• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Unforgettable 2020: ಈ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳು

|
Google Oneindia Kannada News

ಈ ಶತಮಾನದಲ್ಲಿಯೇ ಜಗತ್ತು ಕಂಡ ಅತಿ ದೊಡ್ಡ ದುರಂತ ಮತ್ತು ಅವಘಡ ಎಂದರೆ ಅದು ಕೊರೊನಾ ವೈರಸ್‌ ಸೋಂಕಿನಿಂದ ಸಂಭವಿಸಿರುವುದು. ಜಗತ್ತಿನಾದ್ಯಂತ ಸುಮಾರು ಎರಡು ಮಿಲಿಯನ್ ಜನರ ಜೀವಗಳನ್ನು ಕಸಿದುಕೊಂಡ ವೈರಸ್, ಕೋಟ್ಯಂತರ ಜನರ ಬದುಕನ್ನು ಬೀದಿಗೆ ಬರುವಂತೆ ಮಾಡಿತು. ಅದರ ಜತೆಗೆ ಸೈಕ್ಲೋನ್, ಅತಿವೃಷ್ಟಿ, ಪ್ರವಾಹ, ಭೂಕಂಪದಂತ ಸತತ ನೈಸರ್ಗಿಕ ಆಕ್ರಮಣಗಳು ಕೂಡ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು.

ಹಾಗೆ ನೋಡಿದರೆ ಪ್ರತಿ ವರ್ಷವೂ ಅಸಹಜ ಘಟನೆಗಳಿಂದ ಲಕ್ಷಾಂತರ ಮಂದಿ ಸಾಯುತ್ತಾರೆ. ರಸ್ತೆ, ವಾಯು ಮತ್ತು ಜಲ ಸಾರಿಗೆಗಳಲ್ಲಿನ ಅಪಘಾತಗಳು ಸರ್ವೇ ಸಾಮಾನ್ಯ. ಈ ವರ್ಷ ಕೊರೊನಾ ವೈರಸ್ ಸೋಂಕಿನ ನಡುವೆಯೂ ಇಂತಹ ಅಪಘಾತಗಳು ಹಲವಾರು ನಡೆದಿವೆ. ಲಾಕ್‌ಡೌನ್, ಜನರ ಓಡಾಟದ ನಿಯಂತ್ರಣ ಮುಂತಾದ ಕಾರಣಗಳಿಂದ ಅಪಘಾತಗಳ ಪ್ರಮಾಣ ಕಡಿಮೆ ಆಗಿರಬಹುದು. ಆದರೆ ಪ್ರಕೃತಿ ಬಯಸಿದಂತೆ ಮನುಷ್ಯರ ಸಾವುಗಳೇನೂ ಕಡಿಮೆಯಾಗಿಲ್ಲ.

Unforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳುUnforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳು

2020ರಲ್ಲಿ ಮೈನಡುಗಿಸುವಂತಹ ಅನೇಕ ಅಪಘಾತಗಳು ನಡೆದಿವೆ. ಭಾರತ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಸಾವಿರಾರು ಜನರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಅಂತಹ ಅಪಘಾತಗಳಲ್ಲಿ ಪ್ರಮುಖವಾದ ಕೆಲವು ಘಟನೆಗಳ ವಿವರ ಇಲ್ಲಿದೆ.

ಏರ್ ಇಂಡಿಯಾ ವಿಮಾನ ಅಪಘಾತ

ಏರ್ ಇಂಡಿಯಾ ವಿಮಾನ ಅಪಘಾತ

ಕೇರಳದ ಕೋಳಿಕ್ಕೋಡ್ ಸಮೀಪದ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344 ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಜಾರಿ 35 ಅಡಿ ಆಳದ ಕಣಿವೆಯೊಳಗೆ ಬಿದ್ದು ಎರಡು ಭಾಗಗಳಾಗಿ ತುಂಡಾಗಿತ್ತು. ಪೈಲಟ್, ಸಹ ಪೈಲಟ್ ಸೇರಿದಂತೆ 21 ಮಂದಿ ಜೀವ ಕಳೆದುಕೊಂಡರು. 190 ಮಂದಿ ವಿಮಾನದಲ್ಲಿದ್ದರು. ಆಗಸ್ಟ್ 7ರಂದು ಈ ದುರ್ಘಟನೆ ನಡೆದಿತ್ತು.

ಪಾಕಿಸ್ತಾನ ವಿಮಾನ ಅಪಘಾತ

ಪಾಕಿಸ್ತಾನ ವಿಮಾನ ಅಪಘಾತ

ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಮೇ 22ರಂದು ಅಪಘಾತಕ್ಕೀಡಾಗಿತ್ತು. ಏರ್ ಬಸ್ ಎ320ಯ ಅಪಘಾತದಲ್ಲಿ 97 ಪ್ರಯಾಣಿಕರು ಬಲಿಯಾಗಿದ್ದರು. ಪೈಲಟ್ ಮತ್ತು ವಾಯು ಸಂಚಾರ ನಿಯಂತ್ರಣದ ಲೋಪದಿಂದ ಈ ಅಪಘಾತ ಸಂಭವಿಸಿತ್ತು. ವಿಮಾನದ ಚಕ್ರಗಳು ತೆರೆಯದೆ ಎಂಜಿನ್ ಭಾಗ ನೆಲಕ್ಕೆ ಅಪ್ಪಳಿಸಿತ್ತು.

Unforgettable 2020: ವರ್ಷದ ದಿಕ್ಕು ಬದಲಿಸಿದ ಮೋದಿ ಸರ್ಕಾರದ ಪ್ರಮುಖ ನೀತಿಗಳುUnforgettable 2020: ವರ್ಷದ ದಿಕ್ಕು ಬದಲಿಸಿದ ಮೋದಿ ಸರ್ಕಾರದ ಪ್ರಮುಖ ನೀತಿಗಳು

ಬೈರುತ್ ಸ್ಫೋಟ

ಬೈರುತ್ ಸ್ಫೋಟ

ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಆಗಸ್ಟ್ ತಿಂಗಳಲ್ಲಿ ಉಂಟಾದ ಬೃಹತ್ ಸ್ಫೋಟದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಸುಮಾರು 3,000 ಟನ್‌ನಷ್ಟು ಶೇಖರಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ಸ್‌ನ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ಭಾರಿ ಸ್ಫೋಟಗಳು ಉಂಟಾಗಿದ್ದವು. ಈ ಘಟಕದ ಸಮೀಪದಲ್ಲಿದ್ದ ಮನೆಗಳ ಕಿಟಕಿಗಳು ಸ್ಫೋಟದ ರಭಸಕ್ಕೆ ಹಲವು ಮೈಲುಗಳಷ್ಟು ದೂರ ಹಾರಿ ಹೋಗಿ ಬಿದ್ದಿದ್ದವು. ಸಾವಿರಾರು ಮಂದಿ ಗಾಯಗೊಂಡಿದ್ದರು.

ಸಿಕೋರಿಸ್ಕಿ ಹೆಲಿಕಾಪ್ಟರ್ ಅವಘಡ

ಸಿಕೋರಿಸ್ಕಿ ಹೆಲಿಕಾಪ್ಟರ್ ಅವಘಡ

ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ, ಎನ್‌ಬಿಎ ಸ್ಟಾರ್ ಕೋಬ್ ಬ್ರಿಯಾಂಟ್, ಅವರ ಮಗಳು ಜಿಯಾನ್ನಾ ಮತ್ತು ಇತರೆ ಏಳು ಮಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಘಟನೆ ಜನವರಿಯಲ್ಲಿ ನಡೆದಿತ್ತು. ಎರಡು ಎಂಜಿನ್‌ನ ಸಿಕೋರ್‌ಸ್ಕಿ ಎಸ್-76ಬಿ ಹೆಲಿಕಾಪ್ಟರ್ ಲಾಸ್ ಏಂಜಲಿಸ್‌ನ ಹೊರವಲಯದ ಬೆಟ್ಟಕ್ಕೆ ಅಪ್ಪಳಿಸಿತ್ತು. ದಟ್ಟವಾಗಿ ಆವರಿಸಿದ್ದ ಮಂಜಿನಿಂದ ಈ ಅವಘಡ ಉಂಟಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಪ್ರಾದೇಶಿಕ ಜಾಗೃತಿ ಎಚ್ಚರಿಕೆ ವ್ಯವಸ್ಥೆ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೌಲಭ್ಯವಿರಲಿಲ್ಲ.

Unforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳುUnforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳು

ಕಾಳ್ಗಿಚ್ಚಿಗೆ ಕಾರಣವಾದ ಪಾರ್ಟಿ

ಕಾಳ್ಗಿಚ್ಚಿಗೆ ಕಾರಣವಾದ ಪಾರ್ಟಿ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ 'ಜೆಂಡರ್ ರಿವೀಲಿಂಗ್ ಪಾರ್ಟಿ' ವೇಳೆ ಸ್ಫೋಟಕ ಸಾಧನವೊಂದರ ಬಳಕೆಯಿಂದ ಹೊತ್ತಿಕೊಂಡ ಬೆಂಕಿ 10,000 ಎಕರೆಗೂ ಅಧಿಕ ಅರಣ್ಯವನ್ನು ಸುಟ್ಟುಹಾಕಿತು. ಯುಕೈಪಾದಲ್ಲಿನ ಎಲ್ ಡೊರಾಡೊ ರಾಂಚ್ ಪಾರ್ಕ್‌ನಲ್ಲಿ ಜನರ ಗುಂಪೊಂದು ಸೇರಿಕೊಂಡಿತ್ತು. ಅದರಲ್ಲಿ ಅವರು ತಮ್ಮ ಮಗುವಿನ ಲಿಂಗ ಯಾವುದೆಂದು ಸ್ನೇಹಿತರು ಹಾಗೂ ಅವರ ಕುಟುಂಬದವರಿಗೆ ಬಹಿರಂಗಪಡಿಸುವ ತಮಾಷೆಯ ಕೂಟ ನಡೆಸುತ್ತಿದ್ದರು. ಆಗ ಹೊಗೆ ಉತ್ಪಾದಿಸುವ ಸಾಧನವೊಂದನ್ನು ಬಳಸಲಾಗಿತ್ತು. ಅದರಿಂದ ಬೆಂಕಿ ಹೊತ್ತಿಕೊಂಡು ಭಾರಿ ಅವಘಡ ಉಂಟಾಯಿತು.

ದಕ್ಷಿಣ ಕೊರಿಯಾ ಬೆಂಕಿ

ದಕ್ಷಿಣ ಕೊರಿಯಾ ಬೆಂಕಿ

ದಕ್ಷಿಣ ಕೊರಿಯಾದ ನಿರ್ಮಾಣ ಸ್ಥಳವೊಂದರಲ್ಲಿ ಉಂಟಾದ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 38 ಮಂದಿ ಜೀವ ಕಳೆದುಕೊಂಡರೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಏಪ್ರಿಲ್‌ನಲ್ಲಿ ಈ ದುರಂತ ಸಂಭವಿಸಿತ್ತು. ವೇರ್ ಹೌಸ್ ಒಂದರ ನೆಲಮಾಳಿಗೆ ಮಟ್ಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಏಕಾಏಕಿ ಇಡೀ ಕಟ್ಟಡವನ್ನು ಆವರಿಸಿತ್ತು.

ಪಂಜಾಬ್ ಆಲ್ಕೋಹಾಲ್ ದುರಂತ

ಪಂಜಾಬ್ ಆಲ್ಕೋಹಾಲ್ ದುರಂತ

ಪಂಜಾಬ್‌ನಲ್ಲಿ ಜುಲೈ 29ರಂದು ನಕಲಿ, ವಿಷಪೂರಿತ ಮದ್ಯ ಸೇವನೆಯಿಂದ ನೂರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. ತರ್ನ್ ತರನ್ ಜಿಲ್ಲೆಯಲ್ಲಿಯೇ ಸುಮಾರು 80 ಮಂದಿ ಮೃತಪಟ್ಟಿದ್ದರೆ, ಬಾಟಲಾ ಮತ್ತು ಅಮೃತಸರಗಳಲ್ಲಿ ತಲಾ 12 ಮಂದಿ ಮೃತಪಟ್ಟಿದ್ದರು.

ಚೀನಾ ಗಣಿ ಅವಗಢ

ಚೀನಾ ಗಣಿ ಅವಗಢ

ಚೀನಾದ ಚೊಂಗ್‌ಕಿಂಗ್ ನಗರದಲ್ಲಿನ ಗಣಿಯೊಂದರಲ್ಲಿ ಒಳಗೆ ಸಿಲುಕೊಂಡ 23 ಮಂದಿ ಮೃತಪಟ್ಟ ಘಟನೆ ಡಿ. 5ರಂದು ನಡೆದಿತ್ತು. ಎರಡು ತಿಂಗಳ ಅವಧಿಯಲ್ಲಿ ಇದೇ ಭಾಗದಲ್ಲಿ ನಡೆದ ಎರಡನೆಯ ದುರಂತವಾಗಿತ್ತು. ಕಲ್ಲಿದ್ದಲು ಗಣಿಯ ಒಳಭಾಗದಲ್ಲಿದ್ದ 24 ಕಾರ್ಮಿಕರು ಅತಿಯಾದ ಕಾರ್ಬನ್ ಮಾನಾಕ್ಸೈಡ್ ಕಾರಣದಿಂದ ಉಸಿರಾಡಲು ಪರದಾಡಿದ್ದರು. ಸುಮಾರು 30 ಗಂಟೆಗಳ ಕಾರ್ಯಾಚರಣೆ ಬಳಿಕ ಒಬ್ಬನನ್ನು ಮಾತ್ರ ಜೀವ ಸಹಿತ ಉಳಿಸಲು ಸಾಧ್ಯವಾಯಿತು.

English summary
Unforgettable 2020: Kerala plane crash, Kobe Bryant helicopter crash and other major accidents were killed many this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X