ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

|
Google Oneindia Kannada News

ಅಭಿವೃದ್ಧಿಯ ಧಾವಂತದಲ್ಲಿ ಮುನ್ನುಗ್ಗುತ್ತಿದ್ದ ಆಧುನಿಕ ಜಗತ್ತಿಗೆ ಬ್ರೇಕ್ ಹಾಕಿ ನಿಲ್ಲಿಸಿದ್ದು 2020. ಈ ವರ್ಷದ ಆರಂಭದಲ್ಲಿ 2020 ತನ್ನ ಸಂಖ್ಯೆಯಿಂದಲೇ ಗಮನ ಸೆಳೆದಿತ್ತು. ಆದರೆ ಯಾವ ಮಾಯೆಯಲ್ಲಿ ಚೀನಿ ವೈರಸ್ ಕೊರೊನಾ ಜಗತ್ತಿನ ಮೇಲೆ ದಾಳಿ ಮಾಡಿತೋ, ಅಂದಿನಿಂದ 2020 ಅಂದರೆ ಸಾಕು ಜನರು ಗರಂ ಆಗುತ್ತಾರೆ. ಮಾನವರ ಬದುಕು ಒಂದ್ಕಡೆ ಇರಲಿ, ಬಾಹ್ಯಾಕಾಶ ಕ್ಷೇತ್ರಕ್ಕೆ ಮಾತ್ರ 2020 ಅವಿಸ್ಮರಣೀಯ ವರ್ಷವಾಗಿದೆ.

ಏಕೆಂದರೆ ಮನುಷ್ಯ ಈವರೆಗೆ ಸಾಧಿಸಲು ಸಾಧ್ಯವಾಗದ ವಿಚಾರಗಳನ್ನ ಬಾಹ್ಯಾಕಾಶ ವಿಜ್ಞಾನಿಗಳು ಈ ವರ್ಷ ಸಾಧಿಸಿದ್ದಾರೆ. ಚಂದ್ರನ ಮೇಲೆ ಅಗಾಧ ಪ್ರಮಾಣದ ನೀರು ಹುಡುಕಿದ್ದು, ಮಂಗಳ ಗ್ರಹದ ಮೇಲೆ ಬದುಕಿನ ನೆಲೆ ಕಂಡುಕೊಳ್ಳುವಲ್ಲಿ ನಡೆದ ಸಂಶೋಧನೆ, ಬ್ಲ್ಯಾಕ್ ಹೋಲ್‌ಗಳ ಮೂಲ ಬೆದಕಿದ್ದು, ಕ್ಷುದ್ರ ಗ್ರಹದ ನೆಲ ಕೆದಕಿ ಸ್ಯಾಂಪಲ್ ತಂದಿದ್ದು. ಹೀಗೆ ಬಾಹ್ಯಾಕಾಶ ಕ್ಷೇತ್ರವು ಕೊರೊನಾ ಕಂಟಕದ ನಡುವೆಯೂ 2020ರಲ್ಲಿ ನೂರಾರು ಸಾಧನೆಗಳನ್ನ ಮಾಡಿದೆ. ಅದರಲ್ಲಿ ಕೆಲ ಪ್ರಮುಖ ಸಾಧನೆಗಳ ಪಟ್ಟಿಯನ್ನ ಇಲ್ಲಿ ನೋಡೋಣ.

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ಪ್ರಮಾಣದ ನೀರು ಹುದುಗಿದೆ ಎಂಬ ವಿಚಾರವನ್ನು ಇದೇ ಮೊದಲಬಾರಿಗೆ ನಾಸಾ ವಿಜ್ಞಾನಿಗಳು ಬಾಯಿಬಿಟ್ಟಿದ್ದರು. 2020ರ ಅಕ್ಟೋಬರ್‌ನಲ್ಲಿ ಈ ಕುರಿತು ನಾಸಾ ಮಾಹಿತಿ ನೀಡಿತ್ತು. ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿದ್ದ 2 ಹೊಸ ಅಧ್ಯಯನ ವರದಿಗಳು ಸಂತಸದ ಸಂಗತಿಯನ್ನು ಮನುಕುಲಕ್ಕೆ ನೀಡಿದ್ದವು. ನಾಸಾ ನಿರ್ಮಿತ ಟೆಲಿಸ್ಕೋಪ್ 'ಸೋಫಿಯಾ' ಸಹಾಯದಿಂದ ಅವರೋಹಿತ ದೂರದರ್ಶಕ (telescope)ವನ್ನು ಬಳಸಿ ಚಂದ್ರನ ಮೇಲೆ ನೀರು ಇರುವುದನ್ನು ಕನ್ಫರ್ಮ್ ಮಾಡಲಾಗಿತ್ತು. ಹಾರುವ ದೂರದರ್ಶಕ ಎಂದು ಕರೆಯಲಾಗುವ ಇದರ ಸಹಾಯದಿಂದ ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸುಲಭವಾಗುತ್ತದೆ. ಹೀಗಾಗಿ ಇದೇ ದೂರದರ್ಶಕ ಬಳಸಿ ಸಂಶೋಧಕರು, ಚಂದ್ರನ ಮೇಲೆ ಊಹೆಗೂ ಮೀರಿ ನೀರು ಹುದುಗಿದೆ ಎಂಬುದನ್ನ ತಿಳಿಸಿದ್ದರು.

ಚಂದ್ರನ ಸ್ಯಾಂಪಲ್: ರಷ್ಯಾ, ಅಮೆರಿಕ ನಂತರ ಚೀನಾ ಸಾಧನೆಚಂದ್ರನ ಸ್ಯಾಂಪಲ್: ರಷ್ಯಾ, ಅಮೆರಿಕ ನಂತರ ಚೀನಾ ಸಾಧನೆ

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಚಂದ್ರನ ಮೇಲೆ ಈಗ ಎಷ್ಟು ಪ್ರಮಾಣದ ನೀರು ಸಿಕ್ಕಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆ ಕುತೂಹಲಕ್ಕೂ ನಾಸಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಈಗ ಪತ್ತೆಯಾಗಿರುವ ನೀರಿನ ಪ್ರಮಾಣ ಸುಮಾರು 40,000 ಸ್ಕ್ವೇರ್ ಕಿಲೋಮೀಟರ್. ಇದನ್ನ ಸಾಮಾನ್ಯ ಅಂದಾಜಿನಲ್ಲಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಯ ಒಟ್ಟು ಜಾಗದ 5 ಪಟ್ಟು. ಅಂದರೆ ಚಂದ್ರನ ಮೇಲಿರುವ ನೀರನ್ನು ಭೂಮಿಗೆ ತಂದರೆ, ಆ ನೀರನ್ನು ಶಿವಮೊಗ್ಗ ಜಿಲ್ಲೆಗೆ 5 ಬಾರಿ ತುಂಬಿಸಬಹುದು. ಅಂದರೆ ಲೆಕ್ಕ ಹಾಕಿ ಭವಿಷ್ಯದಲ್ಲಿ ಚಂದಿರನ ಮೇಲೂ ಮನೆ ಕಟ್ಟಲು ಈ ನೀರು ಬಳಸಲು ಲಭ್ಯವಾದೀತು. ಬರೀ ಮನೆ ಕಟ್ಟಲು ಸಾಕೆ ಕುಡಿಯಲು, ಕೃಷಿ ಮಾಡಲು ಕೂಡ ಬಳಸಬಹುದಾಗಿದೆ. ಮುಂದೆ ಭೂಮಿ ಬೇಜಾರಾದರೆ ಚಂದ್ರನ ಮೇಲೆ ಹೋಗಿ ವಾಸ ಮಾಡಬಹುದು.

ಮಂಗಳ ಗ್ರಹದ ಮಹತ್ವದ ಮಾಹಿತಿ

ಮಂಗಳ ಗ್ರಹದ ಮಹತ್ವದ ಮಾಹಿತಿ

ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದು ಇದೇ ವರ್ಷದಲ್ಲಿ. ಮಂಗಳ ಗ್ರಹದ ಬಹುಭಾಗದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಲೇ ಸಾಗಿದೆ. ಮಂಗಳ ಗ್ರಹದ ಒಳ ಭಾಗದಲ್ಲಿ ಬಿಸಿ ಹೆಚ್ಚಾದಂತೆಲ್ಲಾ ನೆಲವೂ ಕಾದ ಕಬ್ಬಿಣವಾಗಿದೆ. ಹೀಗೆ ನೆಲ ಕಾಯುತ್ತಿದ್ದಂತೆ ಸಹಜವಾಗಿಯೇ ಹಿಮವೂ ಕರಗುತ್ತಾ ಸಾಗಿದೆ. ಮುಂದೆ ಆ ತಾಪಮಾನ ವಾತಾವರಣದಲ್ಲಿ ಹರಡಿ, ಮಂಗಳ ಗ್ರಹದ ಮೇಲೆ ಹರಡಿಕೊಂಡಿದ್ದ ಜಲರಾಶಿಯನ್ನೂ ಮಾಯ ಮಾಡಿದೆ ಎಂಬುದು 2020ರ ಸಂಶೋಧನೆಗಳಿಂದ ಸ್ಪಷ್ಟವಾಗಿದೆ.

ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!

 ಮಂಗಳ ಗ್ರಹದಲ್ಲಿ ಲೇಔಟ್ ಪಕ್ಕಾ..!

ಮಂಗಳ ಗ್ರಹದಲ್ಲಿ ಲೇಔಟ್ ಪಕ್ಕಾ..!

ನ್ಯೂ ಜೆರ್ಸಿ ವಿವಿ ಸಂಶೋಧಕರ ಅಧ್ಯಯನದಿಂದ ಹೊಸ ಆಸೆಗಳು ಮತ್ತೆ ಚಿಗುರಿವೆ. ಮಂಗಳ ಗ್ರಹದ ಮೇಲೆ ಜೀವಿಸುವ ಮಾನವನ ಬಹುದಿನಗಳ ಕನಸು ನನಸಾಗುವ ಸುಳಿವು ಸಿಕ್ಕಿದೆ. ಮಂಗಳ ಗ್ರಹದಲ್ಲೂ ಇಷ್ಟೊಂದು ತಾಪಮಾನ ಇದೆ ಎಂದಾದರೆ ಮುಂದೆ ಇದೇ ಬಿಸಿಯನ್ನ ಶಕ್ತಿಯಾಗಿ ಪರಿವರ್ತಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಈ ತಾಪಮಾವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿದರೆ ಭವಿಷ್ಯದಲ್ಲಿ ಮಾನವ ಮಂಗಳ ಗ್ರಹದಲ್ಲಿ ಬದುಕಲು ಅಗತ್ಯವಿರುವ ಎಲ್ಲಾ ವಸ್ತುಗಳನ್ನ ಅಲ್ಲೇ ಉತ್ಪಾದಿಸಬಹುದು. ಎಲ್ಲಕ್ಕಿಂತಲೂ ಹೆಚ್ಚಾಗಿ ಮಂಗಳನಲ್ಲಿ ಲೇಔಟ್ ನಿರ್ಮಾಣ ಮಾಡಿ, ಮನೆಯನ್ನೂ ಕಟ್ಟುವ ದಿನಗಳು ದೂರವಿಲ್ಲ.

ಮಂಗಳ ಗ್ರಹದ ಮಣ್ಣು ತರಲಿದೆ ನಾಸಾ ರೋವರ್!ಮಂಗಳ ಗ್ರಹದ ಮಣ್ಣು ತರಲಿದೆ ನಾಸಾ ರೋವರ್!

ಪತ್ತೆಯಾಯ್ತು ನರಕದಂತಹ ಗ್ರಹ..!

ಪತ್ತೆಯಾಯ್ತು ನರಕದಂತಹ ಗ್ರಹ..!

ಕೊತ ಕೊತ ಕುದಿಯುವ ಲಾವಾ ರಸ, ಬೆಂಕಿ ಚಿಮ್ಮಿಸುವ ಜ್ವಾಲಾಮುಖಿ, ಸಮುದ್ರದ ಅಲೆಯಲ್ಲೂ ಅದೇ ಕಿಚ್ಚು. ಅಂದಹಾಗೆ ಇದು ಯಾವುದೋ ಸಿನಿಮಾದಲ್ಲಿ ಬರುವ ನರಕದ ಸೀನ್ ಅಲ್ಲ. ನಮ್ಮ ಬ್ರಹ್ಮಾಂಡದಲ್ಲೇ ಭೂಮಿಯಂತಹ ಗ್ರಹ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ನರಕದಂತಹ ಗ್ರಹದ ಸಂಪೂರ್ಣ ಚಿತ್ರಣವನ್ನು ಬಾಹ್ಯಾಕಾಶ ವಿಜ್ಞಾನಿಗಳು ಹೊರಹಾಕಿದ್ದರು.

ನವೆಂಬರ್‌ನಲ್ಲಿ ವಿಜ್ಞಾನಿಗಳು ಈ ನರಕದಂತಹ ಗ್ರಹದ ಬಗ್ಗೆ ಮಾಹಿತಿ ನೀಡಿದ್ದರು. ಭೂಮಿಯಿಂದ 100 ಜ್ಯೋತಿರ್ವರ್ಷ ದೂರದಲ್ಲಿನ 'ಕೆ2-141ಬಿ' ಗ್ರಹದಲ್ಲಿ ಇಂತಹ ಭಯಾನಕ ವಾತಾವರಣ ಇದೆಯಂತೆ. ಭೂಮಿಯತಹ ರಚನೆ ಇರುವ 'ಕೆ2-141ಬಿ' ಗ್ರಹದಲ್ಲಿ ಜೀವಗಳು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದು, 5,400 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶ ಈ ಗ್ರಹದಲ್ಲಿದೆ.

ಮತ್ತೊಂದು 'ಭೂಮಿ' ಪತ್ತೆಹಚ್ಚಿದ ಅಮೆರಿಕ ಬಾಹ್ಯಾಕಾಶ ವಿಜ್ಞಾನಿಗಳುಮತ್ತೊಂದು 'ಭೂಮಿ' ಪತ್ತೆಹಚ್ಚಿದ ಅಮೆರಿಕ ಬಾಹ್ಯಾಕಾಶ ವಿಜ್ಞಾನಿಗಳು

ನಕ್ಷತ್ರ ಹುಟ್ಟವ ಮುಂಚೆ ಗ್ರಹ ಹುಟ್ಟಿತು

ನಕ್ಷತ್ರ ಹುಟ್ಟವ ಮುಂಚೆ ಗ್ರಹ ಹುಟ್ಟಿತು

ನಕ್ಷತ್ರ ಹುಟ್ಟುವುದಕ್ಕೂ ಮೊದಲೇ ಗ್ರಹವೊಂದು ಜನ್ಮತಾಳುತ್ತಿರುವ ವಿಸ್ಮಯಕಾರಿ ಘಟನೆಗೂ 2020 ಸಾಕ್ಷಿ ಆಗಿತ್ತು. ಸಾಮಾನ್ಯವಾಗಿ ನಕ್ಷತ್ರ ಜನ್ಮತಾಳಿದ ಬಳಿಕ ಗ್ರಹಗಳು ರೂಪುಗೊಳ್ಳುತ್ತವೆ. ನಮ್ಮ ಭೂಮಿ ಸೇರಿದಂತೆ ಸೌರಮಂಡಲದ ಇತರ ಗ್ರಹಗಳು ಕೂಡ ಇದೇ ರೀತಿ ಸೂರ್ಯನ ಜನನದ ಬಳಿಕ ರೂಪುಗೊಂಡಿರುವುದು. ಆದರೆ ಇದೇ ಮೊದಲಬಾರಿ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಇಂತಹ ವಿಸ್ಮಯಕಾರಿ ಘಟನೆ ಗುರುತಿಸಿದ್ದರು. ಈ ವಿಚಾರವನ್ನು ವಿಜ್ಞಾನಿಗಳು ಕನ್ಫರ್ಮ್ ಮಾಡಿದ್ದು ಕೂಡ ನವೆಂಬರ್‌ನಲ್ಲಿಯೇ. ಇದೀಗ ತಾನೆ ಹುಟ್ಟಿರುವ ಗ್ರಹ ಬಾಲ್ಯಾವಸ್ಥೆಯಲ್ಲಿದೆ, ಆದರೆ ಅದರ ನಕ್ಷತ್ರ ಮಾತ್ರ ಇನ್ನೂ ರೂಪ ಪಡೆಯುತ್ತಲೇ ಇದೆ.

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!

English summary
Unforgettable 2020: Because of corona pandemic, 2020 is worst year for humans. But not to astrophysics. Because astrophysicists achieved a lot in the year of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X