ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020; ಭಾರತದಲ್ಲಿ ಸಂಭವಿಸಿದ ಚಂಡಮಾರುತಗಳು

|
Google Oneindia Kannada News

2020ನೇ ವರ್ಷ ಹಲವು ಪ್ರಾಕೃತಿಕ ವಿಕೋಪಗಳನ್ನು ಕಂಡಿದೆ. ವರ್ಷದ ಆರಂಭದಲ್ಲೇ ಆತಂಕಕ್ಕೆ ಎಡೆಮಾಡಿಕೊಟ್ಟ ಕೊರೊನಾ ವೈರಸ್ ಪ್ರಪಂಚವನ್ನೇ ದಿಕ್ಕು ತಪ್ಪಿಸುವಂತೆ ಮಾಡಿತ್ತು. ಇದರೊಂದಿಗೆ ಅತಿವೃಷ್ಟಿ, ಪ್ರವಾಹ, ಭೂಕಂಪಗಳು ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದವು.

ಇವೆಲ್ಲವುಗಳ ನಡುವೆ ಚಂಡಮಾರುತಗಳೂ ಭಾರತವನ್ನು ನಲುಗಿಸಿವೆ. ಅಂಫಾನ್, ನಿವಾರ್, ಬುರೇವಿ, ನಿಸರ್ಗ, ಅನರ್ಬ್ ಹೀಗೆ ಸಾಲು ಸಾಲು ಚಂಡಮಾರುತಗಳು ಭಾರತದ ಹಲವು ರಾಜ್ಯಗಳಲ್ಲಿ ಆರ್ಭಟ ತೋರಿ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. 2020ರಲ್ಲಿ ಭಾರತಕ್ಕೆ ಅಪ್ಪಳಿಸಿದ ಚಂಡಮಾರುತಗಳ ವಿವರ ಇಲ್ಲಿದೆ...

Unforgettable 2020: ಈ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳುUnforgettable 2020: ಈ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳು

 ಪಶ್ಚಿಮ ಬಂಗಾಳದಲ್ಲಿ ಆರ್ಭಟಿಸಿದ ಅಂಫಾನ್

ಪಶ್ಚಿಮ ಬಂಗಾಳದಲ್ಲಿ ಆರ್ಭಟಿಸಿದ ಅಂಫಾನ್

ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಚಂಡಮಾರುತಗಳಲ್ಲಿ 'ಅಂಫಾನ್' ಅತಿ ಪ್ರಬಲ ಚಂಡಮಾರುತ ಎನಿಸಿಕೊಂಡಿತ್ತು. ಮೇ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರದಿಂದಾಗಿ ಸಂಭವಿಸಿದ ಈ ಚಂಡಮಾರುತ ಬಾಂಗ್ಲಾದೇಶ, ಭಾರತದ ಪಶ್ಚಿಮ ಬಂಗಾಳದಲ್ಲಿ ಅಟ್ಟಹಾಸ ಮೆರೆದಿತ್ತು. ಅಂಡಮಾನ್, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಕರ್ನಾಟಕ ಒಳಗೊಂಡಂತೆ ದಕ್ಷಿಣ ಭಾರತದಲ್ಲಿಯೂ ಇದರ ಪರಿಣಾಮ ಗೋಚರಿಸಿತ್ತು. ಅಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳಕ್ಕೆ 1 ಲಕ್ಷ ಕೋಟಿ ರೂ ನಷ್ಟ ಉಂಟಾಗಿರುವುದಾಗಿ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಮಾಹಿತಿ ನೀಡಿತ್ತು. 2008ರಲ್ಲಿ ಕಾಣಿಸಿಕೊಂಡಿದ್ದ ಸೈಕ್ಲೋನ್ ನರ್ಗೀಸ್ ದಾಖಲೆಯನ್ನೂ ಈ ಚಂಡ ಮಾರುತ ಮುರಿದಿದ್ದು, ಪಶ್ಚಿಮ ಬಂಗಾಳದಲ್ಲಿ ನೂರು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

 ನಿಸರ್ಗದಿಂದ ಮಹಾರಾಷ್ಟ್ರದಲ್ಲಿ ಅನಾಹುತಗಳ ಸರಣಿ

ನಿಸರ್ಗದಿಂದ ಮಹಾರಾಷ್ಟ್ರದಲ್ಲಿ ಅನಾಹುತಗಳ ಸರಣಿ

ಜೂನ್ ತಿಂಗಳಿನಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾದ ನಿಸರ್ಗ ಚಂಡಮಾರುತ ಮಹಾರಾಷ್ಟ್ರದಲ್ಲಿ ಅನಾಹುತಗಳನ್ನೇ ಹುಟ್ಟುಹಾಕಿದೆ. ಮಹಾರಾಷ್ಟ್ರದಲ್ಲಿ ಚಂಡಮಾರುತದ ಪರಿಣಾಮ ಹೆಚ್ಚಾಗುತ್ತಿದ್ದಂತೆ ಹಲವು ರಾಜ್ಯಗಳಿಂದ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಗುಜರಾತ್ ನಲ್ಲೂ ಈ ಚಂಡಮಾರುತದ ಪರಿಣಾಮ ಕಂಡುಬಂದಿತ್ತು. ಮಹಾರಾಷ್ಟ್ರದ ಪಾಲಿಗೆ ಇದು ಶತಮಾನದ ಬಳಿಕ ಅಪ್ಪಳಿಸಿದ ಭೀಕರ ಚಂಡಮಾರುತ ಆಗಲಿದೆ ಎಂದು ಮುನ್ನವೇ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿತ್ತು. ಮುಂಬೈ ನಗರದಲ್ಲಿ ಭಾರೀ ನಷ್ಟವನ್ನೂ ತಂದೊಡ್ಡಿತ್ತು.

 ಚೆನ್ನೈನಲ್ಲಿ ನಿವಾರ್ ಗೆ ತತ್ತರಿಸಿದ ಜನ

ಚೆನ್ನೈನಲ್ಲಿ ನಿವಾರ್ ಗೆ ತತ್ತರಿಸಿದ ಜನ

ನವೆಂಬರ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ನಿವಾರ್ ಅತಿ ಗಂಭೀರ ಚಂಡಮಾರುತ ಎನಿಸಿಕೊಂಡಿತ್ತು. ದಕ್ಷಿಣ ಭಾರತದಲ್ಲಿ ಇದರ ಪರಿಣಾಮ ಕಂಡುಬಂದಿದ್ದು, ಪುದುಚೆರಿ, ಚೆನ್ನೈ, ತಮಿಳುನಾಡಿನಲ್ಲಿ ಭಾರೀ ಅವಾಂತರವನ್ನೇ ಉಂಟು ಮಾಡಿತ್ತು. ಚಂಡಮಾರುತದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಚಂಡಮಾರುತದ ಬೆನ್ನಲ್ಲೇ ಗಟಿ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಎರಡನೆಯ ಬಾರಿ ರೂಪುಗೊಂಡಿತ್ತು. ಆದರೆ ಇದರಿಂದ ಭಾರತದ ಮೇಲೆ ಅಷ್ಟಾಗಿ ಪರಿಣಾಮ ಉಂಟಾಗಿಲ್ಲ.

 ಕೇರಳ, ತಮಿಳುನಾಡಿಯಲ್ಲಿ ಬುರೇವಿ ಅಟ್ಟಹಾಸ

ಕೇರಳ, ತಮಿಳುನಾಡಿಯಲ್ಲಿ ಬುರೇವಿ ಅಟ್ಟಹಾಸ

ನವೆಂಬರ್ ತಿಂಗಳಿನಲ್ಲಿಯೇ ಕಾಣಿಸಿಕೊಂಡ ಬುರೇವಿ ಚಂಡಮಾರುತ, ಕೇರಳ, ದಕ್ಷಿಣ ತಮಿಳುನಾಡನ್ನು ಮತ್ತೆ ಕಾಡಿತ್ತು. ನಿವಾರ್ ಚಂಡಮಾರುತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಅಪ್ಪಳಿಸಿದ ಬುರೇವಿ ಮತ್ತೆ ಜನರನ್ನು ಅತಂತ್ರ ಸ್ಥಿತಿಗೆ ದೂಡಿತ್ತು. ತಮಿಳಿನಾಡಿನಲ್ಲಿ ಪ್ರವಾಹದಂಥ ಮಳೆಗೆ ಕಾರಣವಾಗಿತ್ತು. ಬುರೇವಿ' ಚಂಡಮಾರುತ ತಮಿಳುನಾಡು ಮತ್ತು ಕೇರಳ ಕರಾವಳಿ ಭಾಗದ ಮೂಲಕ ಸಾಗಿ ಶ್ರೀಲಂಕಾಗೆ ತಲುಪಿ ತನ್ನ ಅಟ್ಟಹಾಸ ಮೆರೆದು, ಡಿಸೆಂಬರ್ ನಲ್ಲಿ ಮನ್ನಾರ್ ಪ್ರವೇಶಿಸಿತ್ತು. ಡಿಸೆಂಬರ್ ಮೊದಲ ವಾರ ಚಂಡಮಾರುತದ ಪರಿಣಾಮ ತಗ್ಗಿತು.
ನಿವಾರ್, ಬುರೆವಿ ಬಳಿಕ ತಮಿಳುನಾಡಿಗೆ ಅರ್ನಬ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಈ ಚಂಡಮಾರುತ ಉಂಟಾಗಲಿದ್ದು, ಭಾರತ, ಬಾಂಗ್ಲಾದೇಶ ಸೇರಿದಂತೆ 13 ದೇಶಗಳು ವರದಿ ಮಾಡಿದ ಚಂಡಮಾರುತಗಳ ಪೈಕಿ ಅರ್ನಬ್ ಚಂಡಮಾರುತ ಕೂಡ ಒಂದಾಗಿತ್ತು. ಆದರೆ ಈ ಚಂಡಮಾರುತ ಯಾವಾಗ ಅಪ್ಪಳಿಸಲಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿರಲಿಲ್ಲ.

English summary
2020 year saw many natural disasters in india. Many cyclones also hit this year. Here are some of the cyclones of india in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X