ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಘನತೆ ಉಳಿಸಿಕೊಂಡಿಲ್ಲ: ಷೇರುಪೇಟೆ ತಜ್ಞ ಕೆಜಿ ಕೃಪಾಲ್

By ಕೆ.ಜಿ.ಕೃಪಾಲ್
|
Google Oneindia Kannada News

ಒಂದು ಸಮಯ ಇತ್ತು. ಬಜೆಟ್ ಅಂದರೆ ಅದಕ್ಕಾಗಿಯೇ ಕುತೂಹಲದಿಂದ ಕಾಯಬೇಕಿತ್ತು. ಆದರೆ ಈಗ ಬಜೆಟ್ ತನ್ನ ಘನತೆಯನ್ನು ಉಳಿಸಿಕೊಂಡಿಲ್ಲ. ಏಕೆಂದರೆ ಆರ್ಥಿಕ ನೀತಿಗಳನ್ನು ಯಾವಾಗೆಂದರೆ ಆಗ ಘೋಷಣೆ ಮಾಡುತ್ತಾರೆ. ಬದಲಾವಣೆಯೇ ವಿಪರೀತ ಆಗಿದ್ದು, ಈ ಬಜೆಟ್ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ, ಹೆಸರು ಸಂಪತ್ತಯ್ಯ, ಕಿಸೆಯಲ್ಲಿ ಕಾಸಿಲ್ಲಯ್ಯ ಎನ್ನಬಹುದು.

ಉದಾಹರಣೆಗೆ ಹೇಳ್ತೀನಿ, ಪೆಟ್ರೋಲ್- ಡೀಸೆಲ್ ನ ಬೆಲೆಯಲ್ಲಿ ಎರಡು ರುಪಾಯಿ ಕಡಿಮೆ ಮಾಡಿದ್ದಾರೆ. ಆದರೆ ಒಂದು ಪರ್ಸೆಂಟ್ ಸೆಸ್ ಏರಿಕೆ ಮಾಡಿರುವುದರಿಂದ ಇದೊಂದರಲ್ಲೇನೋ ಉಳಿಯಿತು ಅಂದುಕೊಳ್ಳುವಷ್ಟರಲ್ಲಿ ಎಲ್ಲಕ್ಕೂ ಒಂದಿಷ್ಟು ಹೆಚ್ಚು ಬೆಲೆ ತೆರಲೇ ಬೇಕಾಗುತ್ತದೆ.

ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?

ಹಾಗಂತ ಈ ಬಜೆಟ್ ಏನೇನೂ ಸರಿಯಲ್ಲ ಅಂತ ಹೇಳೋಕ್ಕಾಗಲ್ಲ. ಏಕೆಂದರೆ, ಒಂದು ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರುಪಾಯಿವರೆಗೆ ವಿಮಾ ಯೋಜನೆ, ಕೃಷಿಗೆ ನೀಡಿದ ಒತ್ತು, ವೇತನದಾರರಿಗೆ ಹೆಚ್ಚಿಸಿದ ಸ್ಟ್ಯಾಂಡರ್ಡ್ ಡಿಡಿಕ್ಷನ್ ಇತರ ಅಂಶಗಳನ್ನು ಗಮನಿಸುವಾಗ ಎಲ್ಲ ವರ್ಗದವರನ್ನು ತೃಪ್ತಿ ಪಡಿಸುವ ಸಲುವಾಗಿಯೇ ಮಂಡಿಸಿದ ಬಜೆಟ್ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಹಾಕಬಾರದಿತ್ತು

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಹಾಕಬಾರದಿತ್ತು

ಷೇರು ಮಾರುಕಟ್ಟೆ ವ್ಯವಹಾರದಲ್ಲಿನ ನನ್ನ ತಿಳಿವಳಿಕೆಯ ಹಿನ್ನೆಲೆಯಿಂದ ಈ ಮಾತು ಹೇಳ್ತಿದ್ದೀನಿ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಅಂತ ಶೇ 10ರಷ್ಟು ತೆರಿಗೆಯನ್ನು ಜಾರಿಗೆ ತರಬಾರದಿತ್ತು. ಏಕೆಂದರೆ, ಸದ್ಯಕ್ಕೆ ಒಂದು ವರ್ಷದೊಳಗೆ ಮಾರಾಟ ಮಾಡಿದ ಷೇರಿನ ಲಾಭದ ಮೇಲೆ ಶೇ ಹದಿನೈದರಷ್ಟು ತೆರಿಗೆ ಇತ್ತು. ಆ ನಂತರದ ಅವಧಿಗೆ ಮಾರಾಟ ಮಾಡಿದ ಷೇರಿನ ಲಾಭಕ್ಕೆ ಯಾವುದೇ ತೆರಿಗೆ ಇರಲಿಲ್ಲ. ಈಗ ಒಂದು ವರ್ಷದ ನಂತರ ಮಾರಿ, ಪಡೆದ ಲಾಭಕ್ಕೆ ಶೇ ಹತ್ತರಷ್ಟು ತೆರಿಗೆ ಹಾಕುವುದರಿಂದ ದೀರ್ಘಕಾಲೀನ ಹೂಡಿಕೆ ಕಾರಣಕ್ಕೆ ಷೇರಿನಲ್ಲಿ ಹಣ ತೊಡಗಿಸುವವರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.

ಹಿರಿಯ ನಾಗರಿಕರಿಗೆ ಅನುಕೂಲ

ಹಿರಿಯ ನಾಗರಿಕರಿಗೆ ಅನುಕೂಲ

ಇನ್ನು ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದಿರುವುದು ಸ್ಥಿರತೆ ದೃಷ್ಟಿಯಿಂದಲೇ ಇರಬಹುದು. ಆದರೆ ಸ್ಟ್ಯಾಂಡರ್ಡ್ ಡಿಡಕ್ಷನ್ ನ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಿದ್ದಾರೆ. ಇನ್ನು ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬಹುತೇಕ ತೆರಿಗೆ ಬಜೆಟ್ ವ್ಯಾಪ್ತಿಯ ಹೊರಗಿವೆ

ಬಹುತೇಕ ತೆರಿಗೆ ಬಜೆಟ್ ವ್ಯಾಪ್ತಿಯ ಹೊರಗಿವೆ

ಈ ಹಿಂದೆ ವ್ಯಾಟ್ ಮತ್ತೊಂದು ಎಂದು ನಾನಾ ಬಗೆಯಲ್ಲಿ ತೆರಿಗೆ ಇರುತ್ತಿದ್ದವು. ಅವುಗಳನ್ನೆಲ್ಲ ಒಗ್ಗೂಡಿಸಿ ಜಿಎಸ್ ಟಿ ಅಂತ ಮಾಡಿದ್ದಾರೆ. ಜಿಎಸ್ ಟಿ ಬಂದ ಮೇಲಿನ ಮೊದಲ ಬಜೆಟ್ ಇದು. ಎಷ್ಟು ಅತ್ಯಲ್ಪ ಅವಧಿಯ ಬಜೆಟ್ ಇದು ಎಂಬುದು ಗೊತ್ತಾಗುತ್ತದೆ. ಏಕೆಂದರೆ ಬಹುತೇಕ ತೆರಿಗೆಗಳು ಈಗಾಗಲೇ ಬಜೆಟ್ ನ ವ್ಯಾಪ್ತಿಯ ಹೊರಗೆ ಇವೆ.

ಎಲ್ಲ ವರ್ಗವನ್ನೂ ತಲುಪುವ ಯತ್ನ

ಎಲ್ಲ ವರ್ಗವನ್ನೂ ತಲುಪುವ ಯತ್ನ

ಒಟ್ಟಾರೆ ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನೂ ತಲುಪುವ ಪ್ರಯತ್ನ ಮಾಡಿರುವುದಂತೂ ಸ್ಪಷ್ಟ. ಆದರೆ ಮುಂಚಿನಂತೆ ಈಗ ಬಜೆಟ್ ಗೆ ಹೆಚ್ಚಿನ ಮಹತ್ವ ಇಲ್ಲ. ಅದರಾಚೆಗೂ ಆರ್ಥಿಕ ನೀತಿ ನಿರೂಪಣೆಗಳು ಆಗುತ್ತಿವೆ. ಬದಲಾವಣೆಗಳು ತೀರಾ ವೇಗವಾಗಿ ಆಗುತ್ತಿರುವುದರಿಂದ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.

English summary
Union budget lost it's dignity. Now changes become very frequent. So, we cannot expect much from this annual exercise, share market expert KG Krupal express their opinion about union budget 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X