ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆಯಲ್ಲಿ ಮಂಕಿಪಾಕ್ಸ್‌ನ 2 ಪ್ರಕರಣ ಪತ್ತೆ: ಈ ರೋಗದ ಬಗ್ಗೆ ಇಲ್ಲಿದೆ ವಿವರ

|
Google Oneindia Kannada News

ಯುಕೆ, ಜೂ.14: ''ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ನಾರ್ತ್ ವೇಲ್ಸ್‌ನಲ್ಲಿ ಗುರುವಾರ ಎರಡು ಮಂಕಿಪಾಕ್ಸ್ ಪ್ರಕರಣಗಳನ್ನು ಗುರುತಿಸಲಾಗಿದೆ. ಎರಡೂ ಪ್ರಕರಣಗಳು ಒಂದೇ ಕುಟುಂಬಸ್ಥರಲ್ಲಿ ಕಂಡು ಬಂದಿದೆ,'' ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡುಬು ರೋಗದ ವರ್ಗಕ್ಕೆ ಸೇರಿದ ಈ ಮಂಕಿಪಾಕ್ಸ್‌, ಕಡಿಮೆ ತೀವ್ರವಾದ ರೋಗ ಎಂದು ಪರಿಪರಿಗಣಿಸಲಾಗಿದೆ. ಹಾಗೆಯೇ ''ಇದು ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆಗಳು ಕಡಿಮೆ,'' ತಜ್ಞರು ತಿಳಿಸಿದ್ದಾರೆ.

ಡೆಂಗ್ಯೂ ಜ್ವರವು ಕೊವಿಡ್ 19 ವಿರುದ್ಧ ಹೋರಾಡುವ ಶಕ್ತಿ ನೀಡುತ್ತೆಡೆಂಗ್ಯೂ ಜ್ವರವು ಕೊವಿಡ್ 19 ವಿರುದ್ಧ ಹೋರಾಡುವ ಶಕ್ತಿ ನೀಡುತ್ತೆ

''ಇದರ ಮೊದಲ ಪ್ರಕರಣಗಳು ವಿದೇಶದಲ್ಲಿ ಕಂಡು ಬಂದಿದೆ,'' ಎಂದು ಸಾರ್ವಜನಿಕ ಆರೋಗ್ಯ ವೇಲ್ಸ್ (ಪಿಎಚ್‌ಡಬ್ಲ್ಯೂ) ಹೇಳಿದೆ. ಇನ್ನು ಈ ಮಂಕಿಪಾಕ್ಸ್‌ ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗವಾಗಿದೆ ಎಂದು ವರದಿ ತಿಳಿಸಿದೆ.

 ಮಂಕಿಪಾಕ್ಸ್‌ನ ಎರಡು ತಳಿಗಳು

ಮಂಕಿಪಾಕ್ಸ್‌ನ ಎರಡು ತಳಿಗಳು

ಈ ವೈರಸ್‌ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಎರಡು ಪ್ರಮುಖ ತಳಿಗಳು ಇದೆ. ಒಂದು ಪಶ್ಚಿಮ ಆಫ್ರಿಕನ್ ತಳಿ, ಇನ್ನೊಂದು ಮಧ್ಯ ಆಫ್ರಿಕನ್ ತಳಿ. ಈ ರೋಗದ ಸಂಪರ್ಕ ಪತ್ತೆ ಕಾರ್ಯ ಈಗಾಗಲೇ ಆರಂಭ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಈ ಇಬ್ಬರು ಸೋಂಕಿತರ ಪೈಕಿ ಓರ್ವ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಕೂಡಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

 ''ಈ ರೋಗದಿಂದ ಅಪಾಯ ಬಹಳ ಕಡಿಮೆ''

''ಈ ರೋಗದಿಂದ ಅಪಾಯ ಬಹಳ ಕಡಿಮೆ''

ಈ ಬಗ್ಗೆ ಸುದ್ದಿ ಸಂಸ್ಥೆ ಬಿಬಿಸಿಗೆ ಮಾಹಿತಿ ನೀಡಿದ ಪಿಎಚ್‌ಡಬ್ಲ್ಯೂ ಅಧಿಕಾರಿಯೊಬ್ಬರು, "ಮಂಕಿಪಾಕ್ಸ್‌ ದೃಢಪಟ್ಟಿದ್ದು ಯುಕೆಯಲ್ಲಿ ಅಪರೂಪದ ಪ್ರಕರಣವಾಗಿದೆ. ಆದರೆ ಈ ರೋಗದಿಂದ ಸಾರ್ವಜನಿಕರಿಗೆ ಅಪಾಯವು ತುಂಬಾ ಕಡಿಮೆಯಾಗಿದೆ," ಎಂದು ತಿಳಿಸಿದ್ದಾರೆ. "ನಾವು ಬಹು-ಏಜೆನ್ಸಿ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಿದ್ದೇವೆ. ನಾವು ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುತ್ತೇವೆ. ಎಲ್ಲಾ ನಿಕಟ ಸಂಪರ್ಕಗಳನ್ನು ಗುರುತಿಸಿದ್ದೇವೆ. ಈ ಮಂಕಿ ಪಾಕ್ಸ್‌ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲಾಗಿದೆ," ಎಂದು ಕೂಡಾ ಹೇಳಿದ್ದಾರೆ.

ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?

 ''ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಮಂಕಿಪಾಕ್ಸ್‌''

''ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಮಂಕಿಪಾಕ್ಸ್‌''

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಮಂಕಿಪಾಕ್ಸ್ ಒಂದು ಝೂನೋಸಿಸ್‌ ಆಗಿದೆ. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗವಾಗಿದೆ. ಅಳಿಲುಗಳು, ಗ್ಯಾಂಬಿಯಾನ್ ಇಲಿಗಳು, ಡಾರ್ಮಿಸ್, ವಿವಿಧ ಜಾತಿಯ ಮಂಗಗಳಲ್ಲಿ ಮಂಕಿಪಾಕ್ಸ್ ವೈರಸ್‌ನ ಪುರಾವೆಗಳು ದೊರೆತಿವೆ ಎಂದು ಯುಎನ್ ಆರೋಗ್ಯ ಸಂಸ್ಥೆ ಹೇಳಿದೆ.

 ಮಂಕಿಪಾಕ್ಸ್‌ ಲಕ್ಷಣಗಳು

ಮಂಕಿಪಾಕ್ಸ್‌ ಲಕ್ಷಣಗಳು

ಜ್ವರ, ತಲೆನೋವು, ಊತ, ಬೆನ್ನು ನೋವು, ಸ್ನಾಯುಗಳು ನೋವು ಮತ್ತು ಆಯಾಸವು ಮಂಕಿಪಾಕ್ಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಹಾಗೆಯೇ ಮುಖದ ಮೇಲೆ ಹಾಗೂ ಬಳಿಕ ದೇಹದಲ್ಲಿ ಹುಣ್ಣುಗಳು ಕಾಣಿಸುತ್ತದೆ. ಇದು ಸಾಮಾನ್ಯವಾಗಿ ಕೈಗಳ ಅಂಗೈಗಳಲ್ಲಿ ಮತ್ತು ಪಾದದ ಅಡಿಭಾಗದಲ್ಲಿ ಕಂಡುಬರುತ್ತದೆ. ಸಿಡುಬಿನಲ್ಲಿ ತುರಿಕೆ ಕಂಡು ಬರುವಂತೆ, ಈ ಮಂಕಿಪಾಕ್ಸ್‌ನಲ್ಲೂ ತುರಿಕೆ ಇರುತ್ತದೆ. ಈ ಹುಣ್ಣುಗಳು ಸಂಪೂರ್ಣ ಗುಣಮುಖವಾದರೂ ಇದರ ಗಾಯದ ಗುರುತು ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಈ ಸೋಂಕು 14 ರಿಂದ 21 ದಿನಗಳವರೆಗೆ ಇರುತ್ತದೆ. ಈ ರೋಗ ಸಾಮಾನ್ಯವಾಗಿ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಈ ಲಕ್ಷಣಗಳು ತೀವ್ರವಾಗಬಹುದು ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಸಾವಿಗೆ ಕಾರಣವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
At least two cases of monkeypox have been identified in the United Kingdom and Northern Ireland, All you need to know the disease in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X