ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020; ಈ ವರ್ಷ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್‌ಗಳು!

|
Google Oneindia Kannada News

2020ನೇ ವರ್ಷ ಮುಗಿಯುತ್ತಾ ಬಂದಿದೆ. ವಿಶ್ವದಲ್ಲಿ ಕೋವಿಡ್ ಅರ್ಭಟದ ನಡುವೆ ಹಲವಾರು ಘಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಸುದ್ದಿಗಳು ಸದ್ದು ಮಾಡಿವೆ. ಅದರದಲ್ಲಿಯೂ ಟ್ವೀಟರ್‌ನಲ್ಲಿ ನೂರಾರು ಸುದ್ದಿಗಳು ಸದ್ದು ಮಾಡಿ ಜನರನ್ನು ತಲುಪಿವೆ.

ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ 2020ರಲ್ಲಿ ಏನಾಯಿತು ಎಂಬ ಅವಲೋಕವನ್ನು ತೆರೆದಿಟ್ಟಿದೆ. ಈ ವರ್ಷ ಹೆಚ್ಚು ರಿಟ್ವೀಟ್, ಹೆಚ್ಚು ಲೈಕ್, ಹೆಚ್ಚು ಟ್ರೆಂಡ್, ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್‌ಗಳನ್ನು ಬಿಡುಗಡೆ ಮಾಡಿದೆ.

ವರ್ಷ 2020; ಟ್ವಿಟರ್‌ನಲ್ಲಿ ಹೆಚ್ಚು ಬಳಸಿದ ಹ್ಯಾಶ್‌ ಟ್ಯಾಗ್‌ಗಳುವರ್ಷ 2020; ಟ್ವಿಟರ್‌ನಲ್ಲಿ ಹೆಚ್ಚು ಬಳಸಿದ ಹ್ಯಾಶ್‌ ಟ್ಯಾಗ್‌ಗಳು

ರಾಜಕೀಯ, ಸಿನಿಮಾ, ಕ್ರೀಡೆ, ವಾಣಿಜ್ಯ ಹೀಗೆ ವಿವಿಧ ವಲಯಗಳಲ್ಲಿ ಹೆಚ್ಚು ಸುದ್ದಿ ಮಾಡಿದ ವಿಷಯಗಳು ಯಾವುದು? ಎಂದು ಟ್ವಿಟರ್ ಹೇಳಿದೆ. ಟ್ವಿಟರ್‌ನಲ್ಲಿ ಕೋವಿಡ್ 19 ಹ್ಯಾಶ್ ಟ್ಯಾಗ್ ಹೆಚ್ಚು ಬಳಕೆಯಾಗಿದೆ. ಅದರ ಜೊತೆಗೆ ಬೇರೆ ಸುದ್ದಿಗಳು ಸಹ ಸದ್ದು ಮಾಡಿವೆ.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

ಈ ವರ್ಷ ಅತಿ ಹೆಚ್ಚು ರಿ ಟ್ವೀಟ್ ಆಗಿರುವುದು ತಮಿಳು ನಟ ವಿಜಯ್ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ದೀಪ ಹಚ್ಚಿದ ಫೋಟೋಗಳು ಸಹ ಟ್ವೀಟರ್‌ನಲ್ಲಿ ಟ್ರೆಂಡ್ ಆಗಿದೆ.

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

ನಟ ವಿಜಯ್ selfie

ತಮಿಳು ನಟ ವಿಜಯ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ತಮಿಳುನಾಡು ಮಾತ್ರವಲ್ಲ ದೇಶ-ವಿದೇಶದಲ್ಲಿ ಅವರಿಗೆ ಅಭಿಮಾನಿಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅಭಿಮಾನಿಗಳ ಜೊತೆ ವಿಜಯ್ ತೆಗೆದುಕೊಂಡ selfie ಈ ವರ್ಷ ಟ್ವಿಟರ್‌ನಲ್ಲಿ 145,000ಕ್ಕೂ ಅಧಿಕ ಬಾರಿ ರಿ ಟ್ವೀಟ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಫೋಟೋ

ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಮೋದಿ ಸಹ ದೀಪ ಹಚ್ಚಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿದ್ದರು. ಈ ಟ್ವೀಟ್ 100,000 ಬಾರಿ ರಿ ಟ್ವೀಟ್ ಆಗಿದೆ.

ಮಹೇಂದ್ರ ಸಿಂಗ್ ಧೋನಿ ಟ್ವೀಟ್

ಮಹೇಂದ್ರ ಸಿಂಗ್ ಧೋನಿ ಈ ವರ್ಷ ನಿವೃತ್ತಿ ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಧೋನಿಗೆ ಪತ್ರವೊಂದನ್ನು ಬರೆದಿದ್ದರು. ಇದನ್ನು ಧೋನಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಹ ಹೆಚ್ಚು ಬಾರಿ ಟ್ವೀಟ್ ಆಗಿದೆ.

ರತನ್ ಟಾಟಾ ಟ್ವೀಟ್

ದೇಶದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ 500 ಕೋಟಿ ದೇಣಿಗೆಯನ್ನು ಘೋಷಣೆ ಮಾಡಿದ್ದರು. ವಾಣಿಜ್ಯ ವಿಭಾಗದಲ್ಲಿ ಈ ಟ್ವೀಟ್ ಅತಿ ಹೆಚ್ಚು ರಿ ಟ್ವೀಟ್ ಆಗಿದೆ.

ಅಮಿತಾಬ್ ಟ್ವೀಟ್

ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ಗೆ ಕೋವಿಡ್ ಸೋಂಕು ತಗುಲಿತ್ತು. ಆಗ ಅವರು ಮಾಡಿದ ಟ್ವೀಟ್‌ ಸಹ ಅತಿ ಹೆಚ್ಚು ಬಾರಿ ರಿ ಟ್ವೀಟ್ ಆಗಿದೆ.

English summary
In a recap 2020 Twitter announced most retweeted tweet of 2020 from India. Most retweeted tweet in politics was by Prime Minister Narendra Modi tweet about lighting lamps during the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X