ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಸಾಮಾಜಿಕ ಜಾಲತಾಣದ ಮೂಲಕ ಮನೆಮಾತಾದ ಮಹಿಳೆಯರು

|
Google Oneindia Kannada News

ಇಡೀ ಜಗತ್ತನ್ನು ಸಂಕಷ್ಟಕ್ಕೆ ನೂಗಿದ 2020ಕ್ಕೆ ವಿದಾಯ ಹೇಳಿ 2021ಅನ್ನು ಸ್ವಾಗತಿಸುವ ದಿನಗಳು ಸಮೀಪಿಸುತ್ತಿವೆ. 2020ಅನ್ನು ನಮ್ಮ ಕ್ಯಾಲೆಂಡರ್‌ನಿಂದ ಅಳಿಸಿ ಹಾಕಬೇಕು. ಈ ವರ್ಷ ಯಾವಾಗ ಮುಗಿಯುವುದೋ ಎನ್ನುತ್ತಿದ್ದ ಜನರು, ಹೊಸ ವರ್ಷದ ಬಳಿಕ ತಮ್ಮ ಬದುಕು ಹಸನಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಕೊರೊನಾ ವೈರಸ್ ಸೋಂಕಿನ ಹಾವಳಿಯಿಂದ ಜನರ ಬದುಕಿನ ಬಂಡಿ ಹಳಿ ತಪ್ಪಿದೆ. ಅನೇಕರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.

ಸಾಮಾಜಿಕ, ಆರ್ಥಿಕ, ಆರೋಗ್ಯ ತೊಡಕುಗಳ ನಡುವೆಯೂ ದೇಶದಲ್ಲಿ ಅನೇಕ ಸಕಾರಾತ್ಮಕ ಘಟನೆಗಳು ನಡೆದಿವೆ. ಎಲ್ಲ ಅವಕಾಶಗಳೂ ತಪ್ಪಿಹೋದವು ಎಂದು ಬದುಕಿನ ಬಗ್ಗೆ ಹತಾಶರಾಗಿ ಕುಳಿತವರ ನಡುವೆ ಅಪೂರ್ವ ಸಾಧನೆಗಳನ್ನು ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ. ಅದರಲ್ಲಿಯೂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆದಿದ್ದಾರೆ.

Unforgettable 2020: ದೇಶಗಳ ನಡುವಿನ ಪ್ರಮುಖ ಸಶಸ್ತ್ರ ಕಾದಾಟಗಳುUnforgettable 2020: ದೇಶಗಳ ನಡುವಿನ ಪ್ರಮುಖ ಸಶಸ್ತ್ರ ಕಾದಾಟಗಳು

ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ಮಹಿಳೆಯರು ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮ ಕಲೆಗಳನ್ನು ಪ್ರದರ್ಶಿಸಿದ್ದಾರೆ. ಅನೇಕರು ಅಡುಗೆ ಕಾರ್ಯಕ್ರಮದ ಚಾನೆಲ್‌ಗಳನ್ನು ತೆರೆದು ಆದಾಯದ ಮೂಲವನ್ನು ಕಂಡುಕೊಂಡಿದ್ದರೆ, ಇನ್ನು ಅನೇಕರು, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಹೀಗೆ ಈ ವರ್ಷ ಸ್ಫೂರ್ತಿದಾಯಕ ಸಾಧನೆಗಳನ್ನು ಮಾಡಿ ಮನೆಮಾತಾದ ಕೆಲವು ಮಹಿಳೆಯರ ಪರಿಚಯ ಇಲ್ಲಿದೆ.

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

ಮೊದಲ ಮಹಿಳಾ ಪೈಲಟ್

ಮೊದಲ ಮಹಿಳಾ ಪೈಲಟ್

ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಇಟಲಿಯ ರೋಮ್‌ನಲ್ಲಿ ಸಿಲುಕಿಕೊಂಡಿದ್ದ 263 ಭಾರತೀಯರನ್ನು ಕರೆತರುವ ಜವಾಬ್ದಾರಿಯನ್ನು ಏರ್ ಇಂಡಿಯಾ ಪೈಲಟ್ ಸ್ವಾತಿ ರಾವಲ್ ವಹಿಸಿಕೊಂಡಿದ್ದರು. ಹೆಚ್ಚಾಗಿ ವಿದ್ಯಾರ್ಥಿಗಳೇ ಇದ್ದ ಭಾರತೀಯರನ್ನು ಕರೆದುಕೊಂಡು ಬರಲು ಕ್ಯಾಪ್ಟರ್ ರಾಜಾ ಚೌಹಾಣ್ ಅವರೊಂದಿಗೆ ಬೋಯಿಂಗ್ 777ಅನ್ನು ಚಲಾಯಿಸಿದ ಸ್ವಾತಿ ರಾವಲ್, ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾಜನರಾದರು.

ಸೀರೆಯಲ್ಲಿ ಹೂಲಾ ಹೂಪರ್!

ಸೀರೆಯಲ್ಲಿ ಹೂಲಾ ಹೂಪರ್!

24 ವರ್ಷದ ಎಷ್ನಾ ಕುಟ್ಟಿ ಇನ್‌ಸ್ಟಾಗ್ರಾಂನಲ್ಲಿ ತನ್ನ ವಿಶಿಷ್ಟ ಸಾಮರ್ಥ್ಯದಿಂದ ಗಮನ ಸೆಳೆದವರು. ಸಾಮಾನ್ಯವಾಗಿ ಹೂಲಾ ಹೂಪರ್‌ ಕಲೆಯನ್ನು ಪ್ರದರ್ಶಿಸುವಾಗ ಕಲಾವಿದರು ಅದಕ್ಕೆ ಹೊಂದಾಣಿಕೆಯಾಗುವಂತೆ ಬಿಗಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಎಷ್ನಾ ಕುಟ್ಟಿ ಅವರು ಸೀರೆಯಲ್ಲಿ ಹೂಲಾ ಹೂಪರ್ ಪ್ರದರ್ಶಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ದೆಹಲಿ ವಿವಿಯ ಲೇಡಿ ಶ್ರೀರಾಮ್ ಕಾಲೇಜ್‌ನ ಸೈಕಾಲಜಿ ಪದವೀಧರೆಯಾದ ಅವರ ಈ ಹೂಲಾ ಹೂಪರ್ ನೃತ್ಯ ಬಹಳ ವೈರಲ್ ಆಗಿತ್ತು.

Unforgettable 2020:ವರ್ಷದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುಳ್ಳು ಸುದ್ದಿಗಳುUnforgettable 2020:ವರ್ಷದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುಳ್ಳು ಸುದ್ದಿಗಳು

ಶೈಲಜಾ ಟೀಚರ್

ಶೈಲಜಾ ಟೀಚರ್

ಶೈಲಜಾ ಟೀಚರ್ ಎಂದೇ ಪ್ರಸಿದ್ಧರಾದವರು ಕೇರಳದ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಸಚಿವೆ ಕೆ.ಕೆ. ಶೈಲಜಾ. 63 ವರ್ಷದ ಶೈಲಜಾ ಅವರು ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣದಲ್ಲಿ ತೆಗೆದುಕೊಂಡ ಕ್ರಮಗಳಿಂದ ಮತ್ತಷ್ಟು ಜನಪ್ರಿಯರಾದರು. ಚೀನಾದ ವುಹಾನ್‌ನಲ್ಲಿ ಮೊದಲ ಸೋಂಕು ಪತ್ತೆಯಾದಾಗಲೇ ಕೇರಳದಲ್ಲಿ ಕೋವಿಡ್ ಎದುರಿಸಲು ಕಾರ್ಯಪಡೆಯನ್ನು ಸಿದ್ಧಪಡಿಸಿದ್ದರು. ಅವರನ್ನು ಏಷ್ಯಾದ ಮಹಿಳಾ ಕೊರೊನಾ ವೈರಸ್ ವಾರಿಯರ್‌ಗಳ ಪಟ್ಟಿಯಲ್ಲಿ ಒಬ್ಬರೆಂದು ಬಿಬಿಸಿ ನ್ಯೂಸ್ ಹೆಸರಿಸಿತ್ತು. ಅಲ್ಲದೆ ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂಡಾ ಅರ್ಡೆನ್ ಅವರಿಗಿಂತಲೂ ಮುಂಚೂಣಿ ಕೋವಿಡ್ 19ರ ಟಾಪ್ ಚಿಂತಕರಲ್ಲಿ ಅವರನ್ನು ಗುರುತಿಸಲಾಗಿತ್ತು.

ಕೋವಿಡ್ ಸಂದೇಶದ ಧ್ವನಿ!

ಕೋವಿಡ್ ಸಂದೇಶದ ಧ್ವನಿ!

ಭಾರತೀಯರು ಕೋವಿಡ್ ಸೋಂಕಿನ ಸಂಕಷ್ಟದಲ್ಲಿ ಪದೇ ಪದೇ ಕೇಳಿದ ಮತ್ತು ಕೇಳುತ್ತಲೇ ಇರವ ಧ್ವನಿ ಎಂದರೆ ಜಸ್ಲೀನ್ ಭಲ್ಲಾ ಅವರದ್ದು! ಕೋವಿಡ್ ಸೋಂಕು ಹರಡಿದ ಸಂದರ್ಭದಲ್ಲಿ ಜನರಿಗೆ ಸೂಕ್ತ ಎಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸ್ವಯಂಚಾಲಿತ ಫೋನ್ ಸಂದೇಶಗಳನ್ನು ನೀಡುವ ಧ್ವನಿ ಹಿಂದೆ ಇರುವುದು ಜಸ್ಲೀನ್ ಅವರ ಧ್ವನಿ. ಇದು 'ಕೊರೊನಾ ಧ್ವನಿ' ಎಂದೇ ಹೆಸರಾಗಿದೆ. ಕೊರೊನಾ ಎಚ್ಚರಿಕೆಯ ಸಂದೇಶ ನೀಡಿದವರು ಜಸ್ಲೀನ್ ಅವರು ಎನ್ನುವುದು ಬಹಿರಂಗವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರು ಹೆಚ್ಚಿದ್ದಾರೆ.

ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲಿಯೂ ಧ್ವನಿ ಮುದ್ರಿಸಲು ಜಸ್ಲೀನ್ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರ ಧ್ವನಿ ಫೋನ್‌ನಲ್ಲಿ ಕೇಳಿಸುವ ಬಗ್ಗೆ ಸ್ನೇಹಿತರು ಹೇಳುವವರೆಗೂ ಜಸ್ಲೀನ್ ಅವರಿಗೆ ಗೊತ್ತಿರಲಿಲ್ಲ. ಬಳಿಕ ಮಾರ್ಗಸೂಚಿಗಳ ಬದಲಾದಂತೆ ಮತ್ತೆ ಅವರಿಂದ ಹೊಸ ಸಂದೇಶಗಳನ್ನು ಮುದ್ರಿಸಿಕೊಳ್ಳಲಾಗಿತ್ತು.

English summary
Unforgettable 2020: Many Indian women became popular during Coronavirus pandemic by their achievements in different fields. Here some of the household names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X