ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಈ ವರ್ಷದ ವಿಶಿಷ್ಟ ಗಿನ್ನೆಸ್ ವಿಶ್ವದಾಖಲೆಗಳು

|
Google Oneindia Kannada News

ಹೊಸ ವರ್ಷ ಸಮೀಪಿಸುತ್ತಿದೆ. 2020 ಎಂಬ ಇತಿಹಾಸ ಪುಟಗಳಿಂದ ಮರೆತುಬಿಡುವಂತಹ ವರ್ಷಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಹಾಗೆಂದು 2020 ಜನಮಾನಸದಿಂದ ಅಷ್ಟು ಸುಲಭಕ್ಕೆ ಮರೆಯಾಗುವುದಿಲ್ಲ. ಏಕೆಂದರೆ ಇದು ಸಂಕಷ್ಟ, ಸವಾಲುಗಳ ವರ್ಷ. ಜನವರಿಯಿಂದ ಜಗತ್ತಿನ ವಿದ್ಯಮಾನಗಳ ನಡುವೆ ನಾವು ಸಾಗಿಬಂದ ಹಾದಿಯತ್ತ ಒಂದು ನೋಟ ಹಾಯಿಸಿದರೆ ಅನೇಕ ವಿಶಿಷ್ಟ, ಸಿಹಿ-ಕಹಿ ಘಟನೆಗಳು ಕಾಣಿಸುತ್ತವೆ.

ಜನರು ಈ ವರ್ಷ ಹೆಚ್ಚಿನ ದಿನಗಳನ್ನು ಮನೆಯ ಒಳಗೇ ಕಳೆದಿದ್ದಾರೆ. ಇಡೀ ಜಗತ್ತು ಚಟುವಟಿಕೆಗಳಿಲ್ಲದೆ ಸ್ತಬ್ಧಗೊಂಡಿತ್ತು ಎಂಬ ಅನಿಸಿಕೆ ಮೂಡಿದೆ. ಈಗ ಎಲ್ಲರೂ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಅಥವಾ ಈ ಸ್ಥಿತಿಯನ್ನೇ ಸಹಜ ಎಂದು ಒಪ್ಪಿಕೊಳ್ಳುವ ರೀತಿ ಬದಲಾಗುತ್ತಿದ್ದಾರೆ.

'ಕೊರೊನಾ' ಕೊಂದ ಮಹಿಳಾಮಣಿಗಳು, ಇದು ಸಾಧಕಿಯರ ವರ್ಷ..!'ಕೊರೊನಾ' ಕೊಂದ ಮಹಿಳಾಮಣಿಗಳು, ಇದು ಸಾಧಕಿಯರ ವರ್ಷ..!

ಇವೆಲ್ಲದರ ನಡುವೆ ಅನೇಕರು ಸುಮ್ಮನೆ ಕುಳಿತಿಲ್ಲ. ತಮ್ಮ ಹವ್ಯಾಸ, ಆಸಕ್ತಿ, ಗುರಿಗಳನ್ನು ಈಡೇರಿಸಿಕೊಳ್ಳುವ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಕೆಲವರು ಒಂದಷ್ಟು ವಿಶೇಷ ಸಾಧನೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಂತಹ ಕೆಲವು ಸಾಧನೆಗಳು ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರಿವೆ. ನೆಟ್ಟಿಗರನ್ನು ಈ ವರ್ಷ ಬೆರಗಾಗಿಸಿದ ವಿಶ್ವದಾಖಲೆಗಳ ಪಟ್ಟಿ ಇಲ್ಲಿದೆ.

2 ಮೀಟರ್ ಉದ್ದದ ತಲೆಗೂದಲು

2 ಮೀಟರ್ ಉದ್ದದ ತಲೆಗೂದಲು

ಈ ವರ್ಷ ಅತಿ ಉದ್ದದ ಕೂದಲು ಹೊಂದಿರುವ ಮಹಿಳೆ ಎಂಬ ಸಾಧನೆಯನ್ನು ಗುಜರಾತ್ ಮೂಲದ ನಿಲಾಂಶಿ ಪಟೇಲ್ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. 17 ವರ್ಷದ ನಿಲಾಂಶಿ ಅವರ ಕೂದಲಿ ಉದ್ದ 6 ಅಡಿ ಮತ್ತು 2.8 ಇಂಚ್ ಅಥವಾ 190 ಸೆಂಟಿ ಮೀಟರ್. 2018ರಲ್ಲಿ 170.5 ಸೆಂಟಿಮೀಟರ್ ಉದ್ದದ ಕೂದಲಿನ ಮೂಲಕ ನಿಲಾಂಶಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಇದು ಮೂರನೇ ವರ್ಷ ತಮ್ಮ ದಾಖಲೆಯನ್ನು ಅವರು ಸ್ವತಃ ತಾವೇ ಮುರಿದಿದ್ದಾರೆ.

ರೋಲರ್ ಸ್ಕೇಟ್‌ನಲ್ಲಿ ಸ್ಕಿಪ್ಪಿಂಗ್

ರೋಲರ್ ಸ್ಕೇಟ್‌ನಲ್ಲಿ ಸ್ಕಿಪ್ಪಿಂಗ್

ನಿಂತ ಗಟ್ಟಿ ನೆಲದ ಮೇಲೆ ಸ್ಕಿಪ್ಪಿಂಗ್ ಮಾಡುವುದೇ ಸಾಹಸ. ಆದರೆ ದೆಹಲಿ ಮೂಲದ ಜೊರಾವರ್ ಸಿಂಗ್ ಎಂಬ 21 ವರ್ಷದ ಯುವಕ ರೋಲರ್ ಅಥವಾ ಇನ್‌ಲೈನ್ ಸ್ಕೇಟ್ ಧರಿಸಿ ಕೇವಲ 30 ಸೆಕೆಂಡುಗಳಲ್ಲಿ 147 ಬಾರಿ ಸ್ಕಿಪ್ಪಿಂಗ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಶಾಲೆಯಲ್ಲಿ ಡಿಸ್ಕಸ್ ಥ್ರೋ ಪಟುವಾಗಿದ್ದ ಜೊರಾವರ್, ಗಾಯದ ಕಾರಣ ಆ ಆಟದಿಂದ ದೂರ ಸರಿದರು. ಫಿಟ್ನೆಸ್ ಉಳಿಸಿಕೊಳ್ಳಲು ಸ್ಕಿಪ್ಪಿಂಗ್ ಆರಂಭಿಸಿದ್ದರು.

Unforgettable 2020: ಸಾಮಾಜಿಕ ಜಾಲತಾಣದ ಮೂಲಕ ಮನೆಮಾತಾದ ಮಹಿಳೆಯರುUnforgettable 2020: ಸಾಮಾಜಿಕ ಜಾಲತಾಣದ ಮೂಲಕ ಮನೆಮಾತಾದ ಮಹಿಳೆಯರು

ಮಣ್ಣಿನ ತಟ್ಟೆ ಒಡೆಯುವುದು

ಮಣ್ಣಿನ ತಟ್ಟೆ ಒಡೆಯುವುದು

ಮಾರ್ಷಿಯಲ್ ಆರ್ಟ್ಸ್‌ನಲ್ಲಿ ಪರಿಣತರಾದ ಪಾಕಿಸ್ತಾನದ ಮುಹಮ್ಮದ್ ರಶೀದ್ ಎಂಬುವವರು ಒಂದು ನಿಮಿಷದಲ್ಲಿ ಸತತವಾಗಿ 62 ಮಣ್ಣಿನ ತಟ್ಟೆಗಳನ್ನು ಪುಡಿಗಟ್ಟಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಒಂದು ಬದಿಯಲ್ಲಿ ನಿಂತ ವ್ಯಕ್ತಿಯೊಬ್ಬರು ಪಟಪಟನೇ ರಶೀದ್ ಎದುರು ಮಣ್ಣಿನ ತಟ್ಟೆಗಳನ್ನು ಎಸೆಯುತ್ತಾರೆ. ರಶೀದ್ ಒಂದೇ ಕೈಯಲ್ಲಿ ಅಷ್ಟೇ ವೇಗವಾಗಿ ಅವುಗಳನ್ನು ಗುದ್ದಿ ಪುಡಿಗಟ್ಟುತ್ತಾರೆ. ಇದು ಗಿನ್ನೆಸ್ ವಿಶ್ವದಾಖಲೆ ಪಟ್ಟಿಯಲ್ಲಿ ಸೇರಿದೆ. 30 ಸೆಕೆಂಡುಗಳಲ್ಲಿ ಅತಿ ಹೆಚ್ಚು ತಟ್ಟೆಗಳನ್ನು ಒಡೆದ ದಾಖಲೆಯೂ ರಶೀದ್ ಹೆಸರಲ್ಲಿದೆ.

ಜಗತ್ತಿನ ಅತಿ ಎತ್ತರದ ತರುಣ

ಜಗತ್ತಿನ ಅತಿ ಎತ್ತರದ ತರುಣ

ಚೀನೀಯರು ಸಾಮಾನ್ಯವಾಗಿ ಅಷ್ಟೇನೂ ಎತ್ತರದ ನಿಲುವು ಹೊಂದಿದವರಲ್ಲ. ಆದರೆ ರೆನ್ ಕೆಯು ಎಂಬಾತ ಬರೋಬ್ಬರಿ 221.02 ಸೆಂಟಿ ಮೀಟರ್, ಅಂದರೆ 7 ಅಡಿ 3.02 ಇಂಚು ಎತ್ತರವಿದ್ದಾನೆ. ಅಂದಹಾಗೆ ಆತನ ವಯಸ್ಸು ಕೇವಲ 14 ವರ್ಷ. ಅಂಗನವಾಡಿಗೆ ಹೋಗುವಾಗಲೇ ಆತ 150 ಸೆಂ.ಮೀ ಉದ್ದವಿದ್ದ. 18 ವರ್ಷದೊಳಗಿನ ತರುಣರಲ್ಲಿ ಅತಿ ಎತ್ತರದ ವ್ಯಕ್ತಿ ಎಂಬ ದಾಖಲೆ ಈತನ ಹೆಸರಿನಲ್ಲಿದೆ.

Unforgettable 2020: ದೇಶಗಳ ನಡುವಿನ ಪ್ರಮುಖ ಸಶಸ್ತ್ರ ಕಾದಾಟಗಳುUnforgettable 2020: ದೇಶಗಳ ನಡುವಿನ ಪ್ರಮುಖ ಸಶಸ್ತ್ರ ಕಾದಾಟಗಳು

ತಿನ್ನುವುದರಲ್ಲಿ ದಾಖಲೆ

ತಿನ್ನುವುದರಲ್ಲಿ ದಾಖಲೆ

ತಿನ್ನುವ ಚಾಲೆಂಜ್‌ಗಳು ಅನೇಕ ರೀತಿಯಲ್ಲಿ ನಡೆಯುತ್ತಿರುತ್ತದೆ. ಇದು ಮೋಜಿನಂತೆ ಕಂಡರೂ ತಿನ್ನುವುದು ಕೂಡ ಸುಲಭವಲ್ಲ. ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ ನಿವಾಸಿ ಲೀಹ್ ಶುಟ್ಕೆವರ್ ಮೂರು ನಿಮಿಷದಲ್ಲಿ ಒಮ್ಮೆಯೂ ನಾಲಿಗೆಯನ್ನು ತುಟಿಗೆ ಸವರಿಕೊಳ್ಳದೆ ಹತ್ತು ಜಾಮ್ ಡೋನಟ್‌ಗಳನ್ನು ತಿಂದುಮುಗಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ. ಈ ವರ್ಷ ಇದುವರೆಗೂ ಆಕೆ 18 ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದ್ದಾಳೆ. 12 ಚಾಕೋಲೇಟ್ ಟ್ರಫಲ್‌ಗಳನ್ನು ಕೈಯಲ್ಲಿ ಮುಟ್ಟದೆ ಒಂದು ನಿಮಿಷದಲ್ಲಿ ತಿಂದು ಮುಗಿಸಿದ್ದು ಆಕೆಯ ಇತ್ತೀಚಿನ ದಾಖಲೆ.

English summary
Unforgettable 2020: list of Guinness World Records from 2020 that left netizens in awe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X