ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ದೇಶಗಳ ನಡುವಿನ ಪ್ರಮುಖ ಸಶಸ್ತ್ರ ಕಾದಾಟಗಳು

|
Google Oneindia Kannada News

2020ರಲ್ಲಿ ಕೊರೊನಾ ವೈರಸ್ ಕಾಯಿಲೆಯು ಹೆಚ್ಚಿನ ದೇಶಗಳನ್ನು ಕಾಡಿದ್ದರೂ, ಹಲವು ದೇಶಗಳ ನಡುವಿನ ಸಂಘರ್ಷದ ವಾತಾವರಣವನ್ನೇನೂ ಕಡಿಮೆ ಮಾಡಲಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಅನೇಕ ದೇಶಗಳು ತಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಕಾದಾಟ ಮುಂದುವರಿಸಿವೆ. ಗಡಿ ವಿವಾದ, ಸೇನಾ ಕಲಹ, ರಾಜಕೀಯ ಸಂಘರ್ಷ, ಆರ್ಥಿಕ-ವ್ಯಾಪಾರಿ ಗೊಂದಲಗಳು ಮುಂತಾದ ಘಟನೆಗಳು ಸಂಘರ್ಷಕ್ಕೆ ಮತ್ತಷ್ಟು ಎಣ್ಣೆ ಸುರಿಯುತ್ತಲೇ ಇರುತ್ತವೆ.

ಎಲ್‌ಒಸಿಯಲ್ಲಿ ಪಾಕಿಸ್ತಾನದೊಂದಿಗಿನ ಭಾರತದ ಸಂಘರ್ಷ ಈ ಬಾರಿ ಕೂಡ ಮುಂದುವರಿದಿದೆ. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಲೇ ಇದೆ. ಇನ್ನೊಂದೆಡೆ ಚೀನಾದ ಉಪಟಳ ಮತ್ತಷ್ಟು ಜಾಸ್ತಿಯಾಗಿದೆ. ಈ ವರ್ಷ ಭಾರತಕ್ಕೆ ಹೆಚ್ಚು ತೊಂದರೆಕೊಟ್ಟಿದ್ದು ಚೀನಾ. ಒಂದೆಡೆ ವೈರಸ್ ಸೋಂಕನ್ನು ಹರಡಿಸಿದರೆ, ಗಡಿಯಲ್ಲಿ ತಂಟೆ ತೆಗೆದು ಭಾರತೀಯ ಸೈನಿಕರ ಸಾವು ನೋವಿಗೆ ಕಾರಣವಾಯಿತು. ಉಭಯ ದೇಶಗಳ ನಡುವಿನ ಉದ್ವಿಗ್ನ ವಾತಾವರಣ ರಾಜಕೀಯ, ಆರ್ಥಿಕ, ತಾಂತ್ರಿಕ ಕ್ಷೇತ್ರಗಳಿಗೂ ಹಬ್ಬಿದೆ.

Unforgettable 2020: ಈ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳುUnforgettable 2020: ಈ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳು

ವಿವಿಧ ದೇಶಗಳು, ಸೇನಾಪಡೆಗಳ ನಡುವೆ ಇಂತಹ ಶಸ್ತ್ರಸಜ್ಜಿತ ಹೊಡೆದಾಟ ಮತ್ತು ಘರ್ಷಣೆಗಳು ಸಾಕಷ್ಟು ನಡೆದಿವೆ. ಉಗ್ರೇನ್, ಅರ್ಮೇನಿಯಾ, ಇಸ್ರೇಲ್-ಪ್ಯಾಲಿಸ್ಟೇನ್ ಮುಂತಾದ ಸಂಘರ್ಷಗಳಿಗೆ ಹಲವು ದಶಕಗಳ ಇತಿಹಾಸವೇ ಇವೆ. ಅವು ಈ ಬಾರಿಯೂ ಮುಂದುವರಿದಿವೆ. ಅವುಗಳಲ್ಲಿ ಕೆಲವು ಘಟನೆಗಳ ಮೆಲುಕು ಇಲ್ಲಿದೆ. ಮುಂದೆ ಓದಿ.

ಸೊಲೆಮನಿ ಹತ್ಯೆ ಮತ್ತು ಪ್ರತೀಕಾರ

ಸೊಲೆಮನಿ ಹತ್ಯೆ ಮತ್ತು ಪ್ರತೀಕಾರ

2020ರ ಆರಂಭದಲ್ಲಿಯೇ ಅಮೆರಿಕ ಮತ್ತು ಇರಾನ್ ಹಗೆತನದ ನಾಟಕೀಯ ಸನ್ನಿವೇಶ ಎದುರಾಯಿತು. ಅಮೆರಿಕದ ಡ್ರೋನ್ ದಾಳಿಯು ಇರಾನ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಖಾಸಿಂ ಸೊಲೆಮನಿ ಅವರನ್ನು ಹತ್ಯೆ ಮಾಡಿತ್ತು. ಜನವರಿ 3ರಂದು ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಈ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ 176 ಜನರಿದ್ದ ಉಕ್ರೇನ್‌ನ ವಿಮಾನವನ್ನು ಇರಾನ್ ಹೊಡೆದುರುಳಿಸಿತ್ತು. ಅದರಲ್ಲಿದ್ದ ಪ್ರತಿಯೊಬ್ಬರೂ ಮೃತಪಟ್ಟರು. ಇದರಲ್ಲಿ ಇರಾನ್‌ನ ಪ್ರಜೆಗಳೂ ಇದ್ದರು. ಸೇನಾ ಪಡೆ ಮಾಡಿದ ಪ್ರಮಾದಕ್ಕೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಕ್ಷಮೆಯಾಚಿಸಿದರು.

ಭಾರತ- ಚೀನಾ ಗಲ್ವಾನ್ ಸಂಘರ್ಷ

ಭಾರತ- ಚೀನಾ ಗಲ್ವಾನ್ ಸಂಘರ್ಷ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಅತ್ಯಂತ ಕೆಳಮಟ್ಟಕ್ಕೆ ಹೋಗಿತ್ತು. ಏಪ್ರಿಲ್ ತಿಂಗಳಿನಿಂದ ಗಡಿಯಲ್ಲಿ ತಿಕ್ಕಾಟ ನಡೆದಿತ್ತು. ಜೂನ್ 15-16ರಂದು ರಾತ್ರೋರಾತ್ರಿ ಎರಡೂ ಪಡೆಗಳ ಸೈನಿಕರು ದೊಣ್ಣೆ, ಈಟಿಗಳಿಂದ ಹೊಡೆದಾಡಿಕೊಂಡರು. ಇಲ್ಲಿ ಬಂದೂಕುಗಳ ಬಳಕೆಯಾಗಿರಲಿಲ್ಲ. ಈ ಘೋರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಮೃತಪಟ್ಟರು. ಬಲಿಯಾದ ಚೀನೀ ಸೈನಿಕರ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲ.

Unforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳುUnforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳು

ಸೌದಿ ಅರೇಬಿಯಾ-ಯೆಮನ್

ಸೌದಿ ಅರೇಬಿಯಾ-ಯೆಮನ್

ಸೌದಿ ಪರ ಒಲವು ಹೊಂದಿದ್ದ ಅಧ್ಯಕ್ಷ ಅಬ್ದರಬ್ಬುಹ್ ಮನ್ಸುರ್ ಹಾದಿ ಅವರ ಉಚ್ಚಾಟನೆಯಿಂದ ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವೆ 2015ರಿಂದಲೂ ಘರ್ಷಣೆಗಳು ನಡೆಯುತ್ತಿವೆ. ಯೆಮನ್‌ನಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧವು ಇದುವರೆಗೂ 16,000ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿದೆ. ಲಕ್ಷಾಂತರ ಜನರು ಹಸಿವಿನಿಂದ ಬಳಲುವಂತಾಗಿದೆ. ಈ ಯುದ್ಧವನ್ನು ತಡೆಯಲು 2020ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿತು. ಸೌದಿ ನೇತೃತ್ವದ ಮಿತ್ರಪಡೆಗಳು ಏಕಪಕ್ಷೀಯ ಯುದ್ಧವಿರಾಮ ಘೋಷಿಸಿತು. ಆದರೆ ಒಂದು ವಾರದೊಳಗೆ ಹತ್ತಾರು ವಾಯುದಾಳಿಗಳನ್ನು ನಡೆಸಿತು. ಜುಲೈ 2ರಂದು ಯೆಮನ್‌ನ ಅನೇಕ ಪ್ರಾಂತ್ಯಗಳ ಮೇಲೆ ಮಿತ್ರಪಡೆಗಳು ಯುದ್ಧ ವಿಮಾನಗಳ ಮೂಲಕ ಆಕ್ರಮಣ ನಡೆಸಿದವು. ಇದಕ್ಕೆ ಪ್ರತಿಯಾಗಿ ಸೌದಿ ಮೇಲೆ ಹೌತಿ ಬಂಡುಕೋರರು ದಾಳಿ ಮಾಡಿದರು.

ಕುರ್ದಿಶ್ ಪಡೆಗಳ ದಾಳಿ

ಕುರ್ದಿಶ್ ಪಡೆಗಳ ದಾಳಿ

ಇರಾಕ್ ಮತ್ತು ಸಿರಿಯಾಗಳಲ್ಲಿ ಸೋಲು ಅನುಭವಿಸಿದರೂ ಐಸಿಸ್ ಸಂಘಟನೆಗಳು ಗಡಿ ಭಾಗದ ಪ್ರದೇಶಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿವೆ. ಈ ಎರಡೂ ದೇಶಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಐಸಿಸ್ ಉಗ್ರರಿದ್ದಾರೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಹೇಳಿದೆ. ಉಗ್ರರ ವಿರುದ್ಧದ ಹೋರಾಟಕ್ಕೆ ಕುರ್ದಿಶ್ ಪಡೆಗಳಿಗೆ ಅಮೆರಿಕ ನೇತೃತ್ವದ ಸೇನೆ ನೆರವು ನೀಡುತ್ತಿದೆ.

Unforgettable 2020:ವರ್ಷದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುಳ್ಳು ಸುದ್ದಿಗಳುUnforgettable 2020:ವರ್ಷದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುಳ್ಳು ಸುದ್ದಿಗಳು

ಸಿರಿಯಾ ಸಂಘರ್ಷ

ಸಿರಿಯಾ ಸಂಘರ್ಷ

ಸಿರಿಯಾದಲ್ಲಿನ ಆಂತರಿಕ ನಾಗರಿಕ ಯುದ್ಧ ಸುಮಾರು ಒಂಬತ್ತು ವರ್ಷಗಳನ್ನು ಕಳೆದಿದೆ. ಪ್ರಾದೇಶಿಕ ಮನುಕುಲದ ಬಿಕ್ಕಟ್ಟು ತೀವ್ರಗೊಂಡಿದೆ. 2011ರಲ್ಲಿ ಅಧ್ಯಕ್ಷ ಬಶರ್ ಅಲ್ ಅಸಾದ್ ವಿರುದ್ಧ ಶುರುವಾದ ಪ್ರಜಾಪ್ರಭುತ್ವ ಪರ ಪ್ರತಿಭಟನೆ ಇಡೀ ದೇಶದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸಿತ್ತು. ರಷ್ಯಾ ಮತ್ತು ಇರಾನ್ ಬೆಂಬಲದಿಂದ ಬಶರ್ ಅವರು ತಮ್ಮ ವಿರುದ್ಧದ ಹೋರಾಟವನ್ನು ಸೇನಾ ಶಕ್ತಿಯಿಂದ ನಿಗ್ರಹಿಸಿದ್ದಾರೆ. 2020ರಲ್ಲಿ ವಾಯವ್ಯ ಸಿರಿಯಾದಲ್ಲಿನ ಕದನ ವಿರಾಮ ಮತ್ತು ಕೊರೊನಾ ವೈರಸ್ ಸೋಂಕಿನ ಕಾರಣ ಹೋರಾಟದ ಮಟ್ಟ ಕಡಿಮೆಯಾಗಿದೆ.

ಇಥಿಯೋಪಿಯಾ ಘರ್ಷಣೆ

ಇಥಿಯೋಪಿಯಾ ಘರ್ಷಣೆ

ಇಥಿಯೋಪಿಯಾದ ಟಿಗ್ರೆಯಲ್ಲಿ 2020ರ ನವೆಂಬರ್‌ನಲ್ಲಿ ಶುರುವಾದ ಸಂಘರ್ಷ ಮುಂದುವರಿದಿದೆ. ಅಡ್ಡಿಸ್ ಅಬಾಬದಲ್ಲಿಬ ಪ್ರಧಾನಿ ಅಬಿಯ್ ಅಹ್ಮದ್ ಅವರ ಸರ್ಕಾರ ಮತ್ತು ಉತ್ತರದ ಟಿಗ್ರೇ ಪ್ರದೇಶದ ನಾಯಕರ ನಡುವಿನ ಮನಸ್ತಾಪ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದೆ. ಟಿಗ್ರೇ ಪಡೆಗಳು ಮತ್ತು ಇಥಿಯೋಪಿಯಾ ಸೇನಾ ಪಡೆಗಳ ನಡುವೆ ಘರ್ಷಣೆಗಳು ನಡೆದಿವೆ. ಟಿಗ್ರೇಯನ್ನರು ರಾಷ್ಟ್ರೀಯ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾಗಿ ಅಬಿಯ್ ಆರೋಪಿಸಿದ್ದಾರೆ. ಟಿಗ್ರೇ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಡಳಿತದ ಪ್ರದೇಶಕ್ಕೆ ಸೇನಾ ಪಡೆಗಳನ್ನು ರವಾನಿಸಿದ್ದಲ್ಲದೆ ಅಲ್ಲಿ ಬಾಂಬ್ ದಾಳಿ ನಡೆಸಿದೆ. ನೂರಾರು ಮಂದಿ ಬಲಿಯಾಗಿದ್ದಾರೆ.

English summary
YearEnder 2020: World has witnessed many conficts between countries amid Coronavirus crisis. Here some major armed fights between nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X