ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

unfogettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!

|
Google Oneindia Kannada News

ಜಗತ್ತಿನಲ್ಲಿ ಅಳಿದು ಹೋಗಲು ಸಾವಿರ, ಸಾವಿರ ಸಂಗತಿಗಳಿವೆ. ಆದರೆ ವಿಜ್ಞಾನಕ್ಕೆ ಅಳಿವು ಇಲ್ಲ. ತಿಳಿದಷ್ಟೂ ಕುತೂಹಲ, ಅರಿತಷ್ಟು ಆಳ ವೈಜ್ಞಾನಿಕ ಲೋಕವನ್ನು ಆವರಿಸಿಬಿಟ್ಟಿದೆ. ಅದರಲ್ಲೂ ಬಾಹ್ಯಾಕಾಶ ವಿಜ್ಞಾನಕ್ಕೆ ಅಳಿವು ಬರಲು ಸಾಧ್ಯವೇ ಇಲ್ಲ. ಅಷ್ಟಕ್ಕೂ 2020ರಲ್ಲಿ ವೈಜ್ಞಾನಿಕ ಲೋಕ ಇಂತಹದ್ದೇ ಹಲವು ಸಾಧನೆಗಳನ್ನ ಮಾಡಿದೆ. ಒಂದು ಕಡೆ ಕೊರೊನಾ ಕಂಟಕ ಬಾಧಿಸುತ್ತಿದ್ದರೂ ವಿಜ್ಞಾನಿಗಳು ಮಾತ್ರ ಇದಕ್ಕೆಲ್ಲಾ ಎದೆಗುಂದದೆ ಮಾನವನ ಏಳಿಗೆಗೆ ಹಗಲು-ರಾತ್ರಿ ದುಡಿದ್ದಾರೆ. ದುಡಿದಿದ್ದು ಮಾತ್ರವಲ್ಲ, ಸಾವಿರಾರು ಸಂಶೋಧನೆ ನಡೆಸಿ ಅದರಲ್ಲಿ ಸಕ್ಸಸ್ ಆಗಿದ್ದಾರೆ.

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

2020ರ ವಿಶೇಷತೆ ಎಂದರೆ ನಾಸಾ ರೀತಿ ದೈತ್ಯ ಸಂಸ್ಥೆಗಳಿಂದ ಹಿಡಿದು, ಸಣ್ಣಪುಟ್ಟ ಬಾಹ್ಯಾಕಾಶ ಸಂಸ್ಥೆಗಳು ಕೂಡ ಈ ವರ್ಷ ಸದ್ದು ಮಾಡಿವೆ. ಅದರಲ್ಲೂ ಜಪಾನ್ ಮಾಡಿದ ಸಾಧನೆ ಎಲ್ಲರ ಹುಬ್ಬೇರಿಸಿತ್ತು. ಮಾನವನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಪಾನ್ ಕ್ಷುದ್ರ ಗ್ರಹದ ನೆಲಬಗೆದು ಭೂ ಗ್ರಹಕ್ಕೆ ತಂದಿದೆ. ಈ ನಡುವೆ ಚೀನಾ ಕೂಡ ನಾಸಾ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಪೈಪೋಟಿ ನಡೆಸುತ್ತಿದೆ.

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!

ಕೂತು ತಿಂದರೂ ಕರಗದಷ್ಟು ಸಂಪತ್ತು..!

ಕೂತು ತಿಂದರೂ ಕರಗದಷ್ಟು ಸಂಪತ್ತು..!

ಕ್ಷುದ್ರ ಗ್ರಹಗಳ ಮೇಲೆ ಮೈನಿಂಗ್ ಮಾಡಬೇಕು, ಅಲ್ಲಿ ಅಡಗಿರುವ ಲಕ್ಷಾಂತರ ಕೋಟಿ ಸಂಪತ್ತನ್ನು ಭೂಮಿಗೆ ತರಬೇಕು ಎಂಬುದು ಮಾನವನ ಹತ್ತಾರು ವರ್ಷಗಳ ಕನಸು. ಆದರೆ ಇದು ಈಡೇರುತ್ತಿಲ್ಲ ಎಂಬ ಬೇಸರವೂ ವಿಜ್ಞಾನಿಗಳನ್ನ ಕಾಡುತ್ತಿತ್ತು. ಅದರಲ್ಲೂ ಕ್ಷುದ್ರ ಗ್ರಹಗಳ ಗಣಿಗಾರಿಕೆ ಸದ್ಯಕ್ಕೆ ಸಾಧ್ಯವಿಲ್ಲ ಎಂಬ ನಿಲುವು ಕೂಡ ಗಟ್ಟಿಯಾಗುತ್ತಿತ್ತು. ಆದರೆ 2020ರಲ್ಲಿ ಅದೆಲ್ಲವೂ ಸುಳ್ಳಾಗಿತ್ತು. ಬಾಹ್ಯಾಕಾಶದಲ್ಲಿ ಹಾಗೇ ಸುಮ್ಮನೆ ಝೂಮ್ ಹಾಕಿ ನೋಡುವಾಗ ಟೆಲಿಸ್ಕೋಪ್ ಕಣ್ಣಿಗೆ ಹೊಳೆಯುವ ಕ್ಷುದ್ರ ಗ್ರಹವೊಂದು ಬಿದ್ದಿತ್ತು. ಇದನ್ನು ಬೆನ್ನತ್ತಿದಾಗ ವಿಜ್ಞಾನಿಗಳಿಗೆ ಶಾಕ್ ಆಗಿತ್ತು.

ಏಕೆಂದರೆ ವಿಜ್ಞಾನಿಗಳು ಹಿಂದೆಂದೂ ಕಂಡಿರದ ಅಚ್ಚರಿಯೇ ಕಾದಿತ್ತು. ಅಪಾರ ಪ್ರಮಾಣದ ಸಂಪತ್ತು ಅಂದರೆ, ಸುಮಾರು 10 ಸಾವಿರ ಕ್ವಾಡ್ರಿಲಿಯನ್ ಡಾಲರ್. ಸಾಮಾನ್ಯ ಭಾಷೆಯಲ್ಲಿ ಈ ಸಂಪತ್ತನ್ನು ವಿವರಿಸುವುದಾದರೆ, ಜಗತ್ತಿನ ಪ್ರತಿಯೊಂದು ರಾಷ್ಟ್ರದ ಪ್ರತಿ ಪ್ರಜೆ ಕೂಡ ಸಾವಿರಾರು ವರ್ಷಗಳ ಕಾಲ ಕೂತು ತಿಂದರೂ ಕರಗದಷ್ಟು ಆಸ್ತಿ ಅದೊಂದೇ ಕ್ಷುದ್ರ ಗ್ರಹದಲ್ಲಿ ಪತ್ತೆಯಾಗಿತ್ತು.

ಕಣ್ಣಿಗೆ ಬಿದ್ದಿದ್ದು ಐರನ್, ನಿಕ್ಕಲ್ ಅಷ್ಟೇ..!

ಕಣ್ಣಿಗೆ ಬಿದ್ದಿದ್ದು ಐರನ್, ನಿಕ್ಕಲ್ ಅಷ್ಟೇ..!

ಅರೆ ಇದೇನಪ್ಪಾ, ಅಷ್ಟು ಬೆಲೆಬಾಳುವ ಸಂಪತ್ತು ಅದೊಂದು ಬಂಡೆಯಲ್ಲಿದೆ ಎಂದು ನೀವು ಪ್ರಶ್ನಿಸಬಹುದು. ಹೌದು, ನಿಮ್ಮ ಊಹೆಗೂ ಮೀರಿ ಆ ಕ್ಷುದ್ರ ಗ್ರಹ ಬೆಲೆಬಾಳುತ್ತದೆ. '16 Psyche' $10,000 quadrillion ($10,000,000,000,000,000,000)ಎಂದು ಕರೆಯಲಾಗುವ ಈ ಕ್ಷುದ್ರ ಗ್ರಹ ಸೂರ್ಯನ ಸುತ್ತಾ ಸುತ್ತುತ್ತಿದ್ದು, ಸುಮಾರು 1800 ಭೂ ದಿನಗಳಿಗೆ ಒಮ್ಮೆ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತಿದೆ. ಕೇವಲ 113 ಕಿಲೋಮೀಟರ್ ಸುತ್ತಳತೆ ಇರುವ ಈ ಕ್ಷುದ್ರ ಗ್ರಹ ಯಾರ ಪಾಲಿಗೇ ಸಿಗಲಿ, ಆ ದೇಶ ಇಡೀ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗುತ್ತದೆ. ಅದು ಈ ಭೂಮಿ ಬದುಕಿರುವವರೆಗೂ. ಕೇವಲ ಕಬ್ಬಿಣ ಹಾಗೂ ನಿಕ್ಕಲ್ ಲೋಹಗಳನ್ನು ಹೊಂದಿರುವ ಈ ಕ್ಷುದ್ರ ಗ್ರಹವೇ ಇಷ್ಟು ಬೆಲಬಾಳುವಾಗ, ಅಪಾರ ಪ್ರಮಾಣದ ಚಿನ್ನವನ್ನೂ ಹೊಂದಿರುವ ಕ್ಷುದ್ರ ಗ್ರಹಗಳು ನಮ್ಮ ಸೌರಮಂಡಲದಲ್ಲೇ ಇವೆ. ಹಾಗಾದರೆ ಇವು ಅದೆಷ್ಟು ಬೆಲೆ ಬಾಳಬಹುದು ಎಂಬುದನ್ನ ನೀವೇ ಊಹಿಸಿ.

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

ಮತ್ತೊಂದು ಗುರುಗ್ರಹ ಪತ್ತೆ..!

ಮತ್ತೊಂದು ಗುರುಗ್ರಹ ಪತ್ತೆ..!

ನಮ್ಮದು ಸೌರಮಂಡಲ, ಸೂರ್ಯನ ಕುಟುಂಬದಲ್ಲಿ ವಾಸಿಸುತ್ತಿರುವ ಗುರುಗ್ರಹಕ್ಕೆ ಸೂರ್ಯನಷ್ಟೇ ಮಹತ್ವ ಇದೆ. ಗುರು ಗ್ರಹದಷ್ಟು ದೈತ್ಯವಾದ ಗ್ರಹ ಸೌರಮಂಡಲ ಕಂಡಿಲ್ಲ. ಸೂರ್ಯನಿಗೂ ಸೆಡ್ಡು ಹೊಡೆಯುವಷ್ಟು ಪ್ರಬಲ ಗ್ರಹವೆಂದರೆ ಅದು ಗುರು ಮಾತ್ರ. ಆದರೆ ಒಬ್ಬನೇ ಗುರು ಈ ವಿಶ್ವದಲ್ಲಿಲ್ಲ. ಇಂತಹ ಹಲವು ಗುರು ಗ್ರಹಗಳು ವಿಶ್ವದಲ್ಲಿ ಹರಡಿವೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ನಮಗೆ ಸಮೀಪದ ಗ್ಯಾಲಕ್ಸಿಯಲ್ಲೇ ವಿಜ್ಞಾನಿಗಳು ಗುರು ಗ್ರಹವನ್ನೇ ಹೋಲುವ ಮತ್ತೊಂದು ಗ್ರಹವನ್ನು ಪತ್ತೆ ಮಾಡಿದ್ದಾರೆ. ಈ ಗ್ರಹ ಶ್ವೇತ ಕುಬ್ಜ ಎಂದರೆ, ಬಿಳಿ ನಕ್ಷದ ಸುತ್ತ ಸುತ್ತುತ್ತಿದೆ. ಇದೇ ಶ್ವೇತ ಕುಬ್ಜಗಳು ಮುಂದೆ ಬ್ಲ್ಯಾಕ್ ಹೋಲ್ ಅಥವಾ ಕಪ್ಪುಕುಳಿ ಆಗುತ್ತವೆ.

ಜಗತ್ತಿನಲ್ಲಿ ನಾವು ತಬ್ಬಲಿಗಳಲ್ಲ..!

ಜಗತ್ತಿನಲ್ಲಿ ನಾವು ತಬ್ಬಲಿಗಳಲ್ಲ..!

ಅರೆ ಇಷ್ಟುದಿನ ಏಲಿಯನ್ಸ್ ಬಗ್ಗೆ ಮಾತನಾಡುತ್ತಿದ್ದ ಮನುಷ್ಯ ಅದನ್ನ ಮರೆತುಬಿಟ್ನಾ ಎಂದು ಯೋಚಿಸಬೇಡಿ. ಏಕೆಂದರೆ ಈಗಲೂ ಅನ್ಯಗ್ರಹ ಜೀವಿಗಳ ಸಂಶೋಧನೆ ಹಾಗೂ ಭೂಮಿ ರೀತಿಯ ಗ್ರಹಗಳ ಹುಡುಕಾಟದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. 2020ರಲ್ಲೂ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ. ನಮ್ಮ ಗ್ಯಾಲಕ್ಸಿ, ಎಂದರೆ 'ಮಿಲ್ಕಿ ವೇ' ನಕ್ಷತ್ರ ಪುಂಜದಲ್ಲಿ ನೂರಾರು ಭೂಮಿ ರೀತಿಯ ಗ್ರಹಗಳು ಬದುಕಿವೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ಇದಿಷ್ಟೇ ಅಲ್ಲ ಅವುಗಳು ಬದುಕಿರುವ ವಲಯವನ್ನೂ ವಿಜ್ಞಾನಿಗಳು ಗುರುತಿಸಿದ್ದಾರೆ. ಜೀವಿಗಳು ಬದುಕಲು ಯೋಗ್ಯ ಪರಿಸರ ಹೊಂದಿರುವ 'ಮಿಲ್ಕಿ ವೇ' ನಕ್ಷತ್ರ ಪುಂಜದ ಜೀವ ವಲಯದಲ್ಲಿ ಭೂಮಿಯಂತಹ ಸಾವಿರಾರು ಗ್ರಹಗಳು ಇವೆ ಎಂಬುದು ಕನ್ಫರ್ಮ್ ಆಗಿದೆ. ಹೀಗೆ ಮಾನವನಿಗೆ ಜೊತೆಗಾರರು ಸಿಗುವ ನಿರೀಕ್ಷೆ ಇದೆ.

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ಪ್ರಮಾಣದ ನೀರು ಹುದುಗಿದೆ ಎಂಬ ವಿಚಾರವನ್ನು ಇದೇ ಮೊದಲಬಾರಿಗೆ ನಾಸಾ ವಿಜ್ಞಾನಿಗಳು ಬಾಯಿಬಿಟ್ಟಿದ್ದರು. 2020ರ ಅಕ್ಟೋಬರ್‌ನಲ್ಲಿ ಈ ಕುರಿತು ನಾಸಾ ಮಾಹಿತಿ ನೀಡಿತ್ತು. ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿದ್ದ 2 ಹೊಸ ಅಧ್ಯಯನ ವರದಿಗಳು ಸಂತಸದ ಸಂಗತಿಯನ್ನು ಮನುಕುಲಕ್ಕೆ ನೀಡಿದ್ದವು. ನಾಸಾ ನಿರ್ಮಿತ ಟೆಲಿಸ್ಕೋಪ್ 'ಸೋಫಿಯಾ' ಸಹಾಯದಿಂದ ಅವರೋಹಿತ ದೂರದರ್ಶಕ (telescope)ವನ್ನು ಬಳಸಿ ಚಂದ್ರನ ಮೇಲೆ ನೀರು ಇರುವುದನ್ನು ಕನ್ಫರ್ಮ್ ಮಾಡಲಾಗಿತ್ತು. ಹಾರುವ ದೂರದರ್ಶಕ ಎಂದು ಕರೆಯಲಾಗುವ ಇದರ ಸಹಾಯದಿಂದ ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸುಲಭವಾಗುತ್ತದೆ. ಹೀಗಾಗಿ ಇದೇ ದೂರದರ್ಶಕ ಬಳಸಿ ಸಂಶೋಧಕರು, ಚಂದ್ರನ ಮೇಲೆ ಊಹೆಗೂ ಮೀರಿ ನೀರು ಹುದುಗಿದೆ ಎಂಬುದನ್ನ ತಿಳಿಸಿದ್ದರು.

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಚಂದ್ರನ ಮೇಲೆ ಈಗ ಎಷ್ಟು ಪ್ರಮಾಣದ ನೀರು ಸಿಕ್ಕಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆ ಕುತೂಹಲಕ್ಕೂ ನಾಸಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಈಗ ಪತ್ತೆಯಾಗಿರುವ ನೀರಿನ ಪ್ರಮಾಣ ಸುಮಾರು 40,000 ಸ್ಕ್ವೇರ್ ಕಿಲೋಮೀಟರ್. ಇದನ್ನ ಸಾಮಾನ್ಯ ಅಂದಾಜಿನಲ್ಲಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಯ ಒಟ್ಟು ಜಾಗದ 5 ಪಟ್ಟು. ಅಂದರೆ ಚಂದ್ರನ ಮೇಲಿರುವ ನೀರನ್ನು ಭೂಮಿಗೆ ತಂದರೆ, ಆ ನೀರನ್ನು ಶಿವಮೊಗ್ಗ ಜಿಲ್ಲೆಗೆ 5 ಬಾರಿ ತುಂಬಿಸಬಹುದು. ಅಂದರೆ ಲೆಕ್ಕ ಹಾಕಿ ಭವಿಷ್ಯದಲ್ಲಿ ಚಂದಿರನ ಮೇಲೂ ಮನೆ ಕಟ್ಟಲು ಈ ನೀರು ಬಳಸಲು ಲಭ್ಯವಾದೀತು. ಬರೀ ಮನೆ ಕಟ್ಟಲು ಸಾಕೆ ಕುಡಿಯಲು, ಕೃಷಿ ಮಾಡಲು ಕೂಡ ಬಳಸಬಹುದಾಗಿದೆ. ಮುಂದೆ ಭೂಮಿ ಬೇಜಾರಾದರೆ ಚಂದ್ರನ ಮೇಲೆ ಹೋಗಿ ವಾಸ ಮಾಡಬಹುದು.

75 ಸಾವಿರ ಕಿ.ಮೀ. ದೊಡ್ಡದಾದ ಕೆರೆ..!

75 ಸಾವಿರ ಕಿ.ಮೀ. ದೊಡ್ಡದಾದ ಕೆರೆ..!

ಮನುಷ್ಯನಿಗೆ ಭೂಮಿ ಬಿಟ್ಟರೆ ಬದುಕಲು ಸಾಧ್ಯವಿರುವ ಹತ್ತಿರದ ಗ್ರಹವೆಂದರೆ ಅದು ಮಂಗಳ. ಈ ಅಂಗಾರಕ ತನ್ನ ಅಂಗಳದಲ್ಲಿ ನೂರಾರು ವಿಸ್ಮಯಗಳನ್ನ ಇಟ್ಟುಕೊಂಡಿದ್ದಾನೆ. ಹೀಗೆ ಮಂಗಳ ಗ್ರಹದಲ್ಲಿ ಸಂಶೋಧನೆಯನ್ನ ಕೈಗೊಂಡಿರುವ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಮಂಗಳ ಗ್ರಹದ ಮೇಲೆ ಸುಮಾರು 75 ಸಾವಿರ ಕಿಲೋ ಮೀಟರ್ ದೊಡ್ಡದಾದ ಕೆರೆಯ ಪಳಿಯುಳಿಕೆ ಸಿಕ್ಕಿದೆ. ಅಂದರೆ ಕೋಟ್ಯಂತರ ವರ್ಷಗಳ ಹಿಂದೆ ಇಲ್ಲಿ ಕೆರೆ ಇತ್ತು ಎಂಬುದಕ್ಕೆ ಸಾಕ್ಷಿಸಿಕ್ಕಿದೆ. ಕೆರೆ ಇದ್ದ ಕುರುಹನ್ನ ವಿಜ್ಞಾನಿಗಳು ಕನ್ಫರ್ಮ್ ಮಾಡಿದ್ದಾರೆ.

ಮನುಷ್ಯರ ಪ್ರಾಣ ತೆಗೆಯಲು 'ಯಮಧರ್ಮ' ಗಾಳಿ ಮೂಲಕ ಬರುತ್ತಾನಂತೆ..!ಮನುಷ್ಯರ ಪ್ರಾಣ ತೆಗೆಯಲು 'ಯಮಧರ್ಮ' ಗಾಳಿ ಮೂಲಕ ಬರುತ್ತಾನಂತೆ..!

ನೀರು ಇತ್ತು, ಆದರೆ ಎಲ್ಲೋಯ್ತು..?

ನೀರು ಇತ್ತು, ಆದರೆ ಎಲ್ಲೋಯ್ತು..?

ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದು ಇದೇ ವರ್ಷದಲ್ಲಿ. ಮಂಗಳ ಗ್ರಹದ ಬಹುಭಾಗದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಲೇ ಸಾಗಿದೆ. ಮಂಗಳ ಗ್ರಹದ ಒಳ ಭಾಗದಲ್ಲಿ ಬಿಸಿ ಹೆಚ್ಚಾದಂತೆಲ್ಲಾ ನೆಲವೂ ಕಾದ ಕಬ್ಬಿಣವಾಗಿದೆ. ಹೀಗೆ ನೆಲ ಕಾಯುತ್ತಿದ್ದಂತೆ ಸಹಜವಾಗಿಯೇ ಹಿಮವೂ ಕರಗುತ್ತಾ ಸಾಗಿದೆ. ಮುಂದೆ ಆ ತಾಪಮಾನ ವಾತಾವರಣದಲ್ಲಿ ಹರಡಿ, ಮಂಗಳ ಗ್ರಹದ ಮೇಲೆ ಹರಡಿಕೊಂಡಿದ್ದ ಜಲರಾಶಿಯನ್ನೂ ಮಾಯ ಮಾಡಿದೆ ಎಂಬುದು 2020ರ ಸಂಶೋಧನೆಗಳಿಂದ ಸ್ಪಷ್ಟವಾಗಿದೆ.

ಜೀವ ವಿಜ್ಞಾನದಲ್ಲೂ ಮಹತ್ತರ ಸಾಧನೆ

ಜೀವ ವಿಜ್ಞಾನದಲ್ಲೂ ಮಹತ್ತರ ಸಾಧನೆ

2020ರಲ್ಲಿ ಮಾನವನ ವೈಜ್ಞಾನಿಕ ಸಾಧನೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮಾನವ ಜೀವ ವಿಜ್ಞಾನದಲ್ಲಿ ಕೂಡ ಹಲವು ಸಂಶೋಧನೆ ನಡೆಸಿ ಸಕ್ಸಸ್ ಆಗಿದ್ದಾನೆ. ಗಂಟಲು ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಜೀವ ವಿಜ್ಞಾನಿಗಳಿಗೆ ಅಕಸ್ಮಾತ್ ಹೊಸದೊಂದು ಅಂಗ ಕಂಡುಬಂದಿದೆ. ಈ ಹೊಸ ಅಂಗಗಳು ಲಾಲಾರಸ ಗ್ರಂಥಿಗಳ ವಿಭಾಗಕ್ಕೆ ಸೇರಿದ್ದು, ಮಾನವನ ದೇಹದ ಭಾಗಕ್ಕೆ ಮತ್ತೊಂದು ಅಂಗ ಸೇರ್ಪಡೆಯಾಗಿದೆ. ಇದಷ್ಟೇ ಅಲ್ಲದೆ ಮಾನವ ಓದುವುದನ್ನು ಹೇಗೆ ಕಲಿತ..? ಎಂಬ ಪ್ರಶ್ನೆಗೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಮಾನವನ ಮಿದುಳು ಹುಟ್ಟುವಾಗಲೇ ಅಕ್ಷರಗಳನ್ನು ಗುರುತು ಹಿಡಿಯುವ ನರವ್ಯೂಹ ಬೆಳೆಸಿಕೊಂಡಿರುತ್ತದೆ. ಈ ನರವ್ಯೂಹ ಮಿದುಳಿನ ಭಾಷಾ ಪ್ರದೇಶದ ಜೊತೆ ಸಂಪರ್ಕ ಹೊಂದಿದೆ ಎಂದು ವಿಜ್ಞಾನಿಗಳು 2020ರಲ್ಲಿ ಕಂಡುಕೊಂಡಿದ್ದಾರೆ. ಮಿದುಳಿನ ಈ ಭಾಗದ ಸಹಾಯದಿಂದಲೇ ಮಾನವ ಅಕ್ಷರ ಕಲಿಯಲು ಸಾಧ್ಯವಾಗಿದೆ. ಇದೆಲ್ಲದರ ಮಧ್ಯೆ ಮನುಷ್ಯನಿಗೆ ವಯಸ್ಸಾಗದಂತೆ ತಡೆಯುವ ಸಂಶೋಧನೆ ಕೂಡ ನಡೆದಿದೆ. ಪ್ರತಿಯೊಬ್ಬ ಮಾನವನೂ ಮುಪ್ಪಿನಿಂದ ಕೊನೆಯಾಗಲೇಬೇಕು. ಆದರೆ ಜೀವ ವಿಜ್ಞಾನಿಗಳು ವಯಸ್ಸು ಆಗದಂತೆ ಹೊಸ ಪ್ರೋಟಿನ್ ಅಂಶಗಳನ್ನ ಕಂಡುಹಿಡಿದಿದ್ದಾರೆ.

English summary
Unforgettable 2020: So many scientific achievements has been done by scientists in the year of 2020. Especially astrophysics has reached a big level in humans history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X