ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಬೈರುತ್‌ ಮಹಾ ಸ್ಫೋಟ, 3 ಲಕ್ಷ ನಿರಾಶ್ರಿತರ ಪರದಾಟ

|
Google Oneindia Kannada News

2020ರಲ್ಲಿ ಕೊರೊನಾ ಕಾರಣಕ್ಕೆ ಜಗತ್ತು ನಲುಗಿದ್ದಾಗ, ಯಾರೂ ಊಹಿಸದ ಸ್ಫೋಟವೊಂದು ಲೆಬನಾನ್ ರಾಜಧಾನಿ ಬೈರುತ್‌ ಬಂದರನ್ನು ನಡುಗಿಸಿತ್ತು. ಆಗಸ್ಟ್ 4ರಂದು ಸುಮಾರು 3000 ಟನ್‌ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಹಲವು ವರ್ಷಗಳಿಂದ ಬೈರುತ್ ಬಂದರಲ್ಲಿ 3000 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಡಲಾಗಿತ್ತು. ಆದರೆ ಆಗಸ್ಟ್‌ 4ರಂದು ದಿಢೀರ್ ಭಾರಿ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು.

ಸ್ಫೋಟದ ತೀವ್ರತೆಗೆ 200 ಜನರು ಪ್ರಾಣ ಕಳೆದುಕೊಂಡರೆ, 6500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬೈರುತ್ ಬ್ಲಾಸ್ಟ್‌ ಬಳಿಕ ಲೆಬನಾನ್‌ನಲ್ಲಿ ಎದ್ದ ದಂಗೆಗೆ ತಲೆಬಾಗಿ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ ನೀಡಿದ್ದರು. ಅದಾಗಲೇ ಕೊರೊನಾ ಕಾರಣಕ್ಕೆ ನಲುಗಿದ್ದ ಲೆಬನಾನ್ ಜನರಿಗೆ ಈ ಘಟನೆ ದೊಡ್ಡ ಆಘಾತ ನೀಡಿತ್ತು.

ಧನದಾಹಕ್ಕೆ ಬಲಿಯಾಯಿತಾ ಲೆಬನಾನ್ ರಾಜಧಾನಿ..?ಧನದಾಹಕ್ಕೆ ಬಲಿಯಾಯಿತಾ ಲೆಬನಾನ್ ರಾಜಧಾನಿ..?

ಅಪಾರ ಪ್ರಮಾಣದಲ್ಲಿ ಬೈರುತ್‌ಗೆ ಬೇಕಾದ ಆಹಾರ ಪದಾರ್ಥ ಬಂದರು ಪ್ರದೇಶದಲ್ಲೇ ಸಂಗ್ರಹವಾಗಿತ್ತು. ಆದ್ರೆ ಸ್ಫೋಟದಲ್ಲಿ ಆಹಾರ ಪದಾರ್ಥ ಮಣ್ಣುಪಾಲಾದ ಕಾರಣ ಅನ್ನ, ನೀರು ಇಲ್ಲದೆ ಬೈರುತ್‌ನಲ್ಲಿ ಲಕ್ಷಾಂತರ ಜನ ಹಸಿವಿನಿಂದ ಬೀದಿ ಬೀದಿ ಅಲೆಯುಂತೆ ಮಾಡಿತ್ತು.

ಪ್ರಧಾನಿ, ಸಚಿವರು ಅಪರಾಧಿಗಳು..!

ಪ್ರಧಾನಿ, ಸಚಿವರು ಅಪರಾಧಿಗಳು..!

ಬೈರುತ್ ಸ್ಫೋಟ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ ಲೆಬನಾನ್ ನ್ಯಾಯಾಧೀಶರು ಲೆಬನಾನ್‌ ನಿರ್ಗಮಿತ ಪ್ರಧಾನಿ ಹಸನ್ ದಿಯಾಬ್ ಸೇರಿದಂತೆ ಹಲವು ಮಾಜಿ ಸಚಿವರನ್ನು ಅಪರಾಧಿಗಳನ್ನಾಗಿ ಮಾಡಿದ್ದರು. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಸ್ಫೋಟಕಗಳನ್ನ ಬಂದರು ಪ್ರದೇಶದಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಾರಣಕ್ಕೆ ಇಂತಹ ಭೀಕರ ಘಟನೆ ನಡೆದಿದೆ ಎಂದು ನ್ಯಾಯಾಲಯ ಮಾಜಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿತ್ತು. ಈ ತೀರ್ಪು 2020ರಲ್ಲಿ ಜಗತ್ತಿನಾದ್ಯಂತ ಸಂಚಲ ಸೃಷ್ಟಿಸಿದ್ದು ಮಾತ್ರವಲ್ಲದೆ ನಾಯಕನ ಜವಾಬ್ದಾರಿ ಪ್ರಶ್ನಿಸಿತ್ತು.

3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್

ಆಗಸ್ಟ್ 10ರಂದೇ ದಿಯಾಬ್ ರಾಜೀನಾಮೆ

ಆಗಸ್ಟ್ 10ರಂದೇ ದಿಯಾಬ್ ರಾಜೀನಾಮೆ

ಬೈರುತ್ ಬ್ಲಾಸ್ಟ್‌ ನಂತರ ಲೆಬನಾನ್‌ನಲ್ಲಿ ಎದ್ದಿರುವ ದಂಗೆಗೆ ತಲೆಬಾಗಿ ಪ್ರಧಾನಿ ಹಸನ್ ದಿಯಾಬ್ ಸರ್ಕಾರ ವಿಸರ್ಜಿಸಿದ್ದರು. ಆಗಸ್ಟ್ 10ರಂದೇ ಹಸನ್ ದಿಯಾಬ್ ಅಧಿಕಾರದಿಂದ ಕೆಳಗಿಳಿದಿದ್ದರು. ಬೈರುತ್ ಬಂದರಲ್ಲೇ ಲೆಬನಾನ್‌ಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥ ಸಂಗ್ರಹಿಸಿತ್ತು. ಆದರೆ ಸ್ಫೋಟದಲ್ಲಿ ಆಹಾರ ಪದಾರ್ಥವೆಲ್ಲಾ ಮಣ್ಣುಪಾಲಾಗಿ, ಜನರು ಹಸಿವಿನಿಂದ ನರಳಾಡುವ ಸ್ಥಿತಿ ಎದುರಾಗಿತ್ತು. ಇದನ್ನೆಲ್ಲಾ ನಿಭಾಯಿಸಲು ದಿಯಾಬ್ ಫ್ಲಾಪ್ ಆಗಿದ್ದರು. ಇಂತಹ ಸಂದರ್ಭದಲ್ಲಿ ಜನರ ಕಷ್ಟ ಕೇಳದೆ, ಪ್ರಜೆಗಳ ಮೇಲೆಯೇ ದೌರ್ಜನ್ಯ ನಡೆಸಲು ಹೋಗಿ ದಿಯಾಬ್ ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದರು.

ಚೂರು ಎಡವಟ್ಟಾದರೂ ಹೊಗೆ..!

ಚೂರು ಎಡವಟ್ಟಾದರೂ ಹೊಗೆ..!

ಅಮೋನಿಯಂ ನೈಟ್ರೇಟ್ ಸಾಮಾನ್ಯವಾದ ರಾಸಾಯನಿಕವಲ್ಲ. ಸಾಮಾನ್ಯ ತಾಪಮಾನದಲ್ಲಿ ಅಮೋನಿಯಂ ನೈಟ್ರೇಟ್ ಶಾಂತ ಮೂರ್ತಿಯಂತೆ ಇರುತ್ತದೆ. ಆದರೆ ಒಂದಿಷ್ಟು ಎಡವಟ್ಟಾದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗೋದೆ ಇಲ್ಲ. ಇದು ಬೈರುತ್ ಘಟನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಹಿಂದೆ ಕೂಡ ಅಮೋನಿಯಂ ನೈಟ್ರೇಟ್ ಹಲವು ಭೀಕರ ದುರಂತಗಳಿಗೆ ಹೊಣೆಯಾಗಿತ್ತು. ತಣ್ಣಗೆ ಇರುವ ಅಮೋನಿಯಂ ನೈಟ್ರೇಟ್‌ನ ಕೆಣಕಿದರೆ ಮಾತ್ರ ನಡೆಯಬಾರದ್ದು ನಡೆದುಹೋಗುತ್ತದೆ.

ಬೈರುತ್‌ ಸ್ಫೋಟದಲ್ಲಿ ಪ್ರಧಾನಿ ಹಸನ್ ದಿಯಾಬ್ ಕೂಡ ಆರೋಪಿ..!ಬೈರುತ್‌ ಸ್ಫೋಟದಲ್ಲಿ ಪ್ರಧಾನಿ ಹಸನ್ ದಿಯಾಬ್ ಕೂಡ ಆರೋಪಿ..!

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

170 ಡಿಗ್ರಿ ಫ್ಯಾರನ್ ಹೀಟ್‌ನಷ್ಟು ಬಿಸಿ ತಾಗಿದರೆ ಸಾಕು ಅಮೋನಿಯಂ ನೈಟ್ರೇಟ್‌ ಒಳಗೆ ಧಹನ ಕ್ರಿಯೆಗೆ ಚಾಲನೆ ಸಿಗುತ್ತದೆ. ಹೀಗೆ ಆರಂಭವಾಗುವ ರಾಸಾಯನಿಕ ಕ್ರಿಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ನೈಟ್ರೋಜೆನ್, ಆಕ್ಸಿಜೆನ್ ಗ್ಯಾಸ್ ಹಾಗೂ ನೀರಿನ ಆವಿ ಬಿಡುಗಡೆ ಆಗುತ್ತೆ. ನಿಮಗೆ ನೆನಪಿರಲಿ ಇಷ್ಟು ರಾಸಾಯನಿಕಗಳು ರಿಲೀಸ್ ಆಗಿದ್ದರೆ ಅಮೋನಿಯಂ ನೈಟ್ರೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇರಲಿಲ್ಲ. ಆದರೆ ಇದರ ಜೊತೆ ಊಹೆಗೂ ನಿಲುಕದಷ್ಟು ಪ್ರಮಾಣದ ಶಕ್ತಿ ಅಥವಾ ಎನರ್ಜಿ ಸ್ಫೋಟ ರೂಪದಲ್ಲಿ ರಿಲೀಸ್ ಆಗುತ್ತೆ. ಲೆಬನಾನ್ ರಾಜಧಾನಿ ಬೈರತ್‌ನಲ್ಲೂ ಇದೇ ರೀತಿ ಆಗಿತ್ತು. ಆದರೆ ಅದೃಷ್ಟವಶಾತ್ ಸಂಗ್ರಹಿಸಿದ್ದ ಅಷ್ಟೂ ಅಮೋನಿಯಂ ನೈಟ್ರೇಟ್ ಹೊತ್ತಿ ಉರಿಯಲಿಲ್ಲ. ಹೀಗೆ ಆಗಿದ್ದರೆ ಬೈರುತ್ ಪರಿಸ್ಥಿತಿ ಊಹೆಗೂ ನಿಲುಕದಷ್ಟು ಗಂಭೀರವಾಗಿರುತ್ತಿತ್ತು. ಲಕ್ಷಾಂತರ ಜನರು ಬಲಿಯಾಗುವ ಅಪಾಯವಿತ್ತು.

English summary
Unforgettable 2020: The port city and Lebanon’s capital Beirut is a victim of horrible Ammonium Nitrate blast in 2020. In this horrible blast more than 200 peoples where killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X