ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪಿಯನ್‌ ಯುನಿಯನ್‌ಗೆ ಸೇರ್ಪಡೆಗೊಳ್ಳುವತ್ತ ಉಕ್ರೇನ್‌! ಹಾಗಾದರೆ ಮುಂದೇನು?

|
Google Oneindia Kannada News

ಕೀವ್‌, ಜೂ. 18; ಯೂರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ಉಕ್ರೇನ್ ದೇಶಕ್ಕೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ ೧೭ರಂದು ಯೂರೋಪಿಯನ್ ಕಮಿಷನ್ ಶಿಫಾರಸು ಮಾಡಿದೆ. ಇದು ಒಕ್ಕೂಟದ ಸದಸ್ಯತ್ವ ಪಡೆಯುವ ಸುದೀರ್ಘ ಹಾದಿಯ ಮೊದಲ ಹೆಜ್ಜೆಯಾಗಿದೆ.

ಉಕ್ರೇನಿಯನ್ ಧ್ವಜದ ಬಣ್ಣಗಳಾದ ಹಳದಿ ಮತ್ತು ನೀಲಿ ಬಣ್ಣಗಳನ್ನು ಧರಿಸಿದ್ದ ಯುರೋಪಿಯನ್‌ ಯುನಿಯನ್‌ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರ ಪ್ರಕಟಣೆಯು ಯುರೋಪಿಯನ್‌ ಯುನಿಯನ್‌ ಸಂಘಟನೆಯ ಅತ್ಯಂತ ಶಕ್ತಿಶಾಲಿ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ ಪ್ರತಿನಿಧಿಗಳು ಕೈವ್‌ಗೆ ಭೇಟಿ ನೀಡಿದ ಒಂದು ದಿನದ ನಂತರ ಬಂದಿದೆ. ಮೊದಲ ಬಾರಿಗೆ ಅವರು ಯುರೋಪಿಯನ್‌ ಯುನಿಯನ್‌ ಸೇರಲು ಉಕ್ರೇನ್‌ನ ಪ್ರಯತ್ನವನ್ನು ಬೆಂಬಲಿಸಿದ್ದಾರೆ.

ಉಕ್ರೇನ್‌ ನೆರವಿಗೆ ಮುಂದಾಗುವಂತೆ ಎಲೋನ್‌ ಮಸ್ಕ್‌ಗೆ ಮನವಿ ಮಾಡಿದ ಉಕ್ರೇನ್‌ ಕಮಾಂಡರ್ಉಕ್ರೇನ್‌ ನೆರವಿಗೆ ಮುಂದಾಗುವಂತೆ ಎಲೋನ್‌ ಮಸ್ಕ್‌ಗೆ ಮನವಿ ಮಾಡಿದ ಉಕ್ರೇನ್‌ ಕಮಾಂಡರ್

ಉಕ್ರೇನ್‌ ನಮ್ಮೊಂದಿಗೆ ಯುರೋಪಿಯನ್ ಒಕ್ಕೂಟದೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ. ಯುರೋಪಿಯನ್ ಯುನಿಯನ್‌ ದೃಷ್ಟಿಕೋನಕ್ಕಾಗಿ ಉಕ್ರೇನಿಯನ್ನರು ಸಾಯಲು ಸಿದ್ಧರಾಗಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ ಎಂದು ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದರು. ಮುಂದಿನ ವಾರದ ಶೃಂಗಸಭೆಯಲ್ಲಿ ಉಕ್ರೇನ್ ಅಭ್ಯರ್ಥಿ ಸ್ಥಾನಮಾನವನ್ನು ನೀಡಬೇಕೆ ಎಂದು ಯುರೋಪಿಯನ್ ಯುನಿಯನ್‌ ನಾಯಕರು ನಿರ್ಧರಿಸುತ್ತಾರೆ ಎನ್ನಲಾಗಿದೆ.

ಉಕ್ರೇನ್‌ನ ಅಭ್ಯರ್ಥಿ ಸ್ಥಾನಮಾನದ ಮೇಲೆ ಸಕಾರಾತ್ಮಕ ಯುರೋಪಿಯನ್ ಆಯೋಗದ ತೀರ್ಮಾನವನ್ನು ನಾನು ಪ್ರಶಂಸಿಸುತ್ತೇನೆ. ಇದು ಯುರೋಪಿಯನ್‌ ಯುನಿಯನ್‌ ಸದಸ್ಯತ್ವದ ಹಾದಿಯಲ್ಲಿ ಮೊದಲ ಹೆಜ್ಜೆಯಾಗಿದ್ದು, ಅದು ಖಂಡಿತವಾಗಿಯೂ ನಮ್ಮ ವಿಜಯ ಸಾಧಿಸಲು ನೆರವಾಗುತ್ತದೆ. ಮುಂದಿನ ವಾರ ಯುರೋಪಿಯನ್ ಕಮಿಷನ್‌ನಿಂದ ಸಕಾರಾತ್ಮಕ ಫಲಿತಾಂಶವನ್ನು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.

ಸದಸ್ಯನಾಗಲು ಅನುಮತಿಸುವಂತೆ ಒಕ್ಕೂಟಕ್ಕೆ ವಿನಂತಿ

ಸದಸ್ಯನಾಗಲು ಅನುಮತಿಸುವಂತೆ ಒಕ್ಕೂಟಕ್ಕೆ ವಿನಂತಿ

ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಾಲ್ಕು ದಿನಗಳ ನಂತರ, ಫೆಬ್ರುವರಿ 28 ರಂದು ಝೆಲೆನ್ಸ್ಕಿ ತನ್ನ ದೇಶವನ್ನು ತಕ್ಷಣವೇ ಸದಸ್ಯನಾಗಲು ಅನುಮತಿಸುವಂತೆ ಒಕ್ಕೂಟಕ್ಕೆ ವಿನಂತಿಸಿದರು. ನಂತರ ಅವರು ಅಧಿಕೃತವಾಗಿ ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಸಹಿ ಹಾಕಿದರು. ಪ್ರಸ್ತುತ ಉಕ್ರೇನ್, ಮೊಲ್ಡೊವಾ, ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ಮೊಲ್ಡೊವಾ ಗಣರಾಜ್ಯವನ್ನು ಆರು ಪಾಲುದಾರ ದೇಶಗಳು ಪೂರ್ವ ಪಾಲುದಾರಿಕೆಯ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇದು 2009ರಲ್ಲಿ ರೂಪುಗೊಂಡಿತು. ಈ ಜಂಟಿ ನೀತಿ ಪಾಲುದಾರಿಕೆಯು ಯುರೋಪಿಯನ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮತ್ತು ದೇಶಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸುತ್ತದೆ.

50ನೇ ದಿನದ ವಿಶೇಷ: ರಷ್ಯಾ ಕಾದಾಟ V/s ಉಕ್ರೇನ್‌ ಬತ್ತಳಿಕೆಗೆ ಯುಎಸ್ ಶಸ್ತ್ರಾಸ್ತ್ರ!50ನೇ ದಿನದ ವಿಶೇಷ: ರಷ್ಯಾ ಕಾದಾಟ V/s ಉಕ್ರೇನ್‌ ಬತ್ತಳಿಕೆಗೆ ಯುಎಸ್ ಶಸ್ತ್ರಾಸ್ತ್ರ!

ನಿಯಮಗಳ ಆಧಾರದ ಮೇಲೆ ರಾಷ್ಟ್ರದ ಸೂಕ್ತತೆ

ನಿಯಮಗಳ ಆಧಾರದ ಮೇಲೆ ರಾಷ್ಟ್ರದ ಸೂಕ್ತತೆ

ಯುರೋಪಿಯನ್‌ ಯುನಿಯನ್‌ ಒಪ್ಪಂದಗಳ ಆರ್ಟಿಕಲ್ 49 ಹೇಳುವಂತೆ ಯಾವುದೇ ಯುರೋಪಿಯನ್ ರಾಷ್ಟ್ರಗಳು blocಗೆ ಸೇರಲು ಬಯಸುತ್ತಾರೆ. ಆರ್ಟಿಕಲ್ 2 ರಲ್ಲಿ ನಿಗದಿಪಡಿಸಿದ ಯುನಿಯನ್‌ನ ಮೌಲ್ಯಗಳನ್ನು ಗೌರವಿಸಲು ಮತ್ತು ಉತ್ತೇಜಿಸಲು ಬದ್ಧವಾಗಿರಬೇಕು. ಇವುಗಳಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ, ಕಾನೂನಿನ ನಿಯಮ, ಇತ್ಯಾದಿ. ಅರ್ಜಿಯನ್ನು ಸ್ವೀಕರಿಸಿದ ನಂತರ, ಯುನಿಯನ್‌ ಸದಸ್ಯರು ಈ ನಿಯಮಗಳ ಆಧಾರದ ಮೇಲೆ ರಾಷ್ಟ್ರದ ಸೂಕ್ತತೆಯನ್ನು ನಿರ್ಣಯಿಸುತ್ತಾರೆ.

1993 ರಲ್ಲಿ ಕೋಪನ್ ಹ್ಯಾಗನ್‌ನಲ್ಲಿ ನಡೆದ ಯುರೋಪಿಯನ್ ಕೌನ್ಸಿಲ್ ಸಭೆಯು ಹೆಚ್ಚು ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿತು. ಕೋಪನ್ ಹ್ಯಾಗನ್ ಮಾನದಂಡ ಎಂದು ಕರೆಯಲ್ಪಡುವ ಇವುಗಳು ಎಲ್ಲಾ ಅಭ್ಯರ್ಥಿ ದೇಶಗಳು ಪೂರೈಸಬೇಕಾದ ಅಗತ್ಯ ಷರತ್ತುಗಳನ್ನು ಒಳಗೊಂಡಿವೆ. ಅವುಗಳಲ್ಲಿ ಕಾರ್ಯನಿರ್ವಹಣೆಯ ಮಾರುಕಟ್ಟೆ ಆರ್ಥಿಕತೆ, ಸ್ಥಿರವಾದ ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮ ಮತ್ತು ಯೂರೋ ಸೇರಿದಂತೆ ಎಲ್ಲಾ ಯುನಿಯನ್‌ ಶಾಸನಗಳ ಸ್ವೀಕಾರವು ಸೇರಿದೆ.

ಮೂರು ಹಂತಗಳ ವಿಧಾನ

ಮೂರು ಹಂತಗಳ ವಿಧಾನ

ಯುರೋಪಿಯನ್‌ ಯುನಿಯನ್‌ ಸದಸ್ಯತ್ವವನ್ನು ಪಡೆಯುವ ವಿಧಾನವು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲ ಹಂತದಲ್ಲಿ ದೇಶಕ್ಕೆ ಅಧಿಕೃತ ಅಭ್ಯರ್ಥಿಯ ಸ್ಥಾನಮಾನವನ್ನು ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಅಭ್ಯರ್ಥಿಯೊಂದಿಗೆ ಔಪಚಾರಿಕ ಸದಸ್ಯತ್ವ ಮಾತುಕತೆಗಳು ಪ್ರಾರಂಭವಾಗುತ್ತವೆ, ಇದು ಯುನಿಯನ್‌ ಕಾನೂನನ್ನು ರಾಷ್ಟ್ರೀಯ ಕಾನೂನಾಗಿ ಅಳವಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಅಲ್ಲದೆ ನ್ಯಾಯಾಂಗ, ಆಡಳಿತಾತ್ಮಕ, ಆರ್ಥಿಕ ಮತ್ತು ಇತರ ಸುಧಾರಣೆಗಳ ಅನುಷ್ಠಾನವನ್ನು ಪ್ರವೇಶ ಮಾನದಂಡ ಎಂದು ಕರೆಯಲಾಗುತ್ತದೆ. ಮಾತುಕತೆಗಳು ಪೂರ್ಣಗೊಂಡ ನಂತರ ಮತ್ತು ಅಭ್ಯರ್ಥಿಯು ಎಲ್ಲಾ ಪ್ರವೇಶ ಮಾನದಂಡಗಳನ್ನು ಪೂರೈಸಿದ ನಂತರ, ಅವರು ಯುನಿಯನ್‌ಗೆ ಸೇರಬಹುದು.

ಯುನಿಯನ್‌ ಸದಸ್ಯರಾಗುವುದು ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿ ಸ್ಥಿತಿ ತಿಳಿದ ನಂತರವೂ ಉಳಿದ ಪ್ರಕ್ರಿಯೆಯು ಪೂರ್ಣಗೊಳ್ಳಲು ವರ್ಷಗಳೇ ತೆಗೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ ಮಾತುಕತೆಯು ದೀರ್ಘಕಾಲದವರೆಗೆ ನಡೆಯುತ್ತದೆ. ಅದರ ಅವಧಿಯು ದೇಶದಿಂದ ದೇಶಕ್ಕೆ ಬದಲಾಗಬಹುದು. ಯುರೋಪಿಯನ್‌ ಯುನಿಯನ್‌ನ ಇತ್ತೀಚಿನ ಸದಸ್ಯ ಕ್ರೊಯೇಷಿಯಾ 2013 ರಲ್ಲಿ ಸೇರ್ಪಡೆಗೊಂಡಿತು. ಇದು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 10 ವರ್ಷಗಳನ್ನು ತೆಗೆದುಕೊಂಡಿತು.

ನಿರೀಕ್ಷಿತ ದೇಶವನ್ನು ಸರ್ವಾನುಮತದಿಂದ ಅನುಮೋದನೆ

ನಿರೀಕ್ಷಿತ ದೇಶವನ್ನು ಸರ್ವಾನುಮತದಿಂದ ಅನುಮೋದನೆ

ಪ್ರಸ್ತುತ ಯುರೋಪಿಯನ್ ಕಮಿಷನ್ ಉಕ್ರೇನ್ (ಮತ್ತು ಮೊಲ್ಡೊವಾ) ಅಭ್ಯರ್ಥಿ ಸ್ಥಾನಮಾನವನ್ನು ನೀಡಬೇಕೆಂದು ಮಾತ್ರ ಶಿಫಾರಸು ಮಾಡಿದೆ. ಜೂನ್ 23 ಹಾಗೂ 24ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಈ ಶಿಫಾರಸನ್ನು ಯನಿಯನ್‌ನ 27 ಸದಸ್ಯ ರಾಷ್ಟ್ರಗಳು ಸೇರ್ಪಡೆ ಮಾತುಕತೆಗೆ ಮುಂದುವರಿಯಲು ಚರ್ಚಿಸುತ್ತವೆ. ಇಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳು ನಿರೀಕ್ಷಿತ ದೇಶವನ್ನು ಸರ್ವಾನುಮತದಿಂದ ಅನುಮೋದಿಸಬೇಕು. ಉಕ್ರೇನ್‌ನ ಪ್ರಯತ್ನವು ಮುಂದುವರಿಯಲು ಉಕ್ರೇನ್ ಕೋಪನ್ ಹ್ಯಾಗನ್ ಮಾನದಂಡಗಳನ್ನು ಪೂರೈಸಿದೆ ಎಂದು ಬಣ ಒಪ್ಪಿಕೊಳ್ಳಬೇಕಾಗುತ್ತದೆ.

ಯುರೋಪಿಯನ್‌ ಯುನಿಯನ್‌ ಸರ್ಕಾರ ಮತ್ತು ಅಭ್ಯರ್ಥಿ ರಾಷ್ಟ್ರದ ಮಂತ್ರಿಗಳು ಮತ್ತು ರಾಯಭಾರಿಗಳನ್ನು ಒಳಗೊಂಡ ಅಂತರ ಸರ್ಕಾರಿ ಸಮ್ಮೇಳನದಲ್ಲಿ ಮಾತುಕತೆಗಳು ಮುಂದಿನ ಹಂತದಲ್ಲಿ ನಡೆಯುತ್ತವೆ. ಉಕ್ರೇನ್ ಇನ್ನೂ ಕೋಪನ್ ಹ್ಯಾಗನ್ ಮಾನದಂಡಗಳನ್ನು ಪೂರೈಸಿಲ್ಲ ಎಂದು ಸಿಎನ್‌ಎನ್‌ ವರದಿ ಮಾಡಿದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ 2021ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಪ್ರಕಾರ, ಉಕ್ರೇನ್ ತನ್ನ 180 ದೇಶಗಳ ಪಟ್ಟಿಯಲ್ಲಿ 122 ನೇ ಸ್ಥಾನದಲ್ಲಿದೆ. ಕೆಲವು ಯುರೋಪಿಯನ್‌ ಯುನಿಯನ್‌ ದೇಶಗಳು ಉಕ್ರೇನ್ ಅಭ್ಯರ್ಥಿ ಸ್ಥಾನಮಾನವನ್ನು ನೀಡಲು ಇಷ್ಟವಿರುವುದಿಲ್ಲ. ಡೆನ್ಮಾರ್ಕ್ ಮತ್ತು ಪೋರ್ಚುಗಲ್ ಉಕ್ರೇನ್ ಯುದ್ಧದಲ್ಲಿ ಇಲ್ಲದಿದ್ದರೆ ಸದಸ್ಯತ್ವ ಮಾತುಕತೆಗಳನ್ನು ಪ್ರಾರಂಭಿಸುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ವಾದಿಸಿದ್ದಾರೆ ಎಂದು ಪೊಲಿಟಿಕೊ ವರದಿ ಮಾಡಿದೆ.

ಇದು ಕಾನೂನಿನ ನಿಯಮ ಮತ್ತು ಉಕ್ರೇನ್‌ನಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟದೊಂದಿಗೆ ಸಂಬಂಧಿಸಿದೆ. ಇವು ನಿಜವಾದ ಸಮಸ್ಯೆಗಳು ಮತ್ತು ಉಕ್ರೇನಿಯನ್ ಸರ್ಕಾರವು ಸ್ವತಃ ಕೆಲಸ ಮಾಡಬೇಕೆಂದು ಗುರುತಿಸುತ್ತದೆ ಎಂದು ಯುರೋಪಿಯನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ECFR)ನಲ್ಲಿ ವೈಡರ್ ಯುರೋಪ್ ಕಾರ್ಯಕ್ರಮದ ನಿರ್ದೇಶಕರಾದ ಮೇರಿ ಡುಮೌಲಿನ್ ಯುರೋ ನ್ಯೂಸ್‌ಗೆ ಹೀಗೆ ಹೇಳಿದ್ದಾರೆ. ಅರ್ಜಿ ಪ್ರಕ್ರಿಯೆಯು ತ್ವರಿತವಾಗಿ ಪ್ರಗತಿಯಾಗಬೇಕೆಂದು ಉಕ್ರೇನ್ ಬಯಸಬಹುದಾದರೂ ಈ ಅವಧಿ ದೀರ್ಘವಾಗಿರುತ್ತದೆ ಎಂದು ಯುನಿಯನ್‌ ನಾಯಕರು ಎಚ್ಚರಿಸಿದ್ದಾರೆ. ಮೇ 9 ರಂದು ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಮಾಡಿದ ಭಾಷಣದಲ್ಲಿ, ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, "ಅವರು ಉಕ್ರೇನ್ ಸೇರಲು ಅನುಮತಿಸುವ ಪ್ರಕ್ರಿಯೆಯು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದರು.

ಉಕ್ರೇನ್‌ ಜೊತೆ ಯುದ್ಧ ಸಾರಿರುವ ರಷ್ಯಾ ದೇಶವು ಉಕ್ರೇನ್‌ನ ಯುರೋಪಿಯನ್ ಯೂನಿಯನ್ (ಇಯು) ಸದಸ್ಯತ್ವದ ವಿರುದ್ಧ ಏನೂ ಇಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಯುರೋಪಿನ ಆಯೋಗವು ಯುದ್ಧ ಪೀಡಿತ ದೇಶಕ್ಕೆ ಅಭ್ಯರ್ಥಿ ಸ್ಥಾನಮಾನವನ್ನು ಶಿಫಾರಸು ಮಾಡಿದ ದಿನದಂದು ಪುಟಿನ್ ಅವರ ಟೀಕೆಗಳು ಬಂದಿದ್ದವು. ಸೇಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಂನ ವಾರ್ಷಿಕ ಆರ್ಥಿಕ ಪ್ರದರ್ಶನದ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್‌ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. "ನಮಗೆ ಇದರ ವಿರುದ್ಧ ಏನೂ ಇಲ್ಲ. ಆರ್ಥಿಕ ಒಕ್ಕೂಟಗಳಿಗೆ ಸೇರುವುದು ಅಥವಾ ಇಲ್ಲದಿರುವುದು ಅವರ ಸಾರ್ವಭೌಮ ನಿರ್ಧಾರ. ಇದು ಅವರ ವ್ಯವಹಾರ, ಉಕ್ರೇನಿಯನ್ ಜನರ ವ್ಯವಹಾರ ಎಂದು ಪುಟಿನ್ ಹೇಳಿದರು.

ಗಮನಾರ್ಹವಾಗಿ, ಉಕ್ರೇನ್ ಯುನೈಟೆಡ್ ಸ್ಟೇಟ್ಸ್ ಬೆಂಬಲಿತ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ)ಗೆ ಸೇರಲು ರಷ್ಯಾ ಬಯಸುವುದಿಲ್ಲ. ಏಕೆಂದರೆ ಅದು ಭದ್ರತಾ ಬೆದರಿಕೆ ಎಂದು ಪರಿಗಣಿಸುತ್ತದೆ. ಆದಾಗ್ಯೂ, ಉಕ್ರೇನ್‌ನ ಯುರೋಪಿಯನ್‌ ಸದಸ್ಯತ್ವ ಅರ್ಜಿಯನ್ನು ಉಲ್ಲೇಖಿಸಿ, ಪುಟಿನ್ ಆರ್ಥಿಕ ಏಕೀಕರಣಕ್ಕೆ ಸಂಬಂಧಿಸಿದಂತೆ, ಅದು ಅವರ ಆಯ್ಕೆಯಾಗಿದೆ ಎಂದು ಹೇಳಿದರು. ತನ್ನ ನೆರೆಯ ದೇಶವು ನ್ಯಾಟೋಗೆ ಸೇರುವ ಭಯದಿಂದ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

(ಒನ್ಇಂಡಿಯಾ ಸುದ್ದಿ)

Recommended Video

ಖ್ಯಾತ ನಟಿ Lakshmi ಮಗಳು Aishwarya Bhaskaran ಗೆ ಸೋಪ್ ಮಾರಿ ಬದುಕೋ ಸ್ಥಿತಿ | *India | OneIndia Kannada

English summary
On June 17, the European Commission, the executive arm of the European Union, recommended that Ukraine be formally granted candidate status in Europe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X