ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ನೂತನ ಜಾಹೀರಾತು ನೀತಿ: ಹಾಗಾದರೆ ಬದಲಾವಣೆಗಳೇನು?

|
Google Oneindia Kannada News

ನವದಹೆಲಿ, ಜೂ. 11: ಕೇಂದ್ರ ಸರ್ಕಾರವು ನೂತನ ಜಾಹೀರಾತು ನೀತಿಯನ್ನು ಜಾರಿಗೆ ತಂದಿದೆ. ಈ ಮೂಲಕ ಬಾಡಿಗೆ ಜಾಹೀರಾತುಗಳನ್ನು ನಿಷೇಧಿಸುವ ಮೂಲಕ ತಪ್ಪು ದಾರಿಗೆಳೆಯುವ ಜಾಹೀರಾತುಗಳು ಮತ್ತು ಅನುಮೋದಕರನ್ನು ನಿಗ್ರಹಿಸಲು ಅಲ್ಲದೆ ರಿಯಾಯಿತಿಗಳು ಮತ್ತು ಉಚಿತ ಕ್ಲೈಮ್‌ಗಳನ್ನು ನೀಡುವ ಗ್ರಾಹಕರನ್ನು ಸೆಳೆಯಲು ಬಯಸುವ ಜಾಹೀರಾತುಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಹೇರಿದೆ.

"ತಪ್ಪು ದಾರಿಗೆಳೆಯುವ ಜಾಹೀರಾತುಗಳ ತಡೆಗಟ್ಟುವಿಕೆ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ಅನುಮೋದನೆಗಳು, 2022" ಎಂಬ ಹೊಸ ಮಾರ್ಗಸೂಚಿಗಳು ಮಕ್ಕಳನ್ನು ಗುರಿಯಾಗಿಸಿ ನೀಡುವ ಜಾಹೀರಾತುಗಳನ್ನು ನಿಯಂತ್ರಿಸಲು ಮಾಡಲಾಗಿದೆ. ಈ ಬಗ್ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ ಜಾಹೀರಾತುಗಳನ್ನು ಅನುಮೋದಿಸುವಾಗ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿವೆ.

ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾತನಾಡಿ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಮೊದಲ ಅಪರಾಧಕ್ಕೆ 10 ಲಕ್ಷ ರೂಪಾಯಿ ಮತ್ತು ನಂತರದ ಉಲ್ಲಂಘನೆಗೆ 50 ಲಕ್ಷ ರುಪಾಯಿ ದಂಡವನ್ನು ವಿಧಿಸುವ ಮೂಲಕ ಗ್ರಾಹಕ ಸಂರಕ್ಷಣಾ ಕಾಯ್ದೆ (ಸಿಪಿಎ) ಯ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಜಾಹೀರಾತುಗಳು ಗ್ರಾಹಕರಿಗೆ ಹೆಚ್ಚಿನ ಆಸಕ್ತಿಯನ್ನು ಕೆರಳಿಸುತ್ತವೆ. CCPA ಕಾಯ್ದೆಯಡಿಯಲ್ಲಿ ಗ್ರಾಹಕರ ಹಕ್ಕುಗಳ ಮೇಲೆ ಪರಿಣಾಮ ಬೀರುವ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಗ್ರಹಿಸಲು ನಿಬಂಧನೆಗಳಿವೆ. ಹಾಗಾಗಿ ಕಂಪೆನಿಗಳು ಜಾಗೃತಿ ಮೂಡಿಸಲು ಸರ್ಕಾರವು ಇಂದಿನಿಂದ ಜಾರಿಗೆ ಬರುವಂತೆ ನ್ಯಾಯಯುತ ಜಾಹೀರಾತಿಗಾಗಿ ಸರ್ಕಾರವು ಮಾರ್ಗಸೂಚಿಗಳನ್ನು ಹೊರತಂದಿದೆ ಎಂದು ಅವರು ಹೇಳಿದರು.

ನೂತನ ನಿಯಮಗಳು ಮುದ್ರಣ, ದೂರದರ್ಶನ ಮತ್ತು ಆನ್‌ಲೈನ್‌ನಂತಹ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾದ ಜಾಹೀರಾತುಗಳಿಗೆ ಅನ್ವಯಿಸುತ್ತವೆ. ಈ ಮಾರ್ಗಸೂಚಿಗಳು ರಾತ್ರೋರಾತ್ರಿ ಬದಲಾವಣೆಯನ್ನು ತರುವುದಿಲ್ಲ. ಜನರನ್ನು ತಪ್ಪಾಗಿಯೂ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಡೆಯಲು ಉದ್ಯಮದ ಮಧ್ಯಸ್ಥಗಾರರಿಗೆ ಅವಕಾಶ ನೀಡುತ್ತದೆ. ಅಲ್ಲದೆ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ಗ್ರಾಹಕರು ಮತ್ತು ಗ್ರಾಹಕ ಸಂಸ್ಥೆಗಳಿಗೆ ಅಧಿಕಾರ ನೀಡುತ್ತದೆ ಎಂದು ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದರು.

ಗ್ರಾಹಕ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಪಿಎಸ್‌ಯುಗಳು ನೀಡುವ ಸರ್ಕಾರಿ ಜಾಹೀರಾತುಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ಹೊರಡಿಸಿದ ಸ್ವಯಂ ನಿಯಂತ್ರಣಕ್ಕಾಗಿ ಜಾಹೀರಾತು ಮಾರ್ಗಸೂಚಿಗಳು ಸಹ ಇದೇ ವೇಳೆ ಜಾರಿಯಲ್ಲಿರುತ್ತವೆ ಎಂದು ಸಿಂಗ್‌ ಹೇಳಿದರು.

ನಿಯಂತ್ರಕ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ದ(CCPA) ಮುಖ್ಯ ಆಯುಕ್ತ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಮಾತನಾಡಿ, ಸಾಂಕ್ರಾಮಿಕ ಸಮಯದಲ್ಲಿ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ CCPA ಕ್ರಮ ಕೈಗೊಂಡಿದೆ. ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಅವಶ್ಯಕತೆಯಿದೆ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ಜಾಹೀರಾತುದಾರರು ಅವರ ಬಗ್ಗೆ ತಿಳಿದಿರುತ್ತಾರೆ. ಅಲ್ಲದೆ ಇದನ್ನು ಉಲ್ಲಂಘಿಸುವುದಿಲ್ಲ. ತಪ್ಪುದಾರಿಗೆಳೆಯುವ ಜಾಹೀರಾತನ್ನು ಈಗಾಗಲೇ ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(28) ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಪ್ರಸ್ತುತ ಮಾರ್ಗಸೂಚಿಗಳು "ಬೆಟ್ ಜಾಹೀರಾತು", "ಬಾಡಿಗೆ ಜಾಹೀರಾತು"ಗಳನ್ನು ವ್ಯಾಖ್ಯಾನಿಸುತ್ತವೆ ಮತ್ತು "ಉಚಿತ ಕ್ಲೈಮ್ ಜಾಹೀರಾತುಗಳು" ಇವುಗಳ ಬಗ್ಗೆ ತಿಳಿಸಿ ನಿಯಂತ್ರಿಸುತ್ತವೆ ಎಂದು ಹೇಳಿದರು.

 ಮಕ್ಕಳನ್ನು ಗುರಿಯಾಗಿಸಿಕೊಂಡು ಜಾಹೀರಾತು

ಮಕ್ಕಳನ್ನು ಗುರಿಯಾಗಿಸಿಕೊಂಡು ಜಾಹೀರಾತು

ಬೆಟ್ ಜಾಹೀರಾತು ಎಂದರೆ ಗ್ರಾಹಕರನ್ನು ಆಕರ್ಷಿಸಲು ಕಡಿಮೆ ಬೆಲೆಗೆ ಸರಕುಗಳು, ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವ ಜಾಹೀರಾತು ಎಂದರ್ಥ. ಇದಲ್ಲದೆ ನೂತನ ಮಾರ್ಗಸೂಚಿಗಳು ಬೈಟ್ ಜಾಹೀರಾತುಗಳು ಮತ್ತು ಉಚಿತ ಕ್ಲೈಮ್‌ಗಳ ಜಾಹೀರಾತುಗಳನ್ನು ನೀಡುವಾಗ ಅನುಸರಿಸಬೇಕಾದ ಷರತ್ತುಗಳನ್ನು ತಿಳಿಸುತ್ತವೆ. ವಿಶೇಷವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡು ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಪರಿಗಣಿಸಬೇಕಾದ ವಿವಿಧ ಅಂಶಗಳನ್ನು ತಿಳಿಸುತ್ತವೆ. ಉತ್ಪನ್ನ ಅಥವಾ ಸೇವೆಯ ಬಗ್ಗೆ ಮಕ್ಕಳು ವಾಸ್ತವವಲ್ಲದ ನಿರೀಕ್ಷೆಗಳನ್ನು ಹೊಂದವುದು, ಮಾನ್ಯತೆ ಪಡೆದ ಸಂಸ್ಥೆಯಿಂದ ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ರುಜುವಾತುಪಡಿಸದೆ ಯಾವುದೇ ಆರೋಗ್ಯ ಅಥವಾ ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯಲು ಹೇಳುವ ಉತ್ಪನ್ನ ಅಥವಾ ಸೇವೆಯ ವೈಶಿಷ್ಟ್ಯಗಳನ್ನು ಉತ್ಪ್ರೇಕ್ಷಿಸುವುದನ್ನು ಮಾರ್ಗಸೂಚಿಗಳು ನಿಷೇಧಿಸುತ್ತವೆ.

ಮಕ್ಕಳನ್ನು ಗುರಿಯಾಗಿಸುವ ಜಾಹೀರಾತುಗಳು ಕ್ರೀಡೆ, ಸಂಗೀತ ಅಥವಾ ಸಿನಿಮಾ ಕ್ಷೇತ್ರದ ಯಾವುದೇ ವ್ಯಕ್ತಿಗಳನ್ನು ಒಳಗೊಂಡಿರಬಾರದು, ಯಾವುದೇ ಕಾನೂನಿನ ಅಡಿಯಲ್ಲಿ ಅಂತಹ ಜಾಹೀರಾತುಗಳಿಗೆ ಆರೋಗ್ಯ ಎಚ್ಚರಿಕೆ ಅಗತ್ಯವಿರುತ್ತದೆ ಅಥವಾ ಮಕ್ಕಳು ಖರೀದಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.

 ಕಂಪನಿಯ ಜವಾಬ್ದಾರಿಗೆ ಮಿತಿ

ಕಂಪನಿಯ ಜವಾಬ್ದಾರಿಗೆ ಮಿತಿ

ಜಾಹೀರಾತುಗಳಲ್ಲಿನ ಹಕ್ಕು ನಿರಾಕರಣೆಗಳು ಗ್ರಾಹಕರ ದೃಷ್ಟಿಕೋನದಿಂದ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಒಂದು ರೀತಿಯಲ್ಲಿ ಅದು ಕಂಪನಿಯ ಜವಾಬ್ದಾರಿಯನ್ನು ಮಿತಿಗೊಳಿಸುತ್ತದೆ. ಅಂತಹ ಜಾಹೀರಾತಿನಲ್ಲಿ ಮಾಡಲಾದ ಯಾವುದೇ ಕ್ಲೈಮ್‌ಗೆ ಸಂಬಂಧಿಸಿದಂತೆ ವಸ್ತು ಮಾಹಿತಿಯನ್ನು ಮರೆಮಾಡಲು ಹಕ್ಕು ನಿರಾಕರಣೆ ಪ್ರಯತ್ನಿಸಬಾರದು ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ, ಲೋಪ ಅಥವಾ ಇದರ ಅನುಪಸ್ಥಿತಿಯು ಜಾಹೀರಾತನ್ನು ಮೋಸಗೊಳಿಸುವ ಅಥವಾ ಅದರ ವಾಣಿಜ್ಯ ಉದ್ದೇಶವನ್ನು ಮರೆಮಾಚುವ ಸಾಧ್ಯತೆಯಿದೆ. ಇದಲ್ಲದೆ ಹಕ್ಕು ನಿರಾಕರಣೆಯು ಜಾಹೀರಾತಿನಲ್ಲಿ ಮಾಡಿದ ಹಕ್ಕು ಮತ್ತು ಹಕ್ಕು ನಿರಾಕರಣೆಯಲ್ಲಿ ಬಳಸಿದ ಅಕ್ಷರಶೈಲಿಯು ಕ್ಲೈಮ್‌ನಲ್ಲಿ ಬಳಸಿದಂತೆಯೇ ಅದೇ ಭಾಷೆಯಲ್ಲಿರಬೇಕು ಎಂದು ಇದು ಹೇಳುತ್ತದೆ.

 ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕು

ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕು

ಇದಲ್ಲದೆ ಜಾಹೀರಾತು ಅನುಮೋದಿಸುವ ಮೊದಲು ಕೈಗೊಳ್ಳಬೇಕಾದ ಕ್ರಮ ಮತ್ತು ತಯಾರಕರು, ಸೇವಾ ಪೂರೈಕೆದಾರರು, ಜಾಹೀರಾತುದಾರರು ಮತ್ತು ಜಾಹೀರಾತು ಏಜೆನ್ಸಿಯ ಕರ್ತವ್ಯಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಹಾಕಲಾಗಿದೆ. ಯಾವುದೇ ಅನುಮೋದನೆಯು ಉತ್ಪನ್ನ ಪ್ರತಿಪಾದನೆ ಮಾಡುವ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗಳ ನಿಜವಾದ, ಸಮಂಜಸವಾದ ಪ್ರಸ್ತುತ ಅಭಿಪ್ರಾಯವನ್ನು ಪ್ರತಿಬಿಂಬಿಸಬೇಕು ಮತ್ತು ತೋರಿಸಲಾದ ಸರಕುಗಳು, ಉತ್ಪನ್ನ ಅಥವಾ ಸೇವೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕು ಎಂದು ನಿಧಿ ಖರೆ ಹೇಳಿದರು.

 ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಚನೆ

ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಚನೆ

ಜಾಹೀರಾತುಗಳನ್ನು ಪ್ರಕಟಿಸುವ ರೀತಿಯಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮಾರ್ಗಸೂಚಿಗಳು ಗುರಿಯನ್ನು ಹೊಂದಿವೆ. ಇದರಿಂದಾಗಿ ಗ್ರಾಹಕರು ಸುಳ್ಳು ನಿರೂಪಣೆಗಳು ಮತ್ತು ಉತ್ಪ್ರೇಕ್ಷೆಗಳ ಬದಲಿಗೆ ಸತ್ಯಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಚಿಸುತ್ತದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ಸಹ ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಗ್ರಾಹಕ ಸಂರಕ್ಷಣಾ ನಿಯಂತ್ರಕರು ಯಾವುದೇ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ತಯಾರಕರು, ಜಾಹೀರಾತುದಾರರು ಮತ್ತು ಅನುಮೋದಕರಿಗೆ ₹ 10 ಲಕ್ಷದವರೆಗೆ ದಂಡವನ್ನು ವಿಧಿಸಬಹುದು. ಅದರ ನಂತರದ ಉಲ್ಲಂಘನೆಗಾಗಿ, 50 ಲಕ್ಷದವರೆಗೆ ದಂಡವನ್ನು ವಿಧಿಸಬಹುದು ಎಂದು ತಿಳಿಸಲಾಗಿದೆ.

ತಪ್ಪುದಾರಿಗೆಳೆಯುವ ಜಾಹೀರಾತನ್ನು ಅನುಮೋದಿಸುವವರನ್ನು 1 ವರ್ಷದವರೆಗೆ ಯಾವುದೇ ಜಾಹೀರಾತುಗಳಿಗೆ ಅನುಮೋದನೆಯನ್ನು ಮಾಡದಂತೆ ಪ್ರಾಧಿಕಾರವು ನಿಷೇಧಿಸಬಹುದು ಮತ್ತು ನಂತರದ ಉಲ್ಲಂಘನೆಗಾಗಿ ನಿಷೇಧವನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು ಎಂದು ನಿಧಿ ಖರೆ ಹೇಳಿದ್ದಾರೆ.

English summary
Union govt New advt rules : The Union government notified strict guidelines related to mass advertising in print, television and social media. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X