ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Union Budget 2021: 'ಸ್ವಾವಲಂಬಿ' ರಕ್ಷಣಾ ವಲಯದ ನಿರೀಕ್ಷೆಗಳೇನು?

|
Google Oneindia Kannada News

ನವದೆಹಲಿ, ಜನವರಿ 22: ಕೋವಿಡ್ ಸಂಕಷ್ಟ, ಅತ್ತ ಚೀನಾ ಉಪಟಳ, ವಿವಿಧ ದೇಶಗಳೊಂದಿಗಿನ ರಕ್ಷಣಾ ಒಪ್ಪಂದಗಳ ನಡುವೆ ದೇಶದ ಭದ್ರತೆಗೆ ಈ ಬಾರಿಯ ಬಜೆಟ್‌ನಲ್ಲಿ ಯಾವ ಹೆಜ್ಜೆಗಳನ್ನು ಇರಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ.

2014ರಲ್ಲಿ ಮೊದಲ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯ ಭದ್ರತೆ ತನ್ನ ಅತ್ಯಂತ ಆದ್ಯತೆಯ ಕಾರ್ಯಸೂಚಿ ಎಂದಿದ್ದರು. ಅದರ ಬಳಿಕ ರಕ್ಷಣಾ ಕ್ಷೇತ್ರದ ವೆಚ್ಚದಲ್ಲಿ ಸಾಕಷ್ಟು ಏರಿಕೆಯಾಗಿದೆ. ಸೇನೆಗೆ ಹೊಸ ಉಪಕರಣಗಳ ಖರೀದಿ, ಆಧುನೀಕರಣ, ಸೇನಾ ಕ್ಷಿಪಣಿಗಳ ಪ್ರಯೋಗದಂತಹ ಚಟುವಟಿಕೆಗಳನ್ನು ಹೆಚ್ಚಿಸಲಾಗಿದೆ. ಆದರೆ ಈಗಿನ ಸನ್ನಿವೇಶದಲ್ಲಿ ಸಶಸ್ತ್ರ ಪಡೆಗಳ ತುರ್ತು ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ 2021-22ನೇ ಹಣಕಾಸು ವರ್ಷದ ಆಯವ್ಯಯದಲ್ಲಿ ರಕ್ಷಣಾ ವೆಚ್ಚವನ್ನು ಮತ್ತಷ್ಟು ಏರಿಸುವ ನಿರೀಕ್ಷೆಯಿದೆ.

 ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ? ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?

ಭಾರತಕ್ಕೆ ಒಂದೆಡೆ ಪಾಕಿಸ್ತಾನದಿಂದ ಗಡಿ ನಿಯಂತ್ರಣ ರೇಖೆಯಲ್ಲಿನ (ಎಲ್‌ಒಸಿ) ಕೀಟಲೆ ಮುಂದುವರಿದಿದ್ದರೆ, ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಡಿ) ಚೀನಾ ಮತ್ತಷ್ಟು ಬೆದರಿಕೆ ಒಡ್ಡುತ್ತಿದೆ. ದೇಶದ ಭದ್ರತೆ ದೃಷ್ಟಿಯಿಂದ ಇವುಗಳನ್ನು ಎದುರಿಸಲು ಭಾರತ ಸೂಕ್ತ ಸೇನಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿ ಸತತ ಎರಡನೆಯ ವರ್ಷ ರಕ್ಷಣಾ ಆಯವ್ಯಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮುಂದೆ ಓದಿ.

ರಕ್ಷಣಾ ವಲಯ ಸ್ವಾವಲಂಬಿ

ರಕ್ಷಣಾ ವಲಯ ಸ್ವಾವಲಂಬಿ

ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಒಲವು ವ್ಯಕ್ತಪಡಿಸುತ್ತಿದೆ. ರಕ್ಷಣಾ ಕ್ಷೇತ್ರ ಕೂಡ ಇದರಿಂದ ಹೊರತಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ಸಶಸ್ತ್ರ ಪಡೆಗಳಿಗೆ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳನ್ನು ಒದಗಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ ಎಂದು ಹೇಳಲಾಗಿದೆ.

ವಿದೇಶಿ ಬಂಡವಾಳ ಹೆಚ್ಚಳ

ವಿದೇಶಿ ಬಂಡವಾಳ ಹೆಚ್ಚಳ

ಕಳೆದ ವರ್ಷ ಕೇಂದ್ರ ಸರ್ಕಾರವು ರಕ್ಷಣಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಸಶಸ್ತ್ರ ಸಜ್ಜಿತ ವಾಹನಗಳು, ಪ್ರಬಲ ರೈಫಲ್‌ಗಳು, ಕ್ಷಿಪಣಿಗಳು ಸೇರಿದಂತೆ ಸುಮಾರು 101 ರಕ್ಷಣಾ ಸಾಮಗ್ರಿಗಳ ಆಮದು ತಡೆಗಟ್ಟುವುದನ್ನು ಪ್ರಕಟಿಸಿತ್ತು. ಅದು ರಕ್ಷಣಾ ವಲಯದಲ್ಲಿನ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಿತ್ತು.

ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

ಸ್ವಾವಕಂಬಿಯಾಗುವುದು ಅಗತ್ಯ

ಸ್ವಾವಕಂಬಿಯಾಗುವುದು ಅಗತ್ಯ

'ಇಂದು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು ಕಾರ್ಯತಂತ್ರದ ಅಗತ್ಯವೂ ಆಗಿದೆ. ಸಂಪೂರ್ಣ ಸಂಘರ್ಷ ಸನ್ನಿವೇಶದಲ್ಲಿ ಸುದೀರ್ಘಾವಧಿ ಸ್ವದೇಶಿ ಸಾಮರ್ಥ್ಯವನ್ನು ನಿರ್ಮಿಸಲು ಹೂಡಿಕೆ ಮಾಡುವುದು ನಮಗೆ ಬಹಳ ಮುಖ್ಯವಾಗಿದೆ' ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನ ನಮ್ಮದಾಗಬೇಕು

ಆಧುನಿಕ ತಂತ್ರಜ್ಞಾನ ನಮ್ಮದಾಗಬೇಕು

'ಕೃತಕ ಬುದ್ದಿಮತ್ತೆ, ಸ್ವಾಯತ್ತ ಮಾನವರಹಿತ ವ್ಯವಸ್ಥೆ, ದೀರ್ಘ ವ್ಯಾಪ್ತಿ ನಿಖರ ತಂತ್ರಜ್ಞಾನ, ಡ್ರೋನ್‌ಗಳು ಸೇರಿದಂತೆ ಅನೇಕ ಆಧುನಿಕ ಮತ್ತು ಅಗತ್ಯ ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳಬೇಕಾದ ಅಗತ್ಯವಿದೆ. ಇವು ನಮ್ಮ ನಿರಂತರ ಪ್ರಕ್ರಿಯೆ ಹಾಗೂ ಉದ್ದೇಶಗಳಲ್ಲಿ ಭಾಗವಾಗಿರುತ್ತವೆ' ಎಂದು ತಿಳಿಸಿದ್ದಾರೆ.

ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ

ಶೇ 6ರಷ್ಟು ಬಜೆಟ್ ಏರಿಕೆ

ಶೇ 6ರಷ್ಟು ಬಜೆಟ್ ಏರಿಕೆ

2020ರ ಬಜೆಟ್‌ನಲ್ಲಿ ರಕ್ಷಣಾ ಆಯವ್ಯಯವನ್ನು ಕೇಂದ್ರ ಸರ್ಕಾರ 3.18 ಲಕ್ಷ ಕೋಟಿಯಿಂದ 3.37 ಲಕ್ಷ ಕೋಟಿಗೆ ಶೇ ಆರರಷ್ಟು ಹೆಚ್ಚಿಸಿತ್ತು. ಇದರಿಂದ ಒಟ್ಟಾರೆ ರಕ್ಷಣಾ ವಲಯದ ಆಯವ್ಯಯದ ಮೊತ್ತವು 4.7 ಲಕ್ಷ ಕೋಟಿಗೆ ಏರಿಕೆಯಾಗಿತ್ತು.

ಆಧುನೀಕರಣಕ್ಕೆ 1,10,734 ಕೋಟಿ ರೂ

ಆಧುನೀಕರಣಕ್ಕೆ 1,10,734 ಕೋಟಿ ರೂ

ರಕ್ಷಣಾ ಆಯವ್ಯಯದ ಹೆಚ್ಚಳದ ಜತೆಗೆ ಸಶಸ್ತ್ರಪಡೆಗಳ ಆಧುನೀಕರಣಕ್ಕಾಗಿ ಮತ್ತು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆ ಖರೀದಿಗೆ 1,10,734 ಕೋಟಿ ರೂ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. 2019ರಲ್ಲಿ ಒದಗಿಸಿದ್ದಕ್ಕಿಂತಲೂ ಇದು 10,340 ಕೋಟಿ ಅಧಿಕವಾಗಿತ್ತು.

English summary
Union Budget 2021: Centre to hike Defence Budget once again for the financial year 2021-22
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X