ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforettable 2020: ಕೊರೊನಾ ವರ್ಷದಲ್ಲಿ ತಿಂಡಿ, ತಿನಿಸುಗಳ ಟ್ರೆಂಡ್ ಹೇಗಿತ್ತು?

|
Google Oneindia Kannada News

2020 ಎಂದೂ ಮರೆಯಲಾಗದ ವರ್ಷವಾಗಿ ಮಾರ್ಪಟ್ಟಿದೆ, ತಿಂಡಿ ಪೋತರಿಗೂ ಈ ವರ್ಷ ಒಂದು ರೀತಿಯಲ್ಲಿ ಸಿಹಿ ಕಹಿಯನ್ನು ಹಂಚಿದೆ.

ಹೋಟೆಲ್, ಬೀದಿಬದಿ ತಿಂಡಿಗಳನ್ನು ಸಾಕಷ್ಟು ಮಂದಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ದಿನಗಳು ಮನೆಯಲ್ಲಿಯೇ ಕಳೆದಿದ್ದರಿಂದ ಮನೆ ಅಡಿಗೆಯ ರುಚಿ ಸವಿಯಲು ಕೂಡ ಇದು ಸದಾವಕಾಶವಾಗಿತ್ತು.

2020ರ ಟಾಪ್ 10 ಬ್ಯಾಂಕುಗಳು: ಡಿಜಿಟಲ್ ಪಾವತಿಯಲ್ಲಿ ಗೂಗಲ್ ಪೇ ನಂಬರ್ 12020ರ ಟಾಪ್ 10 ಬ್ಯಾಂಕುಗಳು: ಡಿಜಿಟಲ್ ಪಾವತಿಯಲ್ಲಿ ಗೂಗಲ್ ಪೇ ನಂಬರ್ 1

ಹೀಗಿರುವಾಗ ಈ ವರ್ಷದಲ್ಲಿ ಕೆಲ ಆಹಾರಗಳು ಟ್ರೆಂಡಿಂಗ್ ಆಗಿ ಪರಿಣಮಿಸಿವೆ.

Unforgettable 2020: Food That Ruled In The Time Coronavirus

* ಕಾಫಿ: ಈ ವರ್ಷ ಬಹುತೇಕ ಉದ್ಯೋಗಿಗಳು ಮನೆಯಲ್ಲೇ ಕುಳಿತು ಕೆಲಸ ಮಾಡಿದ್ದಾರೆ. ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ಬಹುತೇಕರಿಗೆ ಕಾಫಿಯೇ ಮದ್ದಾಗಿ ಪರಿಣಮಿಸಿದೆ. ಈ ಬಾರಿ ಜನರು ಕಾಫಿಯಲ್ಲಿಯೇ ವಿವಿಧ ಬಗೆಯನ್ನು ಪ್ರಯತ್ನಿಸಿದ್ದಾರೆ.ಒಟ್ಟಾರೆ ಕೊರೊನಾ ವರಿಯನ್ನು ಕಾಫಿ ತಣ್ಣಗೊಳಿಸಿದೆ.

*ಗಿಡಗಂಟಿಗಳ ಕಷಾಯ: ಕೊರೊನಾ ಕಾರಣದಿಂದ ಎಲ್ಲರೂ ಮನೆಮದ್ದಿನತ್ತ ಈ ವರ್ಷ ಗಮನಹರಿಸಿದ್ದು ವಿಶೇಷ, ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲಗಳಲ್ಲೂ ಮನೆ ಮದ್ದಿನ ಕುರಿತು ಸರ್ಚ್ ಮಾಡಿದವರೇ ಹೆಚ್ಚು. ಜಾಗತಿಕ ಮಾರುಕಟ್ಟೆಯಲ್ಲಿ ಗಿಡಗಂಟಿಗಳ ಮೂಲದಿಂದ ತಯಾರಾದ ತಿಂಡಿ-ತಿನಿಸುಗಳು ಮಾರುಕಟ್ಟೆ ಮೌಲ್ಯ 34.69 ಬಿಲಿಯನ್ ಡಾಲರ್ ಇತ್ತು. ಆದರೆ ಮುಂದಿನ ಒಂದು ದಶಕದೊಳಗೆ ಇದು 73.61 ಬಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಮನೆಮದ್ದಿನ ಬಗ್ಗೆ ಪ್ರೀತಿ ಹೆಚ್ಚಾಗಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ.

*ಸ್ಥಳೀಯ ತಿಂಡಿ-ತಿನಿಸುಗಳು
ಲಾಕ್‌ಡೌನ್ ಹಾಗೂ ನಂತರದ ಆರೋಗ್ಯ ಸುರಕ್ಷತಾ ಹಿನ್ನೆಲೆಯಲ್ಲಿ ಈ ವರ್ಷ ಸಾಕಷ್ಟು ಮಂದಿ ಸ್ಥಳೀಯ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಹೋಟೆಲ್‌ಗಳ ಅಲಭ್ಯತೆ, ಸುರಕ್ಷತೆಯ ಭಯ ಹಾಗೂ ಮಾರುಕಟ್ಟೆಯಲ್ಲಿ ಸೂಕ್ತ ಪದಾರ್ತಗಳ ಕೊರತೆ ಹಿನ್ನೆಲೆಯಲ್ಲಿ ಜನರು ಎಂದಿನಂತೆ ಐಷಾರಾಮಿ ಆಹಾರಗಳ ವ್ಯವಸ್ಥೆ ಬದಲಾಗಿ ಸ್ಥಳೀಯ ಆಹಾರದ ಬಗ್ಗೆ ಹೆಚ್ಚು ಆಸಕ್ತಿ ತೋರಿದರು. ಸ್ವಿಗ್ಗಿಯಲ್ಲೂ ಕೂಡ ಅತಿ ಹೆಚ್ಚು ಮಾರಾಟವಾದ ಆಹಾರ ಬಿರಿಯಾನಿ ಎಂದು ತಿಳಿದುಬಂದಿದೆ.

*ಸುಸ್ಥಿರ ಆಹಾರ ವ್ಯವಸ್ಥೆ
ಹೋಟೆಲ್ ಅಥವಾ ಮನೆಯಲ್ಲಿರಬಹದು ಜನರುಈಗ ಆಹಾರದ ಪ್ರಮಾಣಕ್ಕಿಂತ ಗುಣಮಟ್ಟದ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ, ಕಡಿಮೆ ಆಹಾರ ಉತ್ತಮ ಗುಣಮಟ್ಟ ಇದು ಜನರ ಆಹಾರದ ಮಂತ್ರವಾಗುತ್ತಿದೆ. ಹೀಗಾಗಿ ಹೋಟೆಲ್‌ನ ಮೆನು ಕೂಡ ಸಣ್ಣವಾಗುತ್ತಿದೆ. ಜನರು ಈಗ ಜೋಳ, ಮಿಲೆಟ್, ರಾಗಿ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ.

English summary
Unforgettable 2020: The COVID-19 pandemic has altered life and our eating experiences. Restaurants, dining out or even street food have altered in every way as people avoid them and rather dig in their kitchen shelves for more authentic and homely food which is not only safe and healthy but also flavoursome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X