ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ

|
Google Oneindia Kannada News

ನವದೆಹಲಿ, ಜೂನ್ 06: ಮೋದಿ 2.0 ಸರ್ಕಾರದ ಚೊಚ್ಚಲ ಬಜೆಟ್ ಪ್ರತಿ ತಯಾರಿ ಕಾರ್ಯಕ್ಕೆ ನಾಥ್ ಬ್ಲಾಕ್ ನಲ್ಲಿ ಚಾಲನೆ ಸಿಕ್ಕಿದೆ. ವಿತ್ತ ಸಚಿವಾಲಯದ ಪ್ರಮುಖರು ಬಜೆಟ್ ಮಂಡನೆ ತನಕ ಇದೆ ಬ್ಲಾಕಿನಲ್ಲಿ ನೆಲೆಸಲಿದ್ದು, ಹೊರ ಸಂಪರ್ಕದಿಂದ ದೂರವುಳಿಯಲಿದ್ದಾರೆ.

17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17ರಿಂದ ಜುಲೈ 26ರ ತನಕ ನಿಗದಿಯಾಗಿದೆ. ಜುಲೈ 05ರಂದು ಚೊಚ್ಚಲ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಯಾರು ಯಾರು ಇದ್ದಾರೆ ಎಂಬ ವಿವರ ಇಲ್ಲಿದೆ...

ಸರ್ಕಾರಿ ನೌಕರರ ನಿರೀಕ್ಷೆ ಹುಸಿಗೊಳಿಸಿದ ನರೇಂದ್ರ ಮೋದಿ ಸರ್ಕಾರ ಸರ್ಕಾರಿ ನೌಕರರ ನಿರೀಕ್ಷೆ ಹುಸಿಗೊಳಿಸಿದ ನರೇಂದ್ರ ಮೋದಿ ಸರ್ಕಾರ

2019-20ನೇ ಸಾಲಿನ ಆಯವ್ಯಯ ಪತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಮಧ್ಯಂತರ ಬಜೆಟ್ ನಲ್ಲಿ ಸೂಚಿತ ಅನುದಾನಗಳನ್ನು ಮುಂದುವರೆಸುವ ಸಾಧ್ಯತೆಯಿದೆ. ಮಾಧ್ಯಮದವರು, ಅತಿಥಿಗಳಿಗೆ ಸದ್ಯ ನಾರ್ಥ್ ಬ್ಲಾಕ್ ಬಂದ್ ಆಗಿದೆ.

ಮೋದಿ ಸರಕಾರದಿಂದ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್ ಮೋದಿ ಸರಕಾರದಿಂದ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್

ಲೋಕಸಭೆ ಚುನಾವಣೆ 2019ಕ್ಕೂ ಮುನ್ನ ಫೆಬ್ರವರಿ 01ರಂದು ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಪೂರ್ಣಾವಧಿ ಬಜೆಟ್ ಮಂಡನೆಯಾಗಲಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕುರಿತಂತೆ ಅಗತ್ಯ ಕ್ರಮಗಳನ್ನು ಕೂಡಾ ಸೂಚಿಸುವ ನಿರೀಕ್ಷೆಯಿದೆ.

ವಿವಿಧ ಸಚಿವಾಲಯಗಳ ಜೊತೆ ವಿತ್ತ ಸಚಿವರ ಟೀಂ ಚರ್ಚೆ

ವಿವಿಧ ಸಚಿವಾಲಯಗಳ ಜೊತೆ ವಿತ್ತ ಸಚಿವರ ಟೀಂ ಚರ್ಚೆ

ಮುಂಗಡ ಪತ್ರ, ಸಾಮಾನ್ಯ ಆರ್ಥಿಕ ಸಮೀಕ್ಷೆ ಹಾಗೂ ನೀತಿಗಳ ಕುರಿತ ಹೇಳಿಕೆ, ತೆರಿಗೆ ಪ್ರಸ್ತಾವನೆ, ಆಯ-ವ್ಯಯ ತಯಾರಿಸಲು ವಿತ್ತ ಸಚಿವೆ ನಿರ್ಮಲಾ ಜತೆಗೆ ಉನ್ನತ ಅಧಿಕಾರಿಗಳಿರುತ್ತಾರೆ. ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಉನ್ನತಾಧಿಕಾರಿಗಳು ಸಮಾಲೋಚನಾ ಪ್ರಕ್ರಿಯೆ ಮೂಲಕ ಮುಂಗಡಪತ್ರವನ್ನು ಸಿದ್ಧಪಡಿಸಲಾಗುತ್ತದೆ.

ಖರ್ಚು ವೆಚ್ಚವನ್ನಾಧರಿಸಿ ಮಾರ್ಗಸೂಚಿಯನ್ನು ಪ್ರಕಟಿಸಿ, ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಮುಂದಿರಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಂಗಡಪತ್ರ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.

ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ 2 ಸಮಿತಿಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ 2 ಸಮಿತಿ

ಮೋದಿ 2.0 ಬಜೆಟ್ ಮಂಡನೆ ತಂಡ

ಮೋದಿ 2.0 ಬಜೆಟ್ ಮಂಡನೆ ತಂಡ

* ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್
* ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್
* ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್.

ಇವರ ಜೊತೆಗೆ ವಿತ್ತ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಖರ್ಚು ವೆಚ್ಚ ಕಾರ್ಯದರ್ಶಿ ಗಿರೀಶ್ ಚಂದ್ರ ಮುರ್ಮು, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಡಿಐಪಿಎಎಂ ಕಾರ್ಯದರ್ಶಿ ಅತನು ಚಕ್ರವರ್ತಿ ಹಾಗೂ ವಿತ್ತ ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಿಬಿಟಿಡಿ, ಸಿಬಿಇಸಿ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆಯ 34 ಅಧಿಕಾರಿಗಳು ಸೇರಿ ಒಟ್ಟು ನೂರಕ್ಕೂ ಸಿಬ್ಬಂದಿಗಳು ಬಜೆಟ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಜೆಟ್ ಪ್ರತಿ ಹೊರ ಬರುವ ತನಕ ರಹಸ್ಯವಾಗಿ ತಯಾರಿ

ಬಜೆಟ್ ಪ್ರತಿ ಹೊರ ಬರುವ ತನಕ ರಹಸ್ಯವಾಗಿ ತಯಾರಿ

ಬಜೆಟ್ ತಯಾರಿ ಆರಂಭವಾಗಿ, ಕೇಂದ್ರ ಸಚಿವರು ಸದನದಲ್ಲಿ ಆಯವ್ಯಯ ಮಂಡಿಸುವವರೆಗೂ ಬಜೆಟ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳು ಸಂಸತ್ ಭವನದಿಂದ ತಮ್ಮ ಮನೆಗೆ ತೆರಳುವಂತಿಲ್ಲ. ಯಾರೊಂದಿಗೂ ಫೋನ್ ಕರೆ ಅಥವಾ ಯಾವುದೇ ರೀತಿಯಲ್ಲಿ ಸಂಪರ್ಕಿಸುವಂತಿಲ್ಲ.

ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಬೇಸರ ಆಗದಿರಲಿ ಎಂದು ಈ ಹಲ್ವಾ ಸಂಪ್ರದಾಯ ಚಾಲ್ತಿಯಲ್ಲಿದೆ. ಬಜೆಟ್​ನ ವಿಷಯಗಳನ್ನು ಆಯ್ದ ಅಧಿಕಾರಿಗಳು, ಬೆರಳಚ್ಚುಗಾರರು ಸೇರಿ ಸಿದ್ಧಪಡಿಸುತ್ತಾರೆ. ಇವರು ಕೆಲಸ ಮಾಡುವ ಕಂಪ್ಯೂಟರ್​ಗಳು ಇತರೆ ಯಾವ ಜಾಲಗಳೊಂದಿಗೂ ಸಂಪರ್ಕ ಹೊಂದಿರುವುದಿಲ್ಲ. ಗುಪ್ತಚರ ಇಲಾಖೆ ಹಾಗೂ ದೆಹಲಿ ಪೊಲೀಸರ ಬಿಗಿ ಬಂದೋಬಸ್ತ್, ಕಣ್ಗಾವಲಿನಲ್ಲಿ ಬಜೆಟ್ ತಯಾರಿ ನಡೆಯುತ್ತದೆ.

ಬಜೆಟ್ ಮಂಡನೆ ತನಕವೂ ನಾರ್ತ್ ಬ್ಲಾಕ್ ಬಂದ್

ಬಜೆಟ್ ಮಂಡನೆ ತನಕವೂ ನಾರ್ತ್ ಬ್ಲಾಕ್ ಬಂದ್

ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಎಲ್ಲ ಅಧಿಕಾರಿಗಳು, ತಂತ್ರಜ್ಞರು, ಕಾನೂನು ಸಚಿವಾಲಯದ ಕಾನೂನು ತಜ್ಞರು ಮತ್ತು ಇತರೆ ಸಹಾಯಕ ಸಿಬ್ಬಂದಿಯ ಚಲನವಲನ ಹಣಕಾಸು ಸಚಿವಾಲಯವಿರುವ ಸಂಸತ್ತಿನ ನಾರ್ತ್​ಬ್ಲಾಕ್​ಗಷ್ಟೇ ಸೀಮಿತವಾಗಿರುತ್ತದೆ. ಈ ಅವಧಿಯಲ್ಲಿ ಅವರು ನಾರ್ತ್​ಬ್ಲಾಕ್ ಬಿಟ್ಟು ಬೇರೆಲ್ಲೂ ತೆರಳುವಂತಿಲ್ಲ. ಕಂಪ್ಯೂಟರ್ ಗಳಿಂದ ಹೊರ ಹೋಗುವ ಒಳ ಬರುವ ಪ್ರತಿ ಇಮೇಲ್ ಇನ್ನಿತರ ಸಂದೇಶ ಟ್ರ್ಯಾಕ್ ಆಗುತ್ತದೆ. ಫೋನ್ ಕರೆ ಬಂದ್ ಆಗಿರುತ್ತದೆ, ನಾರ್ತ್ ಬ್ಲಾಕಿನಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗುತ್ತದೆ. ಬಜೆಟ್ ಪ್ರತಿ ಮುದ್ರಣವಾಗಿ ಬಂದು ಹಣಕಾಸು ಸಚಿವರು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಬಳಿಕವಷ್ಟೆ ಈ ಎಲ್ಲ ಸಿಬ್ಬಂದಿ ನಾರ್ತ್​ಬ್ಲಾಕ್​ನಿಂದ ತೆರಳಬಹುದು.

ಹೊಸ ಆರ್ಥಿಕ ವರ್ಷಾರಂಭ, ಯಾವ್ದು ಏರಿಕೆ? ಯಾವ್ದು ಇಳಿಕೆ? ಹೊಸ ಆರ್ಥಿಕ ವರ್ಷಾರಂಭ, ಯಾವ್ದು ಏರಿಕೆ? ಯಾವ್ದು ಇಳಿಕೆ?

English summary
As Modi 2.0 government gets down to prepare its first Budget, North Block, which houses the Finance Ministry here, will be in 'quarantine' from Monday until the presentation of the Budget on 5 July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X