ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ವಿಶೇಷ; Google ನಲ್ಲಿ ಅತಿ ಹೆಚ್ಚು ಸರ್ಚ್‌ ವಿಷಯಗಳು!

|
Google Oneindia Kannada News

ಕೋವಿಡ್ ಪರಿಸ್ಥಿತಿ ಭಾರತ ಸೇರಿದಂತೆ ವಿಶ್ವದಲ್ಲೇ ಈ ವರ್ಷ ಸುದ್ದಿ ಮಾಡಿತು. ಕೊರೋನಾ ಭೀತಿಯಿಂದಾಗಿ ಜನರು ಕಚೇರಿ ಬಿಟ್ಟು ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದರು. ಭಾರತದಲ್ಲಿ ಕೋವಿಡ್ ಪರಿಸ್ಥಿತಿಯ ನಡುವೆಯೇ ಹಲವಾರು ವಿಚಾರಗಳು ಸದ್ದು ಮಾಡಿದವು. ಅಮೆರಿಕದ ಚುನಾವಣೆ ವಿಶ್ವದ ಗಮನವನ್ನೇ ಸೆಳೆಯಿತು.

ಈ ಬಾರಿ ಇಂಟರ್‌ನೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುದ್ದಿಗಳು ಯಾವುವು? ಎಂಬುದು ಎಲ್ಲರ ಕುತೂಹಲವಾಗಿದೆ. ಈ ವರ್ಷ ಅತಿ ಹೆಚ್ಚು ಸರ್ಚ್ ಆದ ವಿಷಯಗಳ ಪಟ್ಟಿಯನ್ನು Google ಬಿಡುಗಡೆ ಮಾಡಿದೆ. ಭಾರತ ಮತ್ತು ವಿಶ್ವದ ಅನೇಕ ವಿಚಾರಗಳು ಇವುಗಳಲ್ಲಿ ಸೇರಿವೆ.

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು! Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

ಕೋವಿಡ್, ಚುನಾವಣೆ ಫಲಿತಾಂಶ, ಐಪಿಎಲ್ ಬಗ್ಗೆ ಅತಿ ಹೆಚ್ಚು ಜನರು ಈ ಬಾರಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆಯೂ ಜನರು ಈ ಬಾರಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ.

ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಮತ್ತು ಸುಶಾಂತ್ ಆತ್ಮಹತ್ಯೆ ಬಳಿಕ ಬಿಡುಗಡೆಯಾದ 'ದಿಲ್ ಬೇಚಾರಾ' ಸಿನಿಮಾ ಬಗ್ಗೆಯೂ ಜನರು ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. Googleನಲ್ಲಿ ಅತಿ ಹೆಚ್ಚು ಸರ್ಚ್‌ ಆದ ವಿಷಯಗಳ ಪಟ್ಟಿ ಇಲ್ಲಿದೆ....

Unforgettable 2020; ಈ ವರ್ಷ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್‌ಗಳು! Unforgettable 2020; ಈ ವರ್ಷ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್‌ಗಳು!

ಐಪಿಎಲ್, ಕೋವಿಡ್

ಐಪಿಎಲ್, ಕೋವಿಡ್

ನಂಬರ್ 1: ಗೂಗಲ್‌ನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ವಿಷಯಗಳಲ್ಲಿ ಐಪಿಎಲ್ ಮೊದಲ ಸ್ಥಾನದಲ್ಲಿದೆ. ಕೋವಿಡ್ ಭೀತಿಯ ಕಾರಣ ಐಪಿಎಲ್ ಪಂದ್ಯಗಳು ನಡೆಯತ್ತದೆಯೋ?, ಇಲ್ಲವೋ? ಎಂಬ ಗೊಂದಲ ಉಂಟಾಗಿತ್ತು. ಅಂತಿಮವಾಗಿ ಭಾರತದಿಂದ ದುಬೈಗೆ ಐಪಿಎಲ್ ಸ್ಥಳಾಂತರವಾಯಿತು.

ನಂಬರ್ 2: ಕೊರೋನಾ ವೈರಸ್ ಕುರಿತು ಗೂಗಲ್‌ನಲ್ಲಿ ಈ ಬಾರಿ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ. ಭಾರತ ಸೇರಿದಂತೆ ವಿಶ್ವವನ್ನು ಈ ವರ್ಷ ಕಾಡಿದ್ದು ಕೋವಿಡ್ ಸೋಂಕು. ಲಾಕ್ ಡೌನ್, ಕೋವಿಡ್ ಸುರಕ್ಷತಾ ಕ್ರಮಗಳು, ಮಾರ್ಗಸೂಚಿ, ಲಸಿಕೆ ಕುರಿತು ಜನರು ತಿಳಿದುಕೊಳ್ಳಲು ಪ್ರಯತ್ನವನ್ನು ನಡೆಸಿದ್ದಾರೆ.

ಅಮೆರಿಕದ ಚುನಾವಣೆ

ಅಮೆರಿಕದ ಚುನಾವಣೆ

ನಂಬರ್ 3: ಅಮೆರಿಕದ ಚುನಾವಣೆ ವಿಶ್ವದ ಹಲವು ರಾಷ್ಟ್ರಗಳ ಗಮನ ಸೆಳೆದಿತ್ತು. ಅದರಲ್ಲೂ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಎದುರಾಳಿ ಜೋ ಬೈಡೆನ್ ನಡುವೆ ಚುನಾವಣೆಯಲ್ಲಿ ಭಾರಿ ಪೈಪೋಟಿ ಇತ್ತು. ಭಾರತದಲ್ಲಿ ಅಮೆರಿಕ ಚುನಾವಣೆ ಬಗ್ಗೆ ಹೆಚ್ಚು ಜನರು ಸರ್ಚ್ ಮಾಡಿದ್ದು, ಈ ವಿಷಯ 3ನೇ ಸ್ಥಾನದಲ್ಲಿದೆ.

ನಂಬರ್ 4: ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನವನ್ನು ನೀಡಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದೆ. ಒಟ್ಟು 6 ಸಾವಿರ ರೂ.ಗಳನ್ನು ವಾರ್ಷಿಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆ ಬಗ್ಗೆಯೂ ಜನರು ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ.

ಬಿಹಾರ, ದೆಹಲಿ ಚುನಾವಣೆ ಫಲಿತಾಂಶ

ಬಿಹಾರ, ದೆಹಲಿ ಚುನಾವಣೆ ಫಲಿತಾಂಶ

ನಂಬರ್ 5: ಗೂಗಲ್‌ನಲ್ಲಿ ಈ ವರ್ಷ ಬಿಹಾರ ಚುನಾವಣೆ ಬಗ್ಗೆಯೂ ಜನರು ಅತಿ ಹೆಚ್ಚು ಸರ್ಚ್‌ ಮಾಡಿದ್ದಾರೆ. ಕೋವಿಡ್ ಭೀತಿಯ ನಡುವೆಯೇ ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಒಟ್ಟು ಮೂರು ಹಂತದಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 7ರ ತನಕ ಚುನಾವಣೆಯನ್ನು ನಡೆಸಲಾಯಿತು. ನವೆಂಬರ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಯಿತು.

ನಂಬರ್ 6: ಅಚ್ಚರಿ ಎಂದರೆ ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆಯೂ ಜನರು ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ. ದೆಹಲಿ ಚುನಾವಣೆ ಈ ವರ್ಷ ನಡೆದಿಲ್ಲ. ಆದರೆ, ಜನರು ಆ ಚುನಾವಣೆ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಬಯಸಿದ್ದಾರೆ.

ಸಿನಿಮಾ, ರಾಜಕೀಯ

ಸಿನಿಮಾ, ರಾಜಕೀಯ

ನಂಬರ್ 7: 2020ರ ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡರು. ಅವರ ಅಭಿನಯದ ಕೊನೆಯ ಚಿತ್ರ 'ದಿಲ್ ಬೇಚಾರಾ' ವನ್ನು ನೋಡಲು ಅಭಿಮಾನಿಗಳು ಕಾದಿದ್ದರು. ಗೂಗಲ್‌ನಲ್ಲಿ ಈ ಸಿನಿಮಾ ಬಗ್ಗೆಯೂ ಹೆಚ್ಚಾಗಿ ಸರ್ಚ್ ಮಾಡಲಾಗಿದೆ.

ನಂಬರ್ 8: ಅಮೆರಿಕದ ಚುನಾವಣೆ ಕಣಕ್ಕಿಳಿದಿದ್ದ ಜೋ ಬೈಡನ್ ಬಗ್ಗೆ ಅತಿ ಹೆಚ್ಚು ಜನರು ಸರ್ಚ್ ಮಾಡಿದ್ದಾರೆ. ಜಾರ್ಜಿಯಾ ಕ್ಷೇತ್ರದಲ್ಲಿ ನಿಯೋಜಿತ ಅಧ್ಯಕ್ಷರಾದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಗೆಲುವು ಸಾಧಿಸಿದ್ದಾರೆ. ಅಮೆರಿಕದ 46ನೆ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಲೀಪ್ ಡೇ, ಅರ್ನಬ್

ಲೀಪ್ ಡೇ, ಅರ್ನಬ್

ನಂಬರ್ 9: ಈ ವರ್ಷದ ಫೆಬ್ರವರಿಯಲ್ಲಿ 29ನೇ ದಿನಾಂಕ ಬಂದಿತ್ತು. ಅದನ್ನು ಲೀಪ್ ಡೇ ಎಂದು 2020ನ್ನು ಲೀಪ್ ಇಯರ್ ಎಂದು ಕರೆಯಲಾಗಿತ್ತು. ಈ ಕುರಿತು ಅತಿ ಹೆಚ್ಚು ಜನರು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.

ನಂಬರ್ 10: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋ ಸ್ವಾಮಿ ಕುರಿತು ಅತಿ ಹೆಚ್ಚು ಸರ್ಚ್ ಮಾಡಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮುಂಬೈ ಪೊಲೀಸರು ಅರ್ನಬ್ ಗೋ ಸ್ವಾಮಿ ಬಂಧಿಸಿದರು. ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದು ಅವರು ಬಿಡುಗಡೆಗೊಂಡರು.

English summary
Google has released its list of the top trending searches in India in the year 2020. IPL, US and Bihar elections issues in the list. Here are the top 10 search list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X