• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿ

|
   ನಾಸಾ : ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ ಅಂತರಿಕ್ಷದ ಅದ್ಭುತ ಚಿತ್ರಗಳು | Oneindia Kannada

   ದೂರದಿಂದ ನಿಂತು ನಮ್ಮ ಮನೆಯನ್ನೇ ನೋಡಿದರೆ ಹೇಗೆ ಕಾಣುತ್ತದೆ, ನಾವೇ ನಡೆದು ಸಾಗುವಾಗ ಹೇಗೆ ಕಾಣ್ತೀವಿ ಅನ್ನೋ ಕುತೂಹಲ...ಇವೆಲ್ಲ ತುಂಬ ಸಹಜವಾದದ್ದು. ಅಮೆರಿಕದ ನಾಸಾದ ಉಪಗ್ರಹಗಳು ಭೂಮಿ ಆಚೆಗಿನ ವಿಷಯಗಳನ್ನು ಅಧ್ಯಯನ ನಡೆಸುತ್ತಿವೆ. ಜತೆಗೆ ಅಲ್ಲಿಂದ ನಮ್ಮ ಭೂಮಿ ಹೇಗೆ ಕಾಣುತ್ತಿದೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ಕೂಡ ನೀಡುತ್ತವೆ.

   ಸೌರ ಮಂಡಲಕ್ಕೆ ಬಂದ ವಿಚಿತ್ರ ಕ್ಷುದ್ರಗ್ರಹದ ಹಿಂದೆ ಏಲಿಯನ್ ಕೈವಾಡ

   ಕೆಲ ಸಲ ನೀವು ವಿಜ್ಞಾನ ಹಾಗೂ ಕಲೆಯನ್ನು ಬೇರೆ ಬೇರೆ ಅಂತ ನೋಡಲು ಸಾಧ್ಯವಲ್ಲ. ಕಳೆದ ನವೆಂಬರ್ ನಲ್ಲಿ ಜಾಗತಿಕ ಹವಾಮಾನ ಬದಲಾವಣೆ ತಂಡವು ಕೆಲವು ಅದ್ಭುತ ಫೋಟೋಗಳನ್ನು ಬಿಡೂಗಡೆ ಮಾಡಿದೆ. ಇವುಗಳನ್ನು ಸೆರೆ ಹಿಡಿದಿರುವುದು ಉಪಗ್ರಹಗಳು ಹಾಗೂ ಗಗನಯಾತ್ರಿಗಳು ಎಂಬುದು ನೆನಪಿನಲ್ಲಿಡಬೇಕಾದ ಅಂಶ.

   ನಾಸಾ ಕಣ್ಣಲ್ಲಿ ಕ್ಯಾಲಿಫೋರ್ನಿಯಾದ ಭಯಂಕರ ಕಾಡ್ಗಿಚ್ಚಿನ ಚಿತ್ರ!

   ಈ ಚಿತ್ರಗಳ ಬಣ್ಣಗಳು ತಪ್ಪಾಗಿರಬಹುದು ಅಥವಾ ಕ್ಷಣಿಕ ಆಗಿರಬಹುದು. ಆದರೆ ವಿಜ್ಞಾನಿಗಳು ಬಹಿರಂಗ ಪಡಿಸಿದ ಚಿತ್ರಗಳಾಗಲಿ, ಮಾಹಿತಿಗಳಾಗಲಿ ಬರಿಗಣ್ಣಿಗೆ ಗೋಚರಿಸುವಂಥದ್ದಲ್ಲ. ಅಂಥ ಅದ್ಭುತ ಹಾಗೂ ಸಾಮಾನ್ಯಕ್ಕೆ ಗೋಚರವಾಗದ ಚಿತ್ರಗಳ ಗುಚ್ಛ ಇಲ್ಲಿದೆ. ಇವು ಬೆರಗು ಮಾತ್ರವಲ್ಲ, ನಮಗೆ ಸುಲಭಕ್ಕೆ ನಿಲುಕದ ರಹಸ್ಯವೂ ಹೌದು.

   ಚಿತ್ರ ಕೃಪೆ- ನಾಸಾ

   ಸಿನಿಮಾದ ದೃಶ್ಯವಲ್ಲ

   ಸಿನಿಮಾದ ದೃಶ್ಯವಲ್ಲ

   ಇದು ಯಾವುದೇ ಸೈ-ಫೈ ಸಿನಿಮಾದ ದೃಶ್ಯವಲ್ಲ. ಖಾಲಿಯಾದ ಸ್ಪೇಸ್ ಸೂಟ್ ಇದು. ಸದ್ಯಕ್ಕೆ ಬೇಡವೆನಿಸಿರುವ ರಷ್ಯಾದ ಈ ಸ್ಪೇಸ್ ಸೂಟ್ ನಲ್ಲಿ ಹಳೇ ಬಟ್ಟೆಗಳು ತುಂಬಿವೆ. ಭೂಮಿಯಿಂದ ನಭಕ್ಕೆ ಇದು ಚಿಮ್ಮಿದ್ದು 2006ರಲ್ಲಿ.

   ಬಾಹ್ಯಾಕಾಶದಿಂದ ಮಿಸಿಸಿಪ್ಪಿ ನದಿ

   ಬಾಹ್ಯಾಕಾಶದಿಂದ ಮಿಸಿಸಿಪ್ಪಿ ನದಿ

   ಇದು ಮಿಸಿಸಿಪ್ಪಿ ನದಿಯ ಚಿತ್ರ. ನದಿಯನ್ನು ಸುತ್ತುವರಿದಂತೆ ಹಾಗೂ ಆವರಿಸಿದಂತೆ ಕಾಣುತ್ತಿರುವುದು ಪಟ್ಟಣ ಪ್ರದೇಶ ಹಾಗೂ ಮೈದಾನಗಳು. ಲೆಕ್ಕವಿಲ್ಲದಷ್ಟು ಸರೋವರಗಳಿವೆ. ನದಿಯ ದಿಕ್ಕು ಬದಲಾಗುತ್ತಿರುವಂತೆ ಇವುಗಳು ಹುಟ್ಟಿಕೊಳ್ಳುತ್ತಿರುವಂತೆ ಕಾಣುವ ಅದ್ಭುತ ಚಿತ್ರವಿದು.

   ಲೆನಾ ನದಿ

   ಲೆನಾ ನದಿ

   ಜಗತ್ತಿನ ದೊಡ್ಡ ನದಿ ವ್ಯವಸ್ಥೆಯ ಪೈಕಿ ಒಂದಾದ ಲೆನಾ ನದಿ ಬಾಹ್ಯಾಕಾಶದಿಂದ ಕಾಣುವುದು ಹೀಗೆ. ಹಲವು ಸೈಬೀರಿಯನ್ ತಳಿಗಳ ಸಂತಾನೋತ್ಪತ್ತಿಯ ಸಮೃದ್ಧ ಸ್ಥಳವಿದು.

   ಇರಾನ್ ನ ಅತಿ ದೊಡ್ಡ ಮರುಭೂಮಿ

   ಇರಾನ್ ನ ಅತಿ ದೊಡ್ಡ ಮರುಭೂಮಿ

   ಈ ಚಿತ್ರ ದಶ್ತ್ ಇ ಕೇವಿರ್ ಅಥವಾ ಮಹಾ ಉಪ್ಪು ಮರುಭೂಮಿಯದು. ಇರಾನ್ ನಲ್ಲ್ಲೇ ಅತಿ ದೊಡ್ಡ ಮರುಭೂಮಿ. ಇಲ್ಲಿ ಯಾವುದೇ ಜೀವಿ ವಾಸಿಸುವುದಿಲ್ಲ. ಒಂದು ರೀತಿ ಏನೂ ಕೆಲಸಕ್ಕೆ ಬಾರದ ಜಾಗ. ಇಲ್ಲಿ ಮಣ್ಣು ಹಾಗೂ ಉಪ್ಪು ಯಥೇಚ್ಛವಾಗಿದೆ.

   ಆಸ್ಟ್ರೇಲಿಯಾದ ಕಡಲ ಕಿನಾರೆಯ ದ್ವೀಪ

   ಆಸ್ಟ್ರೇಲಿಯಾದ ಕಡಲ ಕಿನಾರೆಯ ದ್ವೀಪ

   ಆಸ್ಟ್ರೇಲಿಯಾ ಕಡಲ ಕಿನಾರೆಯ ಅತಿ ದೂರದಲ್ಲಿರುವ ದ್ವೀಪಗಳಲ್ಲೊಂದಾದ ನ್ಯೂ ಕಲೆಡೊನಿಯಾದ ಸಹಜವಾಗಿ ಮೂಡಿಬಂದ ಚಿತ್ರ. ನೀಲಿ ಬಣ್ಣದಲ್ಲಿ ಕಣ್ಣು ಕೋರೈಸುವಂತೆ ಇರುವುದು ಸಾಗರ. ಎರಡು ಬಗೆಯ ನೀಲಿ ಬಣ್ಣ ಇಲ್ಲಿ ಕಾಣಬಹುದು. ಒಂದರ ಪ್ರತಿಫಲನವೇ ಮತ್ತೊಂದು.

   ಸಹಜ ಬಣ್ಣವಲ್ಲ

   ಸಹಜ ಬಣ್ಣವಲ್ಲ

   2013ರಲ್ಲಿ ತೆಗೆದ ಚಿತ್ರವಿದು. ಇದು ಬಣ್ಣದ ಕಾರಣಕ್ಕೆ ನಮ್ಮ ಕಣ್ಣನ್ನೇ ಮೋಸ ಮಾಡುವ ಚಿತ್ರ. ಇಲ್ಲಿರುವ ಬಣ್ಣ ಸಹಜವಲ್ಲ. ಆದರೆ ಇದು ಪಶ್ಚಿಮ ಆಸ್ಟ್ರೇಲಿಯಾದ ಶ್ರೀಮಂತ ಸಸ್ಯವರ್ಗ ಹಾಗೂ ಕೆಸರನ್ನು ಪ್ರತಿನಿಧಿಸುತ್ತಿದೆ.

   ದಕ್ಷಿಣ ಮೊರೊಕ್ಕೊ

   ದಕ್ಷಿಣ ಮೊರೊಕ್ಕೊ

   ಆಫ್ರಿಕಾದ ದಕ್ಷಿಣ ಮೊರೊಕ್ಕೊದ ಅಟ್ಲಾಸ್ ಪರ್ವತ ಶ್ರೇಣಿಯ ಒಂದು ಭಾಗ. ಅಗಾಧವಾದ ಹಾಗೂ ವಿವಿಧ ಖನಿಜ ಸಂಪತ್ತಿರುವ ಜಗತ್ತಿನ ಭೂ ಭಾಗವನ್ನು ಈ ಸುಳ್ಳಿನ ಬಣ್ಣವು ಸೆರೆ ಹಿಡಿದಿದೆ.

   ದೊಡ್ಡ ಟೀ ಕಪ್ ನಲ್ಲಿ ಹಾಲು ತುಂಬಿದಂತೆ

   ದೊಡ್ಡ ಟೀ ಕಪ್ ನಲ್ಲಿ ಹಾಲು ತುಂಬಿದಂತೆ

   ದೊಡ್ಡ ಟೀ ಕಪ್ ನಲ್ಲಿ ಹಾಲು ತುಂಬಿದಂತೆ ಕಾಣುತ್ತಿರುವ ಈ ಸುಂದರ ಚಿತ್ರದ ಹಿಂದೆ ಬೆಂಕಿಯಂಥ ಕಥೆ ಇದೆ. 2010ರಲ್ಲಿ ಸೆರೆ ಹಿಡಿದ ಚಿತ್ರವಿದು. ಪಪುಪಾ ನ್ಯೂ ಗಿನಿವಾದ ಕೆಲ ಮೈಲುಗಳ ದೂರದಲ್ಲಿ ಮನಮ್ ಜ್ವಾಲಾಮುಖಿ ಇದು. ಬಿಳಿಯ ನೊರೆಯಂತೆ ಅಥವಾ ಹೊಗೆ ಆವರಿಸಿದಂತೆ ಕಾಣುತ್ತಿರುವುದು ಜ್ವಾಲಾಮುಖಿ ಚಟುವಟಿಕೆಯನ್ನು ಸೂಚಿಸುತ್ತದೆ.

   ಪೂರ್ವ ಹಿಮಾಲಯದ ಚಿತ್ರ

   ಪೂರ್ವ ಹಿಮಾಲಯದ ಚಿತ್ರ

   ಇದು ಕೂಡ ತಪ್ಪಾದ ಅಥವಾ ಸುಳ್ಳಿನ ಬಣ್ಣದ ಚಿತ್ರ. ಹಿಮ ಆವರಿಸಿದ ಪೂರ್ವ ಹಿಮಾಲಯದ ಪರ್ವತ ಶ್ರೇಣಿಯದು. ಅದೂ ಅಗ್ನೇಯ ಚೀನಾದ ಪ್ರಮುಖ ನದಿಗಳು ಹರಿಯುವ ಜಾಗವಿದು.

   ಹೂಳು ಹೊರಗೆ

   ಹೂಳು ಹೊರಗೆ

   ಲೂಸಿಯಾನದ ಇಂಥ ಚಿತ್ರ ಹಿಂದೆ ನೋಡಿರಲಿಕ್ಕೆ ಸಾಧ್ಯವೇ ಇಲ್ಲ. ಮಿಸಿಸಿಪ್ಪಿ ನದಿಯ ಬಾಯಿಯಿಂದ ಹೊರಬಿದ್ದ ಹೂಳು ಗಲ್ಫ್ ಆಫ್ ಮೆಕ್ಸಿಕೋ ಕಡೆಗೆ ಹರಿಯುತ್ತಿರುವುದು.

   ವಾಯವ್ಯ ಮಡಗಾಸ್ಕರ್

   ವಾಯವ್ಯ ಮಡಗಾಸ್ಕರ್

   ಇಲ್ಲಿನ ಬಣ್ಣ ನೋಡಿ ಮೋಸ ಹೋಗಬೇಡಿ. ಇದು ವಾಯವ್ಯ ಮಡಗಾಸ್ಕರ್ ನ ಬೊಂಬೆಟಕಾ ಕೊಲ್ಲಿಯ ಚಿತ್ರವಿದು.

   ಯಾರೂ ಮಾಡದ ಸಾಹಸ

   ಯಾರೂ ಮಾಡದ ಸಾಹಸ

   1984ರಲ್ಲಿ ಸೆರೆ ಹಿಡಿದಿರುವ ಚಿತ್ರವಿದು. ಬ್ರೂಸ್ ಮೆಕ್ ಕ್ಯಾಂಡ್ಲೆಸ್ IIನಲ್ಲಿ ಸುರಕ್ಷಾ ವಲಯವನ್ನೂ ಮೀರಿ 320 ಅಡಿಯಷ್ಟು ದೂರ ಹೋಗಿದ್ದ ಚಿತ್ರ. ಇಷ್ಟು ಸಾಹಸವನ್ನು ಆವರೆಗಿನ ಯಾವ ಗಗನಯಾತ್ರಿಯೂ ಮಾಡಿರಲಿಲ್ಲ. ಈ ಗಗನ ಯಾತ್ರಿಯ ಬೆನ್ನಗಿರುವುದು ನೈಟ್ರೋಜನ್ ಜೆಟ್ ನಿಂದ ಕೆಲಸ ಮಾಡುವ ಬ್ಯಾಕ್ ಪ್ಯಾಕ್.

   ಆಕ್ವಾ ಉಪಗ್ರಹ

   ಆಕ್ವಾ ಉಪಗ್ರಹ

   2010ರಲ್ಲಿ ಐಸ್ ಲ್ಯಾಂಡ್ ನಲ್ಲಿ ಸೆರೆಹಿಡಿದ ಚಿತ್ರವಿದು. ನಾಸಾದ ಆಕ್ವಾ ಉಪಗ್ರಹ ತೆಗೆದ ಚಿತ್ರ.

   ಸ್ವೀಡನ್ ದೇಶ

   ಸ್ವೀಡನ್ ದೇಶ

   ಸ್ವೀಡನ್ ದೇಶದ ಬಾಲ್ಟಿಕ್ ಸಮುದ್ರದ ಗಾಟ್ ಲ್ಯಾಂಡ್ ದ್ವೀಪದ ಈ ಚಿತ್ರ ಕಲಾವಿದ ವ್ಯಾನ್ ಗೋನ ಕಲಾಕೃತಿಯಂತೆ ಕಾಣುತ್ತಿದೆ. ದ್ವೀಪದ ಸುತ್ತ ನೀಲಿ ಸುತ್ತುವರಿದಿದೆ.

   ಕೆನಡಾದ ಮೆಕೆಂಜಿ ನದಿ

   ಕೆನಡಾದ ಮೆಕೆಂಜಿ ನದಿ

   ಎರಡು ವರ್ಷದ ಹಿಂದೆ ತೆಗೆದ ಈ ಚಿತ್ರ ಕೆನಡಾದ ಮೆಕೆಂಜಿ ನದಿಯದು. ಆರ್ಕ್ ಟಿಕ್ ವಾತಾವರಣವನ್ನು ಹಾಗೇ ಕಾಯ್ದುಕೊಳ್ಳುವಲ್ಲಿ ಈ ನದಿಯ ಪಾತ್ರ ಮಹತ್ವದ್ದು.

   ಭೂಮಿಯ ಸುಂದರ ಚಿತ್ರ

   ಭೂಮಿಯ ಸುಂದರ ಚಿತ್ರ

   ಇದು ಭೂಮಿಯ ಅತ್ಯಂತ ಸುಂದರವಾದ ಚಿತ್ರ. ಸಾವಿರಾರು ಉಪಗ್ರಹಗಳು ಸೆರೆಹಿಡಿದ ಚಿತ್ರಗಳನ್ನೆಲ್ಲ ಒಗ್ಗೂಡಿಸಿ, ಪೋಣಿಸಿದ ವಿಜ್ಞಾನಿಗಳ ಸಾಹಸವಿದು. 2002ರಲ್ಲಿ ತೆಗೆದ ಬುವಿಯ ಚಿತ್ರ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Unique photos of Earth taken by NASA. Rare and stunning photos of earth and space taken by various satellites and astronauts. Canada, China, Morocco, Australia different part of the world pictures are here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more