ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳು

|
Google Oneindia Kannada News

ಈ ವರ್ಷ ಆದಷ್ಟು ಬೇಗ ಕಳೆದುಹೋಗಲಿ ಎಂದು ಬಯಸಿದವರೇ ಹೆಚ್ಚು. 2020 ಇಡೀ ಜಗತ್ತಿನ ಜನರನ್ನು ಸಂಕಷ್ಟಕ್ಕೆ ನೂಕಿದ ಬಗೆ ಸಾಮಾನ್ಯವಲ್ಲ. ಇಂತಹದ್ದೊಂದು ಸವಾಲು, ಸಂಕಷ್ಟ ಕಾಡಲಿದೆ ಎಂಬ ಸೂಚನೆ 2019ರ ಅಂತ್ಯದಲ್ಲಿಯೇ ಸಿಕ್ಕರೂ, ಅದರ ಪರಿಣಾಮವನ್ನು ಯಾರೂ ಊಹಿಸಿರಲಿಲ್ಲ.

ಪ್ರತಿ ಬಾರಿ ಪ್ರವಾಹ, ಭೂಕಂಪನದಂತಹ ಪ್ರಾಕೃತಿಕ ಅವಘಡಗಳು, ಭಯೋತ್ಪಾದನಾ ದಾಳಿಗಳು ಸೇರಿದಂತೆ ಅನೇಕ ಅನಾಹುತಗಳು ಸರ್ವೇ ಸಾಮಾನ್ಯವಾಗಿದ್ದವು. ಅವುಗಳ ಪರಿಣಾಮ ತೀವ್ರವಾಗಿರುತ್ತಿದ್ದವೂ. 2020 ಕೂಡ ಅದರಿಂದ ಹೊರತಾಗಲಿಲ್ಲ. ಆದರೆ ಪ್ರಾಕೃತಿಕ ಅವಘಡಗಳು, ಅಪರಾಧಗಳು ಕೂಡ ಏನೂ ಅಲ್ಲ ಎಂಬಂತೆ ಜಗತ್ತನ್ನು ಅಲುಗಾಡಿಸಿದ್ದು ಕೊರೊನಾ ವೈರಸ್ ಎಂಬ ಕಣ್ಣಿಗೆ ಕಾಣದ ಸೋಂಕು.

Unforgettable 2020: ವರ್ಷದ ದಿಕ್ಕು ಬದಲಿಸಿದ ಮೋದಿ ಸರ್ಕಾರದ ಪ್ರಮುಖ ನೀತಿಗಳುUnforgettable 2020: ವರ್ಷದ ದಿಕ್ಕು ಬದಲಿಸಿದ ಮೋದಿ ಸರ್ಕಾರದ ಪ್ರಮುಖ ನೀತಿಗಳು

2020 ಒಂದು ರೀತಿ ವಿಚಿತ್ರ ವರ್ಷ. ಈ ವರ್ಷದಲ್ಲಿ ಬಹುಪಾಲು ದಿನಗಳನ್ನು ಜನರು ಮನೆಯ ಒಳಗೇ ಕಳೆಯುವಂತಾಯಿತು. ಅದಕ್ಕೆ ಕೊರೊನಾ ವೈರಸ್ ಮಾತ್ರ ಕಾರಣವಲ್ಲ. ಅದರಾಚೆಗೂ ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ.

ಕೋವಿಡ್ ಹಿಡಿತದಲ್ಲಿ ಜಗತ್ತು

ಕೋವಿಡ್ ಹಿಡಿತದಲ್ಲಿ ಜಗತ್ತು

ಜಗತ್ತನ್ನು 2020ರಲ್ಲಿ ಅತಿಯಾಗಿ ಕಂಗೆಡಿಸಿದ್ದು ಕೊರೊನಾ ವೈರಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೋಟ್ಯಂತರ ಜನರು ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದರೆ, ಲಕ್ಷಾಂತರ ಮಂದಿ ಜೀವವನ್ನೇ ಕಳೆದುಕೊಂಡರು. ಇದುವರೆಗೆ ಅನೇಕ ವೈರಸ್‌ಗಳು ಕೆಲವು ದೇಶ, ಖಂಡಗಳಿಗೆ ವ್ಯಾಪಿಸಿ ಕಣ್ಮರೆಯಾಗುತ್ತಿದ್ದರೆ, ಕೊರೊನಾ ವೈರಸ್ ಇಡೀ ಜಗತ್ತನ್ನು ಸುತ್ತಾಡಿತು. ಇದೇ ಮೊದಲ ಬಾರಿಗೆ ಇಡೀ ಜಗತ್ತು ಅಕ್ಷರಶಃ ಸ್ತಬ್ಧವಾಯಿತು. ಶಾಲೆಗಳು, ಕಾಲೇಜುಗಳು, ಕಚೇರಿಗಳು ಮುಚ್ಚುವಂತಾಯಿತು. ಹೀಗಾಗಿ ಜನರು ಈ ವರ್ಷ ಬೇಗ ಕಳೆದುಹೋಗಲಿ ಎಂದು ಕಾದಿದ್ದರು. ಈಗ ಕೊನೆಗೂ ವರ್ಷ ಮುಗಿಯುತ್ತಾ ಬಂದಿದೆ. ಆದರೆ 2021 ಹೇಗಿರಲಿದೆ?

ಕಿಮ್ ಜಾಂಗ್ ಉನ್ ಸಾವು

ಕಿಮ್ ಜಾಂಗ್ ಉನ್ ಸಾವು

ಜಗತ್ತನ್ನು ತನ್ನೆಡೆಗೆ ಸದಾ ತಿರುಗಿಸಿಕೊಳ್ಳುವ ದೇಶಗಳಲ್ಲಿ ಉತ್ತರ ಕೊರಿಯಾ ಒಂದು. ಆದರೆ ಅದು ಒಳ್ಳೆಯ ಕಾರಣಕ್ಕಾಗಿ ಅಲ್ಲ. ಯಾವಾಗ ಭೂಮಿಗೆ ಬೆದರಿಕೆ ಒಡ್ಡುವ ಕೆಲಸವನ್ನು ಉತ್ತರ ಕೊರಿಯಾ ಮಾಡುತ್ತದೆಯೋ ಹೇಳುವ ಹಾಗಿಲ್ಲ. ಕೊರೊನಾ ವೈರಸ್ ಕಾರಣದಿಂದ ಉತ್ತರ ಕೊರಿಯಾ ಕೊಂಚ ಸುದ್ದಿಯಾಯಿತು. ಬಳಿಕ ಸದ್ದು ಮಾಡಿದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಸಾವಿನೊಂದಿಗೆ! ಕಿಮ್ ಸಾವಿನ ಸುತ್ತಲೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯಿತು. ಆತನ ತಂಗಿ ಕಿಮ್ ಯೋ ಜಾಂಗ್ ಇನ್ನೇನು ಅಧಿಕಾರಕ್ಕೆ ಏರಲಿದ್ದಾರೆ ಎಂಬುದೂ ಸುದ್ದಿಯಾಯ್ತು. ಬಳಿಕ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಂಡ ಫೋಟೊವೊಂದು ಉತ್ತರ ಹೇಳಿತು. ದೇಶವೊಂದರ ನಾಯಕ ಬದುಕಿದ್ದಾನೋ ಸತ್ತಿದ್ದಾನೋ ಎನ್ನುವುದು ಹೊರಜಗತ್ತಿಗೆ ಸ್ಪಷ್ಟವಾಗದ, ಅಲ್ಲಿನ ಸಂಗತಿಗಳ ಬಗ್ಗೆ ಅನುಮಾನ, ಕುತೂಹಲಗಳು ಕೊನೆಗೆ ಪ್ರಶ್ನೆಯಾಗಿಯೇ ಉಳಿಯುವಂತಹ ದೇಶ ವಿಚಿತ್ರವಾದರೂ ಸತ್ಯ,

Unforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳುUnforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳು

ಗಡಿ ತಪ್ಪಿ ಸಾಗಿದ ಪೊಲ್ಯಾಂಡ್

ಗಡಿ ತಪ್ಪಿ ಸಾಗಿದ ಪೊಲ್ಯಾಂಡ್

ಜೆಕ್ ರಿಪಬ್ಲಿಕ್ ಮತ್ತು ಪೊಲ್ಯಾಂಡ್ ನಡುವಿನ ಗಡಿ ಭಾಗದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದ ಪೊಲ್ಯಾಂಡ್ ಕಾವಲುಪಡೆಯು ಜೆಕ್ ರಿಪಬ್ಲಿಕ್ ಭಾಗದೊಳಗೆ ಪ್ರವೇಶಿಸಿದ್ದು ಗೊಂದಲದ ವಾತಾವರಣ ನಿರ್ಮಿಸಿತ್ತು. ಜೆಕ್ ಮೇಲೆ ಪೊಲ್ಯಾಂಡ್ ದಾಳಿ ನಡೆಸುತ್ತಿದೆ ಎಂಬ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಪ್ರದೇಶವೊಂದಕ್ಕೆ ಜೆಕ್ ನಾಗರಿಕರು ಪ್ರವೇಶಿಸದಂತೆ ಪೊಲ್ಯಾಂಡ್ ಸೇನೆ ತಡೆದಿತ್ತು. ಕೊನೆಗೆ ತಾನು ಜೆಕ್ ನೆಲದಲ್ಲಿ ಇರುವುದು ಅದಕ್ಕೆ ಅರಿವಾಯ್ತು. ತಪ್ಪು ತಿಳಿವಳಿಕೆಯಿಂದ ಈ ಪ್ರಮಾದ ನಡೆಯಿತು ಎಂದು ಪೊಲ್ಯಾಂಡ್ ಸ್ಪಷ್ಟೀಕರಣ ನೀಡಿತು.

ವಿಸ್ಮಯಕಾರಿ ವಸ್ತುಗಳ ಹಾರಾಟ

ವಿಸ್ಮಯಕಾರಿ ವಸ್ತುಗಳ ಹಾರಾಟ

ಆಕಾಶ ಎಂದಿಗೂ ವಿಸ್ಮಯಕಾರಿ. ಭೂಮಿಯಾಚೆಗಿನ ಬ್ರಹ್ಮಾಂಡದ ಕುರಿತು ಅನೇಕ ಕಲ್ಪನೆಗಳಿವೆ. ಅದಕ್ಕೆ ಅನುಗುಣವಾಗಿ ವಿಜ್ಞಾನ ಕೂಡ ಸತತ ಸಂಶೋಧನೆಗಳನ್ನು ನಡೆಸುತ್ತಿದೆ. ಈ ನಡುವೆ ಅಮೆರಿಕದ ಪೆಂಟಗನ್‌ನಲ್ಲಿ ಅವರ್ಣನೀಯ ವೈಮಾನಿಕ ವಿದ್ಯಮಾನಗಳು ಜರುಗಿದ್ದಾಗಿ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಲಾಯಿತು. ಜನರ ಕಣ್ಣಿಗೆ ಕಾಣುವಂತೆ ಗುರುತು ಸಿಗದ ವಸ್ತುಗಳು ಹಾರಾಟ ನಡೆಸುತ್ತಿರುವುದು (ಯುಎಫ್‌ಒ) ವಿಡಿಯೋದಲ್ಲಿ ಸೆರೆಯಾಗಿತ್ತು. ಇಸ್ರೇಲ್‌ನ ಬಾಹ್ಯಾಕಾಶ ಸಂಸ್ಥೆಯ ಮಾಜಿ ಮುಖ್ಯಸ್ಥರು ಅನ್ಯಗ್ರಹ ಜೀವಿಗಳು ಅಮೆರಿಕದ ಜತೆಗೆ ಸಂಪರ್ಕದಲ್ಲಿವೆ. ಅವು ಭೂಮಿ ಜತೆ ಸಂಪರ್ಕ ಪಡೆದುಕೊಂಡಿವೆ ಎಂದು ಹೇಳಿಕೆ ನೀಡಿದ್ದು ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.

Recommended Video

ದೇಶದಲ್ಲಿ ಕಡಿಮೆಯಾದ ಮಕ್ಕಳ ಮರಣ ಪ್ರಮಾಣ | Oneindia Kannada
ಭೀತಿ ಮೂಡಿಸಿದ ಮಿಡತೆ ದಾಳಿ

ಭೀತಿ ಮೂಡಿಸಿದ ಮಿಡತೆ ದಾಳಿ

ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಜನರ ಎದೆನಡುಗಿಸಿದ್ದು ಮಿಡತೆಗಳು. ಮುಖ್ಯವಾಗಿ ಕೋವಿಡ್ ತೀವ್ರವಾಗುತ್ತಿದ್ದ ಜುಲೈ ತಿಂಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಕೃಷಿ ಭೂಮಿಗೆ ಕೋಟ್ಯಂತರ ಮಿಡತೆಗಳು ದಾಳಿ ನಡೆಸಿದ್ದು ಭೀತಿ ಮೂಡಿಸಿತ್ತು. ಇಷ್ಟು ಮಿಡತೆಗಳು ಸೃಷ್ಟಿಯಾಗಿದ್ದು, ಅವು ಹೀಗೆ ಗುಂಪುಗಳಲ್ಲಿ ದಾಳಿ ನಡೆಸಿದ್ದು ವಿಚಿತ್ರ ಎನಿಸಿತ್ತು. ಇದೇ ರೀತಿಯ ಮಿಡತೆ ದಾಳಿ ಪೂರ್ವ ಆಫ್ರಿಕಾದಲ್ಲಿಯೂ ನಡೆದಿತ್ತು. ಇದು ಇಡೀ ಭಾರತಕ್ಕೆ ವ್ಯಾಪಿಸಲಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಅದೃಷ್ಟವಶಾತ್ ಮಿಡತೆಗಳು ನಿಯಂತ್ರಣಕ್ಕೆ ಬಂದವು.

English summary
Unforgettable 2020: Bizarre events that changed the world this year, Coronavirus pandemic and other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X