತೆಗೆ ಸಾವಿರಾರು ಸೈನಿಕರನ್ನೂ ಈ ಘರ್ಷಣೆಯಲ್ಲಿ ಅಮೆರಿಕ ಕಳೆದುಕೊಂಡಿದೆ. ಒಟ್ಟಾರೆ ತಾಲಿಬಾನ್ ವಿರುದ್ಧದ ಈ ಹೋರಾಟದಲ್ಲಿ ಅಮೆರಿಕ ಪಡೆದಿದ್ದು ಸಾಸಿವೆಯಷ್ಟು, ಆದರೆ ಕಳೆದುಕೊಂಡಿದ್ದು ಬೆಟ್ಟದಷ್ಟು.

English summary
United States blocks Taliban access to 9.5 billion Afghan monetary reserve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X