ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಹೋಟೆಲ್‌ನ ಇಡ್ಲಿಗೆ ಅಮೆರಿಕದ ಟ್ರೇಡ್‌ಮಾರ್ಕ್!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 7: ಉಡುಪಿ ಅಂದ್ರೆ ಬಗೆಬಗೆಯ ಖಾದ್ಯಗಳಿಗೆ ಫೇಮಸ್. ಉಡುಪಿ ಹೋಟೆಲ್‌ಗಳಲ್ಲಿ ಸಿಗುವ ಸ್ಪೆಷಲ್‌ ತಿಂಡಿಗಳಿಗೆ ಮಾರು ಹೋಗದವರೇ ಇಲ್ಲ. ಈಗ ಇದೇ ಉಡುಪಿ ಹೋಟೆಲ್‌ಗಳಲ್ಲಿ ಸಿಗುವ ಇಡ್ಲಿಗೆ ಅಮೆರಿಕದಲ್ಲಿ ಟ್ರೇಡ್‌ಮಾರ್ಕ್ ಸಿಕ್ಕಿದೆ. ಉಡುಪಿ ಇಡ್ಲಿಯ ಘಮಘಮ ಸಾಗರದಾಚೆಗೂ ಹಬ್ಬಿದೆ.

ಕರಾವಳಿ ಅಂದ್ರೆ ಆಹಾರ ಖಾದ್ಯಗಳಿಗೆ ಫೇಮಸ್, ಜಗತ್ತಿನ ಮೂಲೆ ಮೂಲೆಯಲ್ಲೂ ಉಡುಪಿ ಹೋಟೆಲ್ ಕಾಣ ಸಿಗುತ್ತವೆ. ಖಾದ್ಯಗಳ ಪರಿಮಳ ಘಮ್ಮೆನ್ನುತ್ತೆ. ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಯೂರಿ ಗಗೇರಿಯನ್ ಮೊದಲ ಬಾರಿ ಚಂದ್ರನ ಮೇಲೆ ಮೊದಲ ಹೆಜ್ಜೆ ಇಡುವ ಮೊದಲೇ ಉಡುಪಿ ಹೋಟೆಲಿನ ಇಡ್ಲಿ, ಸಾಂಬಾರಿನ ಘಮಘಮ ಹೊರಹೊಮ್ಮುತ್ತಿತ್ತೆನ್ನುವ ಹಾಸ್ಯಕ್ಕೂ ಪ್ರಸಂಗ ಇದೆ. ಅಷ್ಟು ಫೇಮಸ್ ನಮ್ಮ ಉಡುಪಿ ಹೋಟೆಲ್.

ಈಗ ಇದೇ ಕರಾವಳಿ ಆಹಾರ ಪ್ರಿಯರು ಹೆಮ್ಮೆ ಪಡುವ ವಿಷಯೊಂದಿದೆ. ಅದೇನಪ್ಪ ಅಂದರೆ ಉಡುಪಿ ಇಡ್ಲಿಗೆ ಅಮೆರಿಕದಲ್ಲಿ ಟ್ರೇಡ್‌ಮಾರ್ಕ್ ಸಿಕ್ಕಿದೆ. ಘಮಘಮಿಸುವ ಸಾಂಬಾರು ಇಲ್ಲ ಚಟ್ನಿಯನ್ನು, ನಿಂಚಿಕೊಂಡು ವಾರಕ್ಕೊಮ್ಮೆಯಾದರೂ ಸವಿಯುವ ಉಡುಪಿ ಇಡ್ಲಿಗೆ 12,461 ಕಿ.ಮೀ. ದೂರದ ಅಮೆರಿಕದಲ್ಲಿ ಬ್ರ್ಯಾಂಡ್, ಟ್ರೇಡ್‌ಮಾರ್ಕ್‌ನ ಗೌರವ, ಸ್ಥಾನಮಾನ ದೊರೆತಿದೆ.

Udupi Hotel Idli Has Gained An American Trademark

ಉಡುಪಿ ಮಸಾಲೆ ದೋಸೆ, ನೀರ್‌ದೋಸೆ, ಮೂಡೆ, ಗೋಳಿ ಬಜೆ, ಪತ್ರೊಡೆ, ಸುಕ್ರುಂಡೆ, ಅತಿರಸ, ಗಡ್‍ಬಡ್, ಈರೆಡ್ಡೆ (ಅರಶಿನ ಎಲೆ ಗಟ್ಟಿ) ಸಹಿತ ಸಾಂಪ್ರದಾಯಿಕ ಖಾದ್ಯ, ತಿಂಡಿಗಳಿಗೆ ಯಾವುದೇ ಬ್ರ್ಯಾಂಡ್, ಟ್ರೇಡ್‌ಮಾರ್ಕ್, ಪೇಟೆಂಟ್ ಈ ತನಕ ಇಲ್ಲ. ಆದರೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಉಡುಪಿಯ ಉದಯ ಶೆಟ್ಟಿ ಮಾಲೀಕತ್ವದ ಪ್ಯಾಲೇಸ್ ಹೋಟೆಲ್ ಉಡುಪಿ ಇಡ್ಲಿ ಬ್ರ್ಯಾಂಡ್ ಟ್ರೇಡ್‌ಮಾರ್ಕ್ ಪಡೆದು, ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ.

ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿ ಪ್ಯಾಕೆಟ್‌ನಲ್ಲಿ ಚಟ್ನಿ, ಸಾಂಬಾರಿದ್ದು, ಭಾರತೀಯರು, ಅಮೆರಿಕನ್ನರು ಮೈಕ್ರೋಓವನ್‍ನಲ್ಲಿ ಬಿಸಿ ಮಾಡಿ ತಿನ್ನುತ್ತಾರೆ. ಅಮೆರಿಕದಲ್ಲಿರುವ ಮಡಿವಂತರಿಗಾಗಿ ಸಾಂಬಾರಿಗೆ ಈರುಳ್ಳಿ, ಬೆಳ್ಳುಳ್ಳಿಯನ್ನೂ ಬಳಸೋದಿಲ್ಲ. ಕಾಲು ಕೆಜಿ ಅಂದರೆ ಆರು ಇಡ್ಲಿಗೆ 1.99 ಡಾಲರ್ (150 ರೂ.), 24 ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99 ಡಾಲರ್ (375 ರೂ.) ದರವಿದ್ದು, ಸಾವಯವ ಬೆಲ್ಲದ ಡಬ್ಬಿಯೂ ಅರ್ಧ ಕೆ.ಜಿ ರೂಪದಲ್ಲಿ ಮಾರಲಾಗುತ್ತಿದೆಯಂತೆ.

ಬ್ರ್ಯಾಂಡ್, ಟ್ರೇಡ್‌ಮಾರ್ಕ್ ಆಯಾ ದೇಶಕ್ಕೆ ಸೀಮಿತವಾಗಿದ್ದರೂ, ಜಾಗತಿಕ ಒಪ್ಪಂದಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ. ಅಮೆರಿಕದಲ್ಲಿ ಟ್ರೇಡ್‌ಮಾರ್ಕ್ ಸಿಕ್ಕಿದೇನೋ ಒಳ್ಳೆಯದೇ, ಹೆಮ್ಮೆ ಪಡುವ ವಿಚಾರ. ಆದರೆ ಮುಂದೆ ಉಡುಪಿ ಇಡ್ಲಿಯ ಪೇಟೆಂಟ್ ಪಡೆದು, ಅದು ಭಾರತದ ಮಾರುಕಟ್ಟೆಗೆ ಬಂದರೆ, ಅದರ ಜೊತೆಗೆ ಇಲ್ಲಿನ ಆಹಾರೋದ್ಯಮಿ ಸ್ಪರ್ಧೆ ಎದುರಿಸಲು, ಮಾರಾಟ ಮಾಡುವುದಕ್ಕೆ ಸಮಸ್ಯೆ ಎದುರಾಗಬಹುದು ಎನ್ನುವ ಸಣ್ಣ ಆತಂಕ ಕೂಡ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸಣ್ಣ ಎಚ್ಚರಿಕೆ ವಹಿಸುವ ಅಗತ್ಯ ಕೂಡ ಇದೆ.

Udupi Hotel Idli Has Gained An American Trademark

ಅಮೆರಿಕದಲ್ಲಿ ಉಡುಪಿ ಇಡ್ಲಿಗೆ ಪಡೆದ ಟ್ರೇಡ್‌ಮಾರ್ಕನ್ನು ಭಾರತದಲ್ಲಿ ಅರ್ಜಿ ಹಾಕಿ ಉತ್ಪಾದನೆ, ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದರೆ, ಆಗ ಉಡುಪಿ ಇಡ್ಲಿ ಹೆಸರಿನಲ್ಲಿ ಅನ್ಯರು ಬ್ರ್ಯಾಂಡ್, ಟ್ರೇಡ್‌ಮಾರ್ಕ್ ಪಡೆಯುವಂತಿಲ್ಲ. ಹೀಗಾಗಿ ಉಡುಪಿ ಮೂಲದ ಉತ್ಪನ್ನಗಳಿಗೆ ಬ್ರ್ಯಾಂಡ್, ಟ್ರೇಡ್‌ಮಾರ್ಕ್ ಪಡೆದುಕೊಳ್ಳಲು ಹಾಗೂ ರಫ್ತು ನಿಟ್ಟಿನಲ್ಲಿ ನೀಲ ನಕಾಶೆ ತಯಾರಿಸುವ ಚಿಂತನೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮುಂದಿಟ್ಟಿದ್ದಾರೆ.

ಒಟ್ಟಿನಲ್ಲಿ ಆಹಾರ ಪದ್ಧತಿ, ವೈವಿಧ್ಯತೆಗಳಿಂದಲೇ ಜಗತ್ ಪ್ರಸಿದ್ಧಿಯಾಗಿರುವ ಕರಾವಳಿಗರ ಕೈ ರುಚಿಗೆ ಈಗ ವಿದೇಶಿ ನೆಲದಲ್ಲಿ ಟ್ರೇಡ್‌ಮಾರ್ಕ್ ಲಭ್ಯವಾಗಿದೆ. ನೀವೂ ಉಡುಪಿ ಹೊಟೇಲ್‌ನಲ್ಲಿ ಇಡ್ಲಿ ತಿನ್ನುವಾಗ, ಈ ಇಡ್ಲಿಗೆ ದೂರದ ಅಮೆರಿಕಾದಲ್ಲಿ ಟ್ರೇಡ್‌ಮಾರ್ಕ್ ಇದೆ ಅನ್ನುವುದನ್ನು ಯೋಚಿಸಿ ಖುಷಿಯಿಂದ ಇಡ್ಲಿ ರುಚಿಯನ್ನು ಅಸ್ವಾದಿಸಿ.

English summary
12,461 km. In distant America Udupi Idli has gained the status of brand trademark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X