ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಕೊರೊನಾ ಲಾಕ್‌ಡೌನ್ ಕಳೆಯಲು ಸಹಾಯ ಮಾಡಿದ ಚಾಲೆಂಜ್‌ಗಳಿವು

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ದಿನವನ್ನು ಹೇಗೆ ತಳ್ಳಬೇಕಪ್ಪ ಎಂದುಕೊಂಡಿದ್ದ ಕೆಲವು ಮಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಚಾಲೆಂಜ್‌ಗಳು ಸಹಕಾರಿಯಾದವು.

ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಚಾಲೆಂಜ್, ಡಾಲ್ಗೊನಾ ಕಾಫಿ ಚಾಲೆಂಜ್, ಸೀರೆಯ ಚಾಲೆಂಜ್, ಕ್ವಾರಂಟೈನ್ ಪಿಲ್ಲೋ ಚಾಲೆಂಜ್, ಮಿ ಅಟ್ 20 ಚಾಲೆಂಜ್, ದಿ ಗೆಸ್ಚರ್ ಚಾಲೆಂಜ್, ಕ್ವಾರಂಟೈನ್ ಡ್ಯಾನ್ಸ್ ಚಾಲೆಂಜ್, ಟಾಯ್ಲೆಟ್ ಪೇಪರ್ ಚಾಲೆಂಜ್, ಪಾಸ್‌ಮಿ ದ ಬ್ರಷ್ ಚಾಲೆಂಜ್ ಹೀಗೆ ಹತ್ತು ಹಲವಾರು ಸವಾಲುಗಳಿದ್ದವು.

 2020: ಪೇಟಿಎಂ ಮಾತೃಸಂಸ್ಥೆ One 97 ಕಮ್ಯುನಿಕೇಷನ್ಸ್‌ಗೆ ಸತತ ಏಳನೇ ವರ್ಷ ನಷ್ಟ 2020: ಪೇಟಿಎಂ ಮಾತೃಸಂಸ್ಥೆ One 97 ಕಮ್ಯುನಿಕೇಷನ್ಸ್‌ಗೆ ಸತತ ಏಳನೇ ವರ್ಷ ನಷ್ಟ

ಇಂತಹ ಸವಾಲುಗಳಲ್ಲಿ ಜನರು ಬ್ಯುಸಿಯಾಗಿದ್ದರಿಂದ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಖಿನ್ನತೆಗೆ ಒಳಗಾಗುವುದು ತಪ್ಪಿದಂತಾಗಿದೆ.

Unforgettable 2020: Social Media Challenges That Helped Netizens Beat Lockdown

ಅದರಲ್ಲಿ ಕೈತೊಳೆಯುವ ಚಾಲೆಂಜ್ ಕೂಡ ಒಂದು, ಸೇಫ್ ಹ್ಯಾಂಡ್ ಚಾಲೆಂಜ್‌ನ್ನು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಬಾಲಿವುಡ್ ಸೆಬ್ರಿಟಿಗಳನ್ನು ಕೂಡ ಅಕ್ಸೆಪ್ಟ್ ಮಾಡಿದ್ದರು.
ಕೊರೊನಾ ಸೋಂಕು ಹರಡದಂತೆ ಸ್ವಲ್ಪ ಮಟ್ಟಿಗೆ ತಡೆಯಲು ಈ ಕೈತೊಳೆಯುವುದು ಸಹಾಯ ಮಾಡಲಿದೆ. ಕೈಕಾಲುಗಳನ್ನು ಸೋಪು,ಹ್ಯಾಂಡ್‌ವಾಶ್‌ನಿಂದ ಕೈತೊಳೆದುಕೊಳ್ಳಬೇಕು. ಬಾಯಿಯನ್ನು ಕೈನಿಂದ ಪದೇ ಪದೇ ಮುಟ್ಟಿಕೊಳ್ಳಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಸೋಂಕಿನ ಲಕ್ಷಣ ಕಂದುಬಂದವರಿಂದ ದೂರವಿರಬೇಕು.

ವಿಡಿಯೋ: ಕೊವಿಡ್19 ಬಗ್ಗೆ ಅರಿವು; ಕೈ ತೊಳೆಯುವುದು ಹೇಗೆ? ವಿಡಿಯೋ: ಕೊವಿಡ್19 ಬಗ್ಗೆ ಅರಿವು; ಕೈ ತೊಳೆಯುವುದು ಹೇಗೆ?

ವೈರಸ್ ಹರಡದಂತೆ ತಡೆಯಲು ಕೈತೊಳೆಯುವುದು ಕೂಡ ಒಂದು ವಿಧಾನವಾಗಿದೆ. ವೈರಸ್‌ನಿಂದ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಕೈತೊಳೆಯುವುದು ಪ್ರಮುಖ ವಿಚಾರವಾಗಿದೆ. ಹೀಗಾಗಿ ಸಾಕಷ್ಟು ಮಂದಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಸೇಫ್ ಹ್ಯಾಂಡ್ ಸವಾಲನ್ನು ಸ್ವೀಕರಿಸಿದ್ದರು.

ಹಾಗೆಯೇ ಕ್ವಾರಂಟೈನ್ ಟ್ರಾವೆಲ್ ಚಾಲೆಂಜ್ ಕೂಡ ಹೆಚ್ಚು ಮಂದಿ ಸ್ವೀಕರಿಸಿದ್ದರು. ಕೊರೊನಾ ಲಾಕ್‌ಡೌನ್‌ಗೂ ಮೊದಲು ನೀವು ಸುತ್ತಿ ಬಂದಿದ್ದ ಯಾವುದೇ ಎರಡು ಚಿತ್ರಗಳನ್ನು ತೆಗೆದುಕೊಂಡು, ಮನೆಯಲ್ಲಿಯೇ ಆ ಸ್ಥಳದ ಮಾದರಿಯನ್ನು ನಿರ್ಮಾಣ ಮಾಡುವ ಚಾಲೆಂಜ್ ಇದಾಗಿತ್ತು. ಸಾಕಷ್ಟು ಮಂದಿ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ಗಳಲ್ಲಿ ಈ ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದರು.

English summary
From the Dalgona coffee challenge to the quarantine travel challenge, netizens found enough excuses to stay busy on social media and shake off boredom during the pandemic-induced lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X